ನವದೆಹಲಿ, ಫೆಬ್ರುವರಿ 22: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (PM Kisan Samman Nidhi Yojana) 16ನೇ ಕಂತಿನ ಹಣ ಇದೇ ಫೆಬ್ರುವರಿ 28ರಂದು ಸಿಗಲಿದೆ. ಪಿಎಂ ಕಿಸಾನ್ನ ಅಧಿಕೃತ ವೆಬ್ಸೈಟ್ನಲ್ಲೇ ಈ ಮಾಹಿತಿ ಪ್ರಕಟಿಸಲಾಗಿದೆ. ಫೆ. 28, ಬುಧವಾರದಂದು ಫಲಾನುಭವಿ ರೈತರ ಖಾತೆಗಳಿಗೆ 2,000 ರೂ ಹಣ ವರ್ಗಾವಣೆ ಆಗಲಿದೆ. 2023ರ ಡಿಸೆಂಬರ್ನಿಂದ 2024 ಮಾರ್ಚ್ವರೆಗಿನ ಅವಧಿಯ ಕಂತಿನ ಹಣ ಇದಾಗಿದೆ. 2023ರ ಆಗಸ್ಟ್ನಿಂದ ನವೆಂಬರ್ವರೆಗಿನ 15ನೇ ಕಂತಿನ ಹಣ ನವೆಂಬರ್ನಲ್ಲಿ ಬಿಡುಗಡೆಯಾಗಿತ್ತು. ಒಟ್ಟು 9 ಕೋಟಿಗೂ ತುಸು ಹೆಚ್ಚು ಫಲಾನುಭವಿಗಳ ಖಾತೆಗಳಿಗೆ ಸರ್ಕಾರ 18,000 ಕೋಟಿ ರೂ ಬಿಡುಗಡೆ ಮಾಡಿತ್ತು.
ನೀವು ಯೋಜನೆಗೆ ನೊಂದಾಯಿಸಿದ್ದರೂ ಇಕೆವೈಸಿ ಮಾಡಿಸಿಲ್ಲದಿದ್ದರೆ ಹಣ ಸಿಗುವುದಿಲ್ಲ. ಇಕೆವೈಸಿ ಮಾಡಿಸಿದ್ದು, ಫಲಾನುಭವಿ ಸ್ಥಿತಿ (Beneficiary Status) ಏನಿದೆ ಎಂದು ಪರಿಶೀಲಿಸಲು ಅವಕಾಶ ಇದೆ. ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋಗಬೇಕು. ಅದರ ಲಿಂಕ್ ಇಲ್ಲಿದೆ: pmkisan.gov.in
ಇಲ್ಲಿ ತುಸು ಕೆಳಗೆ ಸ್ಕ್ರಾಲ್ ಮಾಡಿದರೆ ಫಾರ್ಮರ್ಸ್ ಕಾರ್ನರ್ ಎಂಬ ಸೆಕ್ಷನ್ ಕಾಣಬಹುದು. ಅಲ್ಲಿರುವ ಹಲವು ಟ್ಯಾಬ್ಗಳಲ್ಲಿ ಬೆನಿಫಿಶಿಯರಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
ನೀವು ಯೋಜನೆಗೆ ನೊಂದಾಯಿಸಿದಾಗ ಸಿಗುವ ರಿಜಿಸ್ಟ್ರೇಶನ್ ನಂಬರ್ ನಮೂದಿಸಿ, ಕ್ಯಾಪ್ಚಾ ಕೋಡ್ ಹಾಕಿ, ಗೆಟ್ ಒಟಿಪಿ ಮೇಲೆ ಕ್ಲಿಕ್ ಮಾಡಿ.
ನಿಮ್ಮ ನೊಂದಾಯಿತ ಮೊಬೈಲ್ ನಂಬರ್ಗೆ ಬರುವ ಒಟಿಪಿ ಹಾಕಿ ಸಲ್ಲಿಸಿದರೆ ಯೋಜನೆಯಲ್ಲಿ ನಿಮ್ಮ ಬೆನಿಫಿಶಿಯರಿ ಸ್ಟೇಟಸ್ ತಿಳಿಯಬಹುದು.
ಒಂದು ವೇಳೆ ನಿಮಗೆ ರಿಜಿಸ್ಟ್ರೇಶನ್ ನಂಬರ್ ಗೊತ್ತಿಲ್ಲದೇ ಇದ್ದಲ್ಲಿ ಚಿಂತೆ ಪಡಬೇಕಿಲ್ಲ. ಮೊಬೈಲ್ ನಂಬರ್ ಅಥವಾ ಅಧಾರ್ ನಂಬರ್ ಮೂಲಕ ರಿಜಿಸ್ಟ್ರೇಶನ್ ಸಂಖ್ಯೆ ಪಡೆಯಬಹುದು.
ಇದನ್ನೂ ಓದಿ: ಈರುಳ್ಳಿ ಬೆಲೆ ಈಗ ಕುಸಿತ; ಆದರೆ ಮಾರ್ಚ್ನಲ್ಲಿ ಕಣ್ಣೀರು ಬರಿಸಲಿದೆಯಂತೆ ಬೆಲೆ ಏರಿಕೆ
ನಿಮ್ಮ ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ನೋಡಲೂ ಅವಕಾಶ ಇದೆ. ಪಿಎಂ ಕಿಸಾನ್ ವೆಬ್ಸೈಟ್ಗೆ ಹೋಗಿ ಫಾರ್ಮರ್ಸ್ ಕಾರ್ನರ್ ಸೆಕ್ಷನ್ನಲ್ಲಿ ಬೆನಿಫಿಶಿಯರಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ.
ಇದರಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್ (ತಾಲೂಕು) ಮತ್ತು ಗ್ರಾಮವನ್ನು ಆಯ್ಕೆ ಮಾಡಿ. ಆಗ ಆ ಗ್ರಾಮದಲ್ಲಿರವ ಪಿಎಂ ಕಿಸಾನ್ ಫಲಾನುಭವಿಗಳೆಲ್ಲರ ಪಟ್ಟಿ ಸಿಗುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಿಕೊಳ್ಳಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ