Sign In

By signing in or creating an account, you agree with Associated Broadcasting Company's Terms & Conditions and Privacy Policy.

SGB Investment: ಮ್ಯುಚುವಲ್ ಫಂಡ್​ಗಿಂತಲೂ ಲಾಭ; ಸೋವರೀನ್ ಗೋಲ್ಡ್ ಬಾಂಡ್ ಮೂಲಕ ನಿಯಮಿತ ಹೂಡಿಕೆ; ಏನೇನು ಪ್ರಯೋಜನಗಳು?

Sovereign Gold Bond Scheme Benefits: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್, ಚಿನ್ನದ ಬೆಲೆ ಆಧಾರಿತವಾಗಿ ಮಾಡುವ ಹೂಡಿಕೆ ಯೋಜನೆ. ಒಂದು ಗ್ರಾಮ್​ನಿಂದ 4 ಕಿಲೋವರೆಗೆ ಚಿನ್ನದ ಮೇಲೆ ಹೂಡಿಕೆ ಸಾಧ್ಯ. ವರ್ಷದಲ್ಲಿ ಹಲವು ಬಾರಿ ಬಾಂಡ್​ಗಳು ಬಿಡುಗಡೆ ಆಗುತ್ತವೆ. ಎಷ್ಟು ಬೇಕಾದರೂ ಬಾಂಡ್​ಗಳನ್ನು ಖರೀದಿಸಬಹುದು. ಒಂದು ಬಾಂಡ್ ಎಂಟು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಆಗಿನ ಚಿನ್ನದ ಮಾರುಕಟ್ಟೆ ಬೆಲೆಗೆ ಅನುಗುಣವಾಗಿ ನಿಮ್ಮ ಹೂಡಿಕೆ ಬೆಳೆದಿರುತ್ತದೆ.

SGB Investment: ಮ್ಯುಚುವಲ್ ಫಂಡ್​ಗಿಂತಲೂ ಲಾಭ; ಸೋವರೀನ್ ಗೋಲ್ಡ್ ಬಾಂಡ್ ಮೂಲಕ ನಿಯಮಿತ ಹೂಡಿಕೆ; ಏನೇನು ಪ್ರಯೋಜನಗಳು?
ಸೋವರೀನ್ ಗೋಲ್ಡ್ ಬಾಂಡ್​
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 21, 2023 | 6:05 PM

ಬೆಂಗಳೂರು, ಡಿಸೆಂಬರ್ 21: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ (Sovereign Gold Bond) ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ. ಚಿನ್ನದ ಮೇಲಿನ ಹೂಡಿಕೆ ಸ್ಕೀಮ್ ಇದು. ಭೌತಿಕ ಚಿನ್ನವನ್ನು ಖರೀದಿಸಲಾಗುವುದಿಲ್ಲ. ಬದಲಾಗಿ ಚಿನ್ನದ ಮಾರುಕಟ್ಟೆ ಬೆಲೆ ಆಧಾರಿತವಾಗಿ ಮಾಡಲಾಗುವ ಹೂಡಿಕೆ ಆಗಿರುತ್ತದೆ. ಆರ್​ಬಿಐ ಈ ಸೋವರೀನ್ ಬಾಂಡ್​ಗಳನ್ನು ನೀಡುತ್ತದೆ. ಬ್ಯಾಂಕುಗಳು ಸೇರಿದಂತೆ ವಿವಿಧೆಡೆ ಮೂಲಕ ಈ ಬಾಂಡ್​ಗಳನ್ನು ಖರೀದಿಸಬಹುದು. ಇದರಲ್ಲಿ ಕನಿಷ್ಠ ಹೂಡಿಕೆ 1 ಗ್ರಾಂ ಇದೆ. ಒಂದು ಹಣಕಾಸು ವರ್ಷದಲ್ಲಿ ಒಬ್ಬ ವ್ಯಕ್ತಿ 4 ಕಿಲೋವರೆಗಿನ ಚಿನ್ನದ ಮೇಲೆ ಹಣ ಹೂಡಿಕೆ ಮಾಡಬಹುದು. ಒಂದು ಬಾಂಡ್ ಎಂಟು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಮೆಚ್ಯೂರ್ ಆದಾಗ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು ಇರುತ್ತದೆ ಅದಕ್ಕೆ ಅನುಗುಣವಾಗಿ ನಿಮಗೆ ಹಣವು ರಿಟರ್ನ್ ಆಗಿ ಸಿಗುತ್ತದೆ.

ಉದಾಹರಣೆಗೆ, ಈ ಬಾರಿಯ ಗೋಲ್ಡ್ ಬಾಂಡ್ ಸರಣಿ-3ರಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 5,199 ರೂ ಎಂದು ನಿಗದಿ ಮಾಡಲಾಗಿದೆ. ನೀವು ಹತ್ತು ಗ್ರಾಮ್ ಚಿನ್ನದ ಮೇಲೆ ಹೂಡಿಕೆ ಮಾಡುತ್ತೀರಿ. ಅಂದರೆ 51,990 ರೂ ಹೂಡಿಕೆ ಮಾಡುತ್ತೀರಿ. ಎಂಟು ವರ್ಷದ ಬಳಿಕ ಚಿನ್ನದ ಬೆಲೆ 10,000 ರೂ ಆಗುತ್ತದೆ ಎಂದಿಟ್ಟುಕೊಳ್ಳಿ. ಆಗ ನಿಮ್ಮ 51,990 ರೂ ಹೂಡಿಕೆ ಹಣವು 1,00,000 ರೂ ಆಗಿರುತ್ತದೆ.

ಸೋವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನಿಂದ ನಿಯಮಿತ ಆದಾಯ ಹೇಗೆ?

ಸಾವರೀನ್ ಗೋಲ್ಡ್ ಬಾಂಡ್​ನಲ್ಲಿ ಏಕಕಾಲದಲ್ಲಿ ಮಾತ್ರ ಹೂಡಿಕೆ ಸಾಧ್ಯ. ಅಂದರೆ ಒಂದು ಬಾಂಡ್​ನಲ್ಲಿ ಒಮ್ಮೆ ಮಾತ್ರವೇ ಹೂಡಿಕೆ ಮಾಡಬಹುದು. ಆದರೆ, ಒಬ್ಬ ವ್ಯಕ್ತಿ ಎಷ್ಟು ಬೇಕಾದರೂ ಬಾಂಡ್​ಗಳನ್ನು ಖರೀದಿಸಬಹುದು.

ಇದನ್ನೂ ಓದಿ: Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್​​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?

ಹಾಗೆಯೇ, ಆರ್​ಬಿಐ ಒಂದು ವರ್ಷದಲ್ಲಿ ಸರಣಿ ರೂಪದಲ್ಲಿ ಹಲವು ಬಾರಿ ಸೋವರೀನ್ ಬಾಂಡ್​ಗಳನ್ನು ವಿತರಿಸುತ್ತದೆ. ನಿಮ್ಮ ಶಕ್ತ್ಯಾನುಸಾರ ಈ ಬಾಂಡ್​ಗಳನ್ನು ನೀವು ಖರೀದಿಸಬಹುದು. ಈ ರೀತಿಯಾಗಿ ನೀವು ಮ್ಯೂಚುವಲ್ ಫಂಡ್​ನ ಎಸ್​ಐಪಿ ರೀತಿಯಲ್ಲಿ ನಿಯಮಿತವಾಗಿ ಎಸ್​ಜಿಬಿಗಳ ಮೇಲೆ ಹೂಡಿಕೆ ಮಾಡಿದಂತಾಗುತ್ತದೆ. ಇನ್ನೂ ಅನುಕೂಲವೆಂದರೆ, ನೀವು ನಿಮ್ಮ ಶಕ್ತ್ಯಾನುಸಾರ ಹೂಡಿಕೆ ಮಾಡುವ ಅವಕಾಶ ಇರುವುದು.

ಒಂದು ವರ್ಷದಲ್ಲಿ 4 ಕಿಲೋ ಚಿನ್ನದವರೆಗೆ ಹೂಡಿಕೆ ಮಿತಿ. ಆ ಮಿತಿಯಲ್ಲಿ ಎಷ್ಟು ಬೇಕಾದರೂ ನೀವು ಇನ್ವೆಸ್ಟ್ ಮಾಡಬಹುದು. ಇವತ್ತಿನ ಚಿನ್ನದ ಬೆಲೆಯಲ್ಲಿ 4 ಕಿಲೋಗೆ 2 ಕೋಟಿ ರೂ ಆಗುತ್ತದೆ. ಅಂದರೆ ನೀವು ಒಂದು ವರ್ಷದಲ್ಲಿ 2 ಕೋಟಿ ರೂನಷ್ಟು ಹಣ ಹೂಡಿಕೆ ಮಾಡಲು ಸಾಧ್ಯ.

ಸೋವರೀನ್ ಗೋಲ್ಡ್ ಬಾಂಡ್​ನಲ್ಲಿ ನೀವು ಹೂಡಿಕೆ ಮಾಡಿದ ಹಣವು ಚಿನ್ನದ ಬೆಲೆಯಲ್ಲಿ ಆಗುವ ಹೆಚ್ಚಳಕ್ಕೆ ತಕ್ಕಂತೆ ರಿಟರ್ನ್ ತರುತ್ತದೆ. ಅದರ ಜೊತೆಗೆ ವಾರ್ಷಿಕ ಶೇ. 2.50ರ ದರದಲ್ಲಿ ಬಡ್ಡಿ ಹಣವೂ ನಿಮಗೆ ದೊರಕುತ್ತದೆ.

ಇದನ್ನೂ ಓದಿ: Investment: ಸಾವರೀನ್ ಗೋಲ್ಡ್ ಬಾಂಡ್: ಇವತ್ತಿನಿಂದ ಐದು ದಿನಗಳ ಕಾಲ ಲಭ್ಯ; ಇದನ್ನು ಖರೀದಿಸುವುದು ಹೇಗೆ?

ಮ್ಯುಚುವಲ್ ಫಂಡ್​ಗಿಂತ ಇದು ಲಾಭಕಾರಿಯಾ?

ಕೆಲ ಮ್ಯುಚುವಲ್ ಫಂಡ್​ಗಳು ವರ್ಷಕ್ಕೆ ಶೇ. 20ಕ್ಕಿಂತಲೂ ಹೆಚ್ಚು ಲಾಭ ತರುತ್ತವೆಯಾದರೂ, ಬಹುತೇಕ ಫಂಡ್​ಗಳು ಶೇ. 10 ಹಾಗೂ ಅದರೊಳಗೆಯೇ ರಿಟರ್ನ್ ಕೊಡುತ್ತವೆ. ಅದಕ್ಕೆ ಹೋಲಿಸಿದರೆ ಚಿನ್ನದ ಬೆಲೆ ವರ್ಷಕ್ಕೆ ಕನಿಷ್ಠ ಶೇ. 10ರ ದರದಲ್ಲಿ ಬೆಳೆಯುತ್ತದೆ. ಹೀಗಾಗಿ, ಮ್ಯುಚುವಲ್ ಫಂಡ್​ಗಿಂತ ಸೋವರೀನ್ ಗೋಲ್ಡ್ ಬಾಂಡ್ ಹೆಚ್ಚು ಸುರಕ್ಷಿತ ಹೂಡಿಕೆ ಎನಿಸುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ
ಸಿಎಂ ಸಿದ್ದರಾಮಯ್ಯಕ್ಕಿಂತ ಮೊದಲು ಡಿಸಿಎಂ ಶಿವಕುಮಾರ್ ದೆಹಲಿ ಪಯಣ