ನವದೆಹಲಿ, ಡಿಸೆಂಬರ್ 26: ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಇತ್ತೀಚಿನ ವರ್ಷಗಳಲ್ಲಿ ಬಹಳವೇ ಬೆಳೆದಿದೆ. ಬ್ಯಾಂಕ್ ಸಾಲಗಳೂ ಕೂಡ ಸಾಕಷ್ಟು ವಿತರಣೆ ಆಗಿವೆ. ಅದರಲ್ಲಿ ವೈಯಕ್ತಿಕ ಸಾಲದ ಪಾಲು ಬಹಳ ಇರುತ್ತದೆ. ಇವು ರಿಸ್ಕಿಯಾದರೂ ಬ್ಯಾಂಕುಗಳಿಗೆ ಹೆಚ್ಚಿನ ಆದಾಯ ತರುವುದು ಪರ್ಸನಲ್ ಲೋನ್ಗಳೇ. ಬ್ಯಾಂಕ್ ಬಜಾರ್ನ ವರದಿಯೊಂದರ ಪ್ರಕಾರ 2023ರ ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿರುವ ವೈಯಕ್ತಿಕ ಸಾಲದ ಪ್ರಮಾಣ 45.51 ಲಕ್ಷ ಕೋಟಿ ರೂ ಎನ್ನಲಾಗಿದೆ.
ಹೆಚ್ಚಿನ ಸಂದರ್ಭದ್ಲಿ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ಗಳನ್ನು ಅಡಮಾನ ಪಡೆದುಕೊಳ್ಳದೇ ನೀಡುವುದರಿಂದ ಬ್ಯಾಂಕುಗಳಿಗೆ ರಿಸ್ಕಿ ಇರುತ್ತವೆ. ವೈಯಕ್ತಿಕ ಸಾಲಗಳ ಪೈಕಿ ಹೆಚ್ಚಿನ ಪಾಲು ಇರುವುದು ಹೌಸಿಂಗ್ ಲೋನ್. ಇದು ಶೇ. 47.11ರಷ್ಟು ಇದೆ. 21.44 ಲಕ್ಷ ಕೋಟಿ ರೂನಷ್ಟು ಸಾಲ ಬಾಕಿ ಇದೆ. ವಾಹನ ಸಾಲ ಶೇ. 12ಕ್ಕಿಂತಲೂ ಹೆಚ್ಚಿದೆ. ಮೂರನೇ ಸ್ಥಾನ ಕ್ರೆಡಿಟ್ ಕಾರ್ಡ್ ಸಾಲಗಳದ್ದು. ಇದು 2.40 ಲಕ್ಷ ಕೋಟಿ ರೂನಷ್ಟು ಇದೆ.
ಇದನ್ನೂ ಓದಿ: Tips: ನಿವೃತ್ತಿಗೆ ಹಣ ಹೊಂದಿಸಬೇಕೆ? ಎಲ್ಲೆಲ್ಲಿ ಹೂಡಿಕೆ ಮಾಡಬೇಕು, ಈ ಸಲಹೆ ನಿಮಗೆ ಉಪಯುಕ್ತ ಎನಿಸಬಹುದು
ಅಕ್ಟೋಬರ್ನಲ್ಲಿ ಇರುವ ಒಟ್ಟು ವೈಯಕ್ತಿಕ ಸಾಲಗಳು: 45.51 ಲಕ್ಷ ಕೋಟಿ ರೂ
ಇದನ್ನೂ ಓದಿ: Credit Card Closure: ಕ್ರೆಡಿಟ್ ಕಾರ್ಡ್ ಹಿಂದಿರುಗಿಸಬೇಕೆ? ಬಹಳ ಸಿಂಪಲ್ ಕೆಲಸ
ಈ ಮೇಲಿನ ಅಂಕಿ ಅಂಶಗಳು ಬ್ಯಾಂಕಿಂಗ್ ವಲಯದ ಸುದೃಢತೆಯನ್ನು ಸಂಕೇತಿಸುತ್ತದೆ ಎಂಬುದು ತಜ್ಞರ ಅನಿಸಿಕೆ. ದೇಶದ ಆರ್ಥಿಕ ಚಟುವಟಿಕೆ ಗರಿಗೆದರಿರುವುದನ್ನು ಇವು ಸೂಚಿಸುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ