ಬ್ರಹ್ಮಪುತ್ರ ನದಿಯನ್ನು ಚೀನಾ ತಡೆದರೆ ಭಾರತಕ್ಕೆ ಎಂಥ ಹಾನಿ? ಚೀನಾದಿಂದ ಭಾರತಕ್ಕೆ ಹರಿದುಬರುವ ಬೇರೆ ನದಿಗಳ್ಯಾವುವು?
Can China weaponise Brahmaputra against India?: ಭಾರತಕ್ಕೆ ಹರಿದುಬರುವ ಬ್ರಹ್ಮಪುತ್ರ ನದಿಯನ್ನು ತಡೆಯುವುದಾಗಿ ಚೀನಾ ಪರೋಕ್ಷ ಎಚ್ಚರಿಕೆ ನೀಡಿದೆ. ನದಿಯ ಶೇ. 33ರಷ್ಟು ಹಾದಿ ಭಾರತದಲ್ಲಿ ಸಾಗುತ್ತದೆ. ಅನೇಕ ಜಲವಿದ್ಯುತ್ ಯೋಜನೆಗಳು ಈ ನದಿ ನೀರಿನಿಂದ ಕೈಗೊಳ್ಳಲಾಗಿದೆ. ಕೋಟ್ಯಂತರ ಜನರಿಗೆ ನೀರಿನ ಮೂಲವಾಗಿದೆ. ಕೃಷಿಗೂ ಇದು ಆಧಾರವಾಗಿದೆ.

ನವದೆಹಲಿ, ಜೂನ್ 1: ಭಾರತಕ್ಕೆ ಜೀವಾಳವಾಗಿರುವ ನದಿಗಳಲ್ಲೊಂದಾದ ಬ್ರಹ್ಮಪುತ್ರವನ್ನು (Brahmaputra river) ತಡೆದು ನಿಲ್ಲಿಸುವುದಾಗಿ ಚೀನಾ ಪರೋಕ್ಷವಾಗಿ ಎಚ್ಚರಿಕೆ ನೀಡಿದೆ. ಇದರೊಂದಿಗೆ, ಚೀನಾದ ದುಷ್ಟ ಬುದ್ಧಿ ಮತ್ತೊಮ್ಮೆ ಸಾಬೀತಾಗಿದೆ. ಭಾರತವು ಪಾಕಿಸ್ತಾನಕ್ಕೆ ಸಿಂಧೂ ನದಿ ಹರಿಯದಂತೆ ತಡೆದಿರುವುದಕ್ಕೆ ಪ್ರತಿಯಾಗಿ ಚೀನಾ ಕೂಡ ಭಾರತಕ್ಕೆ ಬ್ರಹ್ಮಪುತ್ರ ನದಿಯನ್ನು ತಡೆಯಲು ಎಣಿಸುತ್ತಿದೆ. ಚೀನಾದ ನೀತಿ ಸಲಹೆಗಾರರೊಬ್ಬರಾದ ಝಿಕಾಯ್ ಗಾವೋ ಈ ಸುಳಿವು ನೀಡಿದ್ದಾರೆ. ‘ನಿಮಗೆ ಏನಾಗಬಾರದೆಂದು ಬಯಸುತ್ತೀರೋ, ಅದನ್ನು ನೀವು ಬೇರೆಯವರಿಗೆ ಮಾಡಬೇಡಿ’ ಎಂದು ಅವರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬ್ರಹ್ಮಪುತ್ರ ನದಿಯ ಉಗಮ ಸ್ಥಾನ ಟಿಬೆಟ್ನಲ್ಲಿದೆ. 2,900 ಕಿಮೀ ದೂರ ಕ್ರಮಿಸುವ ಇದು ಭಾರತದಲ್ಲಿ 916 ಮತ್ತು ಬಾಂಗ್ಲಾದೇಶದಲ್ಲಿ 359 ಕಿಮೀ ಸಾಗಿ ಸಮುದ್ರ ಸೇರುತ್ತದೆ. ಟಿಬೆಟ್ನಲ್ಲಿ ಇದಕ್ಕೆ ಯಾರ್ಗುಂಗ್ ಟ್ಸಾಂಗಪೋ ಎಂದು, ಅರುಣಾಚಲದಲ್ಲಿ ಸಿಯಾಂಗ್ ಎಂದೂ ಈ ನದಿಗೆ ಹೆಸರಿದೆ. ನಾಲ್ಕು ದೇಶಗಳಿಗೆ ಜೀವಾಳವಾದ ಈ ನದಿಯ ನೀರನ್ನು ಚೀನಾ ತಡೆದು ನಿಲ್ಲಿಸಿದರೆ ಭಾರತಕ್ಕೆ ಏನು ಹಾನಿಯಾಗಬಹುದು?
ಇದನ್ನೂ ಓದಿ: ಸರ್ಕಾರದ ಈ ಕ್ರಮ ಎಚ್ಎಎಲ್ಗೆ ಕಹಿ ಎನಿಸಿದರೂ, ದೇಶದ ಭವಿಷ್ಯಕ್ಕೆ ಉತ್ತಮ: ಮಾಜಿ ವಾಯುಸೇನೆ ಮುಖ್ಯಸ್ಥರ ಅನಿಸಿಕೆ
ಬ್ರಹ್ಮಪುತ್ರ ನದಿವು ಭಾರತದಲ್ಲಿ ಕೋಟ್ಯಂತರ ಜನರಿಗೆ ಆಸರೆಯಾಗಿದೆ. ಈ ನದಿ ನೀರು ಸಾಕಷ್ಟು ಕೃಷಿ, ಕುಡಿಯುವ ನೀರು, ವಿದ್ಯುತ್ ಉತ್ಪಾದನೆಗೆ ಎಡೆ ಮಾಡಿಕೊಟ್ಟಿದೆ. ಚೀನಾ ಈ ನದಿಗೆ ತಡೆಯಾಗಿ ವಿಶ್ವದ ಅತಿದೊಡ್ಡ ಹೈಡ್ರೋಪವರ್ ಪ್ರಾಜೆಕ್ಟ್ ನಡೆಸುತ್ತಿದೆ. ನದಿ ನೀರನ್ನು ಇಷ್ಟಬಂದಂತೆ ನಿಲ್ಲಿಸುವ ಮತ್ತು ಹರಿಸಿಬಿಡುವ ಒಂದು ಸಮರ್ಥ ವ್ಯವಸ್ಥೆಯನ್ನು ಚೀನಾ ಹೊಂದಿದೆ ಎನ್ನುವ ಮಾಹಿತಿ ಇದೆ.
ಪ್ರವಾಹ ಸಂಕಷ್ಟಕ್ಕೆ ಸಿಲುಕಿಸುವ ಅಸ್ತ್ರ…
ಬಹಳ ಆತಂಕ ಸಂಗತಿ ಎಂದರೆ, ಮುಂಗಾರು ಸಮಯದಲ್ಲಿ ಚೀನಾ ದೊಡ್ಡ ಪ್ರಮಾಣದಲ್ಲಿ ನೀರನ್ನು ಭಾರತದೆಡೆ ಹರಿಸಿಬಿಟ್ಟರೆ, ಬಹುತೇಕ ಈಶಾನ್ಯ ರಾಜ್ಯಗಳು ಪ್ರವಾಹಕ್ಕೆ ಸಿಲುಕಬಹುದು. ಈ ರಾಜ್ಯಗಳ ಶೇ. 40ರಷ್ಟು ಪ್ರದೇಶಗಳು ಪ್ರವಾಹ ಸೂಕ್ಷ್ಮ ಎನಿಸಿವೆ. ಚೀನಾದಿಂದ ಹೆಚ್ಚುವರಿ ನೀರು ಬಂದು ಬಿಟ್ಟರೆ ಇವು ನೀರಿನಲ್ಲಿ ಮುಳುಗುವ ಅಪಾಯವಂತೂ ಇದೆ.
ಇದನ್ನೂ ಓದಿ: ಪಿಪಿಪಿ ಲೆಕ್ಕದ ಜಿಡಿಪಿ ಅಮೆರಿಕದ್ದು 28 ಟ್ರಿಲಿಯನ್, ಭಾರತದ್ದು 15 ಟ್ರಿಲಿಯನ್ ಡಾಲರ್; ಇದು ಯಾವ ಲೆಕ್ಕಾಚಾರ?
ಚೀನಾದಲ್ಲಿ ಹುಟ್ಟಿ ಭಾರತದಲ್ಲಿ ಹರಿಯುವ ನದಿಗಳಿವು
- ಬ್ರಹ್ಮಪುತ್ರ ನದಿ: ಟಿಬಿಟ್ನಲ್ಲಿ ಹುಟ್ಟು
- ಸಿಂಧೂ ನದಿ: ಟಿಬೆಟ್ನ ಮಾನಸರೋವರ್ನಲ್ಲಿ ಹುಟ್ಟು
- ಸಟ್ಲಜ್ ನದಿ: ಟಿಬೆಟ್ನ ರಕ್ಷಾಸ್ಥಳ್ನಲ್ಲಿ ಹುಟ್ಟು
- ಘಾಗ್ರ ನದಿ: ಟಿಬಿಟ್ನ ಮಾಪಚಚುಂಗೋದಲ್ಲಿ ಹುಟ್ಟು
- ಲೋಹಿತ್ ನದಿ: ಟಿಬೆಟ್ನ ಕಾಂಗ್ರಿ ಕಾರ್ಪೊ ರೇಂಜ್ನಲ್ಲಿ ಜನ್ಮ
- ಟೋರ್ಸಾ ನದಿ: ಟಿಬೆಟ್ನ ಚುಂಬಿ ಕಣಿವೆಯಲ್ಲಿ ಹುಟ್ಟುತ್ತದೆ
- ಮಾನಸ್ ನದಿ: ಟಿಬೆಟ್
- ನ್ಯಮಜಾಂಗ್ ಚು ನದಿ: ಟಿಬೆಟ್ನ ಟ್ಸೋನಾ ಕೌಂಟಿಯಲ್ಲಿ ಜನ್ಮ
- ಸುಬಾನಸಿರಿ ನದಿ: ಟಿಬೆಟ್ನ ಹಿಮಾಲಯದಲ್ಲಿ ಹುಟ್ಟು
- ಶಾರದಾ ಅಥವಾ ಕಾಳಿ ನದಿ: ಲಡಾಖ್-ಟಿಬೆಟ್ ಗಡಿಯ ಲಿಪು ಲೇಖ್ನಲ್ಲಿ ಜನ್ಮ
ಇವಲ್ಲಿ ಕೆಲವು ಚೀನಾ, ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಹರಿದು ಹೋಗುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




