AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Economy: ದೇಶದ ಆರ್ಥಿಕತೆಯಲ್ಲಿ ಕರ್ನಾಟಕದ ಪಾಲೇನು? ರಾಜ್ಯದ ಯಾವ ಜಿಲ್ಲೆಗಳು ಹೆಚ್ಚು ಮುಂದುವರಿದಿವೆ?

GSDP, DDP Facts of Karnataka: ಬೀದರ್, ಕಲಬರ್ಗಿ, ರಾಯಚೂರು ಮೊದಲಾದ ಜಿಲ್ಲೆಗಳಿರುವ ಕಲ್ಯಾಣ ಕರ್ನಾಟಕ ಪ್ರದೇಶ ಮೊದಲಿಂದಲೂ ಹಿಂದುಳಿಯುತ್ತಾ ಬಂದಿವೆ. ಇವುಗಳ ಪರಿಸ್ಥಿತಿ ಹೇಗೆ? ತಲಾದಾಯದಲ್ಲಿ ಯಾವುವು ಮುಂದಿವೆ? ಯಾವುವು ಹಿಂದಿವೆ? ಈ ಮಾಹಿತಿ ಇಲ್ಲಿದೆ.

Karnataka Economy: ದೇಶದ ಆರ್ಥಿಕತೆಯಲ್ಲಿ ಕರ್ನಾಟಕದ ಪಾಲೇನು? ರಾಜ್ಯದ ಯಾವ ಜಿಲ್ಲೆಗಳು ಹೆಚ್ಚು ಮುಂದುವರಿದಿವೆ?
ಬೆಂಗಳೂರು ನಗರ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:May 02, 2023 | 12:13 PM

Share

ಬೆಂಗಳೂರು: ದೇಶದ ಜಿಎಸ್​ಟಿ ತೆರಿಗೆ ಸಂಗ್ರಹದಲ್ಲಿ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕವೇ ಮುಂದಿರುವುದು. ಒಂದು ರಾಜ್ಯದಿಂದ ಹೆಚ್ಚು ತೆರಿಗೆ ಸಂಗ್ರಹ ಆಗುತ್ತಿದೆ ಎಂದರೆ ಸಾಮಾನ್ಯವಾಗಿ ಆ ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ (Economic Activity) ಚುರುಕಾಗಿ ನಡೆಯುತ್ತಿದೆ ಎಂದು ಭಾವಿಸಬಹುದು. ಕರ್ನಾಟಕದ ಯಾವ ಜಿಲ್ಲೆಗಳು ಆರ್ಥಿಕವಾಗಿ ಸುದೃಢವಾಗಿವೆ? ದೇಶದ ಸಿಲಿಕಾನ್ ಸಿಟಿ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರು ನಗರ ಸಹಜವಾಗಿಯೇ ಟಾಪ್ಪರ್ ಆಗುತ್ತದೆ. ಇಡೀ ದೇಶದಲ್ಲಿ ಮುಂಬೈ ಬಿಟ್ಟರೆ ಅತಿ ಹೆಚ್ಚು ತೆರಿಗೆ ಸಂಗ್ರಹ ಆಗಿರುವುದು ಬೆಂಗಳೂರಿನಲ್ಲೇ. ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿದೆ? ಬೀದರ್, ಕಲಬರ್ಗಿ, ರಾಯಚೂರು ಮೊದಲಾದ ಜಿಲ್ಲೆಗಳಿರುವ ಕಲ್ಯಾಣ ಕರ್ನಾಟಕ ಪ್ರದೇಶ (Hyderabad Karnataka Region) ಮೊದಲಿಂದಲೂ ಹಿಂದುಳಿಯುತ್ತಾ ಬಂದಿವೆ. ಇವುಗಳ ಪರಿಸ್ಥಿತಿ ಹೇಗೆ? ತಲಾದಾಯದಲ್ಲಿ (Per Capita Income) ಯಾವುವು ಮುಂದಿವೆ? ಯಾವುವು ಹಿಂದಿವೆ? ಮೊದಲಿಗೆ ಕರ್ನಾಟಕ ರಾಜ್ಯದ ವಿಶೇಷ ಸಾಧನೆಗಳೇನು, ಈ ವಿವರ ನೋಡಬಹುದು.

ಕರ್ನಾಟಕ ಸಾಧನೆಯ ಮುಖ್ಯಾಂಶಗಳು

  • ದೇಶದ ಜಿಡಿಪಿಗೆ ಕರ್ನಾಟಕದ ಕೊಡುಗೆ ಶೇ. 8.2
  • ಭಾರತದ ತಲಾದಾಯ 1.71 ಲಕ್ಷ ಇದ್ದರೆ, ಕರ್ನಾಟಕದ್ದು 3.02 ಲಕ್ಷ
  • 2011-12ರಲ್ಲಿ 90,263 ರೂ ಇದ್ದ ಕರ್ನಾಟಕದ ತಲಾದಾಯ 2022-23ರಲ್ಲಿ 3,01,673 ರೂಗೆ ಹೆಚ್ಚಿದೆ.
  • 2011-12ರಲ್ಲಿ 6.06 ಲಕ್ಷ ಕೋಟಿ ಇದ್ದ ಕರ್ನಾಟಕದ ಜಿಎಸ್​ಡಿಪಿ (GSDP- Gross State Domestic Product) ಈಗ 22.41 ಲಕ್ಷ ಕೋಟಿಗೆ ಹೆಚ್ಚಿದೆ.
  • ಸಾಫ್ಟ್​ವೇರ್ ರಫ್ತಿನಲ್ಲಿ ಕರ್ನಾಟಕ ನಂಬರ್ ಒನ್.
  • ಕರ್ನಾಟಕದ ಆರ್ಥಿಕತೆಗೆ ಅತಿಹೆಚ್ಚು ಕೊಡುಗೆ ನೀಡುತ್ತಿರುವುದು ಸರ್ವಿಸ್ ಸೆಕ್ಟರ್. ರಾಜ್ಯದ ಜಿಎಸ್​ಡಿಪಿಯಲ್ಲಿ ಈ ವಲಯದ ಪಾಲು ಶೇ. 64.04.
  • ಕರ್ನಾಟಕದ ಆರ್ಥಿಕ ಬೆಳವಣಿಗೆಯಲ್ಲಿ ಕೃಷಿ ಪಾಲು ಶೇ. 15ರಷ್ಟಿದೆ.

ಇದನ್ನೂ ಓದಿKarnataka GST ತೆರಿಗೆಯಲ್ಲಿ ಕರ್ನಾಟಕ ಮೇಲುಗೈ; ಕಳೆದ 6 ತಿಂಗಳ ಜಿಎಸ್​ಟಿ ಕಲೆಕ್ಷನ್ಸ್ ಹೇಗಿದೆ? ಯುಪಿ, ಹರ್ಯಾಣದಲ್ಲಿ ಅಧಿಕ ತೆರಿಗೆ ಸಂಗ್ರಹದ ಸೀಕ್ರೆಟ್ ಏನು?

ತಲಾದಾಯದಲ್ಲಿ ಬೆಂಗಳೂರು ಬಿಟ್ಟರೆ ಯಾವ ಜಿಲ್ಲೆಗಳು ಮುಂದಿವೆ?

ಕರ್ನಾಟಕದ ಜಿಲ್ಲೆಗಳಲ್ಲಿ ಆರ್ಥಿಕ ಬೆಳವಣಿಗೆ ಸಹಜವಾಗಿ ಸಮರೀತಿಯಲ್ಲಿ ಇಲ್ಲ. ಬಹುತೇಕ ಉದ್ಯಮ, ಕೈಗಾರಿಕೆಗಳು ನೆಲಸಿರುವ ಬೆಂಗಳೂರಿನಲ್ಲಿ ಸಹಜವಾಗಿ ತಲಾದಾಯ ಹೆಚ್ಚಿದೆ. ದಶಕಗಳಿಂದ ಹಿಂದುಳಿದಿರುವ ಕಲಬುರ್ಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿರುವುದು ಅಚ್ಚರಿ ತಂದಿಲ್ಲ. ಆದರೆ, ಜಿಲ್ಲೆ ಜಿಲ್ಲೆಗಳ ನಡುವೆ ತಲಾದಾಯದಲ್ಲಿ ಅಸಮಾನತೆ ಇದ್ದರೂ ತೀರಾ ದೊಡ್ಡ ಅಂತರ ಇಲ್ಲ. ಬೆಂಗಳೂರಿನಲ್ಲಿ ತಲಾದಾಯ 6,21,131 ರೂ ಇದ್ದರೆ, ಕೊನೆಯ ಸ್ಥಾನದಲ್ಲಿರುವ ಕಲಬುರ್ಗಿಯಲ್ಲಿ ಇದು 1,24,998 ರೂ ಇದೆ. ರಾಷ್ಟ್ರೀಯ ಸರಾಸರಿ ತಲಾದಾಯ ಇರುವ 1.71 ಲಕ್ಷ ರೂಗೆ ಹೋಲಿಸಿದರೆ ಕಲಬರ್ಗಿ ತೀರಾ ಹಿಂದುಳಿದಿಲ್ಲ.

ತಲಾದಾಯದಲ್ಲಿ ಕರ್ನಾಟಕದ ಟಾಪ್-10 ಜಿಲ್ಲೆಗಳಿವು:

  1. ಬೆಂಗಳೂರು ನಗರ: 6.21 ಲಕ್ಷ ರೂ
  2. ದಕ್ಷಿಣಕನ್ನಡ: 4.43 ಲಕ್ಷ ರೂ
  3. ಉಡುಪಿ: 3.71 ಲಕ್ಷ ರೂ
  4. ಚಿಕ್ಕಮಗಳೂರು: 3.39 ಲಕ್ಷ ರೂ
  5. ಬೆಂಗಳೂರು ಗ್ರಾಮೀಣ: 3.19 ಲಕ್ಷ ರೂ
  6. ಶಿವಮೊಗ್ಗ: 2.71 ಲಕ್ಷ ರೂ
  7. ಕೊಡಗು: 2.48 ಲಕ್ಷ ರೂ
  8. ತುಮಕೂರು: 2.27 ಲಕ್ಷ ರೂ
  9. ರಾಮನಗರ: 2.25 ಲಕ್ಷ ರೂ
  10. ಮಂಡ್ಯ: 2.17 ಲಕ್ಷ ರೂ

ಇದನ್ನೂ ಓದಿInspiring: ಅಪ್ಪನ ಆಸ್ತಿ ಇಲ್ಲ; ಓದೋದು ಬಿಟ್ಟು ಕೇವಲ 23ರ ವಯಸ್ಸಿಗೆ 100 ಕೋಟಿ ಒಡೆಯನಾದ ಸಂಕರ್ಷ್

ರಾಜ್ಯ ಡಿಡಿಪಿಯಲ್ಲಿ (DDP- District Domestic Product) ಅತಿಹೆಚ್ಚು ಕೊಡುಗೆ ನೀಡುವ ಜಿಲ್ಲೆಗಳು

  1. ಬೆಂಗಳೂರು ನಗರ
  2. ದಕ್ಷಿಣ ಕನ್ನಡ
  3. ಬೆಳಗಾವಿ
  4. ತುಮಕೂರು
  5. ಮೈಸೂರು

ಡಿಡಿಪಿಗೆ ಅತಿಕಡಿಮೆ ಕೊಡುಗೆ ನೀಡುವ ಜಿಲ್ಲೆಗಳು

  1. ಕೊಪ್ಪಳ
  2. ಚಾಮರಾಜನಗರ
  3. ಗದಗ
  4. ಯಾದಗಿರಿ
  5. ಕೊಡಗು

ಇದನ್ನೂ ಓದಿNew GST Rules: 7 ದಿನದೊಳಗೆ ಇನ್ವಾಯ್ಸ್ ಸಲ್ಲಿಸದಿದ್ದರೆ ಏನಾಗುತ್ತದೆ? ಹೊಸ ಜಿಎಸ್​ಟಿ ನಿಯಮ ತಿಳಿದಿರಿ

ವಿವಿಧ ಜಿಲ್ಲೆಗಳು ಆರ್ಥಿಕವಾಗಿ ಹಿಂದುಳಿಯಲು ಪ್ರಮುಖ ಕಾರಣ ಕೈಗಾರಿಕೆ ಮತ್ತು ಉದ್ಯಮಗಳ ಉಪಸ್ಥಿತಿ ಇಲ್ಲದಿರುವುದು. ಈ ಹಿಂದುಳಿದ ಜಿಲ್ಲೆಗಳೆಲ್ಲವೂ ಕೃಷಿ ಅವಲಂಬಿತ ಪ್ರದೇಶಗಳಾಗಿವೆ. ಕೃಷಿಗಾರಿಕೆಗೆ ಬೇಕಾದ ನೈಸರ್ಗಿಕ ಅನುಕೂಲತೆ ಮತ್ತು ಸೌಕರ್ಯವ್ಯವಸ್ಥೆಯೂ ಈ ಜಿಲ್ಲೆಗಳಿಗಿಲ್ಲ. ಬೆಂಗಳೂರು ಹಾಗೂ ಸುತ್ತಮುತ್ತ ಕೇಂದ್ರೀಕೃತವಾಗಿರುವ ಉದ್ಯಮಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸುವುದು ಇತ್ಯಾದಿ ಕ್ರಮಗಳು ಸಮತೋಲನ ತರಬಹುದು. ಈ ನಿಟ್ಟಿನಲ್ಲಿ ಜವಳಿ ಕ್ಲಸ್ಟರ್​ನಂತಹ ಯೋಜನೆಗಳು ಮಾದರಿ ಆಗಬಹುದು.

ಇನ್ನಷ್ಟು ವಾಣಿಜ್ಯ ಮತ್ತು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:04 pm, Tue, 2 May 23

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ