ಸಾವರೀನ್ ಗೋಲ್ಡ್ ಬಾಂಡ್ 3ನೇ ಸೀರೀಸ್; ಇವತ್ತೇ ಕೊನೆ ದಿನ; ಖರೀದಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

Sovereign Gold Bond scheme: ಸಾವರೀನ್ ಗೋಲ್ಡ್ ಬಾಂಡ್ ಯೋಜನೆಯ ಹೊಸ ಸರಣಿ ಡಿಸೆಂಬರ್ 18ಕ್ಕೆ ಬಿಡುಗಡೆ ಆಗಿದ್ದು, ಇಂದು ಡಿಸೆಂಬರ್ 22ರವರೆಗೂ ಖರೀದಿಗೆ ಕಾಲಾವಕಾಶ ಇದೆ. ಈ ಬಾರಿ ಸ್ಕೀಮ್​ನಲ್ಲಿ ಚಿನ್ನದ ಬೆಲೆಯನ್ನು ಗ್ರಾಮ್​ಗೆ 6,199 ರೂ ಎಂದು ನಿಗದಿ ಮಾಡಿದೆ. ಒಂದು ಗ್ರಾಮ್​ನಿಂದ 4 ಕಿಲೋ ಚಿನ್ನದವರೆಗೆ ಹೂಡಿಕೆ ಸಾಧ್ಯ. ಆನ್​ಲೈನ್​ನಲ್ಲಿ ಖರೀದಿಸಿ ಡಿಜಿಟಲ್ ಆಗಿ ಹಣ ಪಾವತಿಸಿದರೆ ಗ್ರಾಮ್​ಗೆ 50 ರೂ ರಿಯಾಯಿತಿ ಸಿಗುತ್ತದೆ. ಅಂದರೆ ಗ್ರಾಮ್​ಗೆ 6,149 ರುಪಾಯಿಗೆ ಸಿಗುತ್ತದೆ.

ಸಾವರೀನ್ ಗೋಲ್ಡ್ ಬಾಂಡ್ 3ನೇ ಸೀರೀಸ್; ಇವತ್ತೇ ಕೊನೆ ದಿನ; ಖರೀದಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಸೋವರೀನ್ ಗೋಲ್ಡ್ ಬಾಂಡ್ ಸ್ಕೀಮ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Dec 22, 2023 | 10:59 AM

ಬೆಂಗಳೂರು, ಡಿಸೆಂಬರ್ 22: ಈ ಹಣಕಾಸು ವರ್ಷದ (2023-24) ಮೂರನೇ ಸರಣಿಯ ಸೋವರೀನ್ ಗೋಲ್ಡ್ ಬಾಂಡ್ ಸ್ಕೀಮ್ (Sovereign Gold Bond 2023-24 Series-III) ಬಿಡುಗಡೆ ಆಗಿ ನಾಲ್ಕು ದಿನಗಳಾಗಿವೆ. ಇಂದು ಇದರ ಸಬ್​ಸ್ಕ್ರಿಪ್ಷನ್​ಗೆ ಕೊನೆಯ ದಿನವಾಗಿದೆ. ಈ ಮೂರನೇ ಟ್ರಾಂಚ್​ನಲ್ಲಿ ಆರ್​ಬಿಐ ಒಂದು ಗ್ರಾಮ್ ಚಿನ್ನಕ್ಕೆ 6,199 ರೂ ದರ ನಿಗದಿ ಮಾಡಿದೆ. ಚಿನ್ನದ ಮೇಲೆ ಹೂಡಿಕೆ ಮಾಡುವವರಿಗೆ ಸೋವರೀನ್ ಗೋಲ್ಡ್ ಬಾಂಡ್ ಹೇಳಿ ಮಾಡಿಸಿದ ಸ್ಕೀಮ್ ಆಗಿದೆ. ಬಾಂಡ್ ಖರೀದಿಸಿದವರಿಗೆ ಡಿಸೆಂಬರ್ 28ಕ್ಕೆ ಬಾಂಡ್ ವಿತರಿಸಲಾಗುತ್ತದೆ.

ಆನ್​ಲೈನ್​ನಲ್ಲಿ ಖರೀದಿ ಮಾಡಿದರೆ ಡಿಸ್ಕೌಂಟ್

ನೆಟ್​ಬ್ಯಾಂಕಿಂಗ್, ಮೊಬೈಲ್ ಆ್ಯಪ್ ಹೀಗೆ ಆನ್​ಲೈನ್​ನಲ್ಲಿ ಗೋಲ್ಡ್ ಬಾಂಡ್ ಪಡೆದು ಡಿಜಿಟಲ್ ಆಗಿ ಹಣ ಪಾವತಿ ಮಾಡಿದರೆ 50 ರೂ ಡಿಸ್ಕೌಂಟ್ ಸಿಗುತ್ತದೆ. ಅಂದರೆ ಗ್ರಾಂಗೆ 6,149 ರೂ ದರದಂತೆ ಚಿನ್ನದ ಮೇಲೆ ಇನ್ವೆಸ್ಟ್ ಮಾಡಬಹುದು.

ಸಾವರೀನ್ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಹೂಡಿಕೆಯಿಂದ ಎಷ್ಟು ಲಾಭ?

ಸೋವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನಲ್ಲಿ ನಾವು ಭೌತಿಕ ಚಿನ್ನವನ್ನು ಖರೀದಿಸಲಾಗುವುದಿಲ್ಲ. ಪ್ರಸಕ್ತ ಚಿನ್ನದ ಮಾರುಕಟ್ಟೆ ದರದ ಪ್ರಕಾರ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿ ಒಂದು ಗ್ರಾಮ್​ನಿಂದ 4 ಕಿಲೋವರೆಗೂ ಹೂಡಿಕೆ ಮಾಡಬಹುದು. ಅಂದರೆ 6,199 ರೂ ಹಣ ಕನಿಷ್ಠ ಹೂಡಿಕೆ ಆಗಿರುತ್ತದೆ. ಗರಿಷ್ಠ 2.48 ಕೋಟಿ ರೂವರೆಗೂ ಹೂಡಿಕೆ ಸಾಧ್ಯ.

ಇದನ್ನೂ ಓದಿ: SGB Investment: ಮ್ಯುಚುವಲ್ ಫಂಡ್​ಗಿಂತಲೂ ಲಾಭ; ಸೋವರೀನ್ ಗೋಲ್ಡ್ ಬಾಂಡ್ ಮೂಲಕ ನಿಯಮಿತ ಹೂಡಿಕೆ; ಏನೇನು ಪ್ರಯೋಜನಗಳು?

ಎಂಟು ವರ್ಷಕ್ಕೆ ಇದು ಮೆಚ್ಯೂರ್ ಆಗುತ್ತದೆ. ಅಂದು ಚಿನ್ನದ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ನಿಮ್ಮ ಹೂಡಿಕೆ ಬೆಳೆದಿರುತ್ತದೆ. ಉದಾಹರಣೆಗೆ, ನೀವು ಗ್ರಾಮ್​ಗೆ 6,199 ರೂನಂತೆ 100 ಗ್ರಾಮ್ ಚಿನ್ನಕ್ಕೆ 6,19,900 ರೂ ಹೂಡಕೆ ಮಾಡಿರುತ್ತೀರಿ. ಎಂಟು ವರ್ಷದ ಬಳಿಕ ಚಿನ್ನದ ಬೆಲೆ ಗ್ರಾಮ್​ಗೆ 12,000 ರೂ ಆಗಿರುತ್ತದೆ ಎಂದು ಭಾವಿಸೋಣ. ಆಗ ನಿಮ್ಮ ಹೂಡಿಕೆಯು 12 ಲಕ್ಷ ರೂ ಆಗಿರುತ್ತದೆ.

ಇದರ ಜೊತೆಗೆ ನಿಮ್ಮ ಆರಂಭಿಕ ಹೂಡಿಕೆಯ ಮೊತ್ತಕ್ಕೆ ವಾರ್ಷಿಕ 2.50 ಪ್ರತಿಶತದ ದರದಲ್ಲಿ ಬಡ್ಡಿ ಸಿಗುತ್ತದೆ.

ಸೋವರೀನ್ ಗೋಲ್ಡ್ ಬಾಂಡ್ ಸ್ಕೀಮ್ ಪಡೆಯುವುದು ಹೇಗೆ?

ಸೋವರೀನ್ ಗೋಲ್ಡ್ ಬಾಂಡ್​ಗಳನ್ನು ಎಲ್ಲಾ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳಲ್ಲಿ ಲಭ್ಯ ಇರುತ್ತದೆ. ಎಸ್​ಬಿಐ, ಎಚ್​ಡಿಎಫ್​ಸಿ, ಇಂಡಿಯನ್ ಬ್ಯಾಂಕ್ ಇತ್ಯಾದಿ ಬ್ಯಾಂಕುಗಳು ಶೆಡ್ಯೂಲ್ಡ್ ಬ್ಯಾಂಕುಗಳಾಗಿರುತ್ತವೆ. ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಸಹಕಾರಿ ಸಂಘ ಇತ್ಯಾದಿಗಳಲ್ಲಿ ಸಿಗುವುದಿಲ್ಲ.

ಕಮರ್ಷಿಯಲ್ ಬ್ಯಾಂಕುಗಳಲ್ಲಷ್ಟೇ ಅಲ್ಲದೆ, ಕೆಲ ಆಯ್ದ ಅಂಚೆ ಕಚೇರಿಗಳು, ಷೇರು ವಿನಿಮಯ ಕೇಂದ್ರಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್​ನಲ್ಲಿಯೂ ಗೋಲ್ಡ್ ಬಾಂಡ್​ಗಳನ್ನು ಖರೀದಿಸಬಹುದು.

ಇದನ್ನೂ ಓದಿ: Tax Matter: ವಿಚ್ಛೇದನವಾದರೆ ಪರಿಹಾರ ಹಣ ಹೇಗೆ ನಿರ್ಧರಿಸಲಾಗುತ್ತದೆ? ಹಣಕ್ಕೆ ತೆರಿಗೆ ಎಷ್ಟು ಅನ್ವಯ ಆಗುತ್ತದೆ?

ನೆಟ್​ಬ್ಯಾಂಕಿಂಗ್​ನಲ್ಲಿ ಎಸ್​ಜಿಬಿ ಪಡೆಯುವುದು ಹೇಗೆ?

  • ಯಾವುದೇ ಕಮರ್ಷಿಯಲ್ ಬ್ಯಾಂಕ್​ನ ನೆಟ್ ಬ್ಯಾಂಕಿಂಗ್​ಗೆ ಲಾಗಿನ್ ಆಗಿರಿ.
  • ಇ-ಸರ್ವಿಸ್ ಆಯ್ಕೆ ಮಾಡಿ, ಸಾವರೀನ್ ಗೋಲ್ಡ್ ಬಾಂಡ್ ಮೇಲೆ ಕ್ಲಿಕ್ ಮಾಡಿ.
  • ಹೊಸ ಗ್ರಾಹಕರಾದರೆ ರಿಜಿಸ್ಟರ್ ಆಯ್ಕೆ ಮಾಡಿ. ಆರ್​ಬಿಐನ ನಿಬಂಧನೆಗಳಿಗೆ ಸಮ್ಮತಿಸಿ.
  • ಎಲ್ಲಾ ಅಗತ್ಯ ವಿವರ ಭರ್ತಿ ಮಾಡಿ.
  • ಆನ್​ಲೈನ್ ರಿಜಿಸ್ಟ್ರೇಶನ್ ಫಾರ್ಮ್ ಅನ್ನು ಸಲ್ಲಿಸಿ
  • ನೊಂದಣಿ ಬಳಿಕ ಪರ್ಚೇಸ್ ಆಯ್ಕೆ ಮಾಡಿ.
  • ಎಷ್ಟು ಮೊತ್ತದ ಹೂಡಿಕೆ ಮಾಡುತ್ತೀರಿ ಎಂಬುದನ್ನು ಆರಿಸಿ, ನಾಮಿನಿ ವಿವರವನ್ನೂ ತುಂಬಿರಿ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:59 am, Fri, 22 December 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ