AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fear Index: ಷೇರುಬಜಾರ್​​ನಲ್ಲಿ ಭಯದ ಸುಳಿವು ನೀಡುತ್ತೆ ಈ ಸೂಚ್ಯಂಕ; ಏನಿದು ವಿಐಎಕ್ಸ್?

India VIX in NSE Explained: ನ್ಯಾಷನಲ್ ಸ್ಟಾಕ್ ಎಕ್ಸ್​​ಚೇಂಜ್​​​ನಲ್ಲಿ ಇರುವ ವಿವಿಧ ಸೂಚ್ಯಂಕಗಳ ಸಾಲಿನಲ್ಲಿ ನೀವು ಇಂಡಿಯಾ ವಿಐಎಕ್ಸ್ ನೋಡಿರುತ್ತೀರಿ. ಇದು ಷೇರು ಮಾರುಕಟ್ಟೆಯ ಸಂಚಲನವನ್ನು ಪ್ರತಿಬಿಂಬಿಸುವ ಒಂದು ಸೂಚಿ. ಆಪ್ಷನ್ಸ್ ಟ್ರೇಡಿಂಗ್​​ನಲ್ಲಿ ಕಂಡು ಬರುವ ಟ್ರೆಂಡ್ ಇದು. ಷೇರುಗಳ ವಹಿವಾಟುಗಳು ಎಷ್ಟು ವ್ಯತ್ಯಯ ಆಗುವ ಸಾಧ್ಯತೆಯನ್ನು ಇದು ಸೂಚಿಸಬಹುದು.

Fear Index: ಷೇರುಬಜಾರ್​​ನಲ್ಲಿ ಭಯದ ಸುಳಿವು ನೀಡುತ್ತೆ ಈ ಸೂಚ್ಯಂಕ; ಏನಿದು ವಿಐಎಕ್ಸ್?
ಷೇರುಮಾರುಕಟ್ಟೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 01, 2025 | 7:35 PM

Share

ನವದೆಹಲಿ, ಮೇ 28: ನೀವು ಷೇರುಮಾರುಕಟ್ಟೆಯ ವಿವಿಧ ಸೂಚ್ಯಂಕಗಳನ್ನು ಗಮನಿಸಿದರೆ ವಿಐಎಕ್ಸ್ ಇಂಡೆಕ್ಸ್ (VIX index) ಕಂಡಿರುತ್ತೀರಿ. ಎನ್​​ಎಸ್​​ಇನಲ್ಲಿರುವ ಹಲವು ಇಂಡೆಕ್ಸ್​​​ಗಳಲ್ಲಿ ವಿಐಎಕ್ಸ್ ಒಂದು. ಷೇರುಪೇಟೆಯ ಇಂಡೆಕ್ಸ್​​ಗಳಲ್ಲಿ ನೀವು ನಿರ್ದಿಷ್ಟ ಕ್ಷೇತ್ರಕ್ಕೆ ಸಂಬಂಧಿಸಿದ ಆಯ್ದ ಕಂಪನಿಗಳ ಷೇರುಗಳ ಲಿಸ್ಟ್ ಇರುತ್ತದೆ. ಆದರೆ, ವಿಐಎಕ್ಸ್​​ನಲ್ಲಿ ಭಯ ಕಾಣುತ್ತದೆ. ಅಂತೆಯೇ, ಇದು ಮಾರುಕಟ್ಟೆಯಲ್ಲಿರುವ ಭಯವನ್ನು ಗ್ರಹಿಸಲು ನೆರವಾಗಬಲ್ಲ ಇಂಡೆಕ್ಸ್.

ವಿಐಎಕ್ಸ್ ಎಂದರೇನು?

ವಿಐಎಕ್ಸ್ ಎಂದರೆ ವೊಲಟಾಲಿಟಿ ಇಂಡೆಕ್ಸ್. ಷೇರುಮಾರುಕಟ್ಟೆಯಲ್ಲಿನ ಸಂಭಾವ್ಯ ಏರಿಳಿತವನ್ನು ಇದು ವ್ಯಕ್ತಪಡಿಸುತ್ತದೆ. ಮುಂದಿನ 30 ದಿನಗಳಲ್ಲಿ ಮಾರುಕಟ್ಟೆಯ ಏರಿಳಿತ ಹೇಗಿರುತ್ತೆ ಎಂಬುದರ ಸೂಚಿಯನ್ನು ಇಲ್ಲಿ ಕಾಣಬಹುದು. ವಿಐಎಕ್ಸ್​​ಗೆ ನಿಫ್ಟಿ ಇಂಡೆಕ್ಸ್ ಆಪ್ಷನ್ ದರಗಳಲ್ಲಿನ ಸಂಚಲನವೇ ಆಧಾರವಾಗಿರುತ್ತದೆ.

ಎಫ್ ಅಂಡ್ ಒ ಟ್ರೇಡಿಂಗ್ ಮಾಡಿದವರಿಗೆ ಆಪ್ಷನ್ಸ್ ಟ್ರೇಡಿಂಗ್ ತಿಳಿದಿರಬಹುದು. ಎನ್​​ಎಸ್​​ಇನಲ್ಲಿ ನಿಫ್ಟಿ ಆಪ್ಷನ್ಸ್​​ಗೆ ಸಿಗುವ ಆರ್ಡರ್ ಬುಕ್​ನ ಲೆಕ್ಕಾಚಾರವು ವಿಐಎಕ್ಸ್​​ನಲ್ಲಿ ಇರುತ್ತದೆ. ನಿಫ್ಟಿ50 ಸೂಚ್ಯಂಕದಲ್ಲಿ ಎಷ್ಟರಮಟ್ಟಿಗೆ ಏರಿಳಿತ ಆಗಬಹುದು ಎಂಬುದನ್ನು ಇದರಿಂದ ಗ್ರಹಿಸಬಹುದು.

ಇದನ್ನೂ ಓದಿ: ಬ್ರಹ್ಮಪುತ್ರ ನದಿಯನ್ನು ಚೀನಾ ತಡೆದರೆ ಭಾರತಕ್ಕೆ ಎಂಥ ಹಾನಿ? ಚೀನಾದಿಂದ ಭಾರತಕ್ಕೆ ಹರಿದುಬರುವ ಬೇರೆ ನದಿಗಳ್ಯಾವುವು?

ನಿಫ್ಟಿ ಆಪ್ಷನ್ಸ್ ಟ್ರೇಡಿಂಗ್​​​ನಲ್ಲಿ ಪುಟ್ ಆಪ್ಷನ್ಸ್ ಎಂಬುದಿರುತ್ತದೆ. ನಷ್ಟದ ಸಂಭಾವ್ಯತೆ ಇದ್ದಾಗ ಟ್ರೇಡರ್​​​ಗಳು ಈ ಪುಟ್ ಆಪ್ಷನ್ಸ್ ಬಳಸುತ್ತಾರೆ. ಇದು ಹೆಚ್ಚಾದಾಗ ಆಪ್ಷನ್ ಪ್ರೀಮಿಯಮ್ ಕೂಡ ಹೆಚ್ಚಾಗುತ್ತದೆ. ಅದರ ಪರಿಣಾಮವಾಗಿ ವಿಐಎಕ್ಸ್ ಕೂಡ ಹೆಚ್ಚುತ್ತದೆ.

ವ್ಯಾಪಾರ ವಹಿವಾಟು, ರಾಜಕೀಯ, ಆರ್ಥಿಕ ಸ್ಥಿತಿಗತಿಯನ್ನು ಬದಲಾಯಿಸಬಲ್ಲಂತಹ ಯಾವುದೇ ವಿದ್ಯಮಾನ ನಡೆದರೂ ವಿಐಎಕ್ಸ್ ಇಂಡೆಕ್ಸ್ ಏರುವ ಟ್ರೆಂಡ್ ಇರುತ್ತದೆ. ವಿಐಎಕ್ಸ್ ಇಂಡೆಕ್ಸ್ ಏರಿದರೆ ಸಾಮಾನ್ಯವಾಗಿ ಷೇರುಪೇಟೆ ಕುಸಿಯಬಹುದು ಎನ್ನುವ ಅಂದಾಜು ಇರುತ್ತದೆ. ಹಾಗಂತ ಅದೇ ಆಗಬೇಕೆಂದಿಲ್ಲ. ವಿಐಎಕ್ಸ್ ಹೆಚ್ಚಿನ ಮಟ್ಟದಲ್ಲಿ ಇದ್ದಾಗ ಮಾರುಕಟ್ಟೆಯಲ್ಲಿ ಏರಿಳಿತದ ಸಾಧ್ಯತೆ ಹೆಚ್ಚಿರುತ್ತದೆ ಎಂಬುದು ನಿಜವಾದ ಸಂಗತಿ.

ಇದನ್ನೂ ಓದಿ: ಬಾಲಿವುಡ್ ನಟ ಅರ್ಷದ್ ವಾರ್ಸಿ ಸೇರಿ 59 ಮಂದಿಗೆ ಷೇರುಬಜಾರು ನಿರ್ಬಂಧ; ಕಾರಣವೇನು? ಇಲ್ಲಿದೆ ಡೀಟೇಲ್ಸ್

ವಿಐಎಕ್ಸ್ ಮಟ್ಟ ಹಾಗೂ ಅದು ನೀಡುವ ಸೂಚನೆ

  • 10-15: ಸ್ಥಿರತೆ ಇರುತ್ತದೆ. ಷೇರುಬೆಲೆ ಸಹಜವಾಗಿ ವರ್ತಿಸುತ್ತದೆ.
  • 15-25: ಮಧ್ಯಮ ಮಟ್ಟದ ಮಾರುಕಟ್ಟೆ ಏರಿಳಿತ ಕಾಣಬಹುದು.
  • 25ಕ್ಕಿಂತ ಹೆಚ್ಚು: ತೀವ್ರತರವಾದ ಏರಿಳಿತ ಸಾಧ್ಯತೆಯನ್ನು ಇದು ಸೂಚಿಸುತ್ತದೆ. ನಿಫ್ಟಿ ಸೂಚ್ಯಂಕಗಳು ತೀವ್ರವಾಗಿ ಏರಲೂ ಬಹುದು, ಅಥವಾ ಕುಸಿಯಲೂ ಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ