ಸ್ವ ಉದ್ಯೋಗ (Self Employment) ಮಾಡಬೇಕೆಂಬುದು ಬಹಳಷ್ಟು ಮಂದಿಯ ಕನಸಾಗಿರುತ್ತದೆ. ಆದರೆ ದೊಡ್ಡ ಮೊತ್ತದ ಹೂಡಿಕೆ, ಉದ್ಯೋಗಿಗಳ ನಿರ್ವಹಣೆ, ಖರ್ಚು ಇತ್ಯಾದಿಗಳು ಸಾಮಾನ್ಯರಿಂದ ಕಷ್ಟಸಾಧ್ಯ. ಹೀಗಾಗಿ ಮನದೊಳಗೆ ಆಸೆ ಇದ್ದರೂ ಅನೇಕರೂ ಉದ್ಯಮ (Business) ಆರಂಭಿಸಲು ಹಿಂದೇಟು ಹಾಕುತ್ತಾರೆ. ಆದರೆ, ಕಡಿಮೆ ಹೂಡಿಕೆಯೊಂದಿಗೆ ಭರ್ಜರಿ ಆದಾಯ ಗಳಿಸಬಲ್ಲ ಕಿರು ಉದ್ಯಮ (Small Business) ಸ್ಥಾಪಿಸಲು ಭಾರತೀಯ ಅಂಚೆ ಇಲಾಖೆ ಒಂದು ಅವಕಾಶ ಒದಗಿಸಿದೆ. ಅಂಚೆ ಇಲಾಖೆಯ (Indian Post) ಫ್ರಾಂಚೈಸ್ ಸ್ಕೀಮ್ ಮೂಲಕ ಕಡಿಮೆ ಹೂಡಿಕೆಯೊಂದಿಗೆ ಉತ್ತಮ ಆದಾಯ, ಲಾಭ ಗಳಿಸಬಹುದಾಗಿದೆ. ಈ ಯೋಜನೆಗೆ ಕನಿಷ್ಠ 5,000 ರೂ. ಹೂಡಿಕೆ ಮಾಡಬೇಕಾಗುತ್ತದೆ. ಭಾರತೀಯ ಅಂಚೆ ಇಲಾಖೆಯು ಕೇವಲ ಅಂಚೆ ಸೇವೆ ಮಾತ್ರವಲ್ಲದೆ ಅನೇಕ ಸೇವೆಗಳನ್ನು ಒದಗಿಸುತ್ತಿದೆ. ಸಣ್ಣ ಉಳಿತಾಯ ಖಾತೆಗಳು, ಆರ್ಡಿ, ಆಧಾರ್ ಅಪ್ಡೇಟ್ ಇತ್ಯಾದಿ ಸೇವೆಗಳು ಅಂಚೆ ಕಚೇರಿಗಳಲ್ಲಿ ದೊರೆಯುತ್ತವೆ. ಆದರೆ ಸದ್ಯ ದೇಶದಲ್ಲಿರುವ ಅಂಚೆ ಕಚೇರಿಗಳ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಸರ್ಕಾರ ಫ್ರಾಂಚೈಸ್ಗಳ ಮೂಲಕ ಅಂಚೆ ಕಚೇರಿಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಸರ್ಕಾರದ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಸಾರ್ವಜನಿಕರೂ ಫ್ರಾಂಚೈಸ್ ತೆರೆಯಬಹುದಾಗಿದೆ. ಆ ಮೂಲಕ ಆದಾಯ ಗಳಿಸಬಹುದಾಗಿದೆ. ತವರು ಗ್ರಾಮದಲ್ಲೇ, ಮನೆಯ ಸಮೀಪವೇ ಫ್ರಾಂಚೈಸ್ ತೆರೆಯುವ ಮೂಲಕ ಊರಿನಲ್ಲೇ ಇದ್ದುಕೊಂಡು ಆದಾಯ ಗಳಿಸಬಹುದಾಗಿದೆ.
ಅಂಚೆ ಇಲಾಖೆ ಎರಡು ರೀತಿಯ ಪ್ರಾಂಚೈಸ್ಗೆ ಅವಕಾಶ ನೀಡುತ್ತದೆ. ಅವುಗಳೆಂದರೆ, ಫ್ರಾಂಚೈಸ್ಡ್ ಔಟ್ಲೆಟ್ ಮತ್ತು ಫ್ರಾಂಚೈಸೀ ಆಫ್ ಪೋಸ್ಟಲ್ ಏಜೆಂಟ್ಸ್. ಈ ಪೈಕಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು. ಔಟ್ಲೆಟ್ ಫ್ರಾಂಚೈಸ್ ಅಡಿಯಲ್ಲಿ ಅಂಚೆ ಕಚೇರಿ ಇಲ್ಲದ ಕಡೆಗಳಲ್ಲಿ ಕಚೇರಿ ತೆರೆಯಬಹುದು. ಪೋಸ್ಟಲ್ ಏಜೆಂಟ್ಗಳಾದರೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಸ್ಟೇಷನರಿ ಮತ್ತು ಅಂಚೆ ಸ್ಟಾಂಪ್ಗಳ ವಿತರಣೆ ಮಾಡಬೇಕಾಗುತ್ತದೆ.
ಇಂಡಿಯಾ ಪೋಸ್ಟ್ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನಂತರ ಅರ್ಜಿಯನ್ನು ಡೌನ್ಲೋಡ್ ಮಾಡಿ ಭರ್ತಿ ಮಾಡಿ ಸಲ್ಲಿಸಬೇಕು. ಷರತ್ತುಗಳು ಮತ್ತು ನಿಬಂಧನೆಗಳನ್ನು ಸರಿಯಾಗಿ ಗಮನಿಸಿಕೊಳ್ಳಿ. ಈ ಯೋಜನೆಯಡಿ ಫ್ರಾಂಚೈಸ್ ತೆರೆಯಲು ಹೆಚ್ಚಿನ ಅರ್ಹತೆಗಳೇನೂ ಬೇಕಾಗಿಲ್ಲ. ಇಲಾಖೆ ಹೇಳಿರುವ ಷರತ್ತುಗಳು ಮತ್ತು ನಿಬಂಧನೆಗಳನ್ನು ಪೂರೈಸಿದರೆ ಸಾಕು. 18 ವರ್ಷ ಮೇಲ್ಪಟ್ಟವರಾಗಿರಬೇಕು. ಫ್ರಾಂಚೈಸ್ಗೆ ಅರ್ಜಿ ಸಲ್ಲಿಸುವವರ ಕುಟುಂಬದವರು ಯಾರೂ ಅಂಚೆ ಕಚೇರಿಯ ಉದ್ಯೋಗಿ ಆಗಿರಬಾರದು.
ಇದನ್ನೂ ಓದಿ: ಗದಗದಲ್ಲಿ ಅರಳಿದ ಕಲಾಚೇತನ; ಕಾವೆಂಶ್ರೀ ಎಂಬ ಹೋಟೆಲ್ ಉದ್ಯಮಿಯ ಕಲಾಸೇವೆಯ ಯಶೋಗಾಥೆಗೆ ನಮೋ
ಅಂಚೆ ಕಚೇರಿ ಫ್ರಾಂಚೈಸ್ ತೆರೆಯಲು 5,000 ರೂ. ಬಧ್ರತಾ ಠೇವಣಿ ಇಡಬೇಕಾಗುತ್ತದೆ. ಉಳಿದಂತೆ ಸ್ಟೇಷನರಿ ವಸ್ತುಗಳ ಖರೀದಿ ಇತ್ಯಾದಿಗಳಿಗೆ ತುಸು ಖರ್ಚಾಗಬಹುದು. ಫ್ರಾಂಚೈಸ್ಗಾಗಿ ಕನಿಷ್ಠ 200 ಚದರ ಅಡಿಯ ಕಚೇರಿ ಸ್ಥಳ ಬೇಕಾಗುತ್ತದೆ.
ಅಂಚೆ ಕಚೇರಿ ಫ್ರಾಂಚೈಸ್ನಿಂದ ನಿಗದಿತ ಆದಾಯ ಎಂಬುದು ಇಲ್ಲವಾದರೂ ತಾವು ನೀಡಿದ ಸೇವೆಗಳಿಗೆ ಅನುಗುಣವಾಗಿ ಕಮಿಷನ್ ದೊರೆಯುತ್ತದೆ. ಹೆಚ್ಚೆಚ್ಚು ಸೇವೆಗಳನ್ನು ನೀಡಿದಷ್ಟೂ ಕಮಿಷನ್ ಹೆಚ್ಚು ದೊರೆಯುತ್ತದೆ. ಅಂಚೆ ಫ್ರಾಂಚೈಸ್ ಮೂಲಕ ನೀಡುವ ಸೇವೆಗಳಿಗೆ ದೊರೆಯುವ ಕಮಿಷನ್ ದರ ವಿವರ ಹೀಗಿದೆ;
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:29 am, Thu, 26 January 23