ಬ್ಯಾಂಕ್ ಖಾತೆ
ಬ್ಯಾಂಕ್ ಖಾತೆ ತೆರೆದಿರುವ ಹೆಚ್ಚಿನ ಜನರು ಒಂದಕ್ಕಿಂತ ಹೆಚ್ಚು ಬ್ಯಾಂಕುಗಳಲ್ಲಿ ಖಾತೆ (multiple bank accounts) ಹೊಂದಿರುತ್ತಾರೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಹೊಸ ಖಾತೆಗಳನ್ನು ಸೃಷ್ಟಿಸುತ್ತೇವೆ. ಕೆಲಸ ಬದಲಿಸಿದಾಗ ಬೇರೆ ಬ್ಯಾಂಕ್ ಖಾತೆ ರಚಿಸಬೇಕಾಗಬಹುದು. ಸರ್ಕಾರದ ಸೌಲಭ್ಯಗಳ ಹಣ ಪಡೆಯಲೆಂದು ಪ್ರತ್ಯೇಕ ಖಾತೆ ರಚಿಸಬೇಕಾಗಬಹುದು. ಕಡಿಮೆ ಬಡ್ಡಿಗೆ ಗೃಹ ಸಾಲ ಸಿಗುತ್ತೆ ಎಂದು ಯಾವುದಾದರೂ ಬ್ಯಾಂಕ್ನಲ್ಲಿ ಖಾತೆ ಸೃಷ್ಟಿಸಬಹುದು. ಹೀಗೆ ಬೇರೆ ಬೇರೆ ಕಾರಣಕ್ಕೆ ಹೆಚ್ಚಿನ ಜನರ ಬಳಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿರುತ್ತವೆ. ಈ ಸಂದರ್ಭದಲ್ಲಿ ಒಂದೇ ಬ್ಯಾಂಕ್ ಇದ್ದರೆ ಚೆಂದವಾ, ಹೆಚ್ಚಿನ ಬ್ಯಾಂಕ್ಗಳಲ್ಲಿ ಖಾತೆಗಳಿದ್ದರೆ ಸರಿಯಾ ಎಂಬ ಅನಿಸಿಕೆ, ಅನುಮಾನಗಳು ಮೂಡದೇ ಇರದು.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ಇರುವ ಅನುಕೂಲಗಳಿವು…
- ಸರ್ಕಾರದ ಸಬ್ಸಿಡಿಗಳಿಗೆ ಒಂದು ಖಾತೆ, ಪಿಂಚಣಿ ಬರಲು ಒಂದು ಖಾತೆ, ಉಳಿತಾಯ ಹಣ ಇಡಲು ಒಂದು ಖಾತೆ, ನಿತ್ಯದ ವೆಚ್ಚಕ್ಕೆ ಒಂದು ಖಾತೆ, ಟ್ರೇಡಿಂಗ್ಗೆ ಒಂದು ಖಾತೆ, ಅಥವಾ ಯುಪಿಐ, ಆನ್ಲೈನ್ ಪೇಮೆಂಟ್ಗೆ ಒಂದು ಖಾತೆ, ಹೀಗೆ ಬೇರೆ ಬೇರೆ ಪ್ರಮುಖ ಕಾರ್ಯಗಳಿಗೆ ಪ್ರತ್ಯೇಕ ಖಾತೆಗಳಿದ್ದರೆ ಅನುಕೂಲ ಆಗಬಹುದು.
- ಬ್ಯಾಂಕ್ನ ಸರ್ವರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಹಣದ ವಹಿವಾಟು ನಡೆಸಲು ಸಾಧ್ಯವಾಗದೇ ಹೋಗಬಹುದು. ಅಂಥ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ಗಳಲ್ಲಿ ಖಾತೆಗಳಿದ್ದರೆ ಅನುಕೂಲವಾಗುತ್ತದೆ.
- ಎಟಿಎಂಗಳಿಂದ ಹೆಚ್ಚು ಬಾರಿ ನಗದು ಹಣ ವಿತ್ಡ್ರಾ ಮಾಡಿಕೊಳ್ಳುವವರಿಗೆ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ಅನುಕೂಲವಾಗಬಹುದು. ಯಾಕೆಂದರೆ ಒಂದು ಎಟಿಎಂ ಕಾರ್ಡ್ನಲ್ಲಿ ತಿಂಗಳಿಗೆ ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ಬಳಕೆ ಮಾಡಲು ಮಿತಿ ಇರುತ್ತದೆ. ಬೇರೆ ಬ್ಯಾಂಕ್ನ ಎಟಿಎಂ ಇದ್ದರೆ ಹೆಚ್ಚು ಬಾರಿ ಎಟಿಎಂ ಬಳಸಬಹುದು.
ಇದನ್ನೂ ಓದಿ: ನೀವು ಇನ್ಕಮ್ ಟ್ಯಾಕ್ಸ್ ರಿಟರ್ನ್ ಫೈಲ್ ಮಾಡದಿದ್ದರೆ ಏನಾಗುತ್ತೆ? ಈ ಪರಿಣಾಮಗಳನ್ನು ತಿಳಿದಿರಿ
ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ ಅನನುಕೂಲಗಳೇನು?
- ಹೆಚ್ಚಿನ ಬ್ಯಾಂಕುಗಳ ಖಾತೆಯಲ್ಲಿ ಮಿನಿಮಮ್ ಬ್ಯಾಲನ್ಸ್ ನಿಯಮ ಇರುತ್ತದೆ. ಕೆಲ ಬ್ಯಾಂಕುಗಳು ಝೀರೋ ಬ್ಯಾಲನ್ಸ್ ಅಕೌಂಟ್ ಸೌಲಭ್ಯ ನೀಡುತ್ತವೆ. ಇನ್ನೂ ಕೆಲ ಬ್ಯಾಂಕುಗಳ ಖಾತೆಯಲ್ಲಿ ಒಂದು ಸಾವಿರ ರೂ ಕನಿಷ್ಠ ಬ್ಯಾಲನ್ಸ್ ಇರಬೇಕು. ಮತ್ತೆ ಕೆಲ ಬ್ಯಾಂಕ್ ಖಾತೆಗಳಲ್ಲಿ 10,000 ರೂ ಮಿನಿಮಮ್ ಬ್ಯಾಲನ್ಸ್ ಇರಬೇಕು.
- ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿದ್ದರೆ, ಎಲ್ಲವನ್ನೂ ಬಳಸುವ ಅಗತ್ಯ ಬೀಳದೇ ಹೋಗಬಹುದು. ಕಾರಣಾಂತರಗಳಿಂದ ಕೆಲವು ಖಾತೆಗಳ ಬಳಕೆಯನ್ನೇ ನಿಲ್ಲಿಸುವ ಸಾಧ್ಯತೆ ಇರುತ್ತದೆ. ಇವು ಡಾರ್ಮಂಟ್ ಅಕೌಂಟ್ ಆಗಿ ತಿರುಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ