AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Credit Card Closure: ಕ್ರೆಡಿಟ್ ಕಾರ್ಡ್ ಹಿಂದಿರುಗಿಸಬೇಕೆ? ಬಹಳ ಸಿಂಪಲ್ ಕೆಲಸ

Tips: ಬಳಕೆ ಆಗದೇ ಉಳಿದಿರುವ ಯಾವುದೇ ಕ್ರೆಡಿಟ್ ಕಾರ್ಡ್ ಅನ್ನು ಮುಚ್ಚುವ ಕೆಲಸ ಬಹಳ ಸುಲಭ. ಆ ಸರಳ ಪ್ರಕ್ರಿಯೆಗಳ ಮಾಹಿತಿ ಇಲ್ಲಿ ತಿಳಿಸಲಾಗಿದೆ. ಕಚೇರಿಗೆ ಹೋಗಿ ಅರ್ಜಿ ತುಂಬಿಸುವುದರಿಂದ ಹಿಡಿದು ಇಮೇಲ್​ವರೆಗೆ ವಿವಿಧ ಮಾರ್ಗಗಳ ಮೂಲಕ ಕ್ರೆಡಿಟ್ ಕಾರ್ಡ್ ಮುಚ್ಚಿಸಬಹುದು. ಕಾರ್ಡ್ ಮುಚ್ಚುವ ಮುನ್ನ ಬಾಕಿ ಹಣ ಪಾವತಿಸುವುದೂ ಸೇರಿದಂತೆ ಕೆಲವಿಷ್ಟು ಅಂಶಗಳ ಬಗ್ಗೆ ಗಮನ ಇರಲಿ.

Credit Card Closure: ಕ್ರೆಡಿಟ್ ಕಾರ್ಡ್ ಹಿಂದಿರುಗಿಸಬೇಕೆ? ಬಹಳ ಸಿಂಪಲ್ ಕೆಲಸ
ಕ್ರೆಡಿಟ್ ಕಾರ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 26, 2023 | 12:12 PM

Share

ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್​ಗಳನ್ನು ಹೊಂದಿರುವುದು ಈಗ ಸಾಮಾನ್ಯದ ವಿಷಯ. ಕಾರಣಾಂತರಗಳಿಂದ ಹಲವು ಕ್ರೆಡಿಟ್ ಕಾರ್ಡ್​ಗಳನ್ನು ಪಡೆದಿರುತ್ತೇವೆ. ಒಂದೋ ಎರಡೋ ಕಾರ್ಡ್​ಗಳು ಮಾತ್ರ ಬಳಕೆಯಲ್ಲಿರುತ್ತವೆ. ಉಳಿದವು ನಿರುಪಯುಕ್ತವಾಗಿ ಉಳಿಯಬಹುದು. ಇಂಥ ಕಾರ್ಡ್​ಗಳನ್ನು ಮರಳಿಸುವುದು ಕಷ್ಟವಲ್ಲ. ಬಹಳ ಸುಲಭ ಪ್ರಕ್ರಿಯೆಗಳ ಮೂಲಕ ಕ್ರೆಡಿಟ್ ಕಾರ್ಡ್ ಕ್ಲೋಸ್ (credit card closure) ಮಾಡಬಹುದು. ಇಂಥ ಕೆಲ ವಿಧಾನಗಳ ಪರಿಚಯ ಇಲ್ಲಿದೆ…

ಕಸ್ಟಮರ್ ಕೇರ್ ನಂಬರ್​ಗೆ ಕರೆ ಮಾಡಿ…

ಕ್ರೆಡಿಟ್ ಕಾರ್ಡ್​ ಒದಗಿಸಿ ಸಂಸ್ಥೆಯ ಕಸ್ಟಮರ್ ಸರ್ವಿಸ್ ನಂಬರ್ ಅಥವಾ ಹೆಲ್ಪ್​ಲೈನ್ ನಂಬರ್ ಡಯಲ್ ಮಾಡಿ. ಈ ನಂಬರ್ ನಿಮ್ಮಲ್ಲಿಲ್ಲದಿದ್ದರೆ ಗೂಗಲ್ ಮಾಡಿದರೆ ಸಿಗಬಹುದು. ಆ ನಂಬರ್​ಗೆ ಕರೆ ಮಾಡಿ ಕ್ರೆಡಿಟ್ ಕಾರ್ಡ್ ಮುಚ್ಚಲು ಮನವಿ ಮಾಡಬಹುದು.

ಬ್ಯಾಂಕ್​ಗೆ ಅರ್ಜಿ ಸಲ್ಲಿಸಿ…

ಕ್ರೆಡಿಟ್ ಕಾರ್ಡ್ ಕಂಪನಿಯ ಕಚೇರಿ ಬಳಿ ಹೋಗಿ, ಅರ್ಜಿ ಸಲ್ಲಿಸಬೇಕು. ನಿಮ್ಮ ಕ್ರೆಡಿಟ್ ಕಾರ್ಡ್​ನ ವಿವರಗಳನ್ನು ಇದರಲ್ಲಿ ತುಂಬಿಸಿರಬೇಕು.

ಇದನ್ನೂ ಓದಿ: ಸಂಕ್ರಾಂತಿ, ಗಣರಾಜ್ಯೋತ್ಸವ ಇತ್ಯಾದಿ… 2024ರ ಜನವರಿ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳೆಷ್ಟು? ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ?

ಇಮೇಲ್ ಮೂಲಕ…

ಕ್ರೆಡಿಟ್ ಕಾರ್ಡ್ ಕಂಪನಿಗಳು ಸಾರ್ವಜನಿಕವಾಗಿ ದೂರುಗಳನ್ನು ಪಡೆಯಲು ಇಮೇಲ್ ಐಡಿ ಹೊಂದಿರುತ್ತವೆ. ಇಮೇಲ್ ಮುಖಾಂತರ ಕ್ರೆಡಿಟ್ ಕಾರ್ಡ್ ರದ್ದುಗೊಳಿಸಲು ಮನವಿ ಕಳುಹಿಸಬಹುದು.

ಆನ್ಲೈನ್​ನಲ್ಲಿ ಮಾಡಬಹುದು

ಕ್ರೆಡಿಟ್ ಕಾರ್ಡ್ ಕಂಪನಿಯ ವೆಬ್ ಅಥವಾ ಆ್ಯಪ್​ಗೆ ಹೋಗಿ ಅಲ್ಲಿ ಲಭ್ಯ ಇರುವ ಫಾರ್ಮ್ ಭರ್ತಿ ಮಾಡಿ, ಕಾರ್ಡ್ ಮುಚ್ಚಲು ಮನವಿ ಮಾಡಬಹುದು. ನೀವು ಅರ್ಜಿ ಸಲ್ಲಿಸಿದ ಬಳಿಕ ಬ್ಯಾಂಕ್​ನವರು ನಿಮ್ಮ ದೃಢೀಕರಣ ಪಡೆಯಲು ಕರೆ ಮಾಡಬಹುದು.

ಇದನ್ನೂ ಓದಿ: ನಾಲ್ಕು ಬ್ಯಾಂಕುಗಳಿಂದ ಎಫ್​ಡಿ ದರ ಹೆಚ್ಚಳ; ಠೇವಣಿಗಳಿಗೆ ಶೇ. 8.60ರವರೆಗೆ ಬಡ್ಡಿ; ಡೆಪಾಸಿಟ್ ಇಡಲು ಸುವರ್ಣಾವಕಾಶ

ಕ್ರೆಡಿಟ್ ಕಾರ್ಡ್ ಮುಚ್ಚುವ ಮುನ್ನ ಈ ವಿಷಯಗಳನ್ನು ಮರೆಯದಿರಿ….

  • ಕ್ರೆಡಿಟ್ ಕಾರ್ಡ್​ನ ಎಲ್ಲಾ ಬಾಕಿ ಹಣವನ್ನೂ ಪೂರ್ಣವಾಗಿ ಪಾವತಿಸಿರಬೇಕು.
  • ಕಾರ್ಡ್​ನಲ್ಲಿ ಯಾವುದಾದರೂ ರಿವಾರ್ಡ್ ಪಾಯಿಂಟ್ಸ್ ಇತ್ಯಾದಿ ಇದ್ದರೆ ಅದನ್ನು ರಿಡೀಮ್ ಮಾಡಿ ಬಳಸಿಕೊಳ್ಳಿ.
  • ಕ್ರೆಡಿಟ್ ಕಾರ್ಡ್ ಉಪಯೋಗಿಸಿ ಯಾವುದಾದರೂ ಆಟೊ ಪೇ ಇತ್ಯಾದಿ ಇದ್ದರೆ ಅದೆಲ್ಲವನ್ನೂ ನಿಲ್ಲಿಸಿ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಸೆಪ್ಟೆಂಬರ್ 14 ರಿಂದ 20ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ವಿನಯ್ ಜತೆ ಜೋಡಿಯಾಗಿ ನಟಿಸಿ, ರಿಯಲ್ ಲೈಫ್​ನಲ್ಲಿ ಅಣ್ಣ ಎಂದು ಕರೆದಿದ್ದ ನಟಿ
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಹಾಸನದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತ: ಗೃಹಿಣಿ ಸಾವು
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗಣಪತಿ ಮೂರ್ತಿ ಅನಾವರಣದ ವೇಳೆ ಅವಘಡ: ಶಾಸಕ ಗಣಿಗ ರವಿಕುಮಾರ್‌ಗೆ ಗಾಯ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಓಡಿಬಂದು ನಟ ಅಜಿತ್​​ನನ್ನು ತಬ್ಬಿಕೊಂಡ ತಮಿಳುನಾಡು ಸಿಎಂ ವಿಜಯ್
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್