ಆಧಾರ್ ಅಪ್ಡೇಟ್ನಿಂದ ಹಿಡಿದು ನಿಷ್ಕ್ರಿಯ ಯುಪಿಐ ಐಡಿವರೆಗೂ ಡಿಸೆಂಬರ್ 31ಕ್ಕೆ ಡೆಡ್ಲೈನ್ ಇರುವ ಕಾರ್ಯಗಳಿವು
Financial Tasks December 31st Deadline: ಡಿಸೆಂಬರ್ 31ಕ್ಕೆ ಡೆಡ್ಲೈನ್ ಇರುವ ಕೆಲ ಪ್ರಮುಖ ಹಣಕಾಸು ಕಾರ್ಯಗಳಿವೆ. ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಲು ಡಿಸೆಂಬರ್ 31ವರೆಗೂ ಅವಕಾಶ ಇದೆ. ಬ್ಯಾಂಕುಗಳು ತಮ್ಮ ಗ್ರಾಹಕರೊಂದಿಗೆ ಲಾಕರ್ ಅಗ್ರಿಮೆಂಟ್ ನವೀಕರಿಸಲು ಮೊದಲ ಹಂತದ ಯೋಜನೆಗೆ ಡೆಡ್ಲೈನ್ ಈ ತಿಂಗಳ ಕೊನೆ. ಎಸ್ಬಿಐನ ಅಮೃತ್ ಕಳಶ್ ಸೇರಿದಂತೆ ಕೆಲ ಸ್ಪೆಷಲ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್ಗಳಿಗೆ ಡಿಸೆಂಬರ್ 31, ಕೊನೆಯ ದಿನವಾಗಿದೆ.
2023ರ ವರ್ಷ ಮುಗಿದು ಹೊಸ ವರ್ಷ ಬರಲು ಕೆಲವೇ ದಿನಗಳಿವೆ. ಹೊಸ ವರ್ಷದ ಸಂಭ್ರಮ ಮತ್ತು ರಜೆಗಳ ತರಾತುರಿಯಲ್ಲಿ ಕೆಲವಿಷ್ಟು ಡೆಡ್ಲೈನ್ಗಳು ಮರೆತುಹೋಗಬಹುದು. ಡಿಸೆಂಬರ್ 31ಕ್ಕೆ ಗಡುವು (December 31st Deadline) ಇರುವ ಸಂಗತಿಗಳಿವೆ. ಆಧಾರ್ ಅಪ್ಡೇಟ್ ಮಾಡುವುದರಿಂದ ಹಿಡಿದು ಡೀಮ್ಯಾಟ್ ಅಕೌಂಟ್ಗಳಿಗೆ ನಾಮಿನೇಶನ್ ಹೆಸರಿಸುವವರೆಗೂ ವಿವಿಧ ಕಾರ್ಯಗಳಿಗೆ ಡೆಡ್ಲೈನ್ ಡಿಸೆಂಬರ್ 31 ಆಗಿದೆ.
ಆಧಾರ್ ಅಪ್ಡೇಟ್ ಮಾಡಲು ಡೆಡ್ಲೈನ್
ಆಧಾರ್ ಕಾರ್ಡ್ ಅನ್ನು ಆನ್ಲೈನ್ನಲ್ಲಿ ಶುಲ್ಕರಹಿತವಾಗಿ ಉಚಿತವಾಗಿ ಅಪ್ಡೇಟ್ ಮಾಡಲು ಸರ್ಕಾರ ಅವಕಾಶ ನೀಡಿದೆ. ಈ ಸೌಲಭ್ಯ 2023ರ ಡಿಸೆಂಬರ್ 31ರವರೆಗೆ ಮಾತ್ರ ಇರುವುದು. ಆಧಾರ್ನಲ್ಲಿ ನಿಮ್ಮ ವಿಳಾಸ, ಫೋನ್ ನಂಬರ್, ಇಮೇಲ್ ವಿಳಾಸ ಇತ್ಯಾದಿಯನ್ನು ನೀವು ಉಚಿತವಾಗಿ ಬದಲಾಯಿಸಬಹುದು. ಡಿಸೆಂಬರ್ 31ರ ಬಳಿಕವೂ ಇವುಗಳನ್ನು ಅಪ್ಡೇಟ್ ಮಾಡಬಹುದಾದರೂ ನಿರ್ದಿಷ್ಟ ಶುಲ್ಕ ಪಾವತಿಸಬೇಕಾಗುತ್ತದೆ.
ಬ್ಯಾಂಕ್ ಲಾಕರ್ ಅಗ್ರೀಮೆಂಟ್ ನವೀಕರಣ
ಬ್ಯಾಂಕುಗಳು ತಮ್ಮಲ್ಲಿ ಲಾಕರ್ ಸರ್ವಿಸ್ ಪಡೆದಿರುವ ಗ್ರಾಹಕರೊಂದಿಗೆ ಒಪ್ಪಂದ ನವೀಕರಣ ಮಾಡಬೇಕಿದೆ. ಹಂತ ಹಂತವಾಗಿ ಇದನ್ನು ಮಾಡಲು ಆರ್ಬಿಐ ಸೂಚಿಸಿದೆ. ಮೊದಲ ಹಂತದ ಡೆಡ್ಲೈನ್ ಆಗಿ ಡಿಸೆಂಬರ್ 31 ಅನ್ನು ಫಿಕ್ಸ್ ಮಾಡಲಾಗಿದೆ.
ಇದನ್ನೂ ಓದಿ: Kisan Vikas Patra: ಕಿಸಾನ್ ವಿಕಾಸ್ ಪತ್ರ ಸ್ಕೀಮ್; ನಿಮ್ಮ ಹಣ 10 ವರ್ಷದೊಳಗೆ ಡಬಲ್ ಆಗುತ್ತೆ; ಕೆವಿಪಿ ಪಡೆಯುವುದು ಹೇಗೆ?
ಡಿಮ್ಯಾಟ್ ಅಕೌಂಟ್ಗಳಿಗೆ ನಾಮಿನೇಶನ್ ಸಲ್ಲಿಸಬೇಕು
ಡಿಮ್ಯಾಟ್ ಖಾತೆಗಳಿಗೆ ನಾಮಿನೇಶನ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಸೆಬಿ ಡಿಸೆಂಬರ್ 31 ಅನ್ನು ಡೆಡ್ಲೈನ್ ಆಗಿ ನಿಗದಿ ಮಾಡಿದೆ.
ವಿಶೇಷ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳು ಕೊನೆ
ಕೆಲ ಬ್ಯಾಂಕುಗಳ ವಿಶೇಷ ಠೇವಣಿ ಯೋಜನೆಗಳು ಡಿಸೆಂಬರ್ 31ಕ್ಕೆ ಕೊನೆಗೊಳ್ಳುತ್ತವೆ. ಎಸ್ಬಿಐನ ಅಮೃತ್ ಕಳಶ್ ಎಫ್ಡಿ, ಇಂಡಿಯನ್ ಬ್ಯಾಂಕ್ನ ಇಂಡ್ ಸೂಪರ್ 400 ಮತ್ತು ಇಂಡ್ ಸೂಪರ್ 300 ಡೇಸ್ ಇತ್ಯಾದಿ ಎಫ್ಡಿ ಸ್ಕೀಮ್ಗಳು ಇವೆ. ಈ ವಿಶೇಷ ಠೇವಣಿ ಯೋಜನೆಗಳು ಮಾಮೂಲಿಗಿಂತ ತುಸು ಹೆಚ್ಚು ಬಡ್ಡಿ ಕೊಡುತ್ತವೆ.
ಸಕ್ರಿಯವಿಲ್ಲದ ಯುಪಿಐ ಐಡಿಗಳು ಬಂದ್ ಆಗುತ್ತವೆ
ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಳಕೆಯಲ್ಲಿ ಇಲ್ಲದ ಯುಪಿಐ ಐಡಿಯನ್ನು ನಿಷ್ಕ್ರಿಯಗೊಳಿಸಬೇಕೆಂದು ನಿಯಮ ಮಾಡಲಾಗಿದೆ. ಅದರಂತೆ ಡಿಸೆಂಬರ್ 31ರ ಬಳಿಕ ಇಂಥ ಯುಪಿಐ ಐಡಿಗಳು ಬಂದ್ ಆಗುತ್ತವೆ. ಅವುಗಳನ್ನು ಬಳಸಲು ಆಗುವುದಿಲ್ಲ. ನಿಮ್ಮಲ್ಲಿ ಅಂಥ ಯುಪಿಐ ಐಡಿ ಇದ್ದರೆ ಅದರಿಂದ ವಹಿವಾಟು ನಡೆಸುವ ಮೂಲಕ ಮರುಚಾಲನೆಗೊಳಿಸಿ.
ಇದನ್ನೂ ಓದಿ: How to: ಮ್ಯುಚುವಲ್ ಫಂಡ್ನಲ್ಲಿ ಹೂಡಿಕೆ ಕ್ರಮಗಳೇನು? ಹೂಡಿಕೆ ಮಾಡುವ ಮುನ್ನ ತಿಳಿದಿರಬೇಕಾದ ವಿಚಾರಗಳಿವು…
ಅಪ್ಡೇಟೆಡ್ ಐಟಿಆರ್ ಸಲ್ಲಿಸಲು ಡೆಡ್ಲೈನ್
ಆದಾಯ ತೆರಿಗೆ ರಿಟರ್ನ್ ಸಲ್ಲಿಸದೇ ಇರುವವರಿಗೆ ಡಿಸೆಂಬರ್ 31ರವರೆಗೆ ಕಾಲಾವಕಾಶ ಇದೆ. ಲೇಟ್ ಫೀ ಪಾವತಿಸಿ ರಿಟರ್ನ್ ಫೈಲ್ ಮಾಡಬಹುದು. ಡಿಸೆಂಬರ್ 31ರ ಬಳಿಕ ಸಲ್ಲಿಕೆ ಮಾಡಬಹುದಾದರೂ ದೊಡ್ಡ ಮೊತ್ತದ ದಂಡ ಪಾವತಿಸಬೇಕಾಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ