ಈ ಪೋಸ್ಟ್ ಆಫೀಸ್ ಸ್ಕೀಮ್​ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

Post Office SCSS scheme: ಪೋಸ್ಟ್ ಆಫೀಸ್​ನಲ್ಲಿ ಲಭ್ಯ ಇರುವ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್​ನಲ್ಲಿ ವರ್ಷಕ್ಕೆ ಶೇ. 8.2 ಬಡ್ಡಿ ಇದೆ. 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಈ ಸ್ಕೀಮ್ ಲಭ್ಯ ಇದೆ. ಲಂಪ್ಸಮ್ ಆಗಿ 30 ಲಕ್ಷ ರೂವರೆಗೂ ಡೆಪಾಸಿಟ್ ಇಡಬಹುದು. ಪ್ರತೀ ತ್ರೈಮಾಸಿಕಕ್ಕೆ ಚಕ್ರಬಡ್ಡಿ ಸೇರುತ್ತದೆ. ತಿಂಗಳಿಗೆ 20,500 ರೂವರೆಗೆ ಮಾಸಿಕ ಆದಾಯ ಸಿಗುತ್ತದೆ.

ಈ ಪೋಸ್ಟ್ ಆಫೀಸ್ ಸ್ಕೀಮ್​ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಪೋಸ್ಟ್ ಆಫೀಸ್

Updated on: Feb 15, 2026 | 6:15 PM

ಪೋಸ್ಟ್ ಆಫೀಸ್​ನಲ್ಲಿ ಲಭ್ಯ ಇರುವ ವಿವಿಧ ಸ್ಕೀಮ್​ಗಳಲ್ಲಿ ಎಸ್​ಸಿಎಸ್​ಎಸ್ (SCSS- Senior Citizen Savings Scheme) ಒಂದು. ಇದು ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್. ಪೋಸ್ಟ್ ಆಫೀಸ್​ನ ಉಳಿತಾಯ ಯೋಜನೆಗಳ ಪೈಕಿ ಗರಿಷ್ಠ ರಿಟರ್ನ್ ತರುವಂತಹ ಸ್ಕೀಮ್ ಕೂಡ ಹೌದು. ಈ ಹಿರಿಯ ನಾಗರಿಕರ ಉಳಿತಾಯ ಯೋಜನೆ ಕೇವಲ ಪೋಸ್ಟ್ ಆಫೀಸ್​ನಲ್ಲಷ್ಟೇ ಅಲ್ಲ, ಬ್ಯಾಂಕುಗಳಲ್ಲೂ ಲಭ್ಯ ಇರುತ್ತದೆ. ರಿಟೈರ್ಮೆಂಟ್ ನಂತರ ಪಿಂಚಣಿ ಸೌಲಭ್ಯ ಇಲ್ಲದವರಿಗೆ ಈ ಎಸ್​ಸಿಎಸ್​ಎಸ್ ಹೇಳಿ ಮಾಡಿಸಿದೆ.

ಎಸ್​ಸಿಎಸ್​ಎಸ್​ನಿಂದ ಮೂರು ಲಾಭಗಳು

  1. ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್​ನಲ್ಲಿ ಮಾಡಿದ ಹೂಡಿಕೆಯ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇರುತ್ತದೆ
  2. ಈ ಸ್ಕೀಮ್​ನಲ್ಲಿ ಸದ್ಯಕ್ಕೆ ಶೇ. 8.2 ವಾರ್ಷಿಕ ಬಡ್ಡಿಯ ಆದಾಯ ಸಿಗುತ್ತದೆ.
  3. ಈ ಸ್ಕೀಮ್​ನಲ್ಲಿ ಲಂಪ್ಸಮ್ ಆಗಿ ಹೂಡಿಕೆ ಮಾಡಿ, ಅದರಿಂದ ತ್ರೈಮಾಸಿಕ ಆದಾಯ ಪಡೆಯಬಹುದು. ಅಂದರೆ ಪ್ರತೀ ಮೂರು ತಿಂಗಳಿಗೊಮ್ಮೆ ಬಡ್ಡಿ ಸಿಗುತ್ತಾ ಹೋಗುತ್ತದೆ.

ಇದನ್ನೂ ಓದಿ: Money Secrets: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

ಯಾರು ಈ ಎಸ್​ಸಿಎಸ್​ಎಸ್ ಸ್ಕೀಮ್ ಪಡೆಯಬಹುದು?

60 ವರ್ಷ ವಯಸ್ಸು ದಾಟಿರುವ ಹಿರಿಯ ನಾಗರಿಕರು ಎಸ್​ಸಿಎಸ್​ಎಸ್ ಅಕೌಂಟ್ ತೆರೆಯಬಹುದು. ವಿಆರ್​ಎಸ್ ಪಡೆದಿರುವವರಾದರೆ 55 ವರ್ಷ ವಯಸ್ಸು ದಾಟಿರಬೇಕು. ಸೇನೆಯಲ್ಲಿ ಕೆಲಸ ಮಾಡಿದ್ದರೆ 50 ವರ್ಷ ದಾಟಿದರೂ ಸಾಕು ಎಸ್​ಸಿಎಸ್​ಎಸ್ ಅಕೌಂಟ್ ತೆರೆಯಬಹುದು.

ಎಸ್​ಸಿಎಸ್​ಎಸ್​ನಲ್ಲಿ ಎಷ್ಟು ಹೂಡಿಕೆ ಸಾಧ್ಯ?

ಸೀನಿಯರ್ ಸಿಟಜನ್ ಸೇವಿಂಗ್ಸ್ ಅಕೌಂಟ್​ನಲ್ಲಿ ಒಬ್ಬರು ಕನಿಷ್ಠ 1,000 ರೂ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆ 30 ಲಕ್ಷ ರೂ ಇದೆ. ಕಂತುಗಳಲ್ಲಿ ಹೂಡಿಕೆಗೆ ಅವಕಾಶ ಇಲ್ಲ. ಲಂಪ್ಸಮ್ ಆಗಿ ಹಣ ತೊಡಗಿಸಬೇಕು.

ಒಂದು ವೇಳೆ ನೀವು ಎಸ್​ಸಿಎಸ್​ಎಸ್ ಅಕೌಂಟ್​ನಲ್ಲಿ 30 ಲಕ್ಷ ರೂ ಹಣವನ್ನು ಠೇವಣಿ ಇಟ್ಟಿದ್ದೇ ಆದಲ್ಲಿ, ಮತ್ತು ಈಗಿರುವ ಶೇ. 8.2 ಬಡ್ಡಿದರವೇ ಮುಂದುವರಿದಿದ್ದೇ ಆದಲ್ಲಿ ವರ್ಷಕ್ಕೆ 2.46 ಲಕ್ಷ ರೂ ಬಡ್ಡಿ ಶೇಖರಣೆ ಆಗುತ್ತದೆ. ಈ 12 ತಿಂಗಳ ಬಡ್ಡಿ ಆದಾಯವನ್ನು ವಿಭಜಿಸಿದರೆ ತಿಂಗಳಿಗೆ 20,500 ರೂ ಆಗುತ್ತದೆ.

ಇದನ್ನೂ ಓದಿ: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್​ಗಳ ನಡುವೆ ಏನು ವ್ಯತ್ಯಾಸ?

ಇದರ ಜೊತೆಗೆ, ವರ್ಷಕ್ಕೆ 1.50 ಲಕ್ಷ ರೂವರೆಗೆ ಬಡ್ಡಿ ಆದಾಯಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಲು ಅವಕಾಶ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us