AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮ್ಮ ಕೆಫೆಟೇರಿಯಾಗಳಲ್ಲಿ ಆರೋಗ್ಯಕರ ಬದಲಾವಣೆಗಳನ್ನು ತರಲು ಮುಂದಾದ ಬೆಂಗಳೂರಿನ ಐಟಿ ಕಂಪನಿಗಳು

ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರಪದ್ಧತಿಗಳ ಕಾರಣ ಜನರಲ್ಲಿ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ಕೂಡಾ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಕಂಪೆನಿಯ ಉದ್ಯೋಗಿಗಳ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಗಳನ್ನು ನೀಡಬೇಕು ಎನ್ನುವ ಸಲುವಾಗಿ ಭಾರತದ ಹೆಚ್ಚಿನ ಐಟಿ ಕಂಪನಿಗಳು ತಮ್ಮ ಕೆಫೆಟೇರಿಯಾಗಳಲ್ಲಿ ಆರೋಗ್ಯಕರ ಬದಲಾವಣೆಗಳನ್ನು ಜಾರಿಗೆ ತಂದಿವೆ. ಹೌದು ಒಂದಷ್ಟು ಕಂಪೆನಿಗಳು ಉದ್ಯೋಗಿಗಳ ಆರೋಗ್ಯದ ದೃಷ್ಟಿಯಿಂದ ಎಣ್ಣೆಮುಕ್ತ, ಪ್ರೋಟೀನ್‌ ಭರಿತ ಆಹಾರಗಳನ್ನು ಒದಗಿಸುತ್ತಿದೆ.

ತಮ್ಮ ಕೆಫೆಟೇರಿಯಾಗಳಲ್ಲಿ ಆರೋಗ್ಯಕರ ಬದಲಾವಣೆಗಳನ್ನು ತರಲು ಮುಂದಾದ ಬೆಂಗಳೂರಿನ ಐಟಿ ಕಂಪನಿಗಳು
ಸಾಂದರ್ಭಿಕ ಚಿತ್ರ Image Credit source: Google
ಮಾಲಾಶ್ರೀ ಅಂಚನ್​
|

Updated on: Jun 01, 2025 | 8:24 PM

Share

ಆರೋಗ್ಯಕ್ಕೆ ಆಹಾರ ಕೂಡಾ ಕೀಲಿ ಕೈ. ಆದರೆ ಇಂದಿನ ದಿನಗಳಲ್ಲಿ ಜನ ಆರೋಗ್ಯಕರ ಆಹಾರವನ್ನು (Healthy food) ಸೇವನೆ ಮಾಡುವುದಕ್ಕಿಂತ ಹೆಚ್ಚಾಗಿ ಹೊರಗಡೆ ಸಿಗುವ ಎಣ್ಣೆಯುಕ್ತ, ಅನಾರೋಗ್ಯಕ ಆಹಾರವನ್ನು ಸೇವಿಸೋದೇ ಹೆಚ್ಚಾಗಿದೆ. ಇದರಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತಿವೆ. ಈ ನಿಟ್ಟಿನಲ್ಲಿ ಉದ್ಯೋಗಿಗಳಲ್ಲಿಯೂ ಕೂಡಾ ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿರುವ ಕಾರಣ ಹೆಚ್ಚಿನ ಭಾರತೀಯ ಐಟಿ ಕಂಪೆನಿಗಳು ತಮ್ಮ ಕೆಫೆಟೇರಿಯಾಗಳಲ್ಲಿ ಆರೋಗ್ಯಕರ ಆಹಾರಗಳನ್ನು ಉದ್ಯೋಗಿಗಳಿಗೆ (Corporate cafeterias’ menus undergo a healthy version) ಪೂರೈಸಲು ಮುಂದಾಗಿದೆ. ಈಗಾಗಲೇ ಒಂದಷ್ಟು ಕಂಪನಿಗಳು ಉದ್ಯೋಗಿಗಳಿಗೆ ಪ್ರೋಟೀನ್‌ ಭರಿತ, ಎಣ್ಣೆ ಮುಕ್ತ, ಕಡಿಮೆ ಮಸಾಲೆ ಪದಾರ್ಥಗಳನ್ನು ಹೊಂದಿರುವ ಮನೆ ಊಟದ ಶೈಲಿಯ ಆಹಾರವನ್ನು ಒದಗಿಸುತ್ತಿದ್ದು, ಭಾರತೀಯ ಕಾರ್ಪೋರೇಟ್‌ ಕಂಪನಿಗಳ ಕೆಫೆಟೇರಿಯಾಗಳಲ್ಲಿ ಆರೋಗ್ಯ ಕ್ರಾಂತಿ ಮೌನವಾಗಿ ವ್ಯಾಪಿಸುತ್ತಿದೆ.

ಐಟಿ ಕಂಪನಿಗಳ ಕೆಫೆಟೇರಿಯಾಗಳಲ್ಲಿ ಮೌನವಾಗಿ ವ್ಯಾಪಿಸುತ್ತಿರುವ ಆರೋಗ್ಯ ಕ್ರಾಂತಿ:

ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳ ಹೆಚ್ಚುತ್ತಿರುವ ಪ್ರವೃತ್ತಿಯಿಂದಾಗಿ ಉದ್ಯೋಗಿಗಳು ಸಹ  ಹೆಚ್ಚು ಆರೋಗ್ಯ ಪ್ರಜ್ಞೆ ಹೊಂದುತ್ತಿರುವುದರಿಂದ ಭಾರತೀಯ ಐಟಿ ಕಂಪನಿಗಳ ಕೆಫೆಟೇರಿಯಾಗಳಲ್ಲಿ ಆರೋಗ್ಯ ಕ್ರಾಂತಿ ಮೌನವಾಗಿ ವ್ಯಾಪಿಸುತ್ತಿದೆ . ಪ್ರೋಟೀನ್-ಭರಿತ ಊಟಗಳು, ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುವ ಆಹಾರ, ಸಸ್ಯಾಹಾರಿ ಆಹಾರ, ಗ್ಲುಟನ್-ಮುಕ್ತ ಪರ್ಯಾಯಗಳು, ಕಡಿಮೆ ಎಣ್ಣೆ ಮತ್ತು ಕಡಿಮೆ ಮಸಾಲೆಗಳನ್ನು ಹೊಂದಿರುವ ಮನೆಯೂಟಂದತಹ  ಆಹಾರವನ್ನು ಒದಗಿಸುತ್ತಿವೆ.

ಕ್ಯಾಪ್‌ಜೆಮಿನಿ, ಹಿಂದೂಸ್ತಾನ್ ಯೂನಿಲಿವರ್, ಲಾರ್ಸೆನ್ & ಟೂಬ್ರೊ, ಆಕ್ಸೆಂಚರ್, ರೇಜರ್‌ಪೇ ಮತ್ತು ಮಿಂತ್ರಾ ಮುಂತಾದ ಕಂಪನಿಗಳು ತಮ್ಮ ಕೆಲಸದ ಸ್ಥಳಗಳಲ್ಲಿ ಆರೋಗ್ಯಕರ ಆಹಾರ , ಆಹಾರ ಸಾಕ್ಷರತೆ ಉತ್ತೇಜಿಸಲು ಆರೋಗ್ಯಕರ ಕ್ರಮಗಳನ್ನು ಪ್ರಾರಂಭಿಸಿವೆ. ʼಕಾರ್ಪೊರೇಟ್‌ ಕಂಪನಿಗಳು ಕಡಿಮೆ ಸಂಸ್ಕರಿಸಿದ ಸಕ್ಕರೆ, ಸ್ಯಾಚುರೇಟೆಡ್ ಕೊಬ್ಬು ಹೊಂದಿರುವ ಆಹಾರ, ಉತ್ತಮ ಜಲಸಂಚಯನ ಆಯ್ಕೆಗಳು ಮತ್ತು ಪೋಷಕಾಂಶಗಳಿಂದ ಸಮೃದ್ಧವಾದ ಹಾಗೂ ದೇಹಕ್ಕೆ  ಚೈತನ್ಯ ನೀಡುವ ಆಹಾರಗಳನ್ನು ಆರಿಸಿಕೊಳ್ಳುತ್ತಿವೆ. ಇನ್ನೂ ಕೆಲವು ಕಂಪನಿಗಳು ಉದ್ಯೋಗಿಗಳ ಯೋಗಕ್ಷೇಮ ಕೌಂಟರ್‌ಗಳನ್ನು ಸಹ ಸ್ಥಾಪಿಸುತ್ತಿವೆʼ ಎಂದು ಕಂಪಾಸ್ ಗ್ರೂಪ್ ಮತ್ತು ರಾಸೆನ್ಸ್‌ನಂತಹ ಕಂಪನಿಗಳ ಆಹಾರ ಸೇವಾ ಪೂರೈಕೆದಾರರು ಹೇಳುತ್ತಾರೆ.

ಇದನ್ನೂ ಓದಿ
Image
ರಾಜ್ಯದಲ್ಲಿ ಕೊರೊನಾ ಭೀತಿ: ಆರೋಗ್ಯ ಇಲಾಖೆಯಿಂದ ಪ್ರಮುಖ ಸೂಚನೆ
Image
ತಂಬಾಕು ತ್ಯಜಿಸುವುದರಿಂದ 20 ನಿಮಿಷದಿಂದ 20 ವರ್ಷದವರಗೆ ಆರೋಗ್ಯವಾಗಿರಬಹುದು
Image
ಕೂದಲು ಉದುರುವುದನ್ನು ತಡೆಯಲು ರಾತ್ರಿ ಸಮಯದಲ್ಲಿ ಈ ರೀತಿ ಮಾಡಿ
Image
ಕುತ್ತಿಗೆ ತೂಗು ಹಾಕಿ ವ್ಯಾಯಾಮ ಮಾಡಿದ್ರೆ ನಿದ್ರಾಹೀನತೆ ಸಮಸ್ಯೆಗೆ ಪರಿಹಾರ

“ಆರೋಗ್ಯಕರ ಆಹಾರ ಆಯ್ಕೆಗಳಿಗೆ ಆದ್ಯತೆ ನೀಡುವ ಗ್ರಾಹಕರಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ನಮ್ಮ ಗ್ರಾಹಕರಲ್ಲಿ 40% ಕ್ಕಿಂತ ಹೆಚ್ಚು ಜನರು ಆರೋಗ್ಯಕರ ಮೆನು ರೂಪಾಂತರಗಳನ್ನು ಆಯ್ಕೆ ಮಾಡುತ್ತಿದ್ದಾರೆ” ಎಂದು ಕಂಪಾಸ್ ಗ್ರೂಪ್ ಇಂಡಿಯಾದ ಮುಖ್ಯ ಬಾಣಸಿಗ ಅರ್ಜ್ಯೋ ಬ್ಯಾನರ್ಜಿ ದಿ ಎಕನಾಮಿಕ್ಸ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.  “ಕೆಲಸದ ಸ್ಥಳದಲ್ಲಿ ಸಣ್ಣ ಪೌಷ್ಠಿಕಾಂಶದ ಬದಲಾವಣೆಗಳು ಉದ್ಯೋಗಿಗಳ ಉತ್ಪಾದಕತೆಯನ್ನು ಹೆಚ್ಚಿಸಬಹುದು, ಶಕ್ತಿಯ ಮಟ್ಟವನ್ನು ಸುಧಾರಿಸಬಹುದು ಮತ್ತು ಉದ್ಯೋಗಿಗಳು ಕೆಲಸಕ್ಕೆ ರಜೆ ಹಾಕುವುದನ್ನು ಕಡಿಮೆ ಮಾಡಬಹುದು ಎಂಬ ನಂಬಿಕೆಯ ಮೇಲೆ ಈ ಯೋಜನೆಗಳನ್ನು  ನಿರ್ಮಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಭೀತಿ: ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಪ್ರಮುಖ ಸೂಚನೆ

ಆರೋಗ್ಯಕರ ಬದಲಾವಣೆಗಳು:

ಐಟಿ ಕಂಪೆನಿಯ ಕೆಫೆಟೇರಿಯಾಗಳಲ್ಲಿ ಸಿಹಿತಿಂಡಿಗಳನ್ನು ಬೆಲ್ಲ, ಖರ್ಜೂರ ಮತ್ತು ಹಣ್ಣುಗಳಿಂದ ತಯಾರಿಸಲಾಗುತ್ತದೆ, ಮತ್ತು  ಬಿರಿಯಾನಿ, ದೋಸೆ ಮತ್ತು ಪುಲಾವ್‌ನಂತಹ ಭಕ್ಷ್ಯಗಳನ್ನು ರಾಗಿ ಮತ್ತು ಕ್ವಿನೋವಾದಿಂದ ಆರೋಗ್ಯಕರ ರೀತಿಯಲ್ಲಿ ತಯಾರಿಸಲಾಗುತ್ತಿದೆ.

ಕ್ಯಾಪ್ಜೆಮಿನಿ (Capgemini) ಕಂಪೆನಿಯಲ್ಲಿ ಆಹಾರ ಆರ್ಡರ್ ಮಾಡುವ ಅಪ್ಲಿಕೇಶನ್‌ನಲ್ಲಿ ಕ್ಯಾಲೋರಿ ಮಾಹಿತಿಯನ್ನು ಕೂಡ ಒದಗಿಸಲಾಗಿದೆ. ರೇಜರ್‌ಪೇ (Razorpay) ಕಂಪೆನಿಯಲ್ಲಿ ಉದ್ಯೋಗಿಗಳ ಆರೋಗ್ಯದ ದೃಷ್ಟಿಯಿಂದ  ಮಣಿಪಾಲ್ ಆಸ್ಪತ್ರೆಗಳ ಪೌಷ್ಟಿಕತಜ್ಞರು ಮತ್ತು ಆಹಾರ ತಜ್ಞರು ಸಾಪ್ತಾಹಿಕ ಆಹಾರ ಯೋಜನೆಗಳನ್ನು ನಿರ್ವಹಿಸುತ್ತಿದ್ದಾರೆ. ಇನ್ನೂ L&T ನಂತಹ  ಕಂಪನಿಗಳು ಸಹ ಪ್ರಮುಖ ಕಚೇರಿ ಸ್ಥಳಗಳಲ್ಲಿ ಆಹಾರ-ಆಹಾರ ಕೌಂಟರ್‌ಗಳನ್ನು ತೆರೆದಿವೆ.

ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಆರೋಗ್ಯ ಕಾಳಜಿಗಳು ಆರೋಗ್ಯಕರ ಬದಲಾವಣೆಗೆ ಉತ್ತೇಜನ ನೀಡುತ್ತಿವೆ. L&T ಯಲ್ಲಿ, ವಾರ್ಷಿಕ ಆರೋಗ್ಯ ತಪಾಸಣೆ ದತ್ತಾಂಶವು ಹೆಚ್ಚಿನ ಕೊಲೆಸ್ಟ್ರಾಲ್, ಬೊಜ್ಜು ಮತ್ತು ಮಧುಮೇಹದಂತಹ ಜೀವನಶೈಲಿ-ಸಂಬಂಧಿತ ಕಾಯಿಲೆಗಳ ಏರಿಕೆಯನ್ನು ಬಹಿರಂಗಪಡಿಸಿದೆ. ಇದನ್ನು ಎದುರಿಸಲು ಹಾಗೂ ತಡೆಗಟ್ಟಲು ಕಂಪನಿಗಳು  ಆರೋಗ್ಯಕರ ವಿಧಾನವನ್ನು ಅಳವಡಿಸಿಕೊಂಡಿವೆ ಜೊತೆಗೆ  ಪೌಷ್ಟಿಕ ಆಹಾರಗಳು  ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು L&T ಯ ವೈದ್ಯಕೀಯ ಸೇವೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಮುಖ್ಯಸ್ಥ ಡಾ. ದಿವ್ಯಾಂಗ್ ಶಾ ದಿ ಎಕನಾಮಿಕ್‌ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಹೀಗೆ ಹೆಚ್ಚಿನ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳ ದೃಷ್ಟಿಯಿಂದ ಕೆಫೆಟೇರಿಯಾಗಳಲ್ಲಿ ಆರೋಗ್ಯಕರ ಆಹಾರಗಳನ್ನು ಒದಗಿಸುತ್ತಿವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ