ಎಸ್ಐಪಿ ಬಗ್ಗೆ ಟಿವಿ9 ಕನ್ನಡದಲ್ಲಿ ಹಿಂದೆಲ್ಲ ಹಲವು ಬಾರಿ ಬರೆದಿದ್ದೇವೆ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ಗಳು (SIP- Systematic Investment Plan) ಇತ್ತೀಚೆಗೆ ಹೆಚ್ಚೆಚ್ಚು ಜನಪ್ರಿಯವಾಗುತ್ತಿವೆ. ಇದಕ್ಕೆ ಕಾರಣ ಅವುಗಳು ಕೊಡುವ ಹೈ ರಿಟರ್ನ್. ಕೆಲವೊಂದಿಷ್ಟು ಎಸ್ಐಪಿಗಳು ವರ್ಷಕ್ಕೆ ಶೇ. 30ರವರೆಗೂ ರಿಟರ್ನ್ ಕೊಟ್ಟಿರುವುದುಂಟು. ಮ್ಯೂಚುವಲ್ ಫಂಡ್ ಎಸ್ಐಪಿಗಳ ಪೈಕಿ ಇಎಲ್ಎಸ್ಎಸ್ ಫಂಡ್ಗಳು ಬಹಳ ಮಂದಿಯನ್ನು ಆಕರ್ಷಿಸುತ್ತಿವೆ. ಇಎಲ್ಎಸ್ಎಸ್ ಎಂಬುದು ಈಕ್ವಿಟಿ ಲಿಂಕ್ಡ್ ಇನ್ವೆಸ್ಟ್ಮೆಂಟ್ ಸ್ಕೀಮ್. ಅಂದರೆ ಷೇರುಗಳಿಗೆ ಜೋಡಿತವಾದ ಹೂಡಿಕೆ ಯೋಜನೆಗಳು. ಬಿಎಸ್ಇ, ನಿಫ್ಟಿ ಷೇರುಮಾರುಕಟ್ಟೆಗಳ ವಿವಿಧ ಇಂಡೆಕ್ಸ್ಗಳೊಂದಿಗೆ ಜೋಡಿತವಾಗಿರುವ ಇಎಲ್ಎಸ್ಎಸ್ ಮ್ಯೂಚುವಲ್ ಫಂಡ್ ಎಸ್ಐಪಿಗಳು ಐಟಿ ಕಾಯ್ದೆ ಪ್ರಕಾರ ತೆರಿಗೆ ರಿಯಾಯಿತಿ ಒದಗಿಸುತ್ತವೆ. ಜೊತೆಗೆ ಒಳ್ಳೆಯ ರಿಟರ್ನ್ಸ್ ಕೊಡುತ್ತವೆ.
ಭಾರತೀಯ ಮ್ಯೂಚುವಲ್ ಫಂಡ್ ಸಂಸ್ಥೆ (AMFI) ಮೇ 24ರಂದು ಪ್ರಕಟಿಸಿರುವ ವರದಿಯೊಂದರ ಪ್ರಕಾರ ಕಳೆದ 10 ವರ್ಷದಲ್ಲಿ ಶೇ. 16ಕ್ಕಿಂತ ಹೆಚ್ಚು ಸಿಎಜಿಅರ್ ದರದಲ್ಲಿ ರಿಟರ್ನ್ ಕೊಟ್ಟಿರುವ 11 ಇಎಲ್ಎಸ್ಎಸ್ ಫಂಡ್ಗಳಿವೆಯಂತೆ. ಸಿಎಜಿಆರ್ ಎಂಬುದು ಸರಾಸರಿ ವಾರ್ಷಿಕ ಬೆಳವಣಿಗೆ ದರ.
ಶೇ. 16 ಸಿಎಜಿಆರ್ನಂತೆ ಪರಿಗಣಿಸಿದರೆ ನೀವು ಪ್ರತೀ ತಿಂಗಳು 5,000 ರೂ ಹೂಡಿಕೆ ಮಾಡುತ್ತಾ ಹೋದರೆ 10 ವರ್ಷದಲ್ಲಿ 15 ಲಕ್ಷ ರೂ ಸಂಪತ್ತು ನಿಮ್ಮದಾಗುತ್ತದೆ. ಅದೇ ಸಿಎಜಿಆರ್ ದರ ಶೇ. 22 ಆಗಿಬಿಟ್ಟರೆ ನಿಮ್ಮ ಕೈಸೇರುವ ಹಣ 22 ಲಕ್ಷ ರೂ ಆಗುತ್ತದೆ.
ಇದನ್ನೂ ಓದಿ: Crorepati: 10,000 ರೂ ಎಸ್ಐಪಿಯಿಂದ ಎಷ್ಟು ದಿನದಲ್ಲಿ ಕೋಟ್ಯಾಧಿಪತಿಯಾಗಬಹುದು? ಇಲ್ಲಿದೆ ಲೆಕ್ಕಾಚಾರ
ಕ್ವಾಂಟ್ ಟ್ಯಾಕ್ಸ್ ಯೋಜನೆಯು ನಿಫ್ಟಿ 500 ಟೋಟಲ್ ರಿಟರ್ನ್ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುತ್ತದೆ. ಈ ಪ್ಲಾನ್ 10 ವರ್ಷದಲ್ಲಿ ಶೇ. 22.90 ಸಿಎಜಿಆರ್ ದರದಲ್ಲಿ ರಿಟರ್ನ್ ಕೊಟ್ಟಿದೆ. ಅಂದರೆ ನೀವು 10 ವರ್ಷದಿಂದಲೂ ಈ ಎಸ್ಐಪಿಯಲ್ಲಿ ಪ್ರತೀ ತಿಂಗಳು 5,000 ರೂ ಹೂಡಿಕೆ ಮಾಡುತ್ತಾ ಬರುತ್ತಿದ್ದರೆ ಇವತ್ತು ನಿಮಗೆ 23 ಲಕ್ಷ ರೂ ಹಣ ಕೈಸೇರುತ್ತಿತ್ತು.
ಎಸ್ ಅಂಡ್ ಪಿ ಬಿಎಸ್ಇ ಟೋಟಲ್ ರಿಟರ್ನ್ ಇಂಡೆಕ್ಸ್ ಅನ್ನು ಟ್ರ್ಯಾಕ್ ಮಾಡುವ ಬಂಧನ್ ಟ್ಯಾಕ್ಸ್ ಅಡ್ವಾಂಟೇಜ್ ಫಂಡ್ ಕಳೆದ 10 ವರ್ಷದಲ್ಲಿ ಶೇ. 18.39 ಸಿಎಜಿಆರ್ನಲ್ಲಿ ಹೂಡಿಕೆ ಬೆಳೆದಿದೆ. ಈ ಸ್ಕೀಮ್ನಲ್ಲಿ ನೀವು ತಿಂಗಳಿಗೆ 5,000 ರೂ ತೊಡಗಿಸಿದ್ದರೆ ಈಗ 10 ವರ್ಷದಲ್ಲಿ ಸುಮಾರು 17 ಲಕ್ಷ ರೂ ನಿಮ್ಮದಾಗುತ್ತಿತ್ತು.
ಇದನ್ನೂ ಓದಿ: Tips: ನಿಮ್ಮ ವಯಸ್ಸಿನ್ನೂ 30 ದಾಟಿಲ್ಲವೇ? ಹಣ ಸಂಪಾದನೆ, ಹಣಭದ್ರತೆಗೆ ತಪ್ಪದೇ ಈ ಕ್ರಮ ಅನುಸರಿಸಿ
ಇಲ್ಲಿ ನೀಡಲಾಗಿರುವ ಸಿಎಜಿಆರ್ ದರ ಈ ಫಂಡ್ಗಳ ಡೈರೆಕ್ಟ್ ಪ್ಲಾನ್ಗಳಿಂದ ಸಿಕ್ಕಿದೆ. ನೀವು ಈ ಫಂಡ್ನ ರೆಗ್ಯುಲರ್ ಪ್ಲಾನ್ನಲ್ಲಿ ಹೂಡಿಕೆ ಮಾಡಿದ್ದರೆ ಸಿಎಜಿಆರ್ ದರ ತುಸು ಕಡಿಮೆ ಇರುತ್ತದೆ.