
ನವದೆಹಲಿ, ಜೂನ್ 18: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan scheme) 23ನೇ ಕಂತಿನ ಹಣ ಬಿಡುಗಡೆಯಾಗುವ ದಿನಾಂಕ ಬಹಿರಂಗಗೊಂಡಿದೆ. ಜೂನ್ 20, ಶನಿವಾರದಂದು 2,000 ರೂಗಳ ಕಂತು ಬಿಡುಗಡೆ ಆಗಲಿದೆ. ಪಿಎಂ ಕಿಸಾನ್ ಯೋಜನೆಯ ಅಧಿಕೃತ ಸೋಷಿಯಲ್ ಮೀಡಿಯಾ ಅಕೌಂಟ್ನಿಂದ ಇದು ಟ್ವೀಟ್ ಆಗಿದೆ. ಮಾರ್ಚ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಸ್ಸಾಂ ಭೇಟಿ ವೇಳೆ 22ನೇ ಕಂತಿನ ಹಣ ಬಿಡುಗಡೆ ಆಗಿತ್ತು. 9.32 ಕೋಟಿ ಫಲಾನುಭವಿ ರೈತರ ಖಾತೆಗಳಿಗೆ ಒಟ್ಟು 18,640 ಕೋಟಿ ರೂ ಹಣ ಜಮೆಯಾಗಿತ್ತು. ಈಗ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಾರಕೇಶ್ವರ್ನಲ್ಲಿ ಪ್ರಧಾನಿಗಳು 23ನೇ ಕಂತಿನ ಹಣ ಬಿಡುಗಡೆ ಘೋಷಿಸಲಿದ್ದಾರೆ.
ಸರ್ಕಾರ ಜಮೀನು ಹೊಂದಿರುವ ರೈತರ ವ್ಯವಸಾಯಕ್ಕೆ ಸಹಾಯವಾಗಲೆಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಆರಂಭಿಸಿತು. ಅದರಂತೆ ವರ್ಷಕ್ಕೆ 6,000 ರೂಗಳನ್ನು ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ. ಈವರೆಗೆ 22 ಕಂತುಗಳಲ್ಲಿ ಸರ್ಕಾರ ಬಿಡುಗಡೆ ಮಾಡಿರುವ ಒಟ್ಟು ಹಣ 4.25 ಲಕ್ಷ ಕೋಟಿ ರೂ ದಾಟಿದೆ. ಡಿಬಿಟಿ ಮೂಲಕ ಹಣವನ್ನು ಫಲಾನುಭವಿಗಳ ಬ್ಯಾಂಕ್ ಅಕೌಂಟ್ಗೆ ನೇರವಾಗಿ ಹಾಕಲಾಗುತ್ತದೆ. ಹೀಗಾಗಿ, ಹಣ ಪೋಲಾಗುವ ಸಾಧ್ಯತೆ ಕಡಿಮೆ ಇರುತ್ತದೆ.
ಪಿಎಂ ಕಿಸಾನ್ ಸ್ಕೀಮ್ನ ಎಕ್ಸ್ ಖಾತೆಯಿಂದ ಆದ ಟ್ವೀಟ್
2 Days to Go!
The 23rd instalment of the PM-KISAN Scheme will be released on 20 June 2026, providing timely financial assistance directly to farmers’ bank accounts.
Empowering farmers, strengthening agriculture, and advancing towards an Aatmanirbhar Bharat.#pmkisan pic.twitter.com/5jMSnSL0bD
— PM Kisan Samman Nidhi (@pmkisanofficial) June 18, 2026
ಇದನ್ನೂ ಓದಿ: ಎನ್ಎಸ್ಇ ಮೂಲಕ ಬರಲಿದೆ ಭಾರತದ ಅತಿದೊಡ್ಡ ಐಪಿಒ; ಹಣ ಹೂಡುವ ಮುನ್ನ ಈ ಪ್ರಮುಖ ಸಂಗತಿಗಳನ್ನು ತಿಳಿದಿರಿ
ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿದ್ದು, ನೊಂದಾಯಿಸಿದ್ದರೂ ಕೆಲ ರೈತರಿಗೆ ಹಣ ಸಿಗುತ್ತಿಲ್ಲ. ಇದಕ್ಕೆ ವಿವಿಧ ಕಾರಣಗಳಿವೆ:
ಇದನ್ನೂ ಓದಿ: ವಾಯು, ಜಲ ಮತ್ತು ನೆಲ, ಮೂರೂ ಸ್ತರಗಳಲ್ಲೂ ಅಮೋಘವೆನಿಸಿದೆ ಭಾರತದ ಸ್ವಂತ ಬಲದ ರಕ್ಷಣಾ ಸಾಮರ್ಥ್ಯ
ನೀವು ಪಿಎಂ ಕಿಸಾನ್ ಯೋಜನೆಯಲ್ಲಿ ನೊಂದಾಯಿಸಿದ್ದರೆ, ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇರುತ್ತದೆ. ಇದೆಯಾ ಇಲ್ಲವಾ ಎಂದು ಆನ್ಲೈನ್ನಲ್ಲೇ ಪರಿಶೀಲಿಸಬಹುದು:
ಇಲ್ಲಿ ನೀವು ಆಯ್ದುಕೊಂಡ ಗ್ರಾಮದಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಪ್ರತ್ಯಕ್ಷವಾಗುತ್ತದೆ. ಅದರಲ್ಲಿ ನಿಮ್ಮ ಹೆಸರಿದೆಯಾ ಪರಿಶೀಲಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:24 pm, Thu, 18 June 26