Money Tips: ಹಣಕಾಸು ಸಂಕಷ್ಟವಾ? ಹಣ ನಿಲ್ಲುತ್ತಿಲ್ಲವಾ? ಈ ಐದು ಹಣಕಾಸು ತಂತ್ರಗಳನ್ನು ಮರೆಯದಿರಿ

|

Updated on: Jul 21, 2023 | 6:09 PM

5 Tips For Financial Freedom: ಕಷ್ಟಪಟ್ಟು ಸಂಪಾದನೆ ಮಾಡಿದ ಹಣ ನಮ್ಮ ಕೈಗೆ ನಿಲುಕದೇ ಕರಗಿಹೋಗುತ್ತಾ ಹತಾಶಗೊಳ್ಳುವ ಬಹಳ ಮಂದಿ ನಮ್ಮ ನಿಮ್ಮ ನಡುವೆ ಇದ್ದಾರೆ. ಸಾಲದ ಮೇಲೆ ಸಾಲ ಬೆಳೆಯುತ್ತಾ ಕೊನೆಗೆ ಇದ್ದಬದ್ದ ಆಸ್ತಿಗಳನ್ನು ಮಾರಿ ಬೀದಿಪಾಲಾದವರೂ ಉಂಟು. ಇಂಥ ಪರಿಸ್ಥಿತಿ ತಪ್ಪಿಸಲು ಇಲ್ಲಿದೆ ಟಿಪ್ಸ್:

Money Tips: ಹಣಕಾಸು ಸಂಕಷ್ಟವಾ? ಹಣ ನಿಲ್ಲುತ್ತಿಲ್ಲವಾ? ಈ ಐದು ಹಣಕಾಸು ತಂತ್ರಗಳನ್ನು ಮರೆಯದಿರಿ
ಹಣ
Follow us on

ಯಾರದ್ದೇ ಜೀವನದ ಹಣಕಾಸು ಗುರಿ ಎಂದರೆ ಅದು ಜೀವನದ ಅಗತ್ಯತೆಗಳಿಗೆ ಹಣ ಸಂಪಾದಿಸುವುದು. ಅಗತ್ಯತೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಹಣ ಸಂಪಾದನೆಯ ಗುರಿಯೂ ಬದಲಾಗುತ್ತದೆ. ಕೆಲವರು ದೊಡ್ಡ ಸಂಬಳದ ಕೆಲಸ ಮಾಡಬಹುದು, ದೊಡ್ಡ ಉದ್ದಿಮೆದಾರರಾಗಿರಬಹುದು. ಇನ್ನೂ ಕೆಲವರ ಆದಾಯ ತೀರಾ ಮಿತಿಯಲ್ಲಿರಬಹುದು. ಆದರೆ ಹಣಕಾಸು ಲೆಕ್ಕಾಚಾರ, ಸೂತ್ರ ಎಲ್ಲರಿಗೂ ಒಂದೇ. ಇರುವ ಪರಿಮಿತಿಯಲ್ಲೇ ಸೀಮಿತ ರೀತಿಯಲ್ಲಿ ಹಣಕಾಸು ಭದ್ರತೆ ಪಡೆಯಲು ಸಾಧ್ಯ. ಗೆಟ್ ಟುಗೆದರ್ ಫೈನಾನ್ಸ್ (Get Together Finance) ಎಂಬ ಕನ್ಸಲ್ಟೆನ್ಸಿ ಸಂಸ್ಥೆಯ ಸಿಇಒ ಅರುಣ್ ಸಿಂಗ್ ತನ್ವರ್ ಅವರು ನೀಡಿದ ಟಿಪ್ಸ್​ನ ವಿವರ ಇಲ್ಲಿದೆ

ಸಾಲದ ಶೂಲಕ್ಕೆ ಮಾತ್ರ ಸಿಲುಕಬೇಡಿ

ಯಾರದ್ದೇ ಸಾಲವು ಸಣ್ಣ ಮೊತ್ತದಿಂದಲೇ ಆರಂಭವಾಗುತ್ತದೆ. ಪುಟ್ಟ ಸಾಲವೆಂದು ನಿರ್ಲಕ್ಷಿಸದಿರಿ. ಸಾಲ ಮಾಡದೇ ಇರುವಂತೆ ಸಾಧ್ಯವಾದಷ್ಟೂ ನೋಡಿಕೊಳ್ಳಿ. ಸಾಲ ಇದ್ದರೆ ನಿಮ್ಮ ಸಂಪಾದನೆ ನೀರಿನಲ್ಲಿ ಹೋಮ ಮಾಡಿದಂತೆ. ಸಾಲ ಆಗದೇ ಇರದ ರೀತಿಯಲ್ಲಿ ನಿಮ್ಮ ಖರ್ಚುವೆಚ್ಚಗಳನ್ನು ನಿಭಾಯಿಸಿ. ಆಸೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.

ಇದನ್ನೂ ಓದಿFinancial Life Tips: ಖರ್ಚು, ಉಳಿತಾಯ, ಸಾಲಕ್ಕೆ ಹಣಕಾಸು ಸೂತ್ರ ತಿಳಿದಿರಿ; ಜೀವನಪೂರ್ತಿ ನಿಶ್ಚಿಂತೆಯಿಂದಿರಿ

ಎಮರ್ಜೆನ್ಸಿ ಫಂಡ್ ಬಹಳ ಅಗತ್ಯ

ಅನಾರೋಗ್ಯವೂ ಅಥವಾ ಇನ್ಯಾವುದಾದರೂ ತುರ್ತು ಸಂದರ್ಭ ಬಂದು ದಿಢೀರ್ ವೆಚ್ಚ ಎರಗಬಹುದು. ಇಂಥ ಎಮರ್ಜೆನ್ಸಿಗೆ ಸಾಲ ಮಾಡಬೇಕಾಗಬಹುದು. ಇದನ್ನು ತಪ್ಪಿಸಲು ನಿಮ್ಮ ಸಂಪಾದನೆಯಲ್ಲಿ ಒಂದಷ್ಟು ಭಾಗವನ್ನು ಎಮರ್ಜೆನ್ಸಿಗೆಂದು ಎತ್ತಿ ಇಡುತ್ತಾ ಹೋಗಿ. ಒಂದು ಲಕ್ಷ ರೂವನ್ನಾದರೂ ಪ್ರತ್ಯೇಕವಾಗಿ ಇಡುವುದು ಉತ್ತಮ. ಅದಕ್ಕಾಗಿ ಆರ್​ಡಿ ಇತ್ಯಾದಿ ನಿಯಮಿತವಾಗಿ ಹೂಡಿಕೆ ಮಾಡುವ ಯೋಜನೆಗಳನ್ನು ಬಳಸಬಹುದು. ಚೀಟಿ ಅಥವಾ ಚಿಟ್ ಫಂಡ್​ಗಳ ಮೂಲಕವಾದರೂ ಇದು ಸಾಧ್ಯ.

ಇನ್ಷೂರೆನ್ಸ್ ಬಹಳ ಅಗತ್ಯ

ಲೈಫ್ ಇನ್ಷೂರೆನ್ಸ್ ಮತ್ತು ಹೆಲ್ತ್ ಇನ್ಷೂರೆನ್ಸ್ ಎರಡೂ ಕೂಡ ಬಹಳ ಅವತ್ಯವಾಗಿರುವಂಥವು. ಹೆಲ್ತ್ ಇನ್ಷೂರೆನ್ಸ್ ನಿಮಗೆ ಆರೋಗ್ಯವೆಚ್ಚದಿಂದ ಭದ್ರತೆ ಒದಗಿಸುತ್ತದೆ. ಲೈಫ್ ಇನ್ಷೂರೆನ್ಸ್ ನಿಮ್ಮ ನಿವೃತ್ತಿ ಜೀವನದಲ್ಲಿ ಆಸರೆಯಾಗುತ್ತದೆ.

ಇದನ್ನೂ ಓದಿCar Insurance: ಮಳೆ ನೀರು ತುಂಬಿದಾಗ ಕಾರು ಸ್ಟಾರ್ಟ್ ಮಾಡದಿರಿ; ಎಂಜಿನ್ ಕೆಡುತ್ತೆ, ಇನ್ಷೂರೆನ್ಸ್ ಕ್ಲೈಮ್ ಕೂಡ ಅಸಾಧ್ಯ

ಖರ್ಚುಗಳ ಬಗ್ಗೆ ನಿಗಾ ವಹಿಸಿ

ಹಣ ಉಳಿತಾಯವು ಹಣ ಗಳಿಕೆಗೆ ಸಮ ಎನ್ನುತ್ತಾರೆ ಬುದ್ಧಿವಂತರು. ನಿಮ್ಮ ಸಂಪಾದನೆಯಲ್ಲಿ ಅಂದುಕೊಂಡಷ್ಟು ಹಣ ಉಳಿಸಲು ಸಾಧ್ಯವಾಗುತ್ತಿಲ್ಲ ಎಂದು ನೀವು ಕೊರಗುತ್ತಿರಬಹುದು. ಇದಕ್ಕೆ ಕಡಿವಾಣ ಹಾಕಬೇಕೆಂದರೆ ನಿಮ್ಮ ದೈನಂದಿನ ಖರ್ಚುವೆಚ್ಚಗಳನ್ನು ಬರೆದಿಡುವುದು ಒಳ್ಳೆಯ ಮಾರ್ಗ. ಇದರಿಂದ ಒಂದು ತಿಂಗಳಲ್ಲಿ ನಿಮ್ಮ ಹಣ ಎಲ್ಲೆಲ್ಲಿ ವ್ಯಯವಾಗುತ್ತಿದೆ ಎಂಬ ಸ್ಪಷ್ಟ ಚಿತ್ರಣ ನಿಮಗೆ ಸಿಗುತ್ತದೆ. ಕೆಲ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

ಹೆಚ್ಚಿನ ಆದಾಯಕ್ಕೆ ಪ್ರಯತ್ನ

ನೀವು ಅಂದುಕೊಂಡ ಹಣಕಾಸು ಗುರಿ ಈಗಿನ ಆದಾಯಮೂಲದಿಂದ ಸಾಧ್ಯ ಇಲ್ಲ ಎನಿಸಿದಲ್ಲಿ, ಬೇರೆ ಹೆಚ್ಚುವರಿ ಆದಾಯಕ್ಕೆ ಪ್ರಯತ್ನಿಸಿ ನೋಡಿ. ಫ್ರೀಲ್ಯಾನ್ಸ್ ಕೆಲಸಗಳು ಬಹಳ ಸಿಗುತ್ತವೆ. ಪಾರ್ಟ್​ಟೈಮ್ ಉದ್ಯೋಗವಾಗಿ ಓಲಾ, ಊಬರ್, ಆಟೊ ಇತ್ಯಾದಿಯಾದರೂ ಆದೀತು. ಡೆಲಿವರಿ ಬಾಯ್ ಕೆಲಸವೂ ನಡೆದೀತು. ಆದರೆ, ಈ ಹೆಚ್ಚುವರಿ ಕೆಲಸಗಳು ನಿಮ್ಮ ವೈಯಕ್ತಿಕ ಜೀವನಕ್ಕೆ ಹಿನ್ನಡೆಯಾಗಿ ಪರಿಣಮಿಸದಂತೆ ನೋಡಿಕೊಳ್ಳಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ