ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನ 2023-24 ರ ವರ್ಷದ ಸಾಲಿನ ಮೂರನೇ ಸರಣಿ (Sovereign Gold Bond Scheme 2023-24 Series III) ನಾಳೆ ಶುರುವಾಗುತ್ತದೆ. ಐದು ದಿನಗಳ ಕಾಲ (ಡಿಸೆಂಬರ್ 18ರಿಂದ 22ರವರೆಗೆ) ಇದು ಸಬ್ಸ್ಕ್ರಿಪ್ಷನ್ಗೆ ಲಭ್ಯ ಇರುತ್ತದೆ. ಸ್ಕೀಮ್ ಖರೀದಿಸಿದದವರಿಗೆ ಡಿಸೆಂಬರ್ 28ರಂದು ಬಾಂಡ್ ವಿತರಿಸಲಾಗುತ್ತದೆ. ಈ ಸರಣಿಯಲ್ಲಿ ಅರ್ಬಿಐ ಒಂದು ಗ್ರಾಮ್ ಚಿನ್ನವನ್ನು 6,199 ರೂಗೆ ನಿಗದಿ ಮಾಡಿದೆ. ಅಂದರೆ ಈ ದರದಲ್ಲಿ ಜನರು ಎಸ್ಜಿಬಿಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದು.
ಇವತ್ತು ಅಪರಂಜಿ ಚಿನ್ನದ ಮಾರುಕಟ್ಟೆ ಬೆಲೆ ಗ್ರಾಮ್ಗೆ 6,250 ರುಪಾಯಿಗೂ ಹೆಚ್ಚಿದೆ. ಎಸ್ಜಿಬಿ ಸ್ಕೀಮ್ಗೆ ನಿಗದಿ ಮಾಡಿರುವ ಬೆಲೆ ವಾರದ ಹಿಂದಿನದ್ದು. ಗ್ರಾಮ್ಗೆ 250 ರುಪಾಯಿಗೂ ಕಡಿಮೆ ಬೆಲೆಗೆ ಸ್ಕೀಮ್ನಲ್ಲಿ ಹೂಡಿಕೆ ಮಾಡಿದಂತಾಗುತ್ತದೆ.
ಆನ್ಲೈನ್ನಲ್ಲಿ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ಅರ್ಜಿ ಸಲ್ಲಿಸುವವರಿಗೆ ಮತ್ತು ಆನ್ಲೈನ್ನಲ್ಲೇ ಹಣ ಪಾವತಿ ಮಾಡುವವರಿಗೆ ಒಂದು ಗ್ರಾಮ್ ಚಿನ್ನಕ್ಕೆ 50 ರೂ ಡಿಸ್ಕೌಂಟ್ ಕೊಡಲಾಗುತ್ತದೆ. ಅಂದರೆ ಗ್ರಾಮ್ಗೆ 6,149 ರುಪಾಯಿಯಂತೆ ನೀವು ಹೂಡಿಕೆ ಮಾಡಬಹುದು.
ಇದನ್ನೂ ಓದಿ: ಮ್ಯುಚುವಲ್ ಫಂಡ್ನಲ್ಲಿ ಹೂಡಿಕೆ ಮಾಡುವ ಆಲೋಚನೆಯಾ? ಫೈವ್ ಸ್ಟಾರ್ ರೇಟಿಂಗ್ ಇರುವ ಜನಪ್ರಿಯ ಫಂಡ್ಗಳಿವು…
ಯಾವುದೇ ಭಾರತೀಯ ಪ್ರಜೆಗಳು, ಹಿಂದೂ ಅವಿಭಜಿತ ಕುಟುಂಬ, ಟ್ರಸ್ಟ್, ಯೂನಿವರ್ಸಿಟಿ ಮತ್ತು ಚಾರಿಟಿ ಸಂಸ್ಥೆಗಳು ಎಸ್ಜಿಬಿಯಲ್ಲಿ ಹೂಡಿಕೆ ಮಾಡಬಹುದು. ವ್ಯಕ್ತಿಯಾದರೆ ಒಂದು ಗ್ರಾಮ್ ಚಿನ್ನದಿಂದ ಹಿಡಿದು 4 ಕಿಲೋ ಚಿನ್ನದವರೆಗೆ ಹೂಡಿಕೆ ಮಾಡಬಹುದು. ಸಂಸ್ಥೆಯಾದರೆ 20 ಕಿಲೋವರೆಗೂ ಹೂಡಿಕೆ ಸಾಧ್ಯ.
ಗಮನಿಸಿ, ಈ ಮಿತಿ ಅಥವಾ ಅವಕಾಶವು ಒಂದು ಹಣಕಾಸು ವರ್ಷಕ್ಕೆ ನಿಗದಿಯಾಗಿರುವಂತಹದ್ದು. ಒಂದು ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಬಾಂಡ್ಗಳನ್ನು ಪಡೆಯಬಹುದು. ಒಬ್ಬ ವ್ಯಕ್ತಿ ಒಂದು ವರ್ಷದಲ್ಲಿ ಎಷ್ಟು ಬೇಕಾದರೂ ಬಾಂಡ್ ಪಡೆಯಬಹುದಾದರೂ ಹೂಡಿಕೆ ಮಿತಿ ಒಟ್ಟು 4 ಕಿಲೋ ಮಾತ್ರವೇ. ಹಿಂದಿನ ಸರಣಿಯಲ್ಲಿ 3 ಕಿಲೋ ಚಿನ್ನದ ಮೇಲೆ ಹೂಡಿಕೆ ಮಾಡಿದ್ದರೆ ಈ ಬಾರಿ ಗರಿಷ್ಠ 1 ಕಿಲೋ ಚಿನ್ನಕ್ಕೆ ಮಾತ್ರ ಹಣ ಹಾಕಬಹುದು.
ಇದನ್ನೂ ಓದಿ: Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?
ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ 8 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಮಧ್ಯೆಮಧ್ಯೆ ಹಣ ಕಟ್ಟುವ ಅವಶ್ಯಕತೆ ಇಲ್ಲ. ಆರು ತಿಂಗಳಿಗೊಮ್ಮೆ ನಿಮ್ಮ ಹೂಡಿಕೆಯ ಮೊತ್ತಕ್ಕೆ ಶೇ. 2.50ರಷ್ಟು ಬಡ್ಡಿ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ