ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡ (Bank of Baroda) ಬಹಳ ಕಡಿಮೆ ಬಡ್ಡಿದರಗಳಿಗೆ ಸಾಲಗಳ ಆಫರ್ ಮಾಡುತ್ತಿದೆ. ಶೇ. 8.40ರಿಂದ ಅದರ ಸಾಲದ ದರ ಆರಂಭವಾಗುತ್ತದೆ. ಈ ಬಾರಿಯ ಹಬ್ಬಕ್ಕೆ ಬ್ಯಾಂಕ್ ಆಫರ್ ಬರೋಡ ತನ್ನ ಗ್ರಾಹಕರಿಗೆ ಹಲವು ಕೊಡುಗೆಗಳನ್ನು ನೀಡಿದೆ. ‘ಬಾಬ್ ಕೆ ಸಂಗ್, ತ್ಯೋಹಾರ್ ಕೀ ಉಮಂಗ್’ (BOB Ke Sang, Tyohaar Ki Umang) ಎಂಬ ಅಭಿಯಾನ ಆರಂಭಿಸಿರುವ ಬ್ಯಾಂಕ್ ಆಫ್ ಬರೋಡ, ಡಿಸೆಂಬರ್ 31ರವರೆಗೂ ಕಡಿಮೆ ಬೆಲೆ ಗೃಹಸಾಲ, ವಾಹನ ಸಾಲ ಮತ್ತು ಶಿಕ್ಷಣ ಸಾಲಗಳನ್ನು ನೀಡುತ್ತಿದೆ. ಇದರ ಜೊತೆಗೆ ತನ್ನ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳಿಗೂ ಭರ್ಜರಿ ಡಿಸ್ಕೌಂಟ್ಗಳನ್ನೂ ಕೊಡುತ್ತಿದೆ. ಹಾಗೆಯೇ, ನಾಲ್ಕು ಹೊಸ ಸೇವಿಂಗ್ಸ್ ಖಾತೆಗಳನ್ನೂ ಬಿಡುಗಡೆ ಮಾಡಿದೆ.
ಹಬ್ಬದ ಕೊಡುಗೆಯಾಗಿ ಬ್ಯಾಂಕ್ ಆಫ್ ಬರೋಡಾ ಮಾಡುತ್ತಿರುವ ಆಫರ್ನಲ್ಲಿ ಸಾಲದ ಬಡ್ಡಿದರ ಬಹಳ ಕಡಿಮೆ ಮಾಡಲಾಗಿದೆ. ಅದರ ಗೃಹಸಾಲ ಶೇ. 8.40ಯಿಂದ ಆರಂಭವಾಗುತ್ತದೆ. ಇನ್ನು, ಕಾರ್ ಲೋನ್ ದರ ಶೇ. 8.70ಯಿಂದ ಆರಂಭವಾಗುತ್ತದೆ. ವಿಶೇಷ ಎಂದರೆ ಗೃಹಸಾಲ ಮತ್ತು ವಾಹನ ಸಾಲಗಳಿಗೆ ಪ್ರೋಸಸಿಂಗ್ ಫೀಯಿಂದ ವಿನಾಯಿತಿ ನೀಡಲಾಗಿದೆ.
ಇದನ್ನೂ ಓದಿ: ರೆಕರಿಂಗ್ ಡೆಪಾಸಿಟ್ ಸ್ಕೀಮ್; ಪೋಸ್ಟ್ ಆಫೀಸ್ ಉತ್ತಮವೋ, ಎಸ್ಬಿಐ ಇತ್ಯಾದಿ ಬ್ಯಾಂಕುಗಳ ಆರ್ಡಿ ಉತ್ತಮವೋ? ಇಲ್ಲಿದೆ ಹೋಲಿಕೆ
ಇನ್ನು, ಬಾಬ್ ನೀಡುವ ಶಿಕ್ಷಣ ಸಾಲಕ್ಕೆ ಬಡ್ಡಿದರ ಶೇ. 8.55ರಿಂದ ಶುರುವಾಗುತ್ತದೆ. ದೇಶದ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ಯಾವುದೇ ಅಡಮಾನ ಇಲ್ಲದೇ ಇನ್ನೂ ಕಡಿಮೆ ಬಡ್ಡಿದರಕ್ಕೆ ಶಿಕ್ಷಣ ಸಾಲವನ್ನು ಬ್ಯಾಂಕ್ ಆಫ್ ಬರೋಡಾ ಆಫರ್ ಮಾಡಿದೆ.
ಈ ಬ್ಯಾಂಕ್ನ ವೈಯಕ್ತಿಕ ಸಾಲಕ್ಕೆ ಬಡ್ಡಿದರ ಶೇ. 10.10ರಿಂದ ಶುರುವಾಗುತ್ತದೆ. ಗರಿಷ್ಠ 20 ಲಕ್ಷ ರೂವರೆಗೂ ಸಾಲ ಪಡೆಯಬಹುದು. ಪ್ರೋಸಸಿಂಗ್ ಶುಲ್ಕ ಇರುವುದಿಲ್ಲ. ಫ್ಲೋಟಿಂಗ್ ರೇಟ್ ಜೊತೆಗೆ ಫಿಕ್ಸೆಡ್ ರೇಟ್ ಆಯ್ಕೆಯನ್ನೂ ಗ್ರಾಹಕರಿಗೆ ನೀಡಲಾಗಿದೆ. ಇದು ವೈಯಕ್ತಿಕ ಸಾಲ ಪಡೆಯುವವರಿಗೆ ಮಾತ್ರವಲ್ಲ, ವಾಹನ ಸಾಲ ಪಡೆಯುವವರಿಗೂ ಅನ್ವಯ ಆಗುತ್ತದೆ.
ಫೆಸ್ಟಿವ್ ಆಫರ್ ಆಗಿ ಬ್ಯಾಂಕ್ ಆಫರ್ ಬರೋಡಾ ಲೈಟ್ ಸೇವಿಂಗ್ಸ್ ಅಕೌಂಟ್, ಬ್ರೋ ಸೇವಿಂಗ್ಸ್ ಅಕೌಂಟ್, ಪರಿವಾರ್ ಅಕೌಂಟ್ ಮತ್ತು ಎನ್ಆರ್ಐ ಪವರ್ಪ್ಯಾಕ್ ಅಕೌಂಟ್, ಹೀಗೆ ನಾಲ್ಕು ಉಳಿತಾಯ ಖಾತೆಗಳನ್ನು ಬಿಒಬಿ ಆರಂಭಿಸಿದೆ. ಇದರಲ್ಲಿ ಬಿಒಬಿ ಲೈಟ್ ಮತ್ತು ಬ್ರೋ ಸೇವಿಂಗ್ಸ್ ಅಕೌಂಟ್ಗಳಲ್ಲಿ ಮಿನಿಮಮ್ ಬ್ಯಾಲನ್ಸ್ ಎಂಬುದು ಇರುವುದಿಲ್ಲ.
ಬ್ಯಾಂಕ್ ಆಫ್ ಬರೋಡಾ ಗುಜರಾತ್ ಮೂಲದ್ದಾದರೂ ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಕರ್ನಾಟಕ ಮೂಲದ ಐತಿಹಾಸಿಕ ವಿಜಯ ಬ್ಯಾಂಕ್ ಐದು ವರ್ಷಗಳ ಹಿಂದೆ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಂಡಿತು. ಇದರೊಂದಿಗೆ ಬ್ಯಾಂಕ್ ಆಫ್ ಬರೋಡಾ ಬೆಂಗಳೂರಿನಲ್ಲಿ ಸುಮಾರು 100 ಶಾಖೆಗಳನ್ನು ಹೊಂದಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ