ಸಂಕ್ರಾಂತಿ, ಗಣರಾಜ್ಯೋತ್ಸವ ಇತ್ಯಾದಿ… 2024ರ ಜನವರಿ ತಿಂಗಳಲ್ಲಿ ಬ್ಯಾಂಕ್ ರಜಾ ದಿನಗಳೆಷ್ಟು? ಕರ್ನಾಟಕದಲ್ಲಿ ಯಾವ್ಯಾವತ್ತು ರಜೆ?
Bank Holidays List 2024 January: ಆರ್ಬಿಐ ಕ್ಯಾಲೆಂಡರ್ ಪ್ರಕಾರ ಭಾರತದಾದ್ಯಂತ ವಿವಿಧ ಪ್ರದೇಶಗಳಲ್ಲಿ 2024ರ ಜನವರಿ ತಿಂಗಳಲ್ಲಿ ಒಟ್ಟು 16 ದಿನಗಳು ಬ್ಯಾಂಕುಗಳಿಗೆ ರಜೆ ಇರುತ್ತದೆ. ಗಣರಾಜ್ಯೋತ್ಸವ, ಸಂಕ್ರಾಂತಿ, ಪೊಂಗಲ್, ಗುರು ಗೋವಿಂದ್ ಜಯಂತಿ, ಸುಭಾಷ್ ಚಂದ್ರ ಬೋಸ್ ಜಯಂತಿ ಇತ್ಯಾದಿಗೆ ರಜೆ ಇದೆ. ಕರ್ನಾಟಕದಲ್ಲಿ ಜನವರಿ ತಿಂಗಳಲ್ಲಿ 9 ದಿನಗಳ ಕಾಲ ರಜೆ ಇದೆ. ಇದರಲ್ಲಿ ಭಾನುವಾರ, ಶನಿವಾರದ ರಜೆಗಳೂ ಸೇರಿವೆ.
ಡಿಸೆಂಬರ್ ಮುಗಿಯುತ್ತಿದ್ದು, ಹೊಸ ವರ್ಷಾರಂಭದ ಸಂಭ್ರಮ. ಸೆಪ್ಟೆಂಬರ್ನಿಂದ ಆರಂಭವಾದ ಹಬ್ಬಗಳ ಸೀಸನ್ ಮುಕ್ತಾಯವಾಗಿದೆ. ಆದರೆ, ರಜಾ ದಿನಗಳ ಸುಗ್ಗಿ ಜನವರಿಯಲ್ಲೂ ಸ್ವಲ್ಪ ಮುಂದುವರಿಯಲಿದೆ. ಆರ್ಬಿಐ ಕ್ಯಾಲೆಂಡರ್ ಪ್ರಕಾರ ಒಟ್ಟು 16 ದಿನಗಳು ಬ್ಯಾಂಕುಗಳಿಗೆ ರಜೆ (Bank Holidays) ಇದೆ. ಬೇರೆ ಬೇರೆ ಪ್ರದೇಶಗಳಲ್ಲಿ ರಜಾ ದಿನಗಳಲ್ಲಿ ವ್ಯತ್ಯಾಸ ಇದೆ. ಜನವರಿ 11ರಿಂದ 17ರವರೆಗೆ ಸತತ ಏಳು ದಿನಗಳ ಕಾಲ ರಜೆಗಳಿರುವುದು ವಿಶೇಷ. ಕರ್ನಾಟಕದಲ್ಲಿ ಈ ಅವಧಿಯಲ್ಲಿ ಜನವರಿ 13ರಿಂದ 15ರವರೆಗೆ ಸತತ ಮೂರು ದಿನ ರಜೆ ಇದೆ. ಜನವರಿ 26, ಗಣರಾಜ್ಯೋತ್ಸವ ಸಾರ್ವತ್ರಿಕ ರಜೆಯಾಗಿದೆ. ಸಂಕ್ರಾಂತಿ, ಪೊಂಗಲ್, ಗುರು ಗೋವಿಂದ್ ಜಯಂತಿ, ಸುಭಾಷ್ ಚಂದ್ರ ಬೋಸ್ ಜಯಂತಿ ಇತ್ಯಾದಿ ಹಬ್ಬ ಹರಿದಿನಗಳಿಗೆ ವಿವಿಧ ಪ್ರದೇಶಗಳಲ್ಲಿ ರಜೆ ಇರುತ್ತದೆ.
ಜನವರಿ 2024ರಲ್ಲಿ ಭಾರತದಲ್ಲಿ ಬ್ಯಾಂಕ್ ರಜಾ ದಿನಗಳ ಪಟ್ಟಿ
- ಜನವರಿ 1, ಸೋಮವಾರ: ಹೊಸ ವರ್ಷದ ಮೊದಲ ದಿನ
- ಜನವರಿ 7: ಭಾನುವಾರದ ರಜೆ
- ಜನವರಿ 11, ಗುರುವಾರ: ಮಿಷನರಿ ದಿನ (ಮಿಝೋರಾಮ್ ರಾಜ್ಯದಲ್ಲಿ ರಜೆ)
- ಜನವರಿ 12, ಶುಕ್ರವಾರ: ಸ್ವಾಮಿ ವಿವೇಕಾನಂದ ಜಯಂತಿ (ಪಶ್ಚಿಮ ಬಂಗಾಳದಲ್ಲಿ ರಜೆ)
- ಜನವರಿ 13: ಎರಡನೇ ಶನಿವಾರದ ರಜೆ
- ಜನವರಿ 14: ಸಂಕ್ರಾಂತಿ, ಹಾಗೂ ಭಾನುವಾರದ ರಜೆ
- ಜನವರಿ 15, ಸೋಮವಾರ: ಪೊಂಗಲ್, ತಿರುವಳ್ಳುವರ್ ದಿನ (ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ರಜೆ)
- ಜನವರಿ 16, ಮಂಗಳವಾರ: ತುಸು ಪೂಜಾ (ಪಶ್ಚಿಮ ಬಂಗಾಳ ಮತ್ತು ಅಸ್ಸಾಮ್ನಲ್ಲಿ ರಜೆ)
- ಜನವರಿ 17, ಬುಧವಾರ: ಗುರು ಗೋವಿಂದ್ ಸಿಂಗ್ ಜಯಂತಿ
- ಜನವರಿ 21: ಭಾನುವಾರದ ರಜೆ
- ಜನವರಿ 23, ಮಂಗಳವಾರ: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
- ಜನವರಿ 25, ಗುರುವಾರ: ಹಿಮಾಚಲಪ್ರದೇಶ ರಾಜ್ಯ ದಿನ
- ಜನವರಿ 26, ಶುಕ್ರವಾರ: ಗಣರಾಜ್ಯೋತ್ಸವ
- ಜನವರಿ 27: ನಾಲ್ಕನೇ ಶನಿವಾರದ ರಜೆ
- ಜನವರಿ 28: ಭಾನುವಾರದ ರಜೆ
- ಜನವರಿ 31, ಬುಧವಾರ: ಮೀ ದಾಮ್ ಮೇ ಫೀ ಉತ್ಸವ (ಅಸ್ಸಾಮ್ನಲ್ಲಿ ರಜೆ)
ಇದನ್ನೂ ಓದಿ: ನಾಲ್ಕು ಬ್ಯಾಂಕುಗಳಿಂದ ಎಫ್ಡಿ ದರ ಹೆಚ್ಚಳ; ಠೇವಣಿಗಳಿಗೆ ಶೇ. 8.60ರವರೆಗೆ ಬಡ್ಡಿ; ಡೆಪಾಸಿಟ್ ಇಡಲು ಸುವರ್ಣಾವಕಾಶ
ಕರ್ನಾಟಕದಲ್ಲಿ 2024ರ ಜನವರಿಯಲ್ಲಿ ಇರುವ ಬ್ಯಾಂಕ್ ರಜೆಗಳು
ಕರ್ನಾಟಕದಲ್ಲಿ ಜನವರಿಯಲ್ಲಿ 9 ದಿನಗಳಷ್ಟು ರಜೆಗಳು ಬ್ಯಾಂಕುಗಳಿಗೆ ಇವೆ. ಇದರಲ್ಲಿ ಸಂಕ್ರಾಂತಿ ಮತ್ತು ಗಣರಾಜ್ಯೋತ್ಸವ ಸಾರ್ವತ್ರಿಕ ರಜೆಗಳಾಗಿವೆ. ಭಾನುವಾರ ಮತ್ತು ಶನಿವಾರದ ರಜೆಗಳೂ ಒಳಗೊಂಡಿವೆ.
- ಜನವರಿ 1, ಸೋಮವಾರ: ಹೊಸ ವರ್ಷದ ಮೊದಲ ದಿನ
- ಜನವರಿ 7: ಭಾನುವಾರದ ರಜೆ
- ಜನವರಿ 13: ಎರಡನೇ ಶನಿವಾರದ ರಜೆ
- ಜನವರಿ 14: ಭಾನುವಾರದ ರಜೆ
- ಜನವರಿ 15, ಸೋಮವಾರ: ಸಂಕ್ರಾಂತಿ,
- ಜನವರಿ 21: ಭಾನುವಾರದ ರಜೆ
- ಜನವರಿ 26, ಶುಕ್ರವಾರ: ಗಣರಾಜ್ಯೋತ್ಸವ
- ಜನವರಿ 27: ನಾಲ್ಕನೇ ಶನಿವಾರದ ರಜೆ
- ಜನವರಿ 28: ಭಾನುವಾರದ ರಜೆ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ