ವಿಡಿಯೋಗಳ ಮಹಾಸಾಗರ ಎನಿಸಿರುವ ಯೂಟ್ಯೂಬ್ನಲ್ಲಿ (YouTube) ಲೆಕ್ಕವಿಲ್ಲದಷ್ಟು ವಿಡಿಯೋಗಳು ದಿನವೂ ಅಪ್ಲೋಡ್ ಅಗುತ್ತಲೇ ಇರುತ್ತವೆ. ವಿಡಿಯೋ ಹಾಕುವುದರ ಜೊತೆಗೆ ಜನರು ಹಣವನ್ನೂ ಮಾಡುತ್ತಿದ್ದಾರೆ. ಯೂಟ್ಯೂಬ್ನಂಥ ವಿಡಿಯೋ ಪ್ಲಾಟ್ಫಾರ್ಮ್ಗಳಿಂದ ಹಲವು ಜನರು ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಮಾಡುತ್ತಿರುವ ಬಗ್ಗೆ ಮಾತುಗಳನ್ನು ಕೇಳಿರುತ್ತೇವೆ. ನಮ್ಮಲ್ಲಿ ಅನೇಕರು ಯೂಟ್ಯೂಬ್ ಚಾನಲ್ ಹೊಂದಿದ್ದು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರಾದರೂ ಅದರಿಂದ ಯಾವ ಹಣವೂ ಬರುವುದಿಲ್ಲ. ಬೇರೆ ಜನರು ಯೂಟ್ಯೂಬ್ನಲ್ಲಿ ಹೇಗೆ ಹಣ ಮಾಡುತ್ತಾರೆ ಎಂದು ಅಚ್ಚರಿ ಆಗಬಹುದು. ಯೂಟ್ಯೂಬ್ ಶಾರ್ಟ್ಸ್ಗಳಂತೂ ಬಹಳ ಜನಪ್ರಿಯ ಎನಿಸಿವೆ. ಯೂಟ್ಯೂಬ್ನಲ್ಲಿ ಹಣ ಬರುವಂತಾಗಲು ಹಲವು ಮಾರ್ಗಗಳಿವೆ. ಯೂಟ್ಯೂಬ್ ಖಾತೆಯಿಂದ ಹಿಡಿದು ಪಾರ್ಟ್ನರ್ಶಿಪ್ವರೆಗೆ ಏನೇನು ಮಾಡಬಹುದು ಎಂಬ ಒಂದಿಷ್ಟು ವಿವರ ಇಲ್ಲಿದೆ.
ನಿಮಗೆ ಗೂಗಲ್ ಅಥವಾ ಜಿಮೇಲ್ ಖಾತೆ ಇದ್ದರೆ ಯೂಟ್ಯೂಬ್ ಖಾತೆ ಕೂಡ ಆಟೊಮ್ಯಾಟಿಕ್ ಆಗಿ ಕ್ರಿಯೇಟ್ ಆಗಿರುತ್ತದೆ. ಗೂಗಲ್ಗೆ ಲಾಗಿನ್ ಆಗಿದ್ದರೆ ಅದರ ಯೂಟ್ಯೂಬ್ ಅಕೌಂಟ್ಗೂ ಲಾಗಿನ್ ಆಗಿರುತ್ತೀರಿ.
ಯೂಟ್ಯೂಬ್ನಿಂದ ನೀವು ಹಣ ಮಾಡಬೇಕೆಂದು ನಿರ್ಧರಿಸಿದ್ದೇ ಆದಲ್ಲಿ ಮೊದಲಿಗೆ ಒಂದಿಷ್ಟು ವಿಷಯಗಳು ಗೊತ್ತಿರಲಿ. ನೀವು ಹಾಕುವ ವಿಡಿಯೋಗಳು ಗೂಗಲ್ನ ಸಾರ್ವಜನಿಕ ನೀತಿಗೆ ಅನುಬ್ಧವಾಗಿರಬೇಕು. ವಿಡಿಯೋಗಳು ಹೆಚ್ಚು ವೀಕ್ಷಣೆ ಪಡೆಯಬಲ್ಲಂತಹವಾಗಿರಬೇಕು. ಆ ನಿಟ್ಟಿನಲ್ಲಿ ನೀವು ಕಂಟೆಂಟ್ ಪ್ಲಾನ್ ಮಾಡಬೇಕು.
ಇದನ್ನೂ ಓದಿ: Tata Wistron: ಕರ್ನಾಟಕದಲ್ಲಿ 12,000 ಉದ್ಯೋಗಿಗಳಿದ್ದ ಘಟಕ ಟಾಟಾಗೆ ಕೊಟ್ಟು ಭಾರತದಿಂದಲೇ ಕಾಲ್ತೆಗೆಯಲಿರುವ ವಿಸ್ಟ್ರಾನ್
ಯೂಟ್ಯೂಬ್ನಲ್ಲಿ ಬರುವ ಜಾಹೀರಾತುಗಳು ಆದಾಯಕ್ಕೆ ಮೂಲ. ನಿಮ್ಮ ವಿಡಿಯೋಗಳಿಗೆ ಬರುವ ಜಾಹೀರಾತಿನಿಂದ ನಿಮಗೆ ದುಡ್ಡು ಸಿಗಬೇಕೆಂದರೆ ಗೂಗಲ್ ಆಡ್ಸೆನ್ಸ್ ಅಕೌಂಟ್ ಆ್ಯಕ್ಟಿವೇಟ್ ಮಾಡಬೇಕು.
ಆ್ಯಡ್ಸೆನ್ಸ್ ಅಕೌಂಟ್ ಸಕ್ರಿಯವಾದಾಕ್ಷಣ ಹಣ ಹರಿದುಬರುವುದಿಲ್ಲ. ನಿಮ್ಮ ಯೂಟ್ಯೂಬ್ ಚಾನಲ್ ಕನಿಷ್ಠ 1,000 ಸಬ್ಸ್ಕ್ರೈಬರ್ಸ್ ಹೊಂದಿರಬೇಕು. ಕಳೆದ 1 ವರ್ಷದಲ್ಲಿ ನಿಮ್ಮ ಯೂಟ್ಯೂಬ್ ವಿಡಿಯೋಗಳನ್ನು ಜನರು ವೀಕ್ಷಿಸಿದ ಅವಧಿ 4,000 ಗಂಟೆಗಳಿರಬೇಕು. ನಿಮ್ಮ ಶಾರ್ಟ್ಸ್ ವಿಡಿಯೋಗಳಿಗೆ 90 ದಿನಗಳಲ್ಲಿ 1 ಕೋಟಿ ವೀಕ್ಷಣೆ ಇರಬೇಕು. ಈ ಮಾನದಂಡಕ್ಕೆ ನಿಮ್ಮ ಯೂಟ್ಯೂಬ್ ಚಾನಲ್ ತಾಳೆಯಾಗಿದ್ದರೆ ಆಗ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್ಗೆ ಅರ್ಜಿ ಹಾಕಬಹುದು. ಆ ಮೂಲಕ ಹಣ ಸಂಪಾದನೆಗೆ ದಾರಿ ಮಾಡಬಹುದು.
ಮಾನಿಟೈಸೇಶನ್ ಆ್ಯಕ್ಟಿವೇಟ್ ಮಾಡುವುದು ಹೇಗೆ?
ಇದನ್ನೂ ಓದಿ: Mudra Loan: ಪಿಎಂ ಮುದ್ರಾ ಸ್ಕೀಮ್; 10 ಲಕ್ಷ ರೂವರೆಗೂ ಸಾಲ; ಎಲ್ಲಿ ಸಿಗುತ್ತೆ? ಯಾರಿಗೆ ಸಿಗುತ್ತೆ ಮುದ್ರಾ ಲೋನ್?
ನಮ್ಮ ವಿಡಿಯೋಗಳು ಲಕ್ಷ ಲಕ್ಷ ವೀವ್ಸ್ ಪಡೆದಿವೆ. ಆದರೂ ನಮಗೆ ನಿರೀಕ್ಷಿಸಿದಷ್ಟು ಆದಾಯ ಸಿಕ್ಕಿಲ್ಲ ಎಂದು ದೂರುವವರು ಇದ್ದಾರೆ. ಒಂದು ನೆನಪಿರಲಿ, ನಾವು ಪೋಸ್ಟ್ ಮಾಡುವ ವಿಡಿಯೋಗಳು ಎಷ್ಟು ವೀಕ್ಷಣೆ ಹೊಂದಿದೆ ಎಂಬುದಕ್ಕಿಂತ ವಿಡಿಯೋ ವೇಳೆ ಮಧ್ಯೆಮಧ್ಯೆ ಪ್ರಸಾರವಾಗುವ ಜಾಹೀರಾತುಗಳನ್ನು ಎಷ್ಟು ಮಂದಿ ಕ್ಲಿಕ್ ಮಾಡಿದ್ದಾರೆ ಅಥವಾ ಇಡೀ ಜಾಹೀರಾತನ್ನು ಎಷ್ಟು ಮಂದಿ ನೋಡಿದ್ದಾರೆ ಎಂಬುದು ಮುಖ್ಯ. ಗೂಗಲ್ ಸಂಸ್ಥೆಗೆ ಆದಾಯ ತರುವುದು ಇದೇ ಜಾಹೀರಾತುಗಳೇ. ಅದಕ್ಕೆ ಬಂದ ಜಾಹೀರಾತು ಆದಾಯವನ್ನು ಯೂಟ್ಯೂಬ್ ವಿಡಿಯೋ ಕ್ರಿಯೇಟರ್ಸ್ ಜೊತೆ ಹಂಚಿಕೊಳ್ಳುತ್ತದೆ ಅಷ್ಟೇ. ನಿಮ್ಮ ಆ್ಯಡ್ಸೆನ್ಸ್ ಅಕೌಂಟ್ನಲ್ಲಿ 100 ಡಾಲರ್ನಷ್ಟು ಹಣ ಜಮೆ ಆಗುವವರೆಗೂ ನಿಮಗೆ ಸಂದಾಯ ಆಗುವುದಿಲ್ಲ.
ನೀವು ತಕ್ಕಮಟ್ಟಿಗೆ ಸಬ್ಸ್ಕ್ರೈಬರ್ಗಳನ್ನು ಹೊಂದಿದ ಯೂಟ್ಯೂಬ್ ಚಾನಲ್ ಮಾಲೀಕರಾಗಿದ್ದರೆ ಸೋಷಿಯಲ್ ಇನ್ಫ್ಲುಯೆನ್ಸರ್ ಎನಿಸುತ್ತೀರಿ. ಯಾವುದಾದರೂ ಉತ್ಪನ್ನಗಳ ಕಂಪನಿ ಜೊತೆ ಸೇರಿ ಅವುಗಳ ಪ್ರಚಾರ ಮಾಡಬಹುದು. ನಿಮ್ಮ ವಿಡಿಯೋದಲ್ಲಿ ಅದರ ಜಾಹೀರಾತು ಸೇರಿಸಬಹುದು. ಜನರು ಈ ಲಿಂಕ್ ಕ್ಲಿಕ್ ಮಾಡಿ ಆ ವೆಬ್ಸೈಟ್ಗೆ ಹೋಗಿ ಏನಾದರೂ ಖರೀದಿಸಿದರೆ ಆ ವಿವರವು ದಾಖಲಾಗುತ್ತದೆ. ಈ ವಹಿವಾಟಿನ ಮೊತ್ತದಲ್ಲಿ ಕಮಿಷನ್ ಆಗಿ ಒಂದಷ್ಟು ಹಣ ಯೂಟ್ಯೂಬ್ ಮಂದಿಗೆ ಸಿಗುತ್ತದೆ.
ಹೋಟೆಲ್, ಸೀರೆ, ಒಡವೆ, ಫ್ಯಾಷನ್ ಹೀಗೆ ಯಾವುದಾದರೂ ಜನಪ್ರಿಯ ವಸ್ತು ಮತ್ತು ಸೇವೆಗಳನ್ನು ನೀಡುವ ಬ್ರ್ಯಾಂಡ್ಗೆ ನೀವು ಅಫಿಲಿಯೇಟೆಡ್ ಮಾರ್ಕೆಟಿಂಗ್ ಮಾಡಬಹುದು. ಅದರೆ, ಅವರ ಉತ್ಪನ್ನಗಳನ್ನು ನಿಮ್ಮ ವಿಡಯೋ ಮೂಲಕ ಪ್ರಚಾರ ಮಾಡಿ ಹಣ ಮಾಡಬಹುದು.