ಸಾವರೀನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ (Sovereign Gold Bond Scheme) ತೊಡಗಿಸಿರುವ ಹೂಡಿಕೆಯನ್ನು ಅವಧಿಗೆ ಮುನ್ನ ಹಿಂಪಡೆಯಲು ಆರ್ಬಿಐ ಅವಕಾಶ ನೀಡಿದೆ. ಎಸ್ಜಿಬಿ ಸ್ಕೀಮ್ಗಳು 8 ವರ್ಷಕ್ಕೆ ಮೆಚ್ಯೂರ್ ಆಗುತ್ತವೆ. ಆದರೆ, 8 ವರ್ಷ ಮುಗಿಯುವ ಮುನ್ನವೇ ಹೂಡಿಕೆ ಹಿಂಪಡೆಯಬಯಸುವ ಹೂಡಿಕೆದಾರರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬಹುದು. 2017ರ ಅಕ್ಟೋಬರ್ನಲ್ಲಿ ನೀಡಲಾದ 3 ಸರಣಿಯ ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ಗಳಲ್ಲಿನ ಹೂಡಿಕೆಯನ್ನು ಅವಧಿಗೆ ಮುನ್ನ (Premature Redemption) ಹಿಂಪಡೆಯಲು ಆರ್ಬಿಐ ವೇಳಾಪಟ್ಟಿ ಪ್ರಕಟಿಸಿದೆ. 2023ರ ಅಕ್ಟೋಬರ್ 1ರಿಂದ 2024ರ ಮಾರ್ಚ್ 31ರವರೆಗೆ ಈ ಅವಕಾಶ ಇರುತ್ತದೆ. ಅವಧಿಗೆ ಮುನ್ನ ಹೂಡಿಕೆ ಹಿಂಪಡೆಯಲು ಇದೇ ಅವಧಿಯಲ್ಲಿ ಮನವಿ ಸಲ್ಲಿಸಬೇಕು. ಆದರೆ, ಅನಿರೀಕ್ಷಿತ ರಜೆ ಇತ್ಯಾದಿ ಸಂದರ್ಭಗಳಿಂದಾಗಿ ಈ ವೇಳಾಪಟ್ಟಿಯಲ್ಲಿ ಬದಲಾವಣೆ ಆದರೂ ಆಗಬಹುದು ಎಂದೂ ಆರ್ಬಿಐ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಸಾಲಕ್ಕೆ ಬದಲಾಗಿ ಷೇರುಗಳನ್ನು ಕೊಟ್ಟು ಸ್ಪೈಸ್ಜೆಟ್; ವಿಮಾನ ಗುತ್ತಿಗೆ ನೀಡಿದವರಿಗೆ ಸಿಕ್ಕಲಿದೆ 4.8 ಕೋಟಿ ಷೇರು
ಈ ಮೇಲಿನವು ಮನವಿ ಸಲ್ಲಿಸಲು ಇರುವ ವೇಳಾಪಟ್ಟಿಯಾಗಿದೆ. ಈ ಮೂರೂ ಸರಣಿಯ ಎಸ್ಜಿಬಿ ಹೂಡಿಕೆಯನ್ನು ಹಿಂಪಡೆಯಲು 2023ರ ಅಕ್ಟೋಬರ್ನಿಂದ 2024ರ ಮಾರ್ಚ್ವರೆಗೂ ಕಾಲಾವಕಾಶ ಇರುತ್ತದೆ. ಒಂದು ವೇಳೆ ನೀವು ಅವಧಿಗೆ ಮುನ್ನ ಎಸ್ಜಿಬಿ ಹೂಡಿಕೆಯನ್ನು ಹಿಂಪಡೆಯದಿದ್ದರೆ 2025-26ಕ್ಕೆ ಅವು ಮೆಚ್ಯೂರ್ ಆದ ಬಳಿಕ ನೀವು ಪಡೆಯಬಹುದು.
ಚಿನ್ನದ ಮೇಲೆ ಹೂಡಿಕೆ ಮಾಡಬಯಸುವವರಿಗೆ ಇದು ಒಳ್ಳೆಯ ಯೋಜನೆ ಎನಿಸಿದೆ. ಭೌತಿಕ ಚಿನ್ನದ ಬದಲು ಬಾಂಡ್ ರೂಪದಲ್ಲಿ ಹೂಡಿಕೆ ಮಾಡಬಹುದು. ಇವತ್ತಿನ ಚಿನ್ನದ ದರದಲ್ಲಿ ನೀವು ಒಂದು ವರ್ಷದಲ್ಲಿ 4 ಕಿಲೋ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. ಎಂಟು ವರ್ಷದ ಬಳಿಕ ಅಂದಿನ ಮಾರುಕಟ್ಟೆ ದರದ ಪ್ರಕಾರ ನಿಮಗೆ ಚಿನ್ನದ ಬದಲಾಗಿ ಹಣ ಸಿಗುತ್ತದೆ.
ಉದಾಹರಣೆಗೆ ಇವತ್ತು ಚಿನ್ನದ ಬೆಲೆ 10 ಗ್ರಾಂಗೆ 61,000 ರೂ ಇದೆ ಎಂದಿಟ್ಟುಕೊಳ್ಳಿ. ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ನೀವು 100 ಗ್ರಾಂ ಚಿನ್ನದ ಮೇಲೆ 6.1 ಲಕ್ಷ ರೂ ಹೂಡಿಕೆ ಮಾಡುತ್ತೀರಿ. ಎಂಟು ವರ್ಷದ ಬಳಿಕ ಚಿನ್ನದ ಬೆಲೆ 90,000 ರೂ ಆಗಿರುತ್ತದೆ ಎಂದು ಭಾವಿಸೋಣ. ಆಗ ನಿಮ್ಮ ಹೂಡಿಕೆ ಮೌಲ್ಯ 90 ಲಕ್ಷ ರೂ ಆಗುತ್ತದೆ. ಎಂಟು ವರ್ಷದಲ್ಲಿ ನಿಮಗೆ ಹೆಚ್ಚೂಕಡಿಮೆ 30 ಲಕ್ಷ ರೂ ಲಾಭ ಬರುತ್ತದೆ. ನಿಮಗೆ ಭೌತಿಕ ಚಿನ್ನದ ಬದಲು 90 ಲಕ್ಷ ರೂ ಹಣವನ್ನು ನಿಮಗೆ ಸಂದಾಯ ಮಾಡಲಾಗುತ್ತದೆ.
ಇದನ್ನೂ ಓದಿ: ಸೆ. 30ರೊಳಗೆ ಈ ಕೆಲಸ ಮಾಡದಿದ್ದರೆ ಪಿಪಿಎಫ್, ಸೇವಿಂಗ್ಸ್ ಸ್ಕೀಮ್ ಇತ್ಯಾದಿ ನಿಮ್ಮ ಹೂಡಿಕೆ ಸ್ಥಗಿತಗೊಳ್ಳಲಿದೆ
ಇದರ ಜೊತೆಗೆ ನಿಮ್ಮ ಹೂಡಿಕೆಯ ಮೇಲೆ ವಾರ್ಷಿಕವಾಗಿ ಶೇ. 2.50ರಷ್ಟು ಬಡ್ಡಿಯೂ ಸಿಗುತ್ತದೆ. ಪ್ರತೀ 6 ತಿಂಗಳಿಗೆ ನಿಮ್ಮ ಬ್ಯಾಂಕ್ ಖಾತೆಗೆ ಬಡ್ಡಿ ಹಣ ಜಮೆ ಆಗುತ್ತಿರುತ್ತದೆ. ಆದರೆ, ಈ ಬಡ್ಡಿಹಣಕ್ಕೆ ತೆರಿಗೆ ಅನ್ವಯ ಆಗುತ್ತದೆ. ಆದರೆ, ಹೂಡಿಕೆಯಿಂದ ಸಿಗುವ ಬಡ್ಡಿಹೊರತಾದ ಲಾಭದ ಮೇಲೆ ಯಾವ ತೆರಿಗೆಯೂ ಇರುವುದಿಲ್ಲ.
ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ ಅನ್ನು ಯಾವಾಗಲೂ ಪಡೆಯಲಾಗುವುದಿಲ್ಲ. ಆರ್ಬಿಐ ಆಗಾಗ್ಗೆ ಈ ಬಾಂಡ್ ಅನ್ನು ವಿತರಿಸುತ್ತದೆ. ಆ ಸಂದರ್ಭದಲ್ಲಿ ಮಾತ್ರ ಇದನ್ನು ಪಡೆಯಬಹುದು. ಕನಿಷ್ಠ ಚಿನ್ನದ ಹೂಡಿಕೆ 1 ಗ್ರಾಮ್ ಆಗಿರುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:45 pm, Tue, 5 September 23