ನವದೆಹಲಿ, ಸೆಪ್ಟೆಂಬರ್ 18: ಮ್ಯುಚುವಲ್ ಫಂಡ್ಗಳಿಗೆ ನಾಮನಿರ್ದೇಶನ ಪರಿಷ್ಕರಿಸಲು ಸೆಪ್ಟೆಂಬರ್ 30ರ ಗಡುವು ಸಮೀಪಿಸುತ್ತಿದೆ. ಸಿಎಎಂಎಸ್ ನೀಡಿರುವ ಮಾಹಿತಿ ಪ್ರಕಾರ ಇನ್ನೂ 25 ಲಕ್ಷ ಪ್ಯಾನ್ ಕಾರ್ಡ್ದಾರರು ತಮ್ಮ ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ ನಾಮಿನೇಶನ್ ಅಪ್ಡೇಟ್ ಮಾಡಿಲ್ಲವಂತೆ. ರಿಜಿಸ್ಟ್ರಾರ್ ಮತ್ತು ಟ್ರಾನ್ಸ್ಫರ್ ಏಜೆಂಟ್ಗಳ (Registrar and Transfer Agent) ಮುಖಾಂತರ ನಾಮನಿರ್ದೇಶನಗಳನ್ನು ಅಪ್ಡೇಟ್ ಮಾಡಬಹುದು. ಭಾರತದಲ್ಲಿ ಅಂಥ ಒಂದು ಏಜೆಂಟ್ ಸಿಎಎಂಎಸ್ ಇದೆ. ಹಾಗೆಯೇ, ಕೆಫಿನ್ಟೆಕ್ ಎಂಬ ಇನ್ನೊಂದು ಏಜೆಂಟ್ ಸಂಸ್ಥೆಯೂ ಇದೆ. ಸಿಎಎಂಎಸ್ನಲ್ಲಿ 25 ಲಕ್ಷ ಮಂದಿ ಮ್ಯೂಚುವಲ್ ಫಂಡ್ ಹೂಡಿಕೆದಾರರು ನಾಮನಿರ್ದೇಶನ ಪರಿಷ್ಕರಿಸಿಲ್ಲ. ಕೆಫಿನ್ಟೆಕ್ನಲ್ಲಿ ಎಷ್ಟು ಮಂದಿಯಿಂದ ಈ ಕೆಲಸ ಬಾಕಿ ಉಳಿದಿದೆ ಎಂಬ ವಿವರ ಲಭ್ಯವಾಗಿಲ್ಲ ಎಂದು ಮನಿಕಂಟ್ರೋಲ್ ಸುದ್ದಿಜಾಲತಾಣ ಹೇಳಿದೆ.
ಈ ಮೊದಲು ಪ್ಯಾನ್ ಕಾರ್ಡ್ದಾರರಿಗೆ ತಮ್ಮ ಮ್ಯೂಚುವಲ್ ಫಂಡ್ಗಳಿಗೆ ನಾಮಿನೇಶನ್ ಅಪ್ಡೇಟ್ ಮಾಡಲು ಮಾರ್ಚ್ 30ಕ್ಕೆ ಡೆಡ್ಲೈನ್ ನೀಡಲಾಗಿತ್ತು. ಆದರೆ, ಬಹಳ ಮಂದಿಗೆ ಈ ನಾಮಿನೇಶನ್ ಅಪ್ಡೇಟ್ ಮಾಡುವುದು ಕಷ್ಟವಾಗಿದ್ದರಿಂದ ಗಡುವನ್ನು ಆರು ತಿಂಗಳು ಮುಂದಕ್ಕೆ ಹಾಕಲಾಯಿತು. ಮತ್ತೊಮ್ಮೆ ಗಡುವು ವಿಸ್ತರಿಸುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಇಎಂಐ ಕಟ್ಟಲು ಹಿಂದೇಟು ಹಾಕುತ್ತಿದ್ದೀರಾ? ಮನೆಬಾಗಿಲಿಗೆ ಬರಲಿದೆ ಚಾಕೊಲೇಟ್; ಎಸ್ಬಿಐ ಹೊಸ ಪ್ರಯೋಗ
ಪ್ಯಾನ್ ಕಾರ್ಡ್ ಹೊಂದಿರುವವರು ತಮ್ಮ ಮ್ಯೂಚುವಲ್ ಫಂಡ್ ಹೂಡಿಕೆಗಳಿಗೆ ನಾಮಿನೇಶನ್ ಅನ್ನು ಅಪ್ಡೇಟ್ ಮಾಡಲಿಲ್ಲವೆಂದರೆ ಹಲವು ನಿರ್ಬಂಧಗಳು ಜಾರಿಗೆ ಬರುತ್ತವೆ. ಮ್ಯೂಚುವಲ್ ಫಂಡ್ ಪೋರ್ಟ್ಫೋಲಿಯೋಗಳಿಂದ ನಿಮ್ಮ ಹೂಡಿಕೆಯನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಮ್ಯುಚುವಲ್ ಫಂಡ್ಗಳಲ್ಲಿ ಹೂಡಿಕೆ ಮುಂದುವರಿಸಬಹುದೇ ವಿನಃ ವಿತ್ಡ್ರಾ ಮಾಡಲು ಆಗುವುದಿಲ್ಲ.
ಮ್ಯೂಚುವಲ್ ಫಂಡ್ಗಳ ಮೇಲೆ ಜಂಟಿಯಾಗಿ ಹೂಡಿಕೆ ಮಾಡಿರುವವರ ಸಂಖ್ಯೆ ಬಹಳ ಇದೆ. ಅಂದರೆ, ಇಬ್ಬರು ಅಥವಾ ಇನ್ನೂ ಹೆಚ್ಚು ಮಂದಿ ಸೇರಿ ಮ್ಯುಚುವಲ್ ಫಂಡ್ಗಳ ಮೇಲೆ ಹೂಡಿಕೆ ಮಾಡಿರುವುದು ಇದೆ. ಇವರಲ್ಲಿ ಹೆಚ್ಚಿನವರು ನಾಮಿನಿ ಯಾರೆಂದು ನಮೂದಿಸಿಲ್ಲ.
ಇದನ್ನೂ ಓದಿ: ಲೈಫ್ ಇನ್ಷೂರೆನ್ಸ್ ಪಾಲಿಸಿ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ; ವಿಮಾ ಯೋಜನೆಗಳ ಮಹತ್ವ ತಪ್ಪದೇ ತಿಳಿಯಿರಿ
ಹಿಂದೆ ಮ್ಯೂಚುವಲ್ ಫಂಡ್ಗಳ ಮೇಲೆ ಜಂಟಿಯಾಗಿ ಹೂಡಿಕೆ ಮಾಡುವಾಗ ಯಾರಾದರೂ ಒಬ್ಬರ ಸಂಪರ್ಕ ವಿವರ ಪಡೆಯಲಾಗುತ್ತಿತ್ತು. ಹೀಗಾಗಿ, ಜಂಟಿಯಾಗಿ ಹೂಡಿಕೆ ಮಾಡಿದವರೆಲ್ಲರ ಸಂಪರ್ಕ ವಿವರ ಕಡತಗಳಲ್ಲಿ ಇಲ್ಲ. ಈಗ ಎಲ್ಲರ ಸಂಪರ್ಕ ವಿವರ ಒದಗಿಸುವುದು ಅವಶ್ಯಕವಾಗಿದೆ. ಹೀಗಾಗಿ, ನಾಮಿನಿ ಸಮಸ್ಯೆ ಹಳೆಯ ಮ್ಯೂಚುವಲ್ ಫಂಡ್ ಪೋರ್ಟ್ಫೋಲಿಯೋಗಳಲ್ಲಿ ಹೆಚ್ಚು ಉಳಿದುಕೊಂಡಿದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ