
ಚೆನ್ನಾಗಿ ಓದಿ, ಒಳ್ಳೆಯ ಸಂಬಳದ ಕೆಲಸ ಗಿಟ್ಟಿಸಿಕೊಂಡುಬಿಟ್ಟರೆ ಲೈಫ್ ಸೆಟಲ್ ಎನಿಸಬಹುದು. ಆದರೂ ಕೂಡ ಬಹಳ ಜನರು ರಿಟೈರ್ ಆಗುವಾಗ ಪಿಎಫ್ ಹಣ ಬಿಟ್ಟರೆ ಬ್ಯಾಂಕ್ ಬ್ಯಾಲನ್ಸ್ 5-10 ಲಕ್ಷ ರೂ ಮಾತ್ರವೇ ಹೊಂದಿರುತ್ತಾರೆ. ಒಂದು ಮನೆ ಸಂಪಾದಿಸಿ ಅದರ ಇಎಂಐ ಅನ್ನು ರಿಟೈರ್ ಆಗುವವರೆಗೂ ಕಟ್ಟುತ್ತಲೇ ಇರುತ್ತಾರೆ. ಇದು ಹೆಚ್ಚಿನ ಮಧ್ಯಮವರ್ಗದವರ ಪಾಡು. ಹಾಗಾದರೆ ಹಣಕಾಸು ಸ್ವಾತಂತ್ರ್ಯಕ್ಕೆ (Financial Freedom) ಏನು ಮಾಡಬೇಕು? ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ನಿತಿನ್ ಕೌಶಿಕ್ ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ, ಶ್ರೀಮಂತಿಕೆ ಹೊಂದಲು ಸಹಾಯವಾಗುವ ಮೂರು ಅಂಶಗಳನ್ನು ತಿಳಿಸಿದ್ದಾರೆ.
ಮೊದಲನೆಯದು, ರಿಯಲ್ ಎಸ್ಟೇಟ್. ಇದು ಪಾಸಿವ್ ಇನ್ಕಮ್ ಸೃಷ್ಟಿಸಬಲ್ಲುದು. ಎರಡನೆಯದು, ಉದ್ದಿಮೆಗಾರಿಕೆ. ಮೂರನೆಯದು, ಕ್ಯಾಷ್ಫ್ಲೋ. ಅಂದರೆ, ನಿಮಗೆ ಬೇಕೆಂದಾಗ ಸುಲಭವಾಗಿ ತೆಗೆಯಲು ಸಾಧ್ಯವಾಗಿಸುವ ಹಣ. ಈ ಮೂರು ಅಂಶಗಳು ನಿಮ್ಮನ್ನು ಶ್ರೀಮಂತಿಕೆ ಕಡೆಗೆ ಕರೆದೊಯ್ಯಬಲ್ಲುವು ಎಂಬುದು ನಿತಿನ್ ಕೌಶಿಕ್ ಅನಿಸಿಕೆ.
ಇದನ್ನೂ ಓದಿ: ಒಂದೂವರೆ ಲಕ್ಷಕ್ಕಿಂತ ಹೆಚ್ಚು ಸಂಬಳ; ಸೇವಿಂಗ್ಸ್ ಶೂನ್ಯ; ಇವತ್ತಿನ ಸುಖ ಮುಖ್ಯವೋ, ಭವಿಷ್ಯದ ಸುಖ ಮುಖ್ಯವೋ? ನೀವೇನಂತೀರಿ?
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ನೀವು ಮನೆ ಅಥವಾ ಅಂಗಡಿಯನ್ನೇ ಕಟ್ಟಿ ಬಾಡಿಗೆಗೆ ಕೊಡಬಹುದು. ಬಾಡಿಗೆ ಆದಾಯ ಬಹುತೇಕ ನಿಲ್ಲುವುದೇ ಇಲ್ಲ. ಇದು ನಿಜವಾದ ಪಾಸಿವ್ ಇನ್ಕಮ್. ನೀವು ಉದ್ಯೋಗದಲ್ಲಿರಲಿ, ಬ್ಯುಸಿನೆಸ್ ಮಾಡುತ್ತಿರಲಿ, ರಿಯಲ್ ಎಸ್ಟೇಟ್ನಿಂದ ಪಾಸಿವ್ ಇನ್ಕಮ್ ಬರುತ್ತಲೇ ಇರುತ್ತದೆ.
ನಿತಿನ್ ಕೌಶಿಕ್ ಅವರ ಎಕ್ಸ್ ಪೋಸ್ಟ್
Most 20-year-olds chase job titles. The few who don’t — build wealth. 💸
Here’s the truth no one tells you early enough:
Financial freedom doesn’t come from promotions or fancy degrees.
It comes from owning things that pay you even when you’re asleep.Focus more on:
• Real…— CA Nitin Kaushik (FCA) | LLB (@Finance_Bareek) November 8, 2025
ನಿತಿನ್ ಕೌಶಿಕ್ ಅವರು ಉದ್ಯಮಶೀಲತೆಯ ಅಂಶವನ್ನು ಪ್ರಸ್ತಾಪಿಸುತ್ತಾರೆ. ನೀವು ಉದ್ಯೋಗ ಮಾಡಿದರೆ ಸಂಬಳದಿಂದ ಸೀಮಿತ ಆದಾಯ ಸಿಗುತ್ತದೆ. ಬ್ಯುಸಿನೆಸ್ ಮಾಡಿದರೆ ಲಾಭವನ್ನು ಎಷ್ಟು ಬೇಕಾದರೂ ಹೆಚ್ಚಿಸಿಕೊಳ್ಳಲು ಅವಕಾಶ ಇರುತ್ತದೆ.
ಇದನ್ನೂ ಓದಿ: ಸಾಲ ಬಳಸಿ ಸಾಹುಕಾರರಾದವರಿದ್ದಾರೆ… ಒಳ್ಳೆ ಸಾಲ, ಕೆಟ್ಟ ಸಾಲ ಮಧ್ಯೆ ವ್ಯತ್ಯಾಸ ತಿಳಿದಿರಿ…
ಮೂರನೇ ಅಂಶ ಕ್ಯಾಷ್ ಫ್ಲೋನದ್ದು. ನಿಮಗೆ ಬೇಕೆಂದಾಗ ಬಳಸಿಕೊಳ್ಳಲು ಕ್ಯಾಷ್ ಇದ್ದಾಗ ಅನಿರೀಕ್ಷಿತ ಹೂಡಿಕೆ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ತುರ್ತು ವೆಚ್ಚ ಬಂದಾಗ ಅದು ನೆರವಾಗುತ್ತದೆ. ಇಲ್ಲದಿದ್ದರೆ ಸಾಲದ ಸುಳಿಗೆ ಸಿಲುಕಬೇಕಾಗುತ್ತದೆ.
ಇದೇ ವೇಳೆ ಕೌಶಿಕ್ ಅವರು ಸಂಪತ್ತು ಸೃಷ್ಟಿಗೆ ಅಪ್ರಸ್ತುತವಾದ ಅಂಶಗಳನ್ನೂ ಹೆಸರಿಸಿದ್ದಾರೆ. ಅವರ ಪ್ರಕಾರ ಪದವಿಗಳು (ಉದ್ಯೋಗಸ್ತರದಲ್ಲಿ) ನಿರರ್ಥಕ. ನೀವು ನಿವೃತ್ತರಾದರೆ ನಿಮ್ಮ ಕೈಹಿಡಿಯುವುದು ಈ ಪದವಿಗಳಲ್ಲ, ನೈಜ ಆಸ್ತಿಗಳು ಎಂದೆನ್ನುತ್ತಾರೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ