AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ: ಅವೈಜ್ಞಾನಿಕ ಹಂಪ್​​ಗೆ ವಿದ್ಯಾರ್ಥಿನಿ ಬಲಿ, ಮತ್ತೋರ್ವಳ ಸ್ಥಿತಿ ಗಂಭೀರ

ಹಾಸನದಲ್ಲಿ ಅವೈಜ್ಞಾನಿಕ ಸ್ಪೀಡ್ ಬ್ರೇಕರ್​​ಗೆ ವಿದ್ಯಾರ್ಥಿನಿ ಬಲಿಯಾಗಿದ್ದು, ಮತ್ತೊಬ್ಬಳು ಗಂಭೀರ ಗಾಯಗೊಂಡಿದ್ದಾಳೆ. ಸೂಚನಾ ಫಲಕಗಳಿಲ್ಲದ ಮತ್ತು ಬಣ್ಣ ಮಾಸಿದ ಹಂಪ್​ನಿಂದ ಈ ದುರ್ಘಟನೆ ಸಂಭವಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ರಸ್ತೆ ಸುರಕ್ಷತೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮತ್ತು ತಕ್ಷಣ ಹಂಪ್​​ಗಳಿಗೆ ಸೂಚನಾ ಫಲಕ ಅಳವಡಿಸಲು ಆಗ್ರಹಿಸಿದ್ದಾರೆ.

ಹಾಸನ: ಅವೈಜ್ಞಾನಿಕ ಹಂಪ್​​ಗೆ ವಿದ್ಯಾರ್ಥಿನಿ ಬಲಿ, ಮತ್ತೋರ್ವಳ ಸ್ಥಿತಿ ಗಂಭೀರ
ಮೃತ ಯುವತಿImage Credit source: Tv9 Kannada
ಮಂಜುನಾಥ ಕೆಬಿ
| Edited By: |

Updated on: Feb 23, 2026 | 12:48 PM

Share

ಹಾಸನ/ಚಾಮರಾಜನಗರ, ಫೆಬ್ರವರಿ 23: ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಹಂಪ್​​ಗಳಿಗೆ ಬಲಿ ಮುಂದುವರಿದಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಅಪಘಾತ ನಡೆದು ಯುವಕ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ ಹಾಸನದಲ್ಲಿಯೂ ಯುವತಿಯೋರ್ವಳು ಪ್ರಾಣ ಕಳೆದುಕೊಂಡಿದ್ದಾಳೆ. ದಾರಿಯಲ್ಲಿದ್ದ ಹಂಪ್ಸ್ ಕಾಣದ ಪರಿಣಾಮ ದ್ವಿಚಕ್ರ ವಾಹನ ರಸ್ತೆಗೆ ಉರುಳಿ ಪ್ರಿಯಾ (23) ಸ್ಥಳದಲ್ಲೇ ಮೃತಪಟ್ಟಿದ್ದರೆ, ಸ್ವಾತಿ(24) ಸ್ಥಿತಿ ಗಂಭೀರವಾಗಿದೆ. ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಘಟನೆ, ನಡೆದಿದ್ದು, ಗಾಯಾಳು ಸ್ವಾತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅವೈಜ್ಞಾನಿಕ ಸ್ಪೀಡ್ ಬ್ರೇಕರ್​​ಗಳನ್ನು ಹಾಕಲಾಗಿದ್ದು, ಈ ಬಗ್ಗೆ ಕನಿಷ್ಠ ಸೂಚನಾ ಫಲಕಗಳನ್ನೂ ಹಾಕಿಲ್ಲ. ಈ ರೀತಿಯ ಅವೈಜ್ಞಾನಿಕ ಹಂಪ್​​ಗಳ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಆರೋಪಿಸಿದ್ದಾರೆ. ಹಂಪ್​​ಗಳ ಮೇಲೆ ಬಿಳಿ ಬಣ್ಣದ ಪಟ್ಟಿ ಬಳಿಯಲಾಗಿತ್ತಾದರೂ ಅವು ಈಗ ಅಳಿಸಿಹೋಗಿವೆ. ಹೀಗಾಗಿ ಅವುಗಳಿಗೆ ಮತ್ತೆ ಬಣ್ಣ ಬಳಿಯುವ ಜೊತೆಗೆ ಸೂಚನಾ ಫಲಕಗಳನ್ನು ಅಳವಡಿಸಬೇಕೆಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಇದನ್ನೂ ಓದಿ: ಅಸಲಿ ಬದಲು ನಕಲಿ ಚಿನ್ನ ಇಟ್ಟು 3 ಲಕ್ಷ ರೂ. ಮೌಲ್ಯದ ಬಂಗಾರ ಕದ್ದ ಕದೀಮರು!

ಟ್ರ್ಯಾಕ್ಟರ್‌ ಪಲ್ಟಿಯಾಗಿ ಚಾಲಕ ಸಾವು

ಮಣ್ಣು ಸಾಗಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ ಪಲ್ಟಿಯಾದ ಪರಿಣಾಮ ಚಾಲಕ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಸರಗೂರು ಸಮೀಪ ನಡೆದಿದೆ. ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ರಾಜೇಶ್(25) ಮೃತ ದುರ್ದೈವಿಯಾಗಿದ್ದು, ಜಮೀನಿನ ಬಳಿಯ ಹಳ್ಳದಿಂದ ರಸ್ತೆಯತ್ತ ಬರುವಾಗ ಅಪಘಾತ ನಡೆದಿದೆ. ಚಾಲಕ ಟ್ರ್ಯಾಕ್ಟರ್‌ ಅಡಿ ಸಿಲುಕಿಕೊಂಡ ಹಿನ್ನೆಲೆ ಸ್ಥಳದಲ್ಲೇ ಕೊನೆಯುಸಿರು ಎಳೆದಿದ್ದಾರೆ. ಈ ಬಗ್ಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.