AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ಕು ಬ್ಯಾಂಕುಗಳಿಂದ ಎಫ್​ಡಿ ದರ ಹೆಚ್ಚಳ; ಠೇವಣಿಗಳಿಗೆ ಶೇ. 8.60ರವರೆಗೆ ಬಡ್ಡಿ; ಡೆಪಾಸಿಟ್ ಇಡಲು ಸುವರ್ಣಾವಕಾಶ

Hike in Fixed Deposit Rates: ಬ್ಯಾಂಕ್ ಆಫ್ ಇಂಡಿಯಾ, ಡಿಸಿಬಿ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕುಗಳು ಡೆಪಾಸಿಟ್ ದರಗಳನ್ನು ಹೆಚ್ಚಿಸಿವೆ. ಡಿಸಿಬಿ ಬ್ಯಾಂಕ್ ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 8.60ರವರೆಗೆ ಬಡ್ಡಿ ನೀಡುತ್ತದೆ. ಸಾಮಾನ್ಯ ಗ್ರಾಹಕರಿಗೂ ಶೇ. 8ರಷ್ಟು ಬಡ್ಡಿ ಸಿಗುತ್ತದೆ. ಫೆಡರಲ್ ಬ್ಯಾಂಕ್ ಕೂಡ ಶೇ. 8ರವರೆಗೆ ಬಡ್ಡಿ ಆಫರ್ ಮಾಡಿದೆ. ಡಿಸೆಂಬರ್​ನಲ್ಲಿ ಈ ನಾಲ್ಕು ಬ್ಯಾಂಕುಗಳ ದರ ಪರಿಷ್ಕರಣೆ ಆಗಿದೆ.

ನಾಲ್ಕು ಬ್ಯಾಂಕುಗಳಿಂದ ಎಫ್​ಡಿ ದರ ಹೆಚ್ಚಳ; ಠೇವಣಿಗಳಿಗೆ ಶೇ. 8.60ರವರೆಗೆ ಬಡ್ಡಿ; ಡೆಪಾಸಿಟ್ ಇಡಲು ಸುವರ್ಣಾವಕಾಶ
ಎಫ್​ಡಿ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 25, 2023 | 5:27 PM

ನವದೆಹಲಿ, ಡಿಸೆಂಬರ್ 25: ಗ್ರಾಹಕರಿಂದ ಠೇವಣಿಗಳನ್ನು ಆಕರ್ಷಿಸಲು ಪೈಪೋಟಿಗೆ ಬಿದ್ದಂತಿರುವ ಬ್ಯಾಂಕುಗಳು ತಮ್ಮಲ್ಲಿನ ಠೇವಣಿ ದರಗಳನ್ನು (Fixed deposit rates) ಪರಿಷ್ಕರಿಸುತ್ತಲೇ ಇವೆ. ಆರ್​ಬಿಐ ಸತತ ಐದು ಬಾರಿ ರೆಪೋ ದರವನ್ನು ಶೇ. 6.5ರಲ್ಲೇ ಉಳಿಸಿಕೊಂಡು ಬರುತ್ತಿದ್ದರೂ ಬ್ಯಾಂಕುಗಳು ಠೇವಣಿ ದರ ಹೆಚ್ಚಿಸುವುದು ನಿಂತಿಲ್ಲ. ಇದೀಗ ನಾಲ್ಕು ಬ್ಯಾಂಕುಗಳು ಎಫ್​​ಡಿ ದರಗಳನ್ನು ಹೆಚ್ಚಿಸಿವೆ. ಬ್ಯಾಂಕ್ ಆಫ್ ಇಂಡಿಯಾ, ಡಿಸಿಬಿ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕುಗಳು ಡೆಪಾಸಿಟ್ ದರಗಳನ್ನು ಹೆಚ್ಚಿಸಿ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡಿವೆ.

ಡಿಸೆಂಬರ್​ನಲ್ಲಿ ಬ್ಯಾಂಕ್ ಆಫ್ ಇಂಡಿಯಾ ಎಫ್​ಡಿ ದರಗಳು

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ ತನ್ನ ಕಿರು ಅವಧಿಯ ಠೇವಣಿ ಪ್ಲಾನ್​ಗಳಿಗೆ ದರ ಹೆಚ್ಚಿಸಿದೆ. 46 ದಿನಗಳಿಂದ ಆರಂಭವಾಗಿ ಒಂದು ವರ್ಷದ ಅವಧಿಯ ವಿವಿಧ ಅವಧಿಗೆ ವಿವಿಧ ದರ ಪರಿಷ್ಕರಣೆ ಮಾಡಲಾಗಿದೆ. ಒಂದು ವರ್ಷದ ಠೇವಣಿಗೆ ಬಡ್ಡಿದರವನ್ನು ಶೇ. 7.25ಕ್ಕೆ ಹೆಚ್ಚಿಸಲಾಗಿದೆ. ಆದರೆ, ಇವೆಲ್ಲವೂ ಕೂಡ 2 ಕೋಟಿ ರೂಗಿಂತ ಮೇಲ್ಪಟ್ಟ ಠೇವಣಿಗಳಿಗೆ ಅನ್ವಯ ಆಗುತ್ತದೆ.

ಇದನ್ನೂ ಓದಿ: ಆಧಾರ್ ಅಪ್​ಡೇಟ್​ನಿಂದ ಹಿಡಿದು ನಿಷ್ಕ್ರಿಯ ಯುಪಿಐ ಐಡಿವರೆಗೂ ಡಿಸೆಂಬರ್ 31ಕ್ಕೆ ಡೆಡ್​ಲೈನ್ ಇರುವ ಕಾರ್ಯಗಳಿವು

ಕೋಟಕ್ ಮಹೀಂದ್ರ ಬ್ಯಾಂಕ್ ಎಫ್​ಡಿ ದರ ಪರಿಷ್ಕರಣೆ

ಕೋಟಕ್ ಮಹೀಂದ್ರ ಬ್ಯಾಂಕ್ ತನ್ನ ಮೂರರಿಂದ ಐದು ವರ್ಷ ಅವಧಿಯ ವಿವಿಧ ಠೇವಣಿ ಪ್ಲಾನ್​ಗಳಿಗೆ ಬಡ್ಡಿ ದರ ಹೆಚ್ಚಿಸಿದೆ. 10ವರ್ಷ ಅವಧಿಯವರೆಗಿನ ಠೇವಣಿಗಳಿಗೆ ಈ ಬ್ಯಾಂಕ್ ಶೇ. 2.75ರಿಂದ ಶೇ. 7.25ರವರೆಗೆ ಬಡ್ಡಿ ನೀಡುತ್ತದೆ. ಹಿರಿಯ ನಾಗರಿಕರಿಗೆ ಶೇ. 7.80ರವರೆಗೆ ಬಡ್ಡಿ ಸಿಗುತ್ತದೆ.

ಡಿಸಿಬಿ ಬ್ಯಾಂಕ್ ಎಫ್​ಡಿ ದರ ಪರಿಷ್ಕರಣೆ

ಡಿಸಿಬಿ ಬ್ಯಾಂಕ್ ಎರಡು ಕೋಟಿ ರೂ ಒಳಗಿನ ಠೇವಣಿಗಳಿಗೆ ಶೇ. 8.60ರವರೆಗೆ ಬಡ್ಡಿ ನೀಡುತ್ತಿದೆ. ಸಾಮಾನ್ಯ ಗ್ರಾಹಕರ 2 ಕೋಟಿ ರೂ ಒಳಗಿನ ಠೇವಣಿಗಳಿಗೆ ಶೇ. 3.75ರಿಂದ ಶೇ. 8ರವರೆಗೆ ಬಡ್ಡಿ ಕೊಡುತ್ತದೆ. ಹಿರಿಯ ನಾಗರಿಕರಿಗೆ ಶೇ. 4.25ರಿಂದ ಶೇ. 8.60ರವರೆಗೆ ಬಡ್ಡಿ ಆಫರ್ ಮಾಡಿದೆ.

ಇದನ್ನೂ ಓದಿ: Corporate FD: ಕಾರ್ಪೊರೇಟ್ ಠೇವಣಿ ಎಂದರೇನು? ಬ್ಯಾಂಕ್ ಎಫ್​​ಡಿಗೂ ಅದಕ್ಕೂ ಏನು ವ್ಯತ್ಯಾಸ? ಯಾವುದು ಉತ್ತಮ?

ಫೆಡರಲ್ ಬ್ಯಾಂಕ್ ಎಫ್​ಡಿ ದರ ಪರಿಷ್ಕರಣೆ

ಫೆಡರಲ್ ಬ್ಯಾಂಕ್ ಕೂಡ ಠೇವಣಿ ದರಗಳನ್ನು ಈ ತಿಂಗಳು ಪರಿಷ್ಕರಣೆ ಮಾಡಿದೆ. ಸಾಮಾನ್ಯ ಗ್ರಾಹಕರಿಗೆ ಶೇ. 7.50ರವರೆಗೆ ಬಡ್ಡಿ ಕೊಡುತ್ತದೆ. 500 ದಿನಗಳ ಠೇವಣಿಗೆ ಗರಿಷ್ಠ ಬಡ್ಡಿ ಇದೆ. ಹಿರಿಯ ನಾಗರಿಕರ 500 ದಿನದ ಠೇವಣಿಗೆ ಶೇ. 8.15ರಷ್ಟು ಬಡ್ಡಿ ಕೊಡುತ್ತದೆ. 21 ತಿಂಗಳಿಂದ 3 ವರ್ಷ ಅವಧಿಯ ಠೇವಣಿಗೆ ಶೇ. 7.80ರಷ್ಟು ಬಡ್ಡಿ ಕೊಡುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
ಬೆಂಗಳೂರಿನಲ್ಲಿ ಫುಟ್ ಪಾತ್ ಅಂಗಡಿ ತೆರವುಗೊಳಿಸಲು ನಿರ್ಧಾರ: ಡಿಕೆಶಿ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
​ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಸಾವಿರಾರು ಜನರಿಗೆ ವಂಚನೆ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಝಾನ್ಸಿಯಲ್ಲಿ ಬಿರುಗಾಳಿಯ ಹೊಡೆತಕ್ಕೆ 70ಕ್ಕೂ ಹೆಚ್ಚು ಗಿಳಿಗಳು ಬಲಿ
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಹತ್ತು ಸಾವಿರ ಜನ ಕೂತು ವೀಕ್ಷಿಸಲು ಗ್ಯಾಲರಿಗಳ ವ್ಯವಸ್ಥೆ: ಶಿವಕುಮಾರ್
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳನ್ನು ಭೇಟಿಯಾದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬೆಂಗಳೂರಿನಲ್ಲಿ ಸುರಂಗ ಮಾರ್ಗದ ಬಗ್ಗೆ ಮಹತ್ವದ ಅಪ್ಡೇಟ್​ ನೀಡಿದ ಡಿಕೆಶಿ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಬಸವಣ್ಣನವರನ್ನು ಟೀಕಿಸುವ ಬಸನಗೌಡ ಯತ್ನಾಳ್ ಒಬ್ಬ ಅರೆಹುಚ್ಚ: ರೇಣುಕಾಚಾರ್ಯ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಹಠಾವ್ ಬಿಜೆಪಿ ಬಚಾವ್ ಅನ್ನೋದು ವಿಪಕ್ಷ ನಾಯಕರ ಅಜೆಂಡಾ ಆಗಿದೆ: ಖರ್ಗೆ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು