Travel Insurance: ಪ್ರಯಾಣಕ್ಕೂ ಇನ್ಷೂರೆನ್ಸ್ ಸ್ಕೀಮ್; ಇದರಲ್ಲಿ ಏನೇನು ಕವರ್ ಆಗುತ್ತೆ? ಇಲ್ಲಿದೆ ಡೀಟೇಲ್ಸ್

|

Updated on: Apr 11, 2023 | 4:48 PM

A Friend During Travel: ಹತ್ತಾರು ವಿಧದ ಇನ್ಷೂರೆನ್ಸ್ ಸ್ಕೀಮ್​ಗಳಲ್ಲಿ ಪ್ರಯಾಣ ವಿಮೆಯೂ ಒಂದು. ಹೆಸರೇ ಸೂಚಿಸುವಂತೆ ಪ್ರವಾಸದ ವೇಳೆ ಅಚಾನಕ್ಕಾಗಿ ಸಂಭವಿಸುವ ದುರಂತ ಘಟನೆಗಳಿಂದ ಆಗುವ ನಷ್ಟವನ್ನು ಈ ಇನ್ಷೂರೆನ್ಸ್ ಕವರ್ ಮಾಡುತ್ತದೆ.

Travel Insurance: ಪ್ರಯಾಣಕ್ಕೂ ಇನ್ಷೂರೆನ್ಸ್ ಸ್ಕೀಮ್; ಇದರಲ್ಲಿ ಏನೇನು ಕವರ್ ಆಗುತ್ತೆ? ಇಲ್ಲಿದೆ ಡೀಟೇಲ್ಸ್
ಟ್ರಾವೆಲ್ ಇನ್ಷೂರೆನ್ಸ್
Follow us on

ನವದೆಹಲಿ: ಈಗ ಇನ್ಷೂರೆನ್ಸ್ ಎಂಬುದು ಬಹಳ ಜನರಿಗೆ ಅಗತ್ಯ ಹೂಡಿಕೆಯ ಯೋಜನೆಯಾಗಿದೆ. ಅಪಘಾತ ವಿಮೆ, ಜೀವ ವಿಮೆ, ವಾಹನ ವಿಮೆ ಹೀಗೆ ಹಲವು ರೀತಿಯ ಇನ್ಷೂರೆನ್ಸ್ ವಿಧಗಳಿವೆ. ಹಾಗೆಯೇ ಒಟ್ಟಿಗೆ ಹಣ ರಿಟರ್ನ್ ಕೊಡುವ ಸ್ಕೀಮ್​ಗಳು, ಪಿಂಚಣಿ ರೀತಿ ಕಂತುಗಳಲ್ಲಿ ಹಣ ರಿಟರ್ನ್ ಕೊಡುವ ಸ್ಕೀಮ್​ಗಳು ಹೀಗೆ ವ್ಯಕ್ತಿಯ ಅಗತ್ಯತೆಗಳಿಗೆ ತಕ್ಕಂತಹ ವಿಮಾ ಯೋಜನೆಗಳಿವೆ. ಇಂಥ ಹತ್ತಾರು ವಿಧದ ಇನ್ಷೂರೆನ್ಸ್ ಸ್ಕೀಮ್​ಗಳಲ್ಲಿ ಪ್ರಯಾಣ ವಿಮೆಯೂ (Travel Insurance) ಒಂದು. ಹೆಸರೇ ಸೂಚಿಸುವಂತೆ ಪ್ರಯಾಣದ ವೇಳೆ ಅಚಾನಕ್ಕಾಗಿ ಸಂಭವಿಸುವ ದುರಂತ ಘಟನೆಗಳಿಂದ ಆಗುವ ನಷ್ಟವನ್ನು ಈ ಇನ್ಷೂರೆನ್ಸ್ ಕವರ್ ಮಾಡುತ್ತದೆ. ದೂರ ಊರಿಗೆ ಹೋದಾಗ ಏನಾದರೂ ಅವಘಡ ಸಂಭವಿಸುವ ಪ್ರಮೇಯ ಇದ್ದೇ ಇರುತ್ತದೆ. ಹಾಗಾಗಿ, ಟ್ರಾವೆಲ್ ಇನ್ಷೂರೆನ್ಸ್ ಬಹಳ ಉಪಯೋಗಕ್ಕೆ ಬರುವ ವಿಮೆ ಎನಿಸುತ್ತದೆ.

ಎರಡು ರೀತಿಯ ಟ್ರಾವೆಲ್ ಇನ್ಷೂರೆನ್ಸ್

ದೇಶದೊಳಗೇ ಆಗಲೀ, ವಿದೇಶಗಳಲ್ಲಾಗಲೀ ನೀವು ಎಲ್ಲೇ ಪ್ರವಾಸ ಹೋದರೂ ಟ್ರಾವೆಲ್ ಇನ್ಷೂರೆನ್ಸ್ ಪಾಲಿಸಿ ಪಡೆಯಬಹುದು. ಎರಡು ರೀತಿಯ ಪ್ರಯಾಣ ವಿಮೆಗಳಿರುತ್ತವೆ. ಮೊದಲನೆಯದು, ನೀವು ಪ್ರವಾಸ ಹೋದಾಗ ಎದುರಾಗಬಹುದಾದ ವೈದ್ಯಕೀಯ ಸಂಬಂಧಿತ ಅಕಸ್ಮಿಕ ಘಟನೆಗಳನ್ನು ಟ್ರಾವೆಲ್ ಇನ್ಷೂರೆನ್ಸ್ ಸ್ಕೀಮ್ ಕವರ್ ಮಾಡುತ್ತದೆ. ನೈಸರ್ಗಿಕ ಅವಘಡ ಇತ್ಯಾದಿ ದುರ್ಘಟನೆಗಳಿಂದ ಆಗುವ ಅಪಾಯವನ್ನೂ ಈ ಸ್ಕೀಮ್​ಗಳು ಕವರ್ ಮಾಡುತ್ತವೆ.

ಇದನ್ನೂ ಓದಿSuicide Insurance: ಇನ್ಷೂರೆನ್ಸ್ ಮಾಡಿಸಿದವರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಸಿಗಬಹುದು; ಈ ಬಗ್ಗೆ ನಿಯಮಗಳು ತಿಳಿದಿರಲಿ

ಇನ್ನು ಎರಡನೇ ರೀತಿಯ ಟ್ರಾವೆಲ್ ಇನ್ಷೂರೆನ್ಸ್ ಇನ್ನೂ ಉಪಯೋಗಕ್ಕೆ ಬರಬಹುದು. ನೀವು ಪ್ರವಾಸಕ್ಕೆ ಹೋದಾಗ ನಿಮ್ಮ ಲಗೇಜು ಕಳೆದುಹೋಗಬಹುದು. ಅದರಲ್ಲಿ ಪಾಸ್​ಪೋರ್ಟ್ ಕೂಡ ಕಳೆದುಹೋಗಬಹುದು. ಅಂತಹ ಸಂದರ್ಭದಲ್ಲಿ ಬಹಳಷ್ಟು ನಷ್ಟ ಎದುರಾಗಬಹುದು. ಪ್ರಯಾಣದ ಟಿಕೆಟ್ ದಿಢೀರ್ ರದ್ದಾಗಿ ಅನಗತ್ಯ ವೆಚ್ಚ ಬರಬಹುದು. ಇಂಥ ಅನಿರೀಕ್ಷಿತ ಘಟನೆಗಳನ್ನು ಕವರ್ ಮಾಡುವಂತಹ ಟ್ರಾವೆಲ್ ಇನ್ಷೂರೆನ್ಸ್ ಸ್ಕೀಮ್​ಗಳಿರುತ್ತವೆ.

ಹಾಗೆಯೇ, ವಿದ್ಯಾರ್ಥಿಗಳು ಈಗಂತೂ ಹಾಸ್ಟೆಲ್, ಉನ್ನತ ವ್ಯಾಸಂಗ ಇತ್ಯಾದಿಗೆಂದು ಸಾಕಷ್ಟು ದೂರ ಪ್ರಯಾಣ ಮಾಡಬೇಕಾದ ಸಂದರ್ಭ ಹೆಚ್ಚುಂಟು. ಪ್ರವಾಸದ ವೇಳೆ ಎಲ್ಲಿಯಾದರೂ ಜಗಳ ಮೊದಲಾದ ವಿವಾದಗಳಿಗೆ ಸಿಲುಕಬಹುದು. ಇದರಿಂದ ಕಾನೂನು ವ್ಯಾಜ್ಯಗಳಿಗೆ ವೆಚ್ಚ ಆಗುತ್ತದೆ. ಇದನ್ನು ಟ್ರಾವೆಲ್ ಇನ್ಷೂರೆನ್ಸ್ ಸ್ಕೀಮ್​ಗಳಲ್ಲಿ ಕವರ್ ಮಾಡಬಹುದು. ವಿದೇಶಕ್ಕೆ ಓದಲು ಹೋದಾಗ ಅಥವಾ ಕ್ರೀಡಾ ತರಬೇತಿ ಪಡೆಯಲು ಹೋದಾಗ ಪ್ರಾಯೋಜಕತ್ವ ನಿಂತು ನಷ್ಟ ಅಗಬಹುದು. ಅದನ್ನೂ ಇನ್ಷೂರೆನ್ಸ್ ಸ್ಕೀಮ್​ಗಳು ಕವರ್ ಮಾಡುತ್ತವೆ.

ಇದನ್ನೂ ಓದಿDabba Trading: ‘ಡಬ್ಬಾ’ ಟ್ರೇಡರ್ ಗಾಳಕ್ಕೆ ಸಿಕ್ಕಿಬಿದ್ದೀರಿ ಜೋಕೆ ಎಂದ ಎನ್​ಎಸ್​ಇ; ಹಣ ಗಳಿಸುವುದಿರಲಿ, ಇದ್ದ ಹಣವೂ ಹೋದೀತು; ಯಾರಿದು ಡಬ್ಬಾ ಟ್ರೇಡರ್?

ಟ್ರಾವೆಲ್ ಇನ್ಷೂರೆನ್ಸ್ ಮಾಡಿಸಿದವರು ಗಮನಿಸಬೇಕಾದ ಅಂಶಗಳು

ಮೆಡಿಕಲ್ ಇನ್ಷೂರೆನ್ಸ್​ನಲ್ಲಿ ನೀವು ವೈದ್ಯಕೀಯ ವೆಚ್ಚ ಸಂಬಂಧಿತ ಬಿಲ್​ಗಳನ್ನು ಎತ್ತಿ ಇಟ್ಟುಕೊಂಡು ಹಣ ಕ್ಲೈಮ್ ಮಾಡುತ್ತೀರಿ. ಅದೇ ರೀತಿ ಟ್ರಾವೆಲ್ ಇನ್ಷೂರೆನ್ಸ್ ಮಾಡಿಸಿದಾಗ ನೀವು ಪ್ರಯಾಣದ ವೇಳೆ ಏನಾದರೂ ತುರ್ತು ಸ್ಥಿತಿ ಉದ್ಭವಿಸಿ ನೀವು ಅನಿರೀಕ್ಷಿತವಾಗಿ ಖರ್ಚು ಮಾಡಬೇಕಾಗಿ ಬರಬಹುದು. ಅಗ ಆ ವೆಚ್ಚಕ್ಕೆ ಬಿಲ್ ಇದ್ದರೆ ಖಂಡಿತ ಎತ್ತಿಟ್ಟುಕೊಂಡಿರಿ. ಹಾಗೆಯೇ, ಅಂತಹ ಸಂದರ್ಭದಲ್ಲಿ ಇನ್ಷೂರೆನ್ಸ್ ಮಧ್ಯವರ್ತಿಯ ಸಂಪರ್ಕದಲ್ಲಿದ್ದು, ಅಗತ್ಯ ದಾಖಲೆಗಳ ವಿವರ ಪಡೆದುಕೊಳ್ಳಿ. ಪ್ರಯಾಣದ ವೇಳೆ ಆಸ್ಪತ್ರೆ ಖರ್ಚಾದರೆ ಅದರ ಬಿಲ್ ಎತ್ತಿಟ್ಟುಕೊಳ್ಳಬೇಕು. ಇವೆಲ್ಲವೂ ಇನ್ಷೂರೆನ್ಸ್ ಹಣ ಕ್ಲೈಮ್ ಮಾಡಲು ಅಗತ್ಯವಾಗಿರುತ್ತವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ