
ಆಧಾರ್ ನಂಬರ್ಗೆ ಲಿಂಕ್ ಆಗದ ಪ್ಯಾನ್ ನಂಬರ್ (PAN) ಜುಲೈ 1ರಿಂದ ನಿಷ್ಕ್ರಿಯವಾಗಿದೆ. ಹಣಕಾಸು ವಹಿವಾಟಿಗೆ ಪ್ಯಾನ್ ನಂಬರ್ ಬಹಳ ಅಗತ್ಯ. ಹೀಗಾಗಿ, ಆಧಾರ್ ಜೊತೆ ಪ್ಯಾನ್ ಲಿಂಕ್ (PAN Linking With Aadhaar) ಮಾಡುವುದು ಅಗತ್ಯ. ನೀವು ನಿಷ್ಕ್ರಿಯಗೊಂಡ ಪ್ಯಾನ್ನ ಬಳಕೆ ಮುಂದುವರಿಸಿದರೆ ಸರ್ಕಾರದಿಂದ ಕ್ರಮ ಎದುರಿಸಬೇಕಾಗಬಹುದು. ಅಲ್ಲದೇ ಹಲವು ಹಣಕಾಸು ಚಟುವಟಿಕೆ ನಡೆಸಲು ನಿಷ್ಕ್ರಿಯ ಪ್ಯಾನ್ನಿಂದ ಸಾಧ್ಯವಾಗದೇ ಹೋಗಬಹುದು. ನಿಮ್ಮ ದೈನಂದಿನ ಹಣಕಾಸು ಚಟುವಟಿಕೆಗೂ ಕಷ್ಟವಾಗಬಹುದು. ನೀವು ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡದೇ ಹೋಗಿದ್ದರೆ 1,000 ರೂ ದಂಡ ಕಟ್ಟಿ ಈಗಲೂ ಮಾಡಬಹುದು. ಅದು ಸಕ್ರಿಯಗೊಳ್ಳಲು 30 ದಿನಗಳಾದರೂ ಬೇಕು. ಅಲ್ಲಿಯವರೆಗೂ ನೀವು ಪ್ಯಾನ್ ಬಳಸುವಂತಿಲ್ಲ. ನಿಷ್ಕ್ರಿಯಗೊಂಡ ಪ್ಯಾನ್ನಿಂದ ಏನೇನು ವಹಿವಾಟು ಸಾಧ್ಯವಾಗುವುದಿಲ್ಲ ಎಂಬ ವಿವರ ಇಲ್ಲಿದೆ…
ಇದನ್ನೂ ಓದಿ: IT Return: ಒಂದಿಷ್ಟು ತೆರಿಗೆ ಉಳಿಸಲು ಆದಾಯ ಕಡಿಮೆ ತೋರಿಸದಿರಿ; ಜೈಲಿಗೆ ಹೋಗಬೇಕಾದೀತು ಜೋಕೆ..!
ಇದನ್ನೂ ಓದಿ: Investments: ನವವಿವಾಹಿತರು ಜಾಣರಾದರೆ ಈ 5 ಹೂಡಿಕೆಗಳನ್ನು ಮರೆಯಲ್ಲ; ತಪ್ಪದೇ ಅಳವಡಿಸಿ ಜೀವನದ ಭದ್ರತೆಗೆ ಅಡಿಪಾಯ ಹಾಕಿ
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:29 pm, Tue, 11 July 23