ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್​ಗೂ ಸೈ, ಹೆಲ್ತ್​ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?

NPS Swasthya Equity Plus scheme by PFRDA and ICICI PF Management Ltd: ಐಸಿಐಸಿಐ ಪೆನ್ಷನ್ ಫಂಡ್ ಮ್ಯಾನೇಜ್ಮೆಂಟ್ ಫಂಡ್ ಮತ್ತು ಪಿಎಫ್​ಆರ್​ಡಿಎ ಜಂಟಿಯಾಗಿ ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್ ಸ್ಕೀಮ್ ಅನ್ನು ಪ್ರಾಯೋಗಿಕವಾಗಿ ನಡೆಸುತ್ತಿವೆ. ನಿವೃತ್ತಿ ನಂತರದ ಸಂದರ್ಭಕ್ಕೆ ದೀರ್ಘಕಾಲೀನ ಹೂಡಿಕೆಗೆ ಈ ಸ್ಕೀಮ್ ಇದೆ. ಈ ವೇಳೆ, ವೈದ್ಯಕೀಯ ವೆಚ್ಚಕ್ಕೆ ಈ ಫಂಡ್​ನ ಹಣ ಬಳಸುವ ಅವಕಾಶವೂ ಇದೆ.

ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್; ಇದು ರಿಟೈರ್ಮೆಂಟ್​ಗೂ ಸೈ, ಹೆಲ್ತ್​ಕೇರ್ ವೆಚ್ಚಕ್ಕೂ ಸೈ; ಹೇಗೆ ಕೆಲಸ ಮಾಡುತ್ತೆ ಈ ಹೈಬ್ರಿಡ್ ಸ್ಕೀಮ್?
ಹೂಡಿಕೆ

Updated on: Mar 03, 2026 | 4:53 PM

ಪೆನ್ಷನ್ ಫಂಡ್ ನಿಯಂತ್ರಕ ಪ್ರಾಧಿಕಾರವಾದ ಪಿಎಫ್​ಆರ್​ಡಿಎ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಪಿಒಸಿ (ಪ್ರೂಫ್ ಆಫ್ ಕಾನ್ಸೆಕ್ಟ್) ಸ್ಕೀಮ್ ಅಡಿಯಲ್ಲಿ ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್ ಸ್ಕೀಮ್ (NPS Swasthya Equity Plus) ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಐಸಿಐಸಿಐ ಪೆನ್ಷನ್ ಫಂಡ್ ಮ್ಯಾನೇಜ್ಮೆಂಟ್ ಫಂಡ್ ಸಹಯೋಗದಲ್ಲಿ ಪಿಎಫ್​ಆರ್​ಡಿಎ ಈ ಸ್ಕೀಮ್ ಅನ್ನು ನಡೆಸುತ್ತದೆ. ಇದು ರಿಟೈರ್ಮೆಂಟ್​ಗೆ ಬೇಕಾದ ದೀರ್ಘಾವಧಿ ಹೂಡಿಕೆ ಮಾಡಲು ಹಾಗೂ ಆರೋಗ್ಯಪಾಲನೆ ವೆಚ್ಚ ಭರಿಸಲು ಅವಕಾಶ ಕೊಡುವ ಹೈಬ್ರಿಡ್ ರಿಟೈರ್ಮೆಂಟ್ ಸ್ಕೀಮ್ ಆಗಿದೆ.

ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್​ನಲ್ಲಿ ಹಣದ ವಿನಿಯೋಗ ಹೇಗೆ?

ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್ ಸ್ಕೀಮ್​ನಲ್ಲಿ ಶೇ. 70ರಿಂದ 100ರಷ್ಟು ಹಣವನ್ನು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಶೇ. 30ರವರೆಗೆ ಡೆಟ್​ಗಳಲ್ಲಿ, ಹಾಗೂ ಶೇ 10ರವರೆಗಿನ ಫಂಡ್ ಅನ್ನು ಮನಿ ಮಾರ್ಕೆಟ್​ಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಹೂಡಿಕೆದಾರರ ರಿಸ್ಕ್ ಇಚ್ಛೆಗೆ ಅನುಗುಣವಾಗಿ ಹೂಡಿಕೆಗಳ ಹಂಚಿಕೆ ಆಗುತ್ತದೆ.

ಇದನ್ನೂ ಓದಿ: ಮಾರ್ಕೆಟ್ ಟ್ರೆಂಡ್, ಎಕ್ಸ್​ಪೆನ್ಸ್ ರೇಶಿಯೋ, ಎಮರ್ಜೆನ್ ಫಂಡ್ ಇತ್ಯಾದಿ.. ಜನಸಾಮಾನ್ಯರು ಮಾಡುವ ಹೂಡಿಕೆ ತಪ್ಪುಗಳಿವು

ಉದಾಹರಣೆಗೆ, ಹೂಡಿಕೆದಾರರಿಗೆ ತೀರಾ ಹೆಚ್ಚು ರಿಸ್ಕ್ ಅಗತ್ಯ ಇಲ್ಲ ಎನಿಸಿದಲ್ಲಿ ಈಕ್ವಿಟಿಗಳಲ್ಲಿ ಶೇ. 70, ಡೆಟ್​ಗಳಲ್ಲಿ ಶೇ. 20, ಮನಿ ಮಾರ್ಕೆಟ್​ಗಳಲ್ಲಿ ಶೇ. 10 ಹೂಡಿಕೆ ಮಾಡಬಹುದು. ಅಥವಾ ಈಕ್ವಿಟಿಗಳಲ್ಲಿ ಶೇ. 70, ಡೆಟ್​ಗಳಲ್ಲಿ ಶೇ. 30 ಹೂಡಿಕೆ ಆಗಬಹುದು.

ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧ ಇದ್ದರೆ ನೂರಕ್ಕೆ ನೂರು ಈಕ್ವಿಟಿಗಳಲ್ಲಿ ಹೂಡಿಕೆ ಮಾಡಬಹುದು. ಅಥವಾ ಈಕ್ವಿಟಿಗಳಲ್ಲಿ ಶೇ. 90, ಡೆಟ್​ಗಳಲ್ಲಿ ಶೇ. 10 ಹೂಡಿಕೆ ಮಾಡಬಹುದು.

ಇದನ್ನೂ ಓದಿ: ಬದುಕು ನಿರ್ವಹಿಸುವಷ್ಟು ಮಾಸಿಕ ಆದಾಯ ಸೃಷ್ಟಿಸುವುದು ಹೇಗೆ? ಬೆಲೆ ಏರಿಕೆ ಇತ್ಯಾದಿ ಅಂಶಗಳನ್ನೂ ಮರೆಯದಿರಿ; ಇಲ್ಲಿದೆ ಟಿಪ್ಸ್

ಹೆಲ್ತ್​ಕೇರ್ ವೆಚ್ಚಕ್ಕೆ ಹಣ ಹೇಗೆ ಬಳಸುವುದು?

ಎನ್​ಪಿಎಸ್ ಸ್ವಾಸ್ಥ್ಯ ಈಕ್ವಿಟಿ ಪ್ಲಸ್ ಸ್ಕೀಮ್​ನಲ್ಲಿ ನಿಮ್ಮ ಹೂಡಿಕೆ ಹಣ 50,000 ರೂ ದಾಟಿದಾಗ ಭಾಗಶಃವಾಗಿ ಹಣ ವಿತ್​ಡ್ರಾ ಮಾಡಲು ಅರ್ಹರಾಗಬಹುದು. ಶೇ. 25ರಷ್ಟು ಹಣವನ್ನು ಮಾತ್ರ ಹಿಂಪಡೆಯಲು ಅವಕಾಶ ಇರುತ್ತದೆ. ವೈದ್ಯಕೀಯ ವೆಚ್ಚವು ಕಾರ್ಪಸ್​ನ ಶೇ. 70ಕ್ಕಿಂತ ಹೆಚ್ಚು ಇದ್ದಾಗ ಪೂರ್ಣ ಹಣ ಹಿಂಪಡೆಯುವ ಅವಕಾಶವೂ ಇರುತ್ತದೆ. ಆದರೆ, ಅಪೋಲೋ 24/7 ಪ್ಲಾಟ್​ಫಾರ್ಮ್ ಮತ್ತು ಆಯ್ದ ಅಪೋಲೋ ನೆಟ್ವರ್ಕ್ ಫೆಸಿಲಿಟಿಗಳ ಮೂಲಕ ಹೆಲ್ತ್​ಕೇರ್ ಸಂಬಂಧಿತ ವೆಚ್ಚಗಳಿಗೆ ಈ ಸ್ಕೀಮ್​ನ ಹಣ ಬಳಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us