Investment: ಸಾವರೀನ್ ಗೋಲ್ಡ್ ಬಾಂಡ್: ಇವತ್ತಿನಿಂದ ಐದು ದಿನಗಳ ಕಾಲ ಲಭ್ಯ; ಇದನ್ನು ಖರೀದಿಸುವುದು ಹೇಗೆ?

Sovereign Gold Bond Scheme: ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನ ಹೊಸ ಸರಣಿ ಇವತ್ತಿನಿಂದ ಡಿಸೆಂಬರ್ 22ರವರೆಗೂ ಮಾರಾಟಕ್ಕೆ ಲಭ್ಯ ಇದೆ. ಗ್ರಾಮ್​ಗೆ 6,199 ರೂನಂತೆ 4 ಕಿಲೋವರೆಗೂ ಚಿನ್ನದ ಮೇಲೆ ಹೂಡಿಕೆ ಮಾಡಬಹುದು. 8 ವರ್ಷಕ್ಕೆ ಈ ಸ್ಕೀಮ್ ಮೆಚ್ಯೂರ್ ಆಗಲಿದ್ದು, ಅಂದಿನ ಚಿನ್ನದ ಮಾರುಕಟ್ಟೆ ಬೆಲೆಯ ಪ್ರಕಾರ ನಿಮಗೆ ರಿಟರ್ನ್ ಸಿಗುತ್ತದೆ.

Investment: ಸಾವರೀನ್ ಗೋಲ್ಡ್ ಬಾಂಡ್: ಇವತ್ತಿನಿಂದ ಐದು ದಿನಗಳ ಕಾಲ ಲಭ್ಯ; ಇದನ್ನು ಖರೀದಿಸುವುದು ಹೇಗೆ?
ಸೋವರೀನ್ ಗೋಲ್ಡ್ ಬಾಂಡ್
Follow us
|

Updated on: Dec 18, 2023 | 11:36 AM

ನವದೆಹಲಿ, ಡಿಸೆಂಬರ್ 18: ಆರ್​ಬಿಐ ರೂಪಿಸಿರುವ ಸೋವರೀನ್ ಗೋಲ್ಡ್ ಬಾಂಡ್ ಸ್ಕೀಮ್​ನ 2023-24ರ ವರ್ಷದ ಮೂರನೇ ಸರಣಿ (Sovereign Gold Bond Series III) ಇಂದು ಆರಂಭಗೊಂಡಿದೆ. ಡಿಸೆಂಬರ್ 22ರವರೆಗೂ ಇರುವ ಈ ಆಫರ್​ನಲ್ಲಿ ಒಂದು ಗ್ರಾಮ್ ಚಿನ್ನಕ್ಕೆ 6,199 ರೂ ಬೆಲೆಯಂತೆ ಹೂಡಿಕೆ ಮಾಡಬಹುದು. ಎಂಟು ವರ್ಷಕ್ಕೆ ಹೂಡಿಕೆ ಮೆಚ್ಯೂರ್ ಆಗುತ್ತದೆ. ಅಂದಿನ ಮಾರುಕಟ್ಟೆಯ ಬೆಲೆಯ ಪ್ರಕಾರ ನಿಮ್ಮ ರಿಟರ್ನ್ ಅವಲಂಬಿತವಾಗಿರುತ್ತದೆ. ಬಾಂಡ್ ಖರೀದಿ ಮಾಡಿದ ಬಳಿಕ ಡಿಸೆಂಬರ್ 28ಕ್ಕೆ ಬಾಂಡ್ ವಿತರಣೆ ಮಾಡಲಾಗುತ್ತದೆ. ಇನ್ನು, ಈ ಹಣಕಾಸು ವರ್ಷದಲ್ಲಿ ಕೊನೆಯ ಸರಣಿಯ ಗೋಲ್ಡ್ ಬಾಂಡ್​ಗಳು 2024ರ ಫೆಬ್ರುವರಿ 12ರಿಂದ 16ವರವರೆಗೂ ಖರೀದಿಗೆ ಲಭ್ಯ ಇರಲಿವೆ.

ಸಾವರೀನ್ ಗೋಲ್ಡ್ ಬಾಂಡ್​ಗಳನ್ನು ಖರೀದಿಸುವುದು ಹೇಗೆ?

ಆರ್​ಬಿಐ ರೂಪಿಸಿರುವ ಸಾವರೀನ್ ಗೋಲ್ಡ್ ಬಾಂಡ್​ಗಳನ್ನು ವಿವಿಧ ಕಡೆ ಖರೀದಿ ಮಾಡಲು ಅವಕಾಶ ಇದೆ. ಬ್ಯಾಂಕು, ಅಂಚೆ ಕಚೇರಿ, ಸ್ಟಾಕ್ ಎಕ್ಸ್​ಚೇಂಜ್​ಗಳಲ್ಲಿ ಇದನ್ನು ಪಡೆಯಬಹುದು. ರಾಷ್ಟ್ರೀಕೃತ ಬ್ಯಾಂಕುಗಳು, ಶೆಡ್ಯೂಲ್ಡ್ ಪ್ರೈವೇಟ್ ಬ್ಯಾಂಕುಗಳು, ಶೆಡ್ಯೂಲ್ಡ್ ಫಾರೀನ್ ಬ್ಯಾಂಕುಗಳು, ನಿಗದಿತ ಅಂಚೆ ಕಚೇರಿಗಳು, ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್, ಅಧಿಕೃತ ಷೇರು ವಿನಿಮಯ ಕೇಂದ್ರಗಳಿಗೆ ಸೋವರೀನ್ ಬಾಂಡ್ ವಿತರಿಸಲು ಅನುಮತಿಸಲಾಗಿದೆ.

ಇದನ್ನೂ ಓದಿ: Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್​​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?

ಬ್ಯಾಂಕುಗಳಲ್ಲಿ ನೀವು ಕಚೇರಿಗೆ ಹೋಗಿ ಗೋಲ್ಡ್ ಬಾಂಡ್​ಗೆ ಅರ್ಜಿ ಸಲ್ಲಿಸಬಹುದು. ಅಥವಾ ಬ್ಯಾಂಕ್​ನ ನೆಟ್​ಬ್ಯಾಂಕಿಂಗ್ ಸಿಸ್ಟಂಗೆ ಲಾಗಿನ್ ಆಗಿ ಅಲ್ಲಿ ಅರ್ಜಿ ಸಲ್ಲಿಸಬಹುದು. ಆನ್​ಲೈನ್​ನಲ್ಲಿ ಎಸ್​ಜಿಬಿ ಪಡೆದರೆ ಗ್ರಾಮ್​ಗೆ 50 ರೂ ಡಿಸ್ಕೌಂಟ್ ಸಿಗುತ್ತದೆ. ಅಂದರೆ ಈಗ ಆಫರ್ ಇರುವ 6,199 ರೂನಲ್ಲಿ 50 ರೂ ಡಿಸ್ಕೌಂಟ್ ಸಿಗುತ್ತದೆ. ಅಂದರೆ 6,149 ರುಪಾಯಿಯಂತೆ ನೀವು ಚಿನ್ನದ ಮೇಲೆ ಹೂಡಿಕೆ ಮಾಡಬಹುದು.

ಸೋವರೀನ್ ಗೋಲ್ಡ್ ಬಾಂಡ್ ವಿಶೇಷತೆಗಳೇನು?

  • ಈ ಸ್ಕೀಮ್​ನಲ್ಲಿ ಕನಿಷ್ಠ ಹೂಡಿಕೆ 1 ಗ್ರಾಮ್ ಚಿನ್ನವಾಗಿದೆ.
  • ಒಬ್ಬ ವ್ಯಕ್ತಿ 4 ಕಿಲೋ ಚಿನ್ನದವರೆಗೆ ಹೂಡಿಕೆ ಮಾಡಬಹುದು. ಚಾರಿಟಿ ಸಂಸ್ಥೆಯಾದರೆ 20 ಕಿಲೋವರೆಗೆ ಹೂಡಿಕೆ ಮಾಡಬಹುದು.
  • ಸಾವರೀನ್ ಗೋಲ್ಡ್ ಬಾಂಡ್ ಯೋಜನೆ 8 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಎಂಟು ವರ್ಷದ ಬಳಿಕ ಚಿನ್ನದ ಬೆಲೆ ಎಷ್ಟು ಹೆಚ್ಚಾಗಿರುತ್ತದೋ ಅಷ್ಟು ಹಣ ನಿಮಗೆ ರಿಟರ್ನ್ ಸಿಗುತ್ತದೆ.
  • ನಿಮ್ಮ ಹೂಡಿಕೆಗೆ ವಾರ್ಷಿಕ ಶೇ. 2.50ರಷ್ಟು ದರದಲ್ಲಿ ಬಡ್ಡಿ ಆದಾಯ ನಿಮಗೆ ಸಿಗುತ್ತದೆ.
  • ಈ ಸ್ಕೀಮ್​ನಲ್ಲಿ ಪ್ರೀಮೆಚ್ಯೂರ್ ಆಗಿ ಹಣ ಹಿಂಪಡೆಯದಿದ್ದರೆ ಕ್ಯಾಪಿಟಲ್ ಗೈನ್ ಟ್ಯಾಕ್ಸ್ ಅನ್ವಯ ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ