ಸುಕನ್ಯಾ ಸಮೃದ್ಧಿ, ಪಿಪಿಎಫ್ ಇತ್ಯಾದಿ ಸ್ಮಾಲ್ ಸೇವಿಂಗ್ ಸ್ಕೀಮ್ ದರಗಳ ಮುಂದುವರಿಕೆ; ಇಲ್ಲಿದೆ ಈ ಯೋಜನೆಗಳ ದರಪಟ್ಟಿ

Small Savings Schemes' Interest Rates: ಸಣ್ಣ ಉಳಿತಾಯ ಯೋಜನೆಗಳಿಗೆ ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್​ಗೆ ಬಡ್ಡಿದರವನ್ನು ಸರ್ಕಾರ ಪ್ರಕಟಿಸಿದೆ. ಎಲ್ಲಾ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳಿಗೂ ಹಿಂದಿನ ಬಡ್ಡಿದರವನ್ನೇ ಮುಂದುವರಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಿಗೆ ಗರಿಷ್ಠ ಬಡ್ಡಿದರ ಸಿಗುತ್ತದೆ. ಎಲ್ಲವೂ ಕೂಡ ಸೆಕ್ಷನ್ 80ಸಿ ಅಡಿಯಲ್ಲಿ ಟ್ಯಾಕ್ಸ್ ಡಿಡಕ್ಷನ್​ಗೆ ಸಹಾಯವಾಗುವ ಸ್ಕೀಮ್​ಗಳೇ ಆಗಿವೆ.

ಸುಕನ್ಯಾ ಸಮೃದ್ಧಿ, ಪಿಪಿಎಫ್ ಇತ್ಯಾದಿ ಸ್ಮಾಲ್ ಸೇವಿಂಗ್ ಸ್ಕೀಮ್ ದರಗಳ ಮುಂದುವರಿಕೆ; ಇಲ್ಲಿದೆ ಈ ಯೋಜನೆಗಳ ದರಪಟ್ಟಿ
ಸಣ್ಣ ಉಳಿತಾಯ ಯೋಜನೆ

Updated on: Jun 30, 2024 | 5:18 PM

ನವದೆಹಲಿ, ಜೂನ್ 30: ಮಧ್ಯಮ ವರ್ಗದ ಜನರು ಹಣ ಉಳಿಸಲು ಮತ್ತು ಹೂಡಿಕೆ ಮಾಡಲು, ಹಾಗೂ ತೆರಿಗೆ ಹಣ ಉಳಿಸಲು ಸರ್ಕಾರ ಹಲವು ಸಣ್ಣ ಉಳಿತಾಯ ಯೋಜನೆಗಳನ್ನು ನಡೆಸುತ್ತದೆ. ಈ ಯೋಜನೆಗಳ ಬಡ್ಡಿದರವನ್ನು ಪ್ರತೀ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ. ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕವಾದ ಜುಲೈನಿಂದ ಸೆಪ್ಟಂಬರ್​ವರೆಗಿನ ಅವಧಿಗೆ ಸ್ಮಾಲ್ ಸೇವಿಂಗ್ಸ್ ಸ್ಕೀಮ್​ಗಳ ದರಗಳನ್ನು ಸರ್ಕಾರ ಪ್ರಕಟಿಸಿದೆ. ಹಿಂದಿನ ದರಗಳೇ ಈ ಯೋಜನೆಗಳಿಗೆ ಮುಂದುವರಿಸಲಾಗಿದೆ. ಈ ಸ್ಕೀಮ್​ಗಳ ಪೈಕಿ ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಹಿರಿಯ ನಾಗರಿಕ ಉಳಿತಾಯ ಯೋಜನೆಗಳಿಗೆ ಗರಿಷ್ಠ ಬಡ್ಡಿದರ ಇದೆ.

ಸಣ್ಣ ಉಳಿತಾಯ ಯೋಜನೆಗಳಿಗೆ 2024ರ ಜುಲೈ-ಸೆಪ್ಟಂಬರ್ ಕ್ವಾರ್ಟರ್​ಗೆ ಬಡ್ಡಿದರ

  • ಅಂಚೆ ಕಚೇರಿ 1 ವರ್ಷದ ಠೇವಣಿ: ಶೇ. 6.9 ಬಡ್ಡಿ
  • ಅಂಚೆ ಕಚೇರಿ 2 ವರ್ಷದ ಠೇವಣಿ: ಶೇ. 7
  • ಅಂಚೆ ಕಚೇರಿ 3 ವರ್ಷದ ಠೇವಣಿ: ಶೇ. 7.1
  • ಅಂಚೆ ಕಚೇರಿ 5 ವರ್ಷದ ಠೇವಣಿ: ಶೇ. 7.5
  • ಅಂಚೆ ಕಚೇರಿ 5 ವರ್ಷದ ಆವರ್ತಿತ ಠೇವಣಿ (ಆರ್​ಡಿ): ಶೇ. 6.7
  • ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್​ಎಸ್​ಸಿ): ಶೇ. 7.7
  • ಕಿಸಾನ್ ವಿಕಾಸ್ ಪತ್ರ: ಶೇ. 7.6
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್): ಶೇ. 7.1
  • ಸುಕನ್ಯಾ ಸಮೃದ್ಧಿ ಯೋಜನೆ: ಶೇ. 8.2
  • ಹಿರಿಯ ನಾಗರಿಕರ ಉಳಿತಾಯ ಯೋಜನೆ: ಶೇ.. 8.2
  • ಮಾಸಿಕ ಆದಾಯ ಖಾತೆ: ಶೇ. 7.4

ಇದನ್ನೂ ಓದಿ: ಹಣಕಾಸು ಅಕ್ರಮ ತಡೆಯಲು ಭಾರತ ಕೈಗೊಂಡ ಕ್ರಮಕ್ಕೆ ಎಫ್​ಎಟಿಎಫ್ ಮೆಚ್ಚುಗೆ; ವಿಶ್ವದ ಕೆಲವೇ ರಾಷ್ಟ್ರಗಳ ಸಾಲಿನಲ್ಲಿ ಭಾರತ

ಈ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಲಾದ ಹಣಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಸೆಕ್ಷನ್ 80ಸಿ ಅಡಿಯಲ್ಲಿ ಈ ಹೂಡಿಕೆಗಳನ್ನು ತೋರಿಸಿಬಹುದು. ಈ ಸೆಕ್ಷನ್ ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗಿನ ಹೂಡಿಕೆಗೆ ಟ್ಯಾಕ್ಸ್ ಡಿಡಕ್ಷನ್ ಒದಗಿಸುತ್ತದೆ. ಹಳೆಯ ಟ್ಯಾಕ್ಸ್ ರೆಜಮೆ ಮುಂದುವರಿಸುತ್ತಿರುವವರಿಗೆ ಇದು ಅನುಕೂಲವಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಇವೆಲ್ಲಾ ದೀರ್ಘ ಕಾಲದ ಸ್ಕೀಮ್​ಗಳಾಗಿವೆ. ಅಂಚೆ ಕಚೇರಿಯಲ್ಲಿ ಒಂದರಿಂದ ಐದು ವರ್ಷದವರೆಗಿನ ಠೇವಣಿ ಸ್ಕೀಮ್​ಗಳಿವೆ. ಎನ್​ಎಸ್​ಸಿ ಯೋಜನೆ ಐದು ವರ್ಷದವರೆಗೆ ಕೈಲಾದಷ್ಟು ಹೂಡಿಕೆ ಮಾಡಲು ಉತ್ತೇಜಿಸುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us