ಓಡಾಟಕ್ಕೆ ಸ್ವಂತ ವಾಹನ ಬಳಸುವವರ ಪ್ರಮುಖ ಮಾಸಿಕ ವೆಚ್ಚಗಳಲ್ಲಿ ಇಂಧನವೂ ಇರುತ್ತದೆ. ನಿತ್ಯ ಸಂಚಾರಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ಕಾರನ್ನು ಬಳಸುವವರಿಗೆ ಇಂಧನ ವೆಚ್ಚ (Fuel expense) ಬಹಳ ಹೆಚ್ಚೇ. ಇಂಥ ಸಂದರ್ಭಕ್ಕೆ ಫುಯಲ್ ಕ್ರೆಡಿಟ್ ಕಾರ್ಡ್ (Fuel Credit Card) ಉಪಯೋಗಕ್ಕೆ ಬರುತ್ತದೆ. ಪೆಟ್ರೋಲ್ಗೆ ಹಣ ಪಾವತಿಸಲು ನೀವು ಫುಯೆಲ್ ಕ್ರೆಡಿಟ್ ಕಾರ್ಡ್ ಉಪಯೋಗಿಸುವುದರಿಂದ ಡಿಸ್ಕೌಂಟ್, ರಿವಾರ್ಡ್ಸ್ ಇತ್ಯಾದಿ ಆಫರ್ ಇರುತ್ತದೆ. ಹಾಗೆಯೇ, ಸರ್ಚಾರ್ಜ್ ವಿನಾಯಿತಿಯನ್ನೂ ಪಡೆಯಬಹುದು. ಪೆಟ್ರೋಲಿಯಂ ಕಂಪನಿಗಳ ಜೊತೆ ಈ ಕಾರ್ಡ್ಗಳು ಸಹಯೋಗ ಹೊಂದಿರುತ್ತವೆ. ಭಾರತದಲ್ಲಿ ಬಿಪಿಸಿಎಲ್, ಇಂಡಿಯನ್ ಆಯಿಲ್ ಕಂಪನಿಗಳ ಜೊತೆ ಸಹಭಾಗಿತ್ವದಲ್ಲಿ ಬ್ಯಾಂಕುಗಳು ಫುಯೆಲ್ ಕ್ರೆಡಿಟ್ ಕಾರ್ಡನ್ನು ಕೊಡುತ್ತವೆ.
ನೀವು ಹೆಚ್ಚು ಇಂಧನ ಬಳಸುವವರಾಗಿದ್ದರೆ ಫುಯೆಲ್ ಕಾರ್ಡ್ ಬೇಕಾಗುತ್ತದೆ. ಬ್ಯಾಂಕ್ನ ಕಚೇರಿಗೆ ಹೋಗಿ ನೀವು ಫುಯಲ್ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಅಥವಾ ಬ್ಯಾಂಕ್ನ ವೆಬ್ಸೈಟ್ಗೆ ಹೋಗಿಯೂ ಕಾರ್ಡ್ ಪಡೆಯಬಹುದು.
ಇದನ್ನೂ ಓದಿ: ಒಂದೆಡೆ ಸಾಲ ಇದೆ, ಈಕ್ವಿಟಿ ಮೇಲೆ ಎಸ್ಐಪಿ ಇದೆ; ಇನ್ನೊಂದೆಡೆ ಪಿಎಫ್ ಹಣ ಇದೆ; ಮುಂದೇನು ಮಾಡಬಹುದು?
ಕೆಲ ಫುಯೆಲ್ ಕ್ರೆಡಿಟ್ ಕಾರ್ಡ್ಗಳು ಕ್ಯಾಷ್ಬ್ಯಾಕ್ ಕೊಡಬಹುದು. ಅಥವಾ ರಿವಾರ್ಡ್ ಪಾಯಿಂಟ್ಗಳನ್ನು ಕೊಡಬಹುದು. ಹೆಚ್ಚಿನ ಕಾರ್ಡ್ಗಳು ಗಿಫ್ಟ್ ವೋಚರ್, ಟ್ರಾವಲ್ ರಿವಾರ್ಡ್ ಇತ್ಯಾದಿ ಆಫರ್ ಮಾಡುತ್ತವೆ. ಇವೆಲ್ಲವನ್ನೂ ನೀವು ಬಳಸಿಕೊಳ್ಳುತ್ತೀರಿ ಎನ್ನುವುದಾದರೆ ಫುಯೆಲ್ ಕ್ರೆಡಿಟ್ ಕಾರ್ಡ್ ನಿಮಗೆ ಸೂಕ್ತ ಎನಿಸಬಹುದು.
ಎಚ್ಡಿಎಫ್ಸಿ ಮತ್ತು ಇಂಡಿಯನ್ ಆಯಿಲ್ ಸಹಯೋಗದಲ್ಲಿ ಬಿಡುಗಡೆ ಆಗಿರುವ ಕ್ರೆಡಿಟ್ ಕಾರ್ಡ್ನಲ್ಲಿ ಬಡ್ಡಿರಹಿತ ಅವಧಿ 50 ದಿನದವರೆಗೂ ಇದೆ. ದೇಶದ ಯಾವುದೇ ಪೆಟ್ರೋಲ್ ಪಂಪ್ಗೆ ಹೋದರೂ ಫುಯಲ್ ಸರ್ಚಾರ್ಜ್ನ ವಿನಾಯಿತಿ ಪಡೆಯಬಹುದು. ನೀವು ಕಾರ್ಡ್ ಖರೀದಿಸಿದ ಮೊದಲ ವರ್ಷ 50,000 ರೂಗಿಂತ ಹೆಚ್ಚು ಹಣವನ್ನು ಈ ಕಾರ್ಡ್ನಲ್ಲಿ ವ್ಯಯಿಸಿದರೆ 500 ರೂ ವಾರ್ಷಿಕ ಮೆಂಬರ್ಶಿಪ್ ರಿನಿವಲ್ ಶುಲ್ಕದಿಂದ ವಿನಾಯಿತಿ ಪಡೆಯಬಹುದು.
ಇದನ್ನೂ ಓದಿ: ಎಸ್ಬಿಐ ವೀಕೇರ್ ಸ್ಕೀಮ್; ಗರಿಷ್ಠ ಬಡ್ಡಿ ಕೊಡುವ ಈ ಯೋಜನೆ ಈ ತಿಂಗಳೇ ಕೊನೆ
ಇನ್ನು, ಐಸಿಐಸಿಐ ಬ್ಯಾಂಕ್ ಎಚ್ಪಿಸಿಎಲ್ ಕೋರಲ್ ಅಮೆರಿಕನ್ ಎಕ್ಸ್ಪ್ರೆಸ್ ಕ್ರೆಡಿಟ್ ಕಾರ್ಡ್ನಲ್ಲೂ ಹಲವು ಲಾಭಗಳನ್ನು ಆಫರ್ ಮಾಡಲಾಗುತ್ತದೆ. ಎಚ್ಪಿ ಪೆಟ್ರೋಲ್ ಪಂಪ್ಗಳಲ್ಲಿ ವೆಚ್ಚ ಮಾಡಲಾಗುವ ಪ್ರತೀ 100 ರೂಗೆ ನಿರ್ದಿಷ್ಟ ರಿವಾರ್ಡ್ ಅಂಕಗಳನ್ನು ಕೊಡಲಾಗುತ್ತದೆ. 2000 ರಿವಾರ್ಡ್ ಅಂಕಗಳಿದ್ದರೆ ಅದರನ್ನು ಬಳಸಿ 500 ರೂ ಮೌಲ್ಯದ ಇಂಧನ ಹಾಕಿಸಿಕೊಳ್ಳಬಹುದು. ಹಾಗೆಯೇ, ಶೇ. 2.5ರಷ್ಟು ಕ್ಯಾಷ್ಬ್ಯಾಕ್, ಶೇ. 1ರಷ್ಟು ಫುಯಲ್ ಸರ್ಚಾರ್ಜ್ ವಿನಾಯಿತಿ ಪಡೆಯಬಹುದು. ಸಿನಿಮಾ ಟಿಕೆಟ್, ಡೈನಿಂಗ್ ಇತ್ಯಾದಿಗಳಲ್ಲಿ ಡಿಸ್ಕೌಂಟ್ ಪಡೆಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ