ಎನ್​ಪಿಎಸ್ ಟಯರ್-1, ಟಯರ್-2 ಅಕೌಂಟ್​ಗಳು; ಏನು ವ್ಯತ್ಯಾಸ, ಹೂಡಿಕೆ ಹೇಗೆ? ಇಲ್ಲಿದೆ ಡೀಟೇಲ್ಸ್

National Pension System, tier-1 and tier-2 accounts: ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ಟಯರ್-1 ಮತ್ತು ಟಯರ್-2 ಎಂದು ಎರಡು ರೀತಿಯ ಅಕೌಂಟ್ ಇದೆ. ಎನ್​ಪಿಎಸ್ ಸ್ಕೀಮ್ ಪಡೆಯಬೇಕಾದರೆ ಟಯರ್-1 ಅಕೌಂಟ್ ತೆರೆಯುವುದು ಕಡ್ಡಾಯ. ಇದು ಪೆನ್ಷನ್ ಉದ್ದೇಶಕ್ಕಿರುವ ಅಕೌಂಟ್. ಆದರೆ, ಟಯರ್-2 ಅಕೌಂಟ್ ಐಚ್ಛಿಕ. ಇದು ಮ್ಯೂಚುವಲ್ ಫಂಡ್​ನಂತೆ ಫ್ಲೆಕ್ಸಿಬಲ್ ನಿರ್ವಹಣೆಗೆ ಅವಕಾಶ ಕೊಡುತ್ತದೆ.

ಎನ್​ಪಿಎಸ್ ಟಯರ್-1, ಟಯರ್-2 ಅಕೌಂಟ್​ಗಳು; ಏನು ವ್ಯತ್ಯಾಸ, ಹೂಡಿಕೆ ಹೇಗೆ? ಇಲ್ಲಿದೆ ಡೀಟೇಲ್ಸ್
ನ್ಯಾಷನಲ್ ಪೆನ್ಷನ್ ಸಿಸ್ಟಂ

Updated on: Nov 25, 2025 | 7:05 PM

ನ್ಯಾಷನಲ್ ಪೆನ್ಷನ್ ಸಿಸ್ಟಂ (NPS- National Pension System) ಇವತ್ತು ಹೆಚ್ಚೆಚ್ಚು ಜನರಿಗೆ ಹೂಡಿಕೆ ಆಯ್ಕೆ ಎನಿಸಿದೆ. ಹೂಡಿಕೆ ಮತ್ತು ಪೆನ್ಷನ್ ಎರಡೂ ಉದ್ದೇಶಗಳನ್ನು ಈಡೇರಿಸುವ ವ್ಯವಸ್ಥೆ ಇದು. ಈ ವರ್ಷ ಎನ್​ಪಿಎಸ್​ನಲ್ಲಿ ಸರ್ಕಾರ ಕೆಲ ನಿಯಮ ಬದಲಾವಣೆ ಮಾಡಿದೆ. ಅದಾದ ಬಳಿಕ ಇದು ಅಪ್ಪಟ ಮ್ಯೂಚುವಲ್ ಫಂಡ್​ನಂತೆ ರಿಟರ್ನ್ ತಂದುಕೊಡಲು ಸಾಧ್ಯವಾಗಲಿದೆ. ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ಎರಡು ರೀತಿಯ ಅಕೌಂಟ್​ಗಳಿವೆ. ಟಯರ್ 1 ಮತ್ತು ಟಯರ್ 2 ಅಕೌಂಟ್​ಗಳನ್ನು ತೆರೆಯಬಹುದು. ಟಯರ್ 1 ಅಕೌಂಟ್ ಶುದ್ಧ ಪಿಂಚಣಿ ಉದ್ದೇಶ ಹೊಂದಿದೆ. ಟಯರ್-2 ಅಕೌಂಟ್ ಬಹಳ ಫ್ಲೆಕ್ಸಿಬಲ್ ಎನಿಸಿದೆ.

ಎನ್​ಪಿಎಸ್ ಟಯರ್ 1 ಅಕೌಂಟ್ ಹೇಗೆ?

ನ್ಯಾಷನಲ್ ಪೆನ್ಷನ್ ಸಿಸ್ಟಂನ ಟಯರ್-1 ಅಕೌಂಟ್ ಅನ್ನು ಪೆನ್ಷನ್ ಉದ್ದೇಶಕ್ಕೆ ರಚಿಸಲಾಗುತ್ತದೆ. ಇದರಲ್ಲಿ ಮಾಡಿದ ಹೂಡಿಕೆಯನ್ನು ನಿವೃತ್ತಿವರೆಗೂ ಹಿಂಪಡೆಯಲು ಆಗಲ್ಲ. 60 ವರ್ಷ ವಯಸ್ಸಾದ ಬಳಿಕ ಈ ಅಕೌಂಟ್​ನಲ್ಲಿನ ಶೇ. 60ರಷ್ಟು ಹಣವನ್ನು ವಿತ್​ಡ್ರಾ ಮಾಡಬಹುದು. ಉಳಿದ ಶೇ. 40ರಷ್ಟು ಹಣದಲ್ಲಿ ಆ್ಯನುಟಿ ಪ್ಲಾನ್ ಖರೀದಿಸಬೇಕಾಗುತ್ತದೆ. ಇದು ಹೂಡಿಕೆದಾರರಿಗೆ ಪಿಂಚಣಿ ಕೊಡುತ್ತಾ ಹೋಗುತ್ತದೆ.

ಇದನ್ನೂ ಓದಿ: ಈ ಲಾರ್ಜ್ ಕ್ಯಾಪ್ ಫಂಡ್​ನಲ್ಲಿ 2008ರಲ್ಲಿ ಕೇವಲ 10 ಲಕ್ಷ ರೂ ಹೂಡಿಕೆ ಮಾಡಿದವರು ಇವತ್ತು ಕೋಟ್ಯಾಧೀಶ್ವರ

ಈ ಟಯರ್-1 ಅಕೌಂಟ್​ನಲ್ಲಿ ನಿಮ್ಮ ಹಣದಲ್ಲಿ ಈಕ್ವಿಟಿ ಸ್ವತ್ತುಗಳ ಮೇಲೆ ಮಾಡಲಾಗುವ ಹೂಡಿಕೆ ಶೇ. 75 ಅನ್ನು ಮೀರುವುದಿಲ್ಲ. ಉಳಿದವನ್ನು ಕಡ್ಡಾಯವಾಗಿ ಬಾಂಡ್ ಇತ್ಯಾದಿ ಡೆಟ್ ಅಸೆಟ್​ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೀಗಾಗಿ, ಇದರಲ್ಲಿ ರಿಸ್ಕ್ ಕಡಿಮೆ, ರಿಟರ್ನ್ ಕೂಡ ಕಡಿಮೆ.

ಆಕರ್ಷಣೆ ಇರುವುದು ಎನ್​ಪಿಎಸ್​ನ ಟಯರ್-2 ಅಕೌಂಟ್​ನಲ್ಲಿ…

ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ನೀವು ಹೂಡಿಕೆ ಮಾಡುವಾಗ ಟಯರ್-1 ಅಕೌಂಟ್ ತೆರೆಯುವುದು ಕಡ್ಡಾಯ. ಇದರ ಜೊತೆಗೆ ಟಯರ್-2 ಅಕೌಂಟ್ ಅನ್ನು ಬೇಕಾದರೆ ತೆರೆಯಲು ಅವಕಾಶ ಇರುತ್ತದೆ. ಈ ಟಯರ್-2 ಅಕೌಂಟ್ ಒಂದು ರೀತಿಯಲ್ಲಿ ಮ್ಯೂಚುವಲ್ ಫಂಡ್​ನಂತೆ ಕಾರ್ಯನಿರ್ವಹಿಸುತ್ತದೆ.

ಇದರಲ್ಲಿ ನೂರಕ್ಕೆ ನೂರು ಹಣ ಈಕ್ವಿಟಿಗಳಲ್ಲಿ ಹೂಡಿಕೆ ಆಗುತ್ತದೆ. ಯಾವಾಗ ಬೇಕಾದರೂ, ಎಷ್ಟು ಬೇಕಾದರೂ ಕಾರ್ಪಸ್ ಅನ್ನು ಹಿಂಪಡೆಯಲು ಅವಕಾಶ ಇರುತ್ತದೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ ಆಗುವುದು ಹೇಗೆ? ಆದಾಯ ಎಷ್ಟು? ಪರೀಕ್ಷೆ ಶುಲ್ಕ, ಕಮಿಷನ್ ಇತ್ಯಾದಿ ವಿವರ

ಮ್ಯೂಚುವಲ್ ಫಂಡ್​ನಲ್ಲಿ ನಿರ್ವಹಣಾ ವೆಚ್ಚ ಶೇ. 1ರ ಆಸುಪಾಸಿನಲ್ಲಿ ಇರುತ್ತದೆ. ಆದರೆ, ಎನ್​ಪಿಎಸ್​ನಲ್ಲಿ ಎಕ್ಸ್​ಪೆನ್ಸ್ ರೇಶಿಯೋ ಶೇ. 0.1 ಕ್ಕಿಂತಲೂ ಕಡಿಮೆ. ಇದರಿಂದ ಹೂಡಿಕೆದಾರರಿಗೆ ಹೆಚ್ಚು ರಿಟರ್ನ್ಸ್ ಸಿಗಲು ಸಾಧ್ಯವಾಗುತ್ತದೆ. ದೀರ್ಘಾವಧಿ ದೃಷ್ಟಿಯಿಂದ ನೋಡಿದರೆ ಎನ್​ಪಿಎಸ್​ನ ಈಕ್ವಿಟಿ ಪ್ಲಾನ್​ಗಳು ಶೇ. 10-12ರ ಸಿಎಜಿಆರ್​ನಲ್ಲಿ ರಿಟರ್ನ್ಸ್ ತಂದುಕೊಟ್ಟಿವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ