ಶಿವಮೊಗ್ಗ: ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಗ್ರಾಮಸ್ಥರು
ಹೊಸನಗರ ತಾಲೂಕಿನ ಕಾಡಿಗೇರಿ ಗ್ರಾಮ ರಸ್ತೆ ಸಂಪರ್ಕದಿಂದ ವಂಚಿತವಾಗಿದೆ. 90 ವರ್ಷದ ಕಲ್ಯಾಣಮ್ಮ ಅವರನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಕರೆದೊಯ್ದ ಘಟನೆ ಇತ್ತೀಚೆಗೆ ನಡೆದಿದೆ. ಇದು ಗ್ರಾಮದಲ್ಲಿನ ರಸ್ತೆ ಸಮಸ್ಯೆಯ ತೋರಿಸುತ್ತದೆ. ಅನೇಕ ಬಾರಿ ಅನಾರೋಗ್ಯದಿಂದ ಬಳಲುವವರನ್ನು ಈ ರೀತಿಯೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ತಕ್ಷಣ ರಸ್ತೆ ನಿರ್ಮಾಣ ಅಗತ್ಯವಿದೆ.
ಶಿವಮೊಗ್ಗ, ಜೂನ್ 01: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕಾಡಿಗ್ಗೇರಿ ಗ್ರಾಮಕ್ಕೆ ರಸ್ತೆ ಸಂಪರ್ಕ ಇಲ್ಲದೆ ಜನರು ಪರದಾಡುತ್ತಿದ್ದಾರೆ. ರವಿವಾರ (ಜೂ.01) ಗ್ರಾಮಸ್ಥರು ಅನಾರೋಗ್ಯಪೀಡಿತ ಓರ್ವ ವೃದ್ಧೆಯನ್ನು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಕಾಡ್ಗೇರಿ ಗ್ರಾಮ ಗುಡ್ಡಗಾಡು ಪ್ರದೇಶದಲ್ಲಿದೆ. ಈ ಗ್ರಾಮಕ್ಕೆ ಸಮರ್ಪಕ ರಸ್ತೆ ಇಲ್ಲ. ಆದ್ದರಿಂದ, ಗ್ರಾಮಸ್ಥರು ಈ ಹಿಂದೆಯೂ ಕೂಡ ಅನಾರೋಗ್ಯ ಪೀಡಿತರನ್ನು ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿದ್ದರು. ಇದೀಗ, 90 ವರ್ಷದ ಕಲ್ಯಾಣಮ್ಮ ಎಂಬುವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇವರನ್ನೂ ಕೂಡ ಗ್ರಾಮಸ್ಥರು ಡೋಲಿಯಲ್ಲಿ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Published on: Jun 01, 2025 07:37 PM