ನೀವು ಎಂಡೋಮೆಂಟ್ ಲೈಫ್ ಇನ್ಷೂರೆನ್ಸ್ ಪಾಲಿಸಿ ಮಾಡಿಸಿ, ಕಾರಣಾಂತರದಿಂದ ಅದನ್ನು ಮುಂದುವರಿಸುವುದು ಬೇಡ ಎಂಬ ಭಾವನೆಯಲ್ಲಿದ್ದರೆ ಇಗೋ ಇಲ್ಲೊಂದು ಸುದ್ದಿ ಇದೆ. ಎಲ್ಐಸಿ ಪಾಲಿಸಿಯನ್ನು ಸರೆಂಡರ್ ಮಾಡಿದರೆ ನೀವು ಪಾವತಿಸಿರುವ ಪ್ರೀಮಿಯಮ್ ಹಣ ಮರಳುವ ಜೊತೆಗೆ ಲೈಫ್ ಕವರ್ ಬೆನಿಫಿಟ್ ಕೂಡ ಮುಂದುವರಿಯುತ್ತದೆ. ಅರೆ, ಇದು ಯಾರಿಗಾದರೂ ಅಚ್ಚರಿ ಎನಿಸುವ ಸುದ್ದಿ. ಆದರೆ, ಸರೆಂಡರ್ ಆದ ಪಾಲಿಸಿಯ ಪ್ರೀಮಿಯಮ್ ಹಣ ಕೊಟ್ಟು ಕವರೇಜ್ ಕೂಡ ಮುಂದುವರಿಸುವ ಕೆಲಸವನ್ನು ಎಲ್ಐಸಿ ಮಾಡೋದಿಲ್ಲ. ಖಾಸಗಿ ಸಂಸ್ಥೆಯೊಂದು ಇದಕ್ಕಾಗೆಂದು ಎಲಿಪ್ ಸ್ಕೀಮ್ ಅನ್ನು ಪ್ರಕಟಿಸಿದೆ. ACESO ಎಂಡೋಮೆಂಟ್ ಸರ್ವಿಸಸ್ ಎಂಬ ಸಂಸ್ಥೆ ಭಾರತದಲ್ಲಿ ಮೊದಲ ಬಾರಿಗೆ ಎಲಿಪ್ ಎಂಬ ಸೇವೆ ಆರಂಭಿಸಿದೆ.
ಈಗಿರುವ ನಿಯಮಗಳ ಪ್ರಕಾರ ಎಲ್ಐಸಿ ಪಾಲಿಸಿಯನ್ನು ನೀವು ಎಲ್ಐಸಿ ಸಂಸ್ಥೆಗೆ ಮರಳಿಸಬೇಕಾಗುತ್ತದೆ. ಹೀಗೆ ಪಾಲಿಸಿಯನ್ನು ಸರೆಂಡರ್ ಮಾಡಿದರೆ ಆವರೆಗೆ ಕಟ್ಟಿರುವ ಪ್ರೀಮಿಯಮ್ ಹಣ ಮಾತ್ರವೇ ಸಿಗುತ್ತದೆ. ಲೈಫ್ ಕವರೇಜ್ ಬೆನಿಫಿಟ್ ನಿಂತು ಹೋಗುತ್ತದೆ. ಹೀಗಾಗಿ, ಬೇಡವೆಂದರೂ ಎಲ್ಐಸಿ ಪಾಲಿಸಿಯನ್ನು ಪೂರ್ಣಾವಧಿ ಮುಂದುವರಿಸಿಕೊಂಡು ಹೋಗುವುದು ಅನಿವಾರ್ಯ ಆಗುತ್ತದೆ. ಈ ಸಂದರ್ಭದಲ್ಲಿ ACESO ಎಂಡೋಮೆಂಟ್ ಸರ್ವಿಸಸ್ ಸಂಸ್ಥೆಯ ALIP ಯೋಜನೆ ಸಹಾಯಕ್ಕೆ ಬರುತ್ತದೆ.
ACESO ಎಂಡೋಮೆಂಟ್ ಸರ್ವಿಸಸ್ ಇತ್ತೀಚೆಗೆ ಅಸೈನ್ಮೆಂಟ್ ಆಫ್ ಲೈಫ್ ಇನ್ಷೂರೆನ್ಸ್ ಪಾಲಿಸಿ ಅಥವಾ ALIP ಸ್ಕೀಮ್ ಅನ್ನು ಆರಂಭಿಸಿದೆ. ಎಲ್ಐಸಿ ಪಾಲಿಸಿಯನ್ನು ಸರೆಂಡರ್ ಮಾಡುವವರಿಗೆ ಈ ಸಂಸ್ಥೆ ಪ್ರೀಮಿಯಮ್ 48 ಗಂಟೆಯಲ್ಲಿ ಪ್ರೀಮಿಯಮ್ ಹಣ ಕೊಡುವುದರ ಜೊತೆಗೆ ಅವರ ಲೈಫ್ ಕವರೇಜ್ ಅನ್ನೂ ಮುಂದುವರಿಸುವಂತೆ ಮಾಡುತ್ತದೆ. ಪಾಲಿಸಿದಾರ ಸತ್ತರೆ ಇನ್ಷೂರ್ಡ್ ಮೊತ್ತವು ವಾರಸುದಾರರಿಗೆ ವರ್ಗವಾಗುತ್ತದೆ. ಇದೇ ವೇಳೆ ಎಲ್ಐಸಿಯ ಆ ಪಾಲಿಸಿಯನ್ನು ACESO ಮುಂದುವರಿಸಿಕೊಂಡು ಹೋಗುತ್ತದೆ.
ಇದನ್ನೂ ಓದಿ: ಆಯುಷ್ಮಾನ್ ಭಾರತ್ ಸ್ಕೀಮ್: ಇನ್ಷೂರೆನ್ಸ್ ಮೊತ್ತ ಹೆಚ್ಚಿಸಲು ಮತ್ತು ಹೆಚ್ಚು ಜನರಿಗೆ ತಲುಪಿಸಲು ಯತ್ನ ಸಾಧ್ಯತೆ
ACESO ಸಂಸ್ಥೆ ಪಾಲಿಸಿ ಸರೆಂಡರ್ ಮಾಡಿದವರಿಗೆ ತನ್ನ ಕೈಯಿಂದಲೇ ಹಣ ಕಟ್ಟಿ ಕೊಡುತ್ತದೆ. ಈ ರೀತಿ ಸರೆಂಡರ್ ಆದ ಪಾಲಿಸಿಗಳನ್ನು ಸೇರಿಸಿ ಪಾಸ್ ಥ್ರೂ ಸರ್ಟಿಫಿಕೇಟ್ಸ್ (ಪಿಟಿಸಿ) ಅನ್ನು ಸೃಷ್ಟಿಸುತ್ತದೆ. ಇವು ಒಂದು ರೀತಿಯಲ್ಲಿ ಬಾಂಡ್ನಂತೆ. 12 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ವರ್ಷಕ್ಕೆ ಶೇ. 7.75ರಿಂದ ಶೇ 8ರಷ್ಟು ಆದಾಯವನ್ನು ಆಫರ್ ಮಾಡಲಾಗುತ್ತದೆ. ಈ ಪಿಟಿಸಿಗಳ ಮೇಲೆ ಹೂಡಿಕೆದಾರರು ಹಾಕುವ ಹಣವನ್ನು ACESO ಸಂಸ್ಥೆ ಪಾಲಿಸಿದಾರರಿಗೆ ಹಣ ಮರಳಿಸಲು ಬಳಸುತ್ತದೆ.
ಇಲ್ಲಿ ಪಾಲಿಸಿದಾರ ಮೃತಪಟ್ಟರೆ ಅವರ ವಾರಸುದಾರರಿಗೆ ಇನ್ಷೂರೆನ್ಸ್ ಹಣವನ್ನು ನೀಡುವಾಗ, ಸರೆಂಡರ್ ಮಾಡಿದಾಗಿನಿಂದ ಆವರೆಗೆ ಕಟ್ಟಲಾಗಿರುವ ಹಣ ಮತ್ತು ಬಡ್ಡಿ ಇತ್ಯಾದಿಯನ್ನು ಮುರಿದುಕೊಂಡು ಉಳಿದ ಹಣವನ್ನು ಕೊಡುತ್ತದೆ. ಪಾಲಿಸಿದಾರರಿಗೆ ಮೂಲ ಪಾಲಿಸಿಯಲ್ಲಿ ತಿಳಿಸಲಾದಷ್ಟು ಮೊತ್ತವು ಸಿಗುವುದಿಲ್ಲ.
ಇದನ್ನೂ ಓದಿ: ಇನ್ಷೂರೆನ್ಸ್ ಪಾಲಿಸಿ ಮೇಲೆ ಸಾಲ ಪಡೆಯುವುದು ಹೇಗೆ? ಅದರ ಪ್ರಯೋಜನಗಳೇನು ತಿಳಿದಿರಿ
ACESO ಸಂಸ್ಥೆಯ ಎಲಿಪ್ ಸ್ಕೀಮ್ಗೆ ಭಾರತೀಯ ಜೀವ ವಿಮಾ ನಿಗಮ ಆಕ್ಷೇಪ ವ್ಯಕ್ತಪಡಿಸಿದೆ. ಈ ರೀತಿ ಇನ್ಷೂರೆನ್ಸ್ ಪಾಲಿಸಿಯನ್ನು ಇನ್ನೊಬ್ಬರಿಗೆ ಮಾರುವುದಾಗಲೀ, ವರ್ಗಾವಣೆ ಮಾಡುವುದಾಗಿ ಅವಕಾಶ ನೀಡುವುದಿಲ್ಲ. ಇಂಥ ಪ್ರಕರಣಗಳಲ್ಲಿ ಕ್ಲೇಮ್ ಮಾಡುವ ಹಣವನ್ನು ರಿಜೆಕ್ಟ್ ಮಾಡುವ ಹಕ್ಕು ಎಲ್ಐಸಿಗೆ ಇರುತ್ತದೆ. ಪಾಲಿಸಿದಾರರು ಈ ರೀತಿಯ ಸ್ಕೀಮ್ಗಳಿಗೆಲ್ಲಾ ಮಾರು ಹೋಗಬಾರದು ಎಂದು ಕಳೆದ ತಿಂಗಳು ಎಲ್ಐಸಿ ಹೇಳಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ