Success Story ಕರ್ನಾಟಕದಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ಆರ್​ಎಸ್ ಕಾಮತ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಬ್ರ್ಯಾಂಡ್ ಕಟ್ಟಿದ ಕಥೆ

Raghunandan Kamath: ಮಂಗಳೂರಿನಲ್ಲಿ ಅಪ್ಪನ ಹಣ್ಣಿನ ಅಂಗಡಿಯಲ್ಲಿ ಸಹಾಯ ಮಾಡಿಕೊಂಡು ಇದ್ದ ರಘುನಂದನ್ ಕಾಮತ್ ಮುಂಬೈಗೆ ಹೋಗಿ ನ್ಯಾಚುರಲ್ಸ್ ಐಸ್ ಕ್ರೀಮ್ ಅಂಗಡಿ ತೆರೆದಿದ್ದರು. ಈಗ ಅದು 300 ಕೋಟಿ ರೂ ವಹಿವಾಟು ಕಾಣುವ ದೊಡ್ಡ ಉದ್ದಿಮೆಯಾಗಿದೆ.

Success Story ಕರ್ನಾಟಕದಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದ ಆರ್​ಎಸ್ ಕಾಮತ್ ರಾಷ್ಟ್ರಮಟ್ಟದಲ್ಲಿ ದೊಡ್ಡ ಬ್ರ್ಯಾಂಡ್ ಕಟ್ಟಿದ ಕಥೆ
ರಘುನಂದನ್ ಕಾಮತ್
Follow us
|

Updated on:May 02, 2023 | 6:14 PM

Naturals Ice Cream Story: ಉದ್ದಿಮೆ, ವ್ಯಾಪಾರದಲ್ಲಿ ಯಶಸ್ಸು ಒಲಿದುಬರುವುದು ಅಷ್ಟು ಸುಲಭವಲ್ಲ. ವರ್ಷಕ್ಕೆ ಕೋಟಿ ಕೋಟಿ ರೂ ಸಂಪಾದನೆ ಮಾಡುವ ವ್ಯವಹಾರಿಗಳನ್ನು ನೋಡಿ, ಇದೇನಪ್ಪ ಇಷ್ಟು ಸುಲಭವಾಗಿ ಹಣ ಸಂಪಾದಿಸುತ್ತಾರಲ್ಲ ಎಂದು ಭಾವಿಸುತ್ತೇವೆ. ಆದರೆ, ಯಾವುದೇ ವ್ಯಾಪಾರ ಅಥವಾ ಉದ್ಯಮ ತತ್​ಕ್ಷಣಕ್ಕೆ ಸಕ್ಸಸ್ ಕಾಣುವುದು ಅಪರೂಪ. ಲಾಭದ ಹಳಿಗೆ ಬರುವ ಮುನ್ನ ಹಲವು ನಷ್ಟ, ಹಿನ್ನಡೆ, ಅಡ್ಡಿ ಆತಂಕಗಳನ್ನು ದಾಟಿ ಹೋಗಿರುತ್ತದೆ. ಒಂದು ವ್ಯವಹಾರವನ್ನು ಸ್ಥಾಪಿಸಿ ತಕ್ಕಮಟ್ಟಿಗೆ ಹಿಡಿದುನಿಲ್ಲಿಸುವುದೇ ದೊಡ್ಡ ಸಾಹಸ. ಕಷ್ಟಗಳಿಗೆ ಜಗ್ಗದೇ ಪಟ್ಟು ಹಿಡಿದು ವ್ಯವಹಾರ ಯಶಸ್ಸು ಮಾಡಿದವರಲ್ಲಿ ಕರ್ನಾಟಕದ ರಘುನಂದನ್ ಶ್ರೀನಿವಾಸ್ ಕಾಮತ್ (Raghunandan Kamath) ಕೂಡ ಒಬ್ಬರು. ಮಂಗಳೂರಿನಲ್ಲಿ ಅಪ್ಪನ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಬೆಳೆದ ಇವರು ಇದೀಗ 300 ಕೋಟಿ ರೂ ಮೌಲ್ಯದ ಐಸ್​ಕ್ರೀಮ್ ಬ್ರ್ಯಾಂಡ್​ನ ಒಡೆಯರಾಗಿದ್ದಾರೆ.

ನ್ಯಾಚುರಲ್ ಐಸ್ ಕ್ರೀಮ್ ಸ್ಥಾಪನೆಯಾದ ಕಥೆ

ರಘುನಂದನ್ ಎಸ್ ಕಾಮತ್ ಅವರು ಮಂಗಳೂರಿನಲ್ಲಿ ಅಪ್ಪನ ಜೊತೆ ಅಂಗಡಿಯಲ್ಲಿ ಹಣ್ಣು ವ್ಯಾಪಾರ ಮಾಡುವಾಗ ಸಾಕಷ್ಟು ಸೂಕ್ಷ್ಮತೆಗಳನ್ನು ಕಲಿತಿದ್ದರು. ಬಳಿಕ ಅವರು ಎಂಬತ್ತರ ದಶಕದಲ್ಲಿ ಮುಂಬೈಗೆ (ಆಗ ಬಾಂಬೆ) ಹೋದರು. ಆಗ ಕರ್ನಾಟಕದಿಂದ, ಅದರಲ್ಲೂ ಕರಾವಳಿ ಭಾಗದಿಂದ ಮಂಗಳೂರಿಗೆ ಕೆಲಸಕ್ಕೆ ಹೋಗುವುದು ಟ್ರೆಂಡ್ ಆಗಿದ್ದ ದಿನಗಳು. ಮುಂಬೈನಲ್ಲಿರುವ ಹೋಟೆಲ್ ಉದ್ಯಮ ಬಹುತೇಕ ಮಂಗಳೂರಿನವರೇ ಕೈಯಲ್ಲೇ ಇದೆ. ಮಂಗಳೂರಿನಿಂದ ಮುಂಬೈಗೆ ಹೋದ ಕಾಮತ್ 1984ರಲ್ಲಿ ಜುಹು ಪ್ರದೇಶದಲ್ಲಿ ನ್ಯಾಚುರಲ್ಸ್ ಐಸ್ ಕ್ರೀಮ್ ಅಂಗಡಿಯನ್ನು ತೆರೆದರು.

ಇದನ್ನೂ ಓದಿYouTube Money: ಯೂಟ್ಯೂಬ್​ನಿಂದ ಹಣ ಮಾಡುವುದು ಹೇಗೆ? ಕನಿಷ್ಠ ಎಷ್ಟು ವೀಕ್ಷಣೆ ಆಗಬೇಕು? ಮಹತ್ವದ ವಿವರ ಇಲ್ಲಿದೆ

ಆಗ ಇವರ ಅಂಗಡಿಯಲ್ಲಿ ಕೆಲಸಕ್ಕಿದ್ದವರು 4 ಮಂದಿ ಮಾತ್ರ. ಕಾಮತ್ ಹಾಗೂ ಸಿಬ್ಬಂದಿಯೇ ಸೇರಿ ಐಸ್ ಕ್ರೀಮ್​ಗಳನ್ನು ತಯಾರಿಸುತ್ತಿದ್ದರು. ನ್ಯಾಚುರಲ್ಸ್ ಐಸ್ ಕ್ರೀಮ್ ಅಂಗಡಿಯಲ್ಲಿ 10 ಫ್ಲೇವರ್​ಗಳ ಐಸ್ ಕ್ರೀಮ್ ತಯಾರಾಗುತ್ತಿತ್ತು. ಆದರೆ, ನಿರೀಕ್ಷಿಸಿದಷ್ಟು ವ್ಯಾಪಾರ ಆಗುತ್ತಿರಲಿಲ್ಲ. ಗ್ರಾಹಕರನ್ನು ಸೆಳೆಯಲು ರಘುನಂದನ್ ಶ್ರೀನಿವಾಸ್ ಕಾಮತ್ ಅವರು ಪಾವ್ ಬಾಜಿ ತಿಂಡಿಯನ್ನು ಮೆನು ಲಿಸ್ಟ್​ಗೆ ಹಾಕಿದರು. ಪಾವ್ ಬಾಜಿ ಉತ್ತರ ಭಾರತೀಯರಿಗೆ ಫೇವರಿಟ್ ಎನಿಸಿರುವ ಒಂದು ತಿಂಡಿ. ಪಾವ್ ಬಾಜಿಯನ್ನೇ ಪ್ರಧಾನ ತಿಂಡಿಯಾಗಿ ಮಾಡಿ, ಅದರ ನೆರಳಿನಲ್ಲಿ ಐಸ್ ಕ್ರೀಮ್ ಅನ್ನೂ ಸೇಲ್ ಮಾಡತೊಡಗಿದರು. ಪಾವ್ ಬಾಜಿ, ಐಸ್ ಕ್ರೀಮ್ ಕಾಂಬಿನೇಶ್ ವರ್ಕೌಟ್ ಆಯಿತು. ಜನರಿಗೆ ಇವರ ಐಸ್ ಕ್ರೀಮ್ ಇಷ್ಟವಾಗತೊಡಗಿತು.

ನ್ಯಾಚುರಲ್ ಐಸ್ ಕ್ರೀಮ್ ಮುಂದೆ ಬೆಳೆಯುತ್ತಾ ಹೋಯಿತು. ಫ್ರಾಂಚೈಸಿಗಳನ್ನು ನೀಡಿ ವ್ಯವಹಾರ ಬೆಳೆಸಲಾಯಿತು. ಬೆಂಗಳೂರು ಸೇರಿದಂತೆ ಹಲವಾರು ನಗರಗಳಲ್ಲಿ ನ್ಯಾಚುರಲ್ ಐಸ್ ಕ್ರೀಮ್​ನ 135 ಪಾರ್ಲರ್​ಗಳಿವೆ. ಎಂಟು ಪಾರ್ಲರ್​ಗಳು ಮಾತ್ರ ಇವರ ಕಂಪನಿಯಿಂದ ನೇರವಾಗಿ ಸ್ಥಾಪನೆ ಆಗಿದೆ. ಉಳಿದವರು ಫ್ರಾಂಚೈಸಿ ಮೂಲಕ ನಡೆಯುತ್ತಿವೆ. ಮುಂಬೈನ ಕಾಂಡಿವಲಿ ಬಳಿ ಇವರ ಉತ್ಪಾದನಾ ಘಟಕ ಇದೆ. ಕಾಮತ್ ಅವರ ಈ ಐಸ್ ಕ್ರೀಮ್ ಪಾರ್ಲರ್ ವರ್ಷಕ್ಕೆ 300 ಕೊಟಿ ವಹಿವಾಟು ನಡೆಸುತ್ತದೆ. ಅಮುಲ್, ನಂದಿನಿ, ಅರುಣ್ಸ್ ಇತ್ಯಾದಿ ಪ್ರಬಲ ಬ್ರ್ಯಾಂಡ್​ಗಳ ಎದುರು ಪೈಪೋಟಿ ನಡೆಸಿ ನ್ಯಾಚುರಲ್ಸ್ ಬ್ರ್ಯಾಂಡ್​ಗೆ ಇಷ್ಟು ವ್ಯವಹಾರ ಸಿಗುತ್ತಿರುವುದು ಗಮನಾರ್ಹ.

ಇದನ್ನೂ ಓದಿInspiring: ಅಪ್ಪನ ಆಸ್ತಿ ಇಲ್ಲ; ಓದೋದು ಬಿಟ್ಟು ಕೇವಲ 23ರ ವಯಸ್ಸಿಗೆ 100 ಕೋಟಿ ಒಡೆಯನಾದ ಸಂಕರ್ಷ್

ನ್ಯಾಚುರಲ್ಸ್ ಐಸ್ ಕ್ರೀಮ್​ನ ಫ್ರಾಂಚೈಸಿ ಪಡೆಯುವುದು ಹೇಗೆ?

ನ್ಯಾಚುರಲ್ ಐಸ್ ಕ್ರೀಮ್​ನ ಅಧಿಕೃತ ವೆಬ್​ಸೈಟ್​ನಲ್ಲಿರುವ naturalicecreams.in/franchise-queries ಈ ಲಿಂಕ್ ಕ್ಲಿಕ್ ಮಾಡಿದರೆ, ಫ್ರಾಂಚೈಸಿಗೆ ಅರ್ಜಿ ಸಿಗುತ್ತದೆ. ಆ ಮೂಲಕ ಫ್ರಾಂಚೈಸಿ ಪಡೆಯಲು ಯತ್ನಿಸಬಹುದು. ಇದರ ಫ್ರಾಂಚೈಸಿಗೆ ಅಂದಾಜು 10ರಿಂದ 20 ಲಕ್ಷ ರೂ ಆಗಬಹುದು. ಫ್ರಾಂಚೈಸಿ ಪಡೆಯುವ ವೆಚ್ಚ, ಉಪಕರಣ ವೆಚ್ಚ ಇವೆಲ್ಲವೂ ಇದರಲ್ಲಿ ಒಳಗೊಂಡಿರುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:39 pm, Tue, 2 May 23

ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ