AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Luxury homes: ಐಷಾರಾಮಿ ಮನೆಗಳಲ್ಲಿ ಬೆಂಗಳೂರು, ಮುಂಬೈ ಅನ್ನು ಹಿಂದಿಕ್ಕಿದೆ ಗುರುಗ್ರಾಮ

Gurugram pips Mumbai to become India's largest market for ultra luxury homes: 2025ರ ಕ್ಯಾಲಂಡರ್ ವರ್ಷದಲ್ಲಿ 10 ಕೋಟಿ ರೂಗೂ ಅಧಿಕ ಮೌಲ್ಯದ ಐಷಾರಾಮಿ ಮನೆಗಳು ಅತಿಹೆಚ್ಚು ಮಾರಾಟ ಕಂಡಿದ್ದು ಗುರುಗ್ರಾಮ್. ಇಷ್ಟು ವರ್ಷ ನಂಬರ್ ಒನ್ ಸ್ಥಾನದಲ್ಲಿದ್ದ ಮುಂಬೈ ಅನ್ನು ಹರ್ಯಾಣದ ಈ ನಗರ ಹಿಂದಿಕ್ಕಿದೆ. ಐಷಾರಾಮಿ ಮನೆಗಳ ಮಾರಾಟದ ವಿಚಾರದಲ್ಲಿ ಬೆಂಗಳೂರು ಹೈದರಾಬಾದ್​ಗಿಂತಲೂ ಹಿಂದಿದೆ.

Luxury homes: ಐಷಾರಾಮಿ ಮನೆಗಳಲ್ಲಿ ಬೆಂಗಳೂರು, ಮುಂಬೈ ಅನ್ನು ಹಿಂದಿಕ್ಕಿದೆ ಗುರುಗ್ರಾಮ
ಲಕ್ಷುರಿ ಮನೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 23, 2026 | 4:02 PM

Share

ನವದೆಹಲಿ, ಫೆಬ್ರುವರಿ 23: ಹತ್ತು ಕೋಟಿ ರೂಗೂ ಅಧಿಕ ಮೌಲ್ಯದ ಅತಿ ಐಷಾರಾಮಿ ಮನೆಗಳಿಗೆ (Ultra-luxury homes) ದೇಶದಲ್ಲೇ ಅತಿದೊಡ್ಡ ಮಾರುಕಟ್ಟೆ ಎಂದರೆ ಬೆಂಗಳೂರು, ಮುಂಬೈ, ದೆಹಲಿ ಮುಂತಾದ ನಗರಗಳ ಹೆಸರು ಮೊದಲು ಎದುರಾಗುತ್ತದೆ. ಆದರೆ, 2025ರಲ್ಲಿ ಅಲ್ಟ್ರಾ ಲಕ್ಷುರಿ ಮನೆಗಳಿಗೆ ದೇಶದಲ್ಲೇ ಅತಿದೊಡ್ಡ ಮಾರುಕಟ್ಟೆ ಎನಿಸಿದ್ದು ಗುರುಗ್ರಾಮ್ ಅಂತೆ. ಇಂಡಿಯಾ ಸೋತೆಬೈಸ್ ಇಂಟರ್ನ್ಯಾಷನಲ್ ರಿಯಾಲ್ಟಿ ಹಾಗೂ ಸಿಆರ್​ಇ ಮ್ಯಾಟ್ರಿಕ್ಸ್​ನ ಇತ್ತೀಚಿನ ಹೈ ಎಂಡ್ ಲಕ್ಸುರಿ ಹೌಸಿಂಗ್ ರಿಪೋರ್ಟ್ ಪ್ರಕಾರ 10 ಕೋಟಿ ರೂಗೂ ಅಧಿಕ ಮೌಲ್ಯದ ಮನೆಗಳು ಅತಿಹೆಚ್ಚು ಸೇಲ್ ಆಗಿದ್ದು ಗುರುಗ್ರಾಮ್​ನಲ್ಲಿ.

ದೆಹಲಿ ಎಡಬದಿಯಲ್ಲಿರುವ, ಹಾಗೂ ಹರ್ಯಾಣ ರಾಜ್ಯಕ್ಕೆ ಸೇರಿದ ಗುರುಗ್ರಾಮ್​ನಲ್ಲಿ 2025ರ ಕ್ಯಾಲಂಡರ್ ವರ್ಷದಲ್ಲಿ 24,120 ಕೋಟಿ ರೂ ಮೊತ್ತದ ಅಲ್ಟ್ರಾ ಲಕ್ಷುರಿ ಮನೆಗಳು ಮಾರಾಟವಾಗಿವೆಯಂತೆ. ಇದು ದೇಶದಲ್ಲೇ ಗರಿಷ್ಠ.

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಅತಿಯಾಗಿ ಏರಿದ್ದು ಯಾಕೆಂದು ಕಾರಣ ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್

ಈ ವರದಿ ಪ್ರಕಾರ, 2025ರಲ್ಲಿ ಗುರುಗ್ರಾಮ್​ನಲ್ಲಿ ಮಾರಾಟವಾದ 10 ಕೋಟಿ ರೂಗೂ ಅಧಿಕ ಮೌಲ್ಯದ ಐಷಾರಾಮಿ ಮನೆಗಳ ಸಂಖ್ಯೆ 1,494. ಕೇವಲ ಎರಡು ವರ್ಷಗಳ ಹಿಂದೆ (2023) ಇಲ್ಲಿ ಮಾರಾಟವಾದ ಇಂಥ ಮನೆಗಳ ಸಂಖ್ಯೆ ಕೇವಲ 155. ಈಗ ಇಷ್ಟು ಸಂಖ್ಯೆಯಲ್ಲಿ ಮಾರಾಟ ಹೆಚ್ಚಳ ಆಗಿರುವುದು ಸೋಜಿಗದ ಸಂಗತಿ. ಎರಡೇ ವರ್ಷದಲ್ಲಿ ಬಹುತೇಕ ಹತ್ತು ಪಟ್ಟು ಹೆಚ್ಚು ಮನೆಗಳು ಸೇಲ್ ಆಗಿವೆ.

ಐಷಾರಾಮಿ ಮನೆಗಳು 2025ರಲ್ಲಿ ಅತಿಹೆಚ್ಚು ಮಾರಾಟ ಕಂಡ ನಗರಗಳು (10 ಕೋಟಿ ರೂಗಿಂತ ಹೆಚ್ಚು)

  1. ಗುರುಗ್ರಾಮ್: 24,120 ಕೋಟಿ ರೂ
  2. ಮುಂಬೈ: 21,902 ಕೋಟಿ ರೂ
  3. ನೋಯ್ಡಾ: 9,358 ಕೋಟಿ ರೂ
  4. ಹೈದರಾಬಾದ್: 8,140 ಕೋಟಿ ರೂ
  5. ಬೆಂಗಳೂರು: 2,319 ಕೋಟಿ ರೂ

ಇದನ್ನೂ ಓದಿ: ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನಲ್ಲಿ ನೂರಾರು ಕೋಟಿ ರೂ ಲೂಟಿ; ಹೂಡಿಕೆದಾರರಿಗೆ 14,000 ಕೋಟಿ ರೂ ನಷ್ಟ; ಏನಿದು ಹಗರಣ?

ಗುರುಗ್ರಾಮ್ ಕಳೆದ ಎರಡು ವರ್ಷದಲ್ಲಿ ಐಷಾರಾಮಿ ಮನೆಗಳಿಗೆ ದೊಡ್ಡ ಮಾರುಕಟ್ಟೆಯಾಗಿ ಬೆಳೆದಿರುವುದು ಹೇಗೆ? ಗುರುಗ್ರಾಮ್​ನಲ್ಲಿ ಲಕ್ಷುರಿ ಕಾರಿಡಾರ್​ಗಳು ಹೆಚ್ಚುತ್ತಿವೆ. ದ್ವಾರಕಾ ಎಕ್ಸ್​ಪ್ರೆಸ್​ವೇ, ಗಾಲ್ಫ್ ಕೋರ್ಸ್ ರೋಡ್, ಗಾಲ್ಫ್ ಕೋರ್ಸ್ ಎಕ್ಸ್​ಟೆನ್ಷನ್ ರೋಡ್ ಇತ್ಯಾದಿ ಸ್ಥಳಗಳು, ಮೂಲಸೌಕರ್ಯ ಅಭಿವೃದ್ಧಿ, ವಿವಿಧ ಪ್ರದೇಶಗಳ ನಡುವೆ ಸಂಪರ್ಕ ಹೆಚ್ಚಳ ಇತ್ಯಾದಿ ಕಾರಣಗಳಿಂದ ಶ್ರೀಮಂತರು ಗುರುಗ್ರಾಮ್​ನಲ್ಲಿ ಮನೆ ಮಾಡಿಕೊಂಡು ನೆಲಸಲು ಬಯಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!