ಬೆಂಗಳೂರು, ಡಿಸೆಂಬರ್ 22: ಈ ಹಣಕಾಸು ವರ್ಷದ (2023-24) ಮೂರನೇ ಸರಣಿಯ ಸೋವರೀನ್ ಗೋಲ್ಡ್ ಬಾಂಡ್ ಸ್ಕೀಮ್ (Sovereign Gold Bond 2023-24 Series-III) ಬಿಡುಗಡೆ ಆಗಿ ನಾಲ್ಕು ದಿನಗಳಾಗಿವೆ. ಇಂದು ಇದರ ಸಬ್ಸ್ಕ್ರಿಪ್ಷನ್ಗೆ ಕೊನೆಯ ದಿನವಾಗಿದೆ. ಈ ಮೂರನೇ ಟ್ರಾಂಚ್ನಲ್ಲಿ ಆರ್ಬಿಐ ಒಂದು ಗ್ರಾಮ್ ಚಿನ್ನಕ್ಕೆ 6,199 ರೂ ದರ ನಿಗದಿ ಮಾಡಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಸೋವರೀನ್ ಗೋಲ್ಡ್ ಬಾಂಡ್ ಹೇಳಿ ಮಾಡಿಸಿದ ಸ್ಕೀಮ್ ಆಗಿದೆ. ಬಾಂಡ್ ಖರೀದಿಸಿದವರಿಗೆ ಡಿಸೆಂಬರ್ 28ಕ್ಕೆ ಬಾಂಡ್ ವಿತರಿಸಲಾಗುತ್ತದೆ.
ನೆಟ್ಬ್ಯಾಂಕಿಂಗ್, ಮೊಬೈಲ್ ಆ್ಯಪ್ ಹೀಗೆ ಆನ್ಲೈನ್ನಲ್ಲಿ ಗೋಲ್ಡ್ ಬಾಂಡ್ ಪಡೆದು ಡಿಜಿಟಲ್ ಆಗಿ ಹಣ ಪಾವತಿ ಮಾಡಿದರೆ 50 ರೂ ಡಿಸ್ಕೌಂಟ್ ಸಿಗುತ್ತದೆ. ಅಂದರೆ ಗ್ರಾಂಗೆ 6,149 ರೂ ದರದಂತೆ ಚಿನ್ನದ ಮೇಲೆ ಇನ್ವೆಸ್ಟ್ ಮಾಡಬಹುದು.
ಸೋವರೀನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ನಾವು ಭೌತಿಕ ಚಿನ್ನವನ್ನು ಖರೀದಿಸಲಾಗುವುದಿಲ್ಲ. ಪ್ರಸಕ್ತ ಚಿನ್ನದ ಮಾರುಕಟ್ಟೆ ದರದ ಪ್ರಕಾರ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ ಒಂದು ಗ್ರಾಮ್ನಿಂದ 4 ಕಿಲೋವರೆಗೂ ಹೂಡಿಕೆ ಮಾಡಬಹುದು. ಅಂದರೆ 6,199 ರೂ ಹಣ ಕನಿಷ್ಠ ಹೂಡಿಕೆ ಆಗಿರುತ್ತದೆ. ಗರಿಷ್ಠ 2.48 ಕೋಟಿ ರೂವರೆಗೂ ಹೂಡಿಕೆ ಸಾಧ್ಯ.
ಇದನ್ನೂ ಓದಿ: SGB Investment: ಮ್ಯುಚುವಲ್ ಫಂಡ್ಗಿಂತಲೂ ಲಾಭ; ಸೋವರೀನ್ ಗೋಲ್ಡ್ ಬಾಂಡ್ ಮೂಲಕ ನಿಯಮಿತ ಹೂಡಿಕೆ; ಏನೇನು ಪ್ರಯೋಜನಗಳು?
ಎಂಟು ವರ್ಷಕ್ಕೆ ಇದು ಮೆಚ್ಯೂರ್ ಆಗುತ್ತದೆ. ಅಂದು ಚಿನ್ನದ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ನಿಮ್ಮ ಹೂಡಿಕೆ ಬೆಳೆದಿರುತ್ತದೆ. ಉದಾಹರಣೆಗೆ, ನೀವು ಗ್ರಾಮ್ಗೆ 6,199 ರೂನಂತೆ 100 ಗ್ರಾಮ್ ಚಿನ್ನಕ್ಕೆ 6,19,900 ರೂ ಹೂಡಕೆ ಮಾಡಿರುತ್ತೀರಿ. ಎಂಟು ವರ್ಷದ ಬಳಿಕ ಚಿನ್ನದ ಬೆಲೆ ಗ್ರಾಮ್ಗೆ 12,000 ರೂ ಆಗಿರುತ್ತದೆ ಎಂದು ಭಾವಿಸೋಣ. ಆಗ ನಿಮ್ಮ ಹೂಡಿಕೆಯು 12 ಲಕ್ಷ ರೂ ಆಗಿರುತ್ತದೆ.
ಇದರ ಜೊತೆಗೆ ನಿಮ್ಮ ಆರಂಭಿಕ ಹೂಡಿಕೆಯ ಮೊತ್ತಕ್ಕೆ ವಾರ್ಷಿಕ 2.50 ಪ್ರತಿಶತದ ದರದಲ್ಲಿ ಬಡ್ಡಿ ಸಿಗುತ್ತದೆ.
ಸೋವರೀನ್ ಗೋಲ್ಡ್ ಬಾಂಡ್ಗಳನ್ನು ಎಲ್ಲಾ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಲಭ್ಯ ಇರುತ್ತದೆ. ಎಸ್ಬಿಐ, ಎಚ್ಡಿಎಫ್ಸಿ, ಇಂಡಿಯನ್ ಬ್ಯಾಂಕ್ ಇತ್ಯಾದಿ ಬ್ಯಾಂಕುಗಳು ಶೆಡ್ಯೂಲ್ಡ್ ಬ್ಯಾಂಕುಗಳಾಗಿರುತ್ತವೆ. ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಸಹಕಾರಿ ಸಂಘ ಇತ್ಯಾದಿಗಳಲ್ಲಿ ಸಿಗುವುದಿಲ್ಲ.
ಕಮರ್ಷಿಯಲ್ ಬ್ಯಾಂಕುಗಳಲ್ಲಷ್ಟೇ ಅಲ್ಲದೆ, ಕೆಲ ಆಯ್ದ ಅಂಚೆ ಕಚೇರಿಗಳು, ಷೇರು ವಿನಿಮಯ ಕೇಂದ್ರಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್ನಲ್ಲಿಯೂ ಗೋಲ್ಡ್ ಬಾಂಡ್ಗಳನ್ನು ಖರೀದಿಸಬಹುದು.
ಇದನ್ನೂ ಓದಿ: Tax Matter: ವಿಚ್ಛೇದನವಾದರೆ ಪರಿಹಾರ ಹಣ ಹೇಗೆ ನಿರ್ಧರಿಸಲಾಗುತ್ತದೆ? ಹಣಕ್ಕೆ ತೆರಿಗೆ ಎಷ್ಟು ಅನ್ವಯ ಆಗುತ್ತದೆ?
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:59 am, Fri, 22 December 23