YouTube Money: ಯೂಟ್ಯೂಬ್​ನಿಂದ ಹಣ ಮಾಡುವುದು ಹೇಗೆ? ಕನಿಷ್ಠ ಎಷ್ಟು ವೀಕ್ಷಣೆ ಆಗಬೇಕು? ಮಹತ್ವದ ವಿವರ ಇಲ್ಲಿದೆ

Earning money on Youtube: ಯೂಟ್ಯೂಬ್​ನಲ್ಲಿ ಹಣ ಬರುವಂತಾಗಲು ಹಲವು ಮಾರ್ಗಗಳಿವೆ. ಯೂಟ್ಯೂಬ್ ಖಾತೆಯಿಂದ ಹಿಡಿದು ಪಾರ್ಟ್ನರ್​ಶಿಪ್​ವರೆಗೆ ಏನೇನು ಮಾಡಬಹುದು ಎಂಬ ಒಂದಿಷ್ಟು ವಿವರ ಇಲ್ಲಿದೆ.

YouTube Money: ಯೂಟ್ಯೂಬ್​ನಿಂದ ಹಣ ಮಾಡುವುದು ಹೇಗೆ? ಕನಿಷ್ಠ ಎಷ್ಟು ವೀಕ್ಷಣೆ ಆಗಬೇಕು? ಮಹತ್ವದ ವಿವರ ಇಲ್ಲಿದೆ
ವಿಡಿಯೋ ಮೇಕರ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 02, 2023 | 4:30 PM

ವಿಡಿಯೋಗಳ ಮಹಾಸಾಗರ ಎನಿಸಿರುವ ಯೂಟ್ಯೂಬ್​ನಲ್ಲಿ (YouTube) ಲೆಕ್ಕವಿಲ್ಲದಷ್ಟು ವಿಡಿಯೋಗಳು ದಿನವೂ ಅಪ್​ಲೋಡ್ ಅಗುತ್ತಲೇ ಇರುತ್ತವೆ. ವಿಡಿಯೋ ಹಾಕುವುದರ ಜೊತೆಗೆ ಜನರು ಹಣವನ್ನೂ ಮಾಡುತ್ತಿದ್ದಾರೆ. ಯೂಟ್ಯೂಬ್​ನಂಥ ವಿಡಿಯೋ ಪ್ಲಾಟ್​ಫಾರ್ಮ್​ಗಳಿಂದ ಹಲವು ಜನರು ಲಕ್ಷಗಟ್ಟಲೆ, ಕೋಟಿಗಟ್ಟಲೆ ಹಣ ಮಾಡುತ್ತಿರುವ ಬಗ್ಗೆ ಮಾತುಗಳನ್ನು ಕೇಳಿರುತ್ತೇವೆ. ನಮ್ಮಲ್ಲಿ ಅನೇಕರು ಯೂಟ್ಯೂಬ್ ಚಾನಲ್ ಹೊಂದಿದ್ದು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಾರಾದರೂ ಅದರಿಂದ ಯಾವ ಹಣವೂ ಬರುವುದಿಲ್ಲ. ಬೇರೆ ಜನರು ಯೂಟ್ಯೂಬ್​ನಲ್ಲಿ ಹೇಗೆ ಹಣ ಮಾಡುತ್ತಾರೆ ಎಂದು ಅಚ್ಚರಿ ಆಗಬಹುದು. ಯೂಟ್ಯೂಬ್ ಶಾರ್ಟ್ಸ್​ಗಳಂತೂ ಬಹಳ ಜನಪ್ರಿಯ ಎನಿಸಿವೆ. ಯೂಟ್ಯೂಬ್​ನಲ್ಲಿ ಹಣ ಬರುವಂತಾಗಲು ಹಲವು ಮಾರ್ಗಗಳಿವೆ. ಯೂಟ್ಯೂಬ್ ಖಾತೆಯಿಂದ ಹಿಡಿದು ಪಾರ್ಟ್ನರ್​ಶಿಪ್​ವರೆಗೆ ಏನೇನು ಮಾಡಬಹುದು ಎಂಬ ಒಂದಿಷ್ಟು ವಿವರ ಇಲ್ಲಿದೆ.

ನಿಮಗೆ ಗೂಗಲ್ ಅಥವಾ ಜಿಮೇಲ್ ಖಾತೆ ಇದ್ದರೆ ಯೂಟ್ಯೂಬ್ ಖಾತೆ ಕೂಡ ಆಟೊಮ್ಯಾಟಿಕ್ ಆಗಿ ಕ್ರಿಯೇಟ್ ಆಗಿರುತ್ತದೆ. ಗೂಗಲ್​ಗೆ ಲಾಗಿನ್ ಆಗಿದ್ದರೆ ಅದರ ಯೂಟ್ಯೂಬ್ ಅಕೌಂಟ್​ಗೂ ಲಾಗಿನ್ ಆಗಿರುತ್ತೀರಿ.

ಯೂಟ್ಯೂಬ್​ನಿಂದ ಹಣ ಮಾಡುವುದು ಹೇಗೆ?

ಯೂಟ್ಯೂಬ್​ನಿಂದ ನೀವು ಹಣ ಮಾಡಬೇಕೆಂದು ನಿರ್ಧರಿಸಿದ್ದೇ ಆದಲ್ಲಿ ಮೊದಲಿಗೆ ಒಂದಿಷ್ಟು ವಿಷಯಗಳು ಗೊತ್ತಿರಲಿ. ನೀವು ಹಾಕುವ ವಿಡಿಯೋಗಳು ಗೂಗಲ್​ನ ಸಾರ್ವಜನಿಕ ನೀತಿಗೆ ಅನುಬ್ಧವಾಗಿರಬೇಕು. ವಿಡಿಯೋಗಳು ಹೆಚ್ಚು ವೀಕ್ಷಣೆ ಪಡೆಯಬಲ್ಲಂತಹವಾಗಿರಬೇಕು. ಆ ನಿಟ್ಟಿನಲ್ಲಿ ನೀವು ಕಂಟೆಂಟ್ ಪ್ಲಾನ್ ಮಾಡಬೇಕು.

ಇದನ್ನೂ ಓದಿTata Wistron: ಕರ್ನಾಟಕದಲ್ಲಿ 12,000 ಉದ್ಯೋಗಿಗಳಿದ್ದ ಘಟಕ ಟಾಟಾಗೆ ಕೊಟ್ಟು ಭಾರತದಿಂದಲೇ ಕಾಲ್ತೆಗೆಯಲಿರುವ ವಿಸ್ಟ್ರಾನ್

ಯೂಟ್ಯೂಬ್​ನಲ್ಲಿ ಬರುವ ಜಾಹೀರಾತುಗಳು ಆದಾಯಕ್ಕೆ ಮೂಲ. ನಿಮ್ಮ ವಿಡಿಯೋಗಳಿಗೆ ಬರುವ ಜಾಹೀರಾತಿನಿಂದ ನಿಮಗೆ ದುಡ್ಡು ಸಿಗಬೇಕೆಂದರೆ ಗೂಗಲ್ ಆಡ್​ಸೆನ್ಸ್ ಅಕೌಂಟ್ ಆ್ಯಕ್ಟಿವೇಟ್ ಮಾಡಬೇಕು.

ಆ್ಯಡ್​ಸೆನ್ಸ್ ಅಕೌಂಟ್ ಸಕ್ರಿಯವಾದಾಕ್ಷಣ ಹಣ ಹರಿದುಬರುವುದಿಲ್ಲ. ನಿಮ್ಮ ಯೂಟ್ಯೂಬ್ ಚಾನಲ್ ಕನಿಷ್ಠ 1,000 ಸಬ್​ಸ್ಕ್ರೈಬರ್ಸ್ ಹೊಂದಿರಬೇಕು. ಕಳೆದ 1 ವರ್ಷದಲ್ಲಿ ನಿಮ್ಮ ಯೂಟ್ಯೂಬ್ ವಿಡಿಯೋಗಳನ್ನು ಜನರು ವೀಕ್ಷಿಸಿದ ಅವಧಿ 4,000 ಗಂಟೆಗಳಿರಬೇಕು. ನಿಮ್ಮ ಶಾರ್ಟ್ಸ್ ವಿಡಿಯೋಗಳಿಗೆ 90 ದಿನಗಳಲ್ಲಿ 1 ಕೋಟಿ ವೀಕ್ಷಣೆ ಇರಬೇಕು. ಈ ಮಾನದಂಡಕ್ಕೆ ನಿಮ್ಮ ಯೂಟ್ಯೂಬ್ ಚಾನಲ್ ತಾಳೆಯಾಗಿದ್ದರೆ ಆಗ ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್​ಗೆ ಅರ್ಜಿ ಹಾಕಬಹುದು. ಆ ಮೂಲಕ ಹಣ ಸಂಪಾದನೆಗೆ ದಾರಿ ಮಾಡಬಹುದು.

ಮಾನಿಟೈಸೇಶನ್ ಆ್ಯಕ್ಟಿವೇಟ್ ಮಾಡುವುದು ಹೇಗೆ?

  • ಯೂಟ್ಯೂಬ್​ಗೆ ಲಾಗಿನ್ ಆಗಿ, ಯೂಟ್ಯೂಬ್ ಸ್ಟುಡಿಯೋ ಕ್ಲಿಕ್ ಮಾಡಿ
  • ಎಡಬದಿಯ ಮೆನುನಲ್ಲಿ ಅದರ್ ಫೀಚರ್ಸ್ ಹಾಗು ಮಾನಿಟೈಸೇಶನ್ ಕ್ಲಿಕ್ ಮಾಡಿ.
  • ಯೂಟ್ಯೂಬ್ ಪಾರ್ಟ್ನರ್ ಪ್ರೋಗ್ರಾಮ್​ನ ಷರತ್ತುಗಳಿಗೆ ಒಪ್ಪಿಗೆ ಇದೆ ಎಂದು ಚೆಕ್ ಬಾಕ್ಸ್ ಕ್ಲಿಕ್ ಮಾಡಿ
  • ಇಲ್ಲಿ ಗೂಗಲ್ ಆ್ಯಡ್​ಸೆನ್ಸ್ ಅಕೌಂಟ್ ಅನ್ನು ರಚಿಸಬೇಕು.

ಇದನ್ನೂ ಓದಿMudra Loan: ಪಿಎಂ ಮುದ್ರಾ ಸ್ಕೀಮ್; 10 ಲಕ್ಷ ರೂವರೆಗೂ ಸಾಲ; ಎಲ್ಲಿ ಸಿಗುತ್ತೆ? ಯಾರಿಗೆ ಸಿಗುತ್ತೆ ಮುದ್ರಾ ಲೋನ್?

ನಿಮ್ಮ ವಿಡಿಯೋ ವೀಕ್ಷಣೆಗೆ ತಕ್ಕಂತೆ ಹಣ ಬರುವುದಿಲ್ಲ, ನೆನಪಿರಲಿ

ನಮ್ಮ ವಿಡಿಯೋಗಳು ಲಕ್ಷ ಲಕ್ಷ ವೀವ್ಸ್ ಪಡೆದಿವೆ. ಆದರೂ ನಮಗೆ ನಿರೀಕ್ಷಿಸಿದಷ್ಟು ಆದಾಯ ಸಿಕ್ಕಿಲ್ಲ ಎಂದು ದೂರುವವರು ಇದ್ದಾರೆ. ಒಂದು ನೆನಪಿರಲಿ, ನಾವು ಪೋಸ್ಟ್ ಮಾಡುವ ವಿಡಿಯೋಗಳು ಎಷ್ಟು ವೀಕ್ಷಣೆ ಹೊಂದಿದೆ ಎಂಬುದಕ್ಕಿಂತ ವಿಡಿಯೋ ವೇಳೆ ಮಧ್ಯೆಮಧ್ಯೆ ಪ್ರಸಾರವಾಗುವ ಜಾಹೀರಾತುಗಳನ್ನು ಎಷ್ಟು ಮಂದಿ ಕ್ಲಿಕ್ ಮಾಡಿದ್ದಾರೆ ಅಥವಾ ಇಡೀ ಜಾಹೀರಾತನ್ನು ಎಷ್ಟು ಮಂದಿ ನೋಡಿದ್ದಾರೆ ಎಂಬುದು ಮುಖ್ಯ. ಗೂಗಲ್ ಸಂಸ್ಥೆಗೆ ಆದಾಯ ತರುವುದು ಇದೇ ಜಾಹೀರಾತುಗಳೇ. ಅದಕ್ಕೆ ಬಂದ ಜಾಹೀರಾತು ಆದಾಯವನ್ನು ಯೂಟ್ಯೂಬ್ ವಿಡಿಯೋ ಕ್ರಿಯೇಟರ್ಸ್ ಜೊತೆ ಹಂಚಿಕೊಳ್ಳುತ್ತದೆ ಅಷ್ಟೇ. ನಿಮ್ಮ ಆ್ಯಡ್​ಸೆನ್ಸ್ ಅಕೌಂಟ್​ನಲ್ಲಿ 100 ಡಾಲರ್​ನಷ್ಟು ಹಣ ಜಮೆ ಆಗುವವರೆಗೂ ನಿಮಗೆ ಸಂದಾಯ ಆಗುವುದಿಲ್ಲ.

ಗೂಗಲ್ ಆ್ಯಡ್ ಅಲ್ಲದೇ ಬೇರೆ ಮಾರ್ಗಗಳುಂಟು ಯೂಟ್ಯೂಬಿಗರಿಗೆ

ನೀವು ತಕ್ಕಮಟ್ಟಿಗೆ ಸಬ್​ಸ್ಕ್ರೈಬರ್​ಗಳನ್ನು ಹೊಂದಿದ ಯೂಟ್ಯೂಬ್ ಚಾನಲ್ ಮಾಲೀಕರಾಗಿದ್ದರೆ ಸೋಷಿಯಲ್ ಇನ್​ಫ್ಲುಯೆನ್ಸರ್ ಎನಿಸುತ್ತೀರಿ. ಯಾವುದಾದರೂ ಉತ್ಪನ್ನಗಳ ಕಂಪನಿ ಜೊತೆ ಸೇರಿ ಅವುಗಳ ಪ್ರಚಾರ ಮಾಡಬಹುದು. ನಿಮ್ಮ ವಿಡಿಯೋದಲ್ಲಿ ಅದರ ಜಾಹೀರಾತು ಸೇರಿಸಬಹುದು. ಜನರು ಈ ಲಿಂಕ್ ಕ್ಲಿಕ್ ಮಾಡಿ ಆ ವೆಬ್​ಸೈಟ್​ಗೆ ಹೋಗಿ ಏನಾದರೂ ಖರೀದಿಸಿದರೆ ಆ ವಿವರವು ದಾಖಲಾಗುತ್ತದೆ. ಈ ವಹಿವಾಟಿನ ಮೊತ್ತದಲ್ಲಿ ಕಮಿಷನ್ ಆಗಿ ಒಂದಷ್ಟು ಹಣ ಯೂಟ್ಯೂಬ್ ಮಂದಿಗೆ ಸಿಗುತ್ತದೆ.

ಹೋಟೆಲ್, ಸೀರೆ, ಒಡವೆ, ಫ್ಯಾಷನ್ ಹೀಗೆ ಯಾವುದಾದರೂ ಜನಪ್ರಿಯ ವಸ್ತು ಮತ್ತು ಸೇವೆಗಳನ್ನು ನೀಡುವ ಬ್ರ್ಯಾಂಡ್​ಗೆ ನೀವು ಅಫಿಲಿಯೇಟೆಡ್ ಮಾರ್ಕೆಟಿಂಗ್ ಮಾಡಬಹುದು. ಅದರೆ, ಅವರ ಉತ್ಪನ್ನಗಳನ್ನು ನಿಮ್ಮ ವಿಡಯೋ ಮೂಲಕ ಪ್ರಚಾರ ಮಾಡಿ ಹಣ ಮಾಡಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ