Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಿಲಾಯನ್ಸ್ ಮತ್ತು ವಾಲ್ಟ್ ಡಿಸ್ನೀ ಮಧ್ಯೆ ನಾನ್-ಬೈಂಡಿಂಗ್ ಒಪ್ಪಂದಕ್ಕೆ ಸಹಿ; ಭಾರತದ ಮನರಂಜನಾ ಕ್ಷೇತ್ರದಲ್ಲಿ ಮತ್ತೊಂದು ದೈತ್ಯನ ಸೃಷ್ಟಿ

Reliance Industries and Walt Disney Sign Non Binding Agreement: ರಿಲಾಯನ್ಸ್ ಇಂಡಸ್ಟ್ರೀಸ್ ಮತ್ತು ವಾಲ್ಟ್ ಡಿಸ್ನಿಯ ಭಾರತೀಯ ಮೀಡಿಯಾ ಆಪರೇಷನ್ಸ್ ಅನ್ನು ವಿಲೀನಗೊಳಿಸಲು ನಾನ್ ಬೈಂಡಿಂಗ್ ಒಪ್ಪಂದವಾಗಿದೆ. ಆರ್​ಐಎಲ್ ಮಾಲಕತ್ವದ ವಯಾಕಾಮ್18 ಸಂಸ್ಥೆಯ ಅಡಿಯಲ್ಲಿ ಹೊಸ ಉಪಸಂಸ್ಥೆ ಸೃಷ್ಟಿಯಾಗಲಿದ್ದು, ಮನರಂಜನಾ ಕ್ಷೇತ್ರಕ್ಕೆ ಹೊಸ ದೈತ್ಯನ ಉದಯವಾಗಲಿದೆ. ಹೊಸ ಸಂಸ್ಥೆಯಲ್ಲಿ ರಿಲಾಯನ್ಸ್ ಪಾಲು ಶೇ. 51 ಇದ್ದರೆ, ವಾಲ್ಟ್ ಡಿಸ್ನಿ ಪಾಲು ಶೇ. 49ರಷ್ಟು ಇರಬಹುದು ಎಂದು ವರದಿಗಳು ಹೇಳಿವೆ.

ರಿಲಾಯನ್ಸ್ ಮತ್ತು ವಾಲ್ಟ್ ಡಿಸ್ನೀ ಮಧ್ಯೆ ನಾನ್-ಬೈಂಡಿಂಗ್ ಒಪ್ಪಂದಕ್ಕೆ ಸಹಿ; ಭಾರತದ ಮನರಂಜನಾ ಕ್ಷೇತ್ರದಲ್ಲಿ ಮತ್ತೊಂದು ದೈತ್ಯನ ಸೃಷ್ಟಿ
ರಿಲಾಯನ್ಸ್ ಮತ್ತು ವಾಲ್ಟ್ ಡಿಸ್ನೀ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 25, 2023 | 6:15 PM

ನವದೆಹಲಿ, ಡಿಸೆಂಬರ್ 25: ಮನರಂಜನಾ ಲೋಕದಲ್ಲೊಂದು ಹೊಸ ದೈತ್ಯನ ಉದಯಕ್ಕೆ ಎಡೆ ಮಾಡಿಕೊಡುವ ಬೆಳವಣಿಗೆ ಇದು. ರಿಲಾಯನ್ಸ್ ಇಂಡಸ್ಟ್ರೀಸ್ ಮತ್ತು ವಾಲ್ಟ್ ಡಿಸ್ನಿ ಸಂಸ್ಥೆಗಳ ಭಾರತೀಯ ಮಾಧ್ಯಮ ಕಾರ್ಯಾಚರಣೆಗಳು ವಿಲೀನಗೊಳ್ಳುತ್ತಿವೆ. ಈ ಸಂಬಂಧ ಎರಡೂ ಸಂಸ್ಥೆಗಳು ನಾನ್ ಬೈಂಡಿಂಗ್ ಟರ್ಮ್ ಶೀಟ್​ಗೆ ಸಹಿ ಹಾಕಿವೆ (Reliance Industries and Walt Disney Sign Non Binding Agreement) ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಆದರೆ, ಎರಡೂ ಸಂಸ್ಥೆಗಳಿಂದ ಇನ್ನೂ ಕೂಡ ಅಧಿಕೃತ ಹೇಳಿಕೆ ಬಂದಿಲ್ಲ.

ನಾನ್ ಬೈಂಡಿಂಗ್ ಟರ್ಮ್​ಶೀಟ್ ಎಂಬುದು ಹೊಸ ಹೂಡಿಕೆದಾರರ ಮೂಲಭೂತ ಅಂಶಗಳಿರುವ ಒಂದು ಚೌಕಟ್ಟು. ಕಾನೂನಿಗೆ ಒಳಪಡುವ ಈ ಚೌಕಟ್ಟು ಆಧಾರದ ಮೇಲೆ ಮುಂದಿನ ಒಪ್ಪಂದಗಳು ರೂಪುಗೊಳ್ಳುತ್ತವೆ. ವರದಿ ಪ್ರಕಾರ ರಿಲಾಯನ್ಸ್ ಇಂಡಸ್ಟ್ರೀಸ್ ಮಾಲಕತ್ವದ ವಯಾಕಾಮ್19 ಸಂಸ್ಥೆಯ ಅಡಿಯಲ್ಲಿ ಒಂದು ಉಪಸಂಸ್ಥೆ ಸ್ಥಾಪನೆ ಆಗಲಿದ್ದು, ಆರ್​ಐಎಲ್ ಮತ್ತು ವಾಲ್ಟ್ ಡಿಸ್ನಿಯ ಎಲ್ಲಾ ಭಾರತೀಯ ಮಾಧ್ಯಮ ಚಟುವಟಿಕೆಗಳು ಅದರ ವ್ಯಾಪ್ತಿಗೆ ಬರಲಿವೆ. ವಿಲೀನದ ಬಳಿಕ ಸೃಷ್ಟಿಯಾಗುವ ಈ ಹೊಸ ಸಂಸ್ಥೆಯಲ್ಲಿ ರಿಲಾಯನ್ಸ್ ಶೇ. 51 ಹಾಗು ಡಿಸ್ನಿ ಶೇ. 49ರಷ್ಟು ಪಾಲು ಹೊಂದಿರಲಿವೆ. ಜಿಯೋ ಸಿನಿಮಾ ಕೂಡ ಈ ವಿಲೀನದ ಭಾಗವಾಗಿರುತ್ತದೆ.

ಇದನ್ನೂ ಓದಿ: ಯುಎಇ ತೈಲ ಖರೀದಿಗೆ ಭಾರತದಿಂದ ರುಪಾಯಿ ಕರೆನ್ಸಿಯಲ್ಲೇ ಹಣ ಪಾವತಿ; ಇದು ಆರಂಭಿಕ ಹೆಜ್ಜೆಗಳು ಮಾತ್ರ…

ಕಳೆದ ವಾರ ಬ್ರಿಟನ್ ದೇಶದಲ್ಲಿ ರಿಲಾಯನ್ಸ್ ಮತ್ತು ಡಿಸ್ನಿ ಮಧ್ಯೆ ಟರ್ಮ್ ಶೀಟ್​ಗೆ ಸಹಿ ಹಾಕಿರುವುದು ತಿಳಿದುಂದಿದೆ. 2024ರ ಫೆಬ್ರುವರಿ ತಿಂಗಳು ಮುಗಿಯುವುದರೊಳಗೆ ಮನರಂಜನೆ ಮತ್ತು ಮಾಧ್ಯಮ ವಿಲೀನದ ಬಹುಭಾಗವು ಅಂತಿಮಗೊಳ್ಳಬಹುದು. ಜನವರಿಯಲ್ಲೇ ಈ ಒಪ್ಪಂದವನ್ನು ಅಂತಿಮಗೊಳಿಸಬೇಕು ಎಂದು ರಿಲಾಯನ್ಸ್ ಪ್ರಯತ್ನಿಸಿತಾದರೂ ಪ್ರಾಧಿಕಾರಗಳ ಒಪ್ಪಿಗೆ ಸೇರಿದಂತೆ ಹಲವು ಪ್ರಕ್ರಿಯೆಗಳಾಗಲು ಫೆಬ್ರುವರಿ ಆಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ವಯಾಕಾಮ್18 ಅಡಿಯಲ್ಲಿ ಸ್ಥಾಪನೆಯಾಗುವ ಹೊಸ ಸಂಸ್ಥೆಯು ಭಾರತದ ಕಿರುತೆರೆ ಲೋಕದ ದೈತ್ಯ ಎನಿಸಲಿದೆ. ಝೀ ಎಂಟರ್ಟೈನ್ಮೆಂಟ್ ಮತ್ತು ಸೋನಿಗೆ ಪ್ರಬಲ ಸ್ಪರ್ಧೆ ಒಡ್ಡಲಿದೆ. ನೆಟ್​ಫ್ಲಿಕ್ಸ್, ಅಮೇಜಾನ್ ಪ್ರೈಮ್​ನಂತಹ ಪ್ರಬಲ ಒಟಿಟಿ ಪ್ಲಾಟ್​ಫಾರ್ಮ್​ಗಳಿಗೂ ಪ್ರಬಲ ಪೈಪೋಟಿ ಒಡ್ಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಿಕ್ಕಮಗಳೂರಿನಲ್ಲಿ ಮರುಕಳಿಸಿತು ಈಜುಕೊಳ ದುರಂತ: ಆಘಾತಕಾರಿ ವಿಡಿಯೋ ಇಲ್ಲಿದೆ
ಚಿಕ್ಕಮಗಳೂರಿನಲ್ಲಿ ಮರುಕಳಿಸಿತು ಈಜುಕೊಳ ದುರಂತ: ಆಘಾತಕಾರಿ ವಿಡಿಯೋ ಇಲ್ಲಿದೆ
ಬೆಂಗಳೂರು: ಎಸ್​ಎಸ್​ಎಲ್​ಸಿ ಓದುತ್ತಿರುವ ಇಬ್ಬರು ಬಾಲಕರ ಮೇಲೆ ಹಲ್ಲೆ
ಬೆಂಗಳೂರು: ಎಸ್​ಎಸ್​ಎಲ್​ಸಿ ಓದುತ್ತಿರುವ ಇಬ್ಬರು ಬಾಲಕರ ಮೇಲೆ ಹಲ್ಲೆ
ಮಂತ್ರಾಲಯ ಮಠದಲ್ಲಿ 30 ದಿನಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ
ಮಂತ್ರಾಲಯ ಮಠದಲ್ಲಿ 30 ದಿನಗಳಲ್ಲಿ 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹ
ಏಕನಾಥ್​ ಶಿಂಧೆಯನ್ನು ಅಪಹಾಸ್ಯ ಮಾಡಿದ ಕುನಾಲ್ ಕಮ್ರಾ
ಏಕನಾಥ್​ ಶಿಂಧೆಯನ್ನು ಅಪಹಾಸ್ಯ ಮಾಡಿದ ಕುನಾಲ್ ಕಮ್ರಾ
ಲಾಂಗ್ ಝಳಪಿಸಿದ ವಿನಯ್-ರಜತ್ ಮೇಲೆ ಬಿತ್ತು ಕೇಸ್; ಸಂಕಷ್ಟದಲ್ಲಿ ಗೆಳೆಯರು
ಲಾಂಗ್ ಝಳಪಿಸಿದ ವಿನಯ್-ರಜತ್ ಮೇಲೆ ಬಿತ್ತು ಕೇಸ್; ಸಂಕಷ್ಟದಲ್ಲಿ ಗೆಳೆಯರು
ಜಿಮ್ಸ್​ನಲ್ಲಿ ಆಕ್ಸಿಜನ್​ಗಾಗಿ ರೋಗಿಗಳ ನರಳಾಟ, ವಿಡಿಯೋ ವೈರಲ್
ಜಿಮ್ಸ್​ನಲ್ಲಿ ಆಕ್ಸಿಜನ್​ಗಾಗಿ ರೋಗಿಗಳ ನರಳಾಟ, ವಿಡಿಯೋ ವೈರಲ್
ಮನೆಯಲ್ಲಿ ಪದೇ ಪದೇ ಕೂದಲು ಬಿದ್ದರೆ ಅಪಶಕುನವೇ
ಮನೆಯಲ್ಲಿ ಪದೇ ಪದೇ ಕೂದಲು ಬಿದ್ದರೆ ಅಪಶಕುನವೇ
Daily Horoscope: ಧನಸ್ಸು ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ದಿನವಾಗಿದೆ
Daily Horoscope: ಧನಸ್ಸು ರಾಶಿಯವರಿಗೆ ಆರ್ಥಿಕವಾಗಿ ಉತ್ತಮ ದಿನವಾಗಿದೆ
‘ಟಾಕ್ಸಿಕ್’​​ ಬಗ್ಗೆ ಅಪ್ಡೇಟ್ ಕೊಡ್ತೀನಿ ಎಂದ ನಟ ಯಶ್​
‘ಟಾಕ್ಸಿಕ್’​​ ಬಗ್ಗೆ ಅಪ್ಡೇಟ್ ಕೊಡ್ತೀನಿ ಎಂದ ನಟ ಯಶ್​
43ನೇ ವಯಸ್ಸಿನಲ್ಲೂ ಧೋನಿಯ ಮಿಂಚಿನ ಸ್ಟಂಪಿಂಗ್; ಪೆವಿಲಿಯನ್ ಸೇರಿದ ಸೂರ್ಯ
43ನೇ ವಯಸ್ಸಿನಲ್ಲೂ ಧೋನಿಯ ಮಿಂಚಿನ ಸ್ಟಂಪಿಂಗ್; ಪೆವಿಲಿಯನ್ ಸೇರಿದ ಸೂರ್ಯ