Tata Wistron: ಕರ್ನಾಟಕದಲ್ಲಿ 12,000 ಉದ್ಯೋಗಿಗಳಿದ್ದ ಘಟಕ ಟಾಟಾಗೆ ಕೊಟ್ಟು ಭಾರತದಿಂದಲೇ ಕಾಲ್ತೆಗೆಯಲಿರುವ ವಿಸ್ಟ್ರಾನ್

Kolar iPhone Manufacturing unit: ಐಫೋನ್ ತಯಾರಿಸಲಾಗುವ ಕೋಲಾರ ಘಟಕವನ್ನು ಟಾಟಾ ಎಲೆಕ್ಟ್ರಾನಿಕ್ಸ್​ಗೆ ಮಾರಿರುವ ವಿಸ್ಟ್ರಾನ್ ಕಂಪನಿ ತನ್ನ ಭಾರತೀಯ ವ್ಯವಹಾರಕ್ಕೆ ತಿಲಾಂಜಲಿ ಹೇಳುತ್ತಿದೆ. ಐಫೋನ್ ಉತ್ಪನ್ನಗಳ ಸರ್ವಿಸ್ ಅನ್ನು ಮಾತ್ರ ವಿಸ್ಟ್ರಾನ್ ಮುಂದುವರಿಸಬಹುದು.

Tata Wistron: ಕರ್ನಾಟಕದಲ್ಲಿ 12,000 ಉದ್ಯೋಗಿಗಳಿದ್ದ ಘಟಕ ಟಾಟಾಗೆ ಕೊಟ್ಟು ಭಾರತದಿಂದಲೇ ಕಾಲ್ತೆಗೆಯಲಿರುವ ವಿಸ್ಟ್ರಾನ್
ಕೋಲಾರ ವಿಸ್ಟ್ರಾನ್ ಘಟಕ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 02, 2023 | 2:54 PM

ನವದೆಹಲಿ: ಭಾರತದಲ್ಲಿ ಕಳೆದ 15 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಐಫೋನ್ ತಯಾರಕ ವಿಸ್ಟ್ರಾನ್ (Wistron) 2024ರೊಳಗೆ ಭಾರತದಿಂದ ಕಾಲ್ತೆಗೆಯಲಿದೆ. ಕೋಲಾರದಲ್ಲಿ ಐಫೋನ್​ಗಳನ್ನು ತಯಾರಿಸುತ್ತಿದ್ದ ವಿಸ್ಟ್ರಾನ್​ನ ಘಟಕವನ್ನು ಟಾಟಾ (Tata Electronics) ಖರೀದಿಸಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ವಿಸ್ಟ್ರಾನ್ ತನ್ನ ಐಫೋನ್ ಉತ್ಪಾದನೆಯನ್ನು ನಿಲ್ಲಿಸಸಲಿದೆ. ಭಾರತದಲ್ಲಿ ವಿಸ್ಟ್ರಾನ್ ಹೊಂದಿರುವ ಒಟ್ಟೂ ವ್ಯವಹಾರದಲ್ಲಿ ಕೋಲಾರದ ವಿಸ್ಟ್ರಾನ್ ಘಟಕ ಪ್ರಮುಖವಾದುದು. ಈ ಘಟಕದಲ್ಲಿ ಐಫೋನ್ 12 ಮತ್ತು ಐಫೋನ್ 14 ಮೊಬೈಲ್​ಗಳನ್ನು ಅಸೆಂಬಲ್ ಮಾಡಲಾಗುತ್ತಿದೆ. ಈ ಘಟಕವನ್ನು ಟಾಟಾ ಎಲೆಕ್ಟ್ರಾನಿಕ್ಸ್ ತನ್ನ ಸುಪರ್ದಿಗೆ ತೆಗೆದುಕೊಂಡ ಬಳಿಕ ವಿಸ್ಟ್ರಾನ್ ಭಾರತದಲ್ಲಿ ಐಫೋನ್ ತಯಾರಿಕೆಯಿಂದ ಹಿಂದಕ್ಕೆ ಸರಿಯಲಿದೆ. ವರದಿಗಳ ಪ್ರಕಾರ ಆ್ಯಪಲ್ ಉತ್ಪನ್ನಗಳ ದುರಸ್ತಿ ಮತ್ತು ಮೈಂಟೆನೆನ್ಸ್ ಸರ್ವಿಸ್ ಅನ್ನು ಮಾತ್ರ ಭಾರತದಲ್ಲಿ ವಿಸ್ಟ್ರಾನ್ ಮುಂದುವರಿಸಿಕೊಂಡು ಹೋಗಲಿದೆ. ಉಳಿದ ಎಲ್ಲಾ ಕಾರ್ಯಾಚರಣೆಯನ್ನು ವಿಸ್ಟ್ರಾನ್ ನಿಲ್ಲಿಸಲಿದೆ.

ಮುಂದಿನ ವರ್ಷದೊಳಗೆ ತನ್ನ ಭಾರತೀಯ ಘಟಕವನ್ನು ವಿಸರ್ಜಿಸುವಂತೆ ವಿಸ್ಟ್ರಾನ್ ಸಂಸ್ಥೆ ಭಾರತದ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್​ಸಿಎಲ್​ಟಿ) ಹಾಗು ರಿಜಿಸ್ಟ್ರಾರ್ ಆಫ್ ಕಂಪನೀಸ್ ಪ್ರಾಧಿಕಾರಗಳಿಗೆ ಅರ್ಜಿ ಸಲ್ಲಿಸಬಹುದು ಎಂಬಂತಹ ವರದಿಗಳಿವೆ. ಕೆಲ ವರ್ಷಗಳ ಹಿಂದೆ ವಿಸ್ಟ್ರಾನ್ ಸಂಸ್ಥೆ ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಕಾರ್ಯಾಚರಿಸುವ ಯೋಜನೆ ಹಾಕಿಕೊಂಡಿತ್ತು. ಈಗ ಭಾರತದಲ್ಲಿ ಆ್ಯಪಲ್ ಉತ್ಪನ್ನಗಳಿಗೆ ಸರ್ವಿಸ್ ಮಾಡುವ ಕೆಲಸ ಬಿಟ್ಟು ಉಳಿದ ತನ್ನ ಎಲ್ಲಾ ಕಾರ್ಯಾಚರಣೆ ಹಾಗೂ ಯೋಜನೆಗಳನ್ನು ವಿಸ್ಟ್ರಾನ್ ಕೈಬಿಡುವುದು ಬಹುತೇಕ ಖಚಿತ ಎನ್ನಲಾಗಿದೆ.

ಇದನ್ನೂ ಓದಿMudra Loan: ಪಿಎಂ ಮುದ್ರಾ ಸ್ಕೀಮ್; 10 ಲಕ್ಷ ರೂವರೆಗೂ ಸಾಲ; ಎಲ್ಲಿ ಸಿಗುತ್ತೆ? ಯಾರಿಗೆ ಸಿಗುತ್ತೆ ಮುದ್ರಾ ಲೋನ್?

ತೈವಾನ್ ಮೂಲದ ವಿಸ್ಟ್ರಾನ್ ಕಂಪನಿ ಆ್ಯಪಲ್​ನ ಮೂರು ಪ್ರಮುಖ ತಯಾರಕ ಸಂಸ್ಥೆಗಳಲ್ಲಿ ಒಂದಾಗಿದೆ. ವಿಸ್ಟ್ರಾನ್, ಪೆಗಾಟ್ರಾನ್ ಮತ್ತು ಫಾಕ್ಸ್​ಕಾನ್ ಕಂಪನಿಗಳು ಅ್ಯಪಲ್​ನ ಐಫೋನ್, ಐಪಾಡ್ ಇತ್ಯಾದಿ ಉತ್ಪನ್ನಗಳನ್ನು ತಯಾರಿಸುತ್ತವೆ. ಈ ಮೂರು ಕಂಪನಿಗಳು ತೈವಾನ್​ನ ದೇಶದವೇ. ಆ್ಯಪಲ್​ನ ಉತ್ಪನ್ನಗಳನ್ನು ಅತಿಹೆಚ್ಚು ತಯಾರಿಸುವುದು ಫಾಕ್ಸ್​ಕಾನ್ ಸಂಸ್ಥೆಯೇ. ಚೀನಾದಲ್ಲಿ ಈ ಮೂರು ಕಂಪನಿಗಳ ಹೆಚ್ಚಿನ ಕಾರ್ಯಾಚರಣೆ ಇದೆ. 2020ರಲ್ಲೇ ವಿಸ್ಟ್ರಾನ್ ಕಂಪನಿ ಭಾರತದಿಂದ ತನ್ನ ವ್ಯವಹಾರಗಳನ್ನು ಕೈಬಿಡುವ ಇರಾದೆ ವ್ಯಕ್ತಪಡಿಸಿತ್ತು. ಅದರಂತೆ ಟಾಟಾ ಎಲೆಕ್ಟ್ರಾನಿಕ್ಸ್ ಜೊತೆ ಡೀಲ್ ಆಯಿತು.

ಕೋಲಾರದಲ್ಲಿರುವ ವಿಸ್ಟ್ರಾನ್ ಘಟಕ 44 ಎಕರೆ ಪ್ರದೇಶದಲ್ಲಿದೆ. ಇಲ್ಲಿ ಎಂಟು ಅಸೆಂಬ್ಲಿ ಲೈನ್​ಗಳು ಇದ್ದು, ಐಫೋನ್ 12 ಮತ್ತು ಐಫೋನ್ 14 ಮೊಬೈಲ್​ಗಳು ಅಸೆಂಬಲ್ ಆಗುತ್ತವೆ. 12,000 ಉದ್ಯೋಗಿಗಳು ಇರುವ ಬೃಹತ್ ಘಟಕ ಇದು. ಈ ಘಟಕದಲ್ಲಿ 2020ರಲ್ಲಿ ಕಾರ್ಮಿಕರ ಮುಷ್ಕರ ಕಾರಣಕ್ಕೆ ವಿಸ್ಟ್ರಾನ್ ಹೆಚ್ಚು ಸುದ್ದಿಯಲ್ಲಿತ್ತು.

ಇದನ್ನೂ ಓದಿInspiring: ಅಪ್ಪನ ಆಸ್ತಿ ಇಲ್ಲ; ಓದೋದು ಬಿಟ್ಟು ಕೇವಲ 23ರ ವಯಸ್ಸಿಗೆ 100 ಕೋಟಿ ಒಡೆಯನಾದ ಸಂಕರ್ಷ್

ವಿಸ್ಟ್ರಾನ್ ಘಟಕ ಖರೀದಿ ಬಳಿಕ ಟಾಟಾ ಕಾರ್ಯಾಚರಣೆ ಹೇಗಿರುತ್ತದೆ?

ಆ್ಯಪಲ್ ಕಂಪನಿ ಉತ್ಪನ್ನಗಳ ತಯಾರಿಕೆಗೆ ಟಾಟಾ ಎಲೆಕ್ಟ್ರಾನಿಕ್ಸ್ ಗುತ್ತಿಗೆ ಪಡೆದಿದೆ. ಹೊಸೂರಿನಲ್ಲಿ ಅದರ ಘಟಕ ಇದೆ. ವಿಸ್ಟ್ರಾನ್ ಘಟಕವನ್ನು ಖರೀದಿಸಿರುವ ಟಾಟಾ ಎಲೆಕ್ಟ್ರಾನಿಕ್ಸ್, ಅಲ್ಲಿ ಐಫೋನ್ 15 ಅನ್ನು ಅಸೆಂಬಲ್ ಮಾಡಬಹುದು ಎನ್ನಲಾಗಿದೆ. 12,000 ದಷ್ಟಿರುವ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಮೇಲ್ಮಟ್ಟದಲ್ಲಿರುವ ನಾಲ್ಕೈದು ಅಧಿಕಾರಿಗಳನ್ನು ತೆಗೆಯಲಾಗುತ್ತಿದ್ದು, ಟಾಟಾ ಎಲೆಕ್ಟ್ರಾನಿಕ್ಸ್ ಆಡಳಿತಕ್ಕೆ ಅನುಕೂಲವಾಗುವಂತಹ ಬೇಕಾದ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ಮೂಲಗಳ ಪ್ರಕಾರ ವಿಸ್ಟ್ರಾನ್​ನ ಘಟಕದಲ್ಲಿ 2,000 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬಹುದು. ಮಧ್ಯಮ ಹಂತದ 400 ಮಂದಿ ಉದ್ಯೋಗಿಗಳೂ ಹೊರಹೋಗಬಹುದು ಎಂಬ ಸುದ್ದಿ ಇದೆ.

ಆ್ಯಪಲ್ ಸಂಸ್ಥೆ ತನ್ನ ಶೇ. 25ರಷ್ಟು ಉತ್ಪನ್ನಗಳನ್ನು ಭಾರತದಲ್ಲಿ ತಯಾರಿಸುವ ಗುರಿ ಇಟ್ಟುಕೊಂಡಿದೆ. ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಗೂ ಮುಂದಿನ ದಿನಗಳಲ್ಲಿ ಹೆಚ್ಚಿನ ಗುತ್ತಿಗೆ ಸಿಗಬಹುದು. ಹೊಸೂರಿನಲ್ಲಿರುವ ಘಟಕದಲ್ಲಿ ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆ ಐಫೋನ್ ಬಿಡಿಭಾಗಗಳನ್ನು ತಯಾರಿಸುತ್ತಿದೆ. ಕೋಲಾರದ ಘಟಕದಲ್ಲಿ ಐಫೋನ್ 15 ತಯಾರಿಸುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿರುವ ಪೆಗಾಟ್ರಾನ್​ನ ಘಟಕವನ್ನೂ ಖರೀದಿಸಲು ಟಾಟಾ ಎಲೆಕ್ಟ್ರಾನಿಕ್ಸ್ ಯೋಜಿಸುತ್ತಿರುವ ಸುದ್ದಿಯೂ ಇದೆ.

ಇನ್ನಷ್ಟು ಉದ್ಯಮ ಮತ್ತು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್