PM Kisan: ಮೊಬೈಲ್​ನಲ್ಲಿ ಮುಖ ಸ್ಕ್ಯಾನ್ ಮಾಡಿ, ಪಿಎಂ ಕಿಸಾನ್ ಸ್ಕೀಮ್​ಗೆ ಇಕೆವೈಸಿ ಪೂರ್ಣಗೊಳಿಸಿ; ಫಿಂಗರ್ ಪ್ರಿಂಟ್ ಬೇಕಿಲ್ಲ, ಕೂತಲ್ಲೇ ಮುಗಿಯುತ್ತೆ ಇ-ಕೆವೈಸಿ

|

Updated on: Jun 23, 2023 | 10:28 AM

Face Authentication Feature In PM Kisan Mobile App: ವಯಸ್ಸಾದವರ ಕೈಬೆರಳುಗಳ ಚರ್ಮ ಸವೆಯುವುದರಿಂದ ಅವರ ಬೆರಳಗುರುತು ಆಧಾರ್​ಗೆ ಹೊಂದಿಕೆ ಆಗುವ ಸಾಧ್ಯತೆ ಕಡಿಮೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಫೇಸ್ ಅಥೆಂಟಿಕೇಶನ್ ಫೀಚರ್ ಅನ್ನು ಪಿಎಂ ಕಿಸಾನ್ ಫಲಾನುಭವಿ ರೈತರಿಗೆ ಒದಗಿಸಿದೆ.

PM Kisan: ಮೊಬೈಲ್​ನಲ್ಲಿ ಮುಖ ಸ್ಕ್ಯಾನ್ ಮಾಡಿ, ಪಿಎಂ ಕಿಸಾನ್ ಸ್ಕೀಮ್​ಗೆ ಇಕೆವೈಸಿ ಪೂರ್ಣಗೊಳಿಸಿ; ಫಿಂಗರ್ ಪ್ರಿಂಟ್ ಬೇಕಿಲ್ಲ, ಕೂತಲ್ಲೇ ಮುಗಿಯುತ್ತೆ ಇ-ಕೆವೈಸಿ
ರೈತ
Follow us on

ನವದೆಹಲಿ: ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಗಾಗ್ಗೆ ಹೊಸ ಹೊಸ ಫೀಚರ್ ಮತ್ತು ಅಪ್​ಡೇಟ್​ಗಳನ್ನು ಬಿಡುಗಡೆ ಮಾಡುವ ಕೇಂದ್ರ ಸರ್ಕಾರ ಇದೀಗ ಪಿಎಂ ಕಿಸಾನ್ ಸ್ಕೀಮ್​ನಲ್ಲಿ ರೈತರ ಅನುಕೂಲಕ್ಕೆ ಹೊಸ ಫೀಚರ್ ರೂಪಿಸಿದೆ. ಮುಖದ ಚಹರೆಯ (Face Authentication Feature) ಮೂಲಕ ವ್ಯಕ್ತಿಯ ಗುರುತು ಕೊಡುವ ಫೀಚರ್​ವೊಂದನ್ನು ಅನಾವರಣಗೊಳಿಸಲಾಗಿದೆ. ಈ ಫೀಚರ್ ಪಿಎಂ ಕಿಸಾನ್ ಆ್ಯಪ್​ನಲ್ಲಿ ಲಭ್ಯ ಇದೆ. ಕೆವೈಸಿ ಪೂರ್ಣಗೊಳಿಸಲು ಇದೂ ಒಂದು ದಾರಿಯಾಗಿದೆ. ಅನೇಕ ರೈತರ ಕೈಬೆರಳ ಗುರುತು ಆಧಾರ್ ಡೇಟಾಗೆ ಹೊಂದಿಕೆ ಆಗುತ್ತಿಲ್ಲ ಎಂಬ ದೂರು ಕೇಳಿಬಂದ ಕಾರಣ ಸರ್ಕಾರ ಈ ಹೊಸ ಅವಕಾಶ ಕೊಟ್ಟಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಜೂನ್ 22ರಂದು ಕಾರ್ಯಕ್ರಮವೊಂದರಲ್ಲಿ ಈ ಫೀಚರ್ ಅನ್ನು ಅನಾವರಣಗೊಳಿಸಿದರು. ಭಾರತದ ಸರ್ಕಾರಿ ಯೋಜನೆಗಳಿಗೆ ಈ ಫೀಚರ್ ಅನ್ನು ಬಳಸಲಾಗುತ್ತಿರುವುದು ಇದೇ ಮೊದಲು.

ಫೇಸ್ ಅಥೆಂಟಿಕೇಶನ್ ಫೀಚರ್ ಯಾರಿಗೆ ಅನುಕೂಲ?

ಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಪೂರ್ಣಗೊಳಿಸಲೆಂದು ಈ ಫೀಚರ್ ರೂಪಿಸಲಾಗಿದೆ. ಆಧಾರ್ ಬೆರಳು ಗುರುತು ಕೊಡುವ ಮೂಲಕವೋ ಅಥವಾ ಆಧಾರ್​ಗೆ ಜೋಡಿತವಾದ ಮೊಬೈಲ್ ನಂಬರ್​ಗೆ ಬರುವ ಒಟಿಪಿ ಬಳಸಿ ಇಕೆವೈಸಿ ಮಾಡಬೇಕಿತ್ತು. ಮತ್ತು ವಯೋವೃದ್ಧರ ಕೈಬೆರಳು ಸವೆದು ಹೋಗಿರುವುದರಿಂದ ಅವರ ಆಧಾರ್ ಫಿಂಗರ್ ಪ್ರಿಂಟ್ ಕೆಲಸ ಮಾಡುತ್ತಿಲ್ಲ ಎಂಬ ದೂರು ದೇಶಾದ್ಯಂತ ಇದೆ. ಇದು ಪಿಎಂ ಕಿಸಾನ್​ಗೆ ಮಾತ್ರವಲ್ಲ ರೇಷನ್ ಕಾರ್ಡ್ ಇತ್ಯಾದಿ ಯೋಜನೆಗಳಿಗೂ ಇರುವ ದೊಡ್ಡ ಸಮಸ್ಯೆ.

ಇದನ್ನೂ ಓದಿSBI FD Schemes: ಎಸ್​ಬಿಐನ ಎರಡು ಜನಪ್ರಿಯ ಎಫ್​ಡಿ ಸ್ಕೀಮ್​ಗಳ ಗಡುವು ಮತ್ತೆ ವಿಸ್ತರಣೆ; ಇಲ್ಲಿದೆ ಡೀಟೇಲ್ಸ್

ಪಿಎಂ ಕಿಸಾನ್ ಮೊಬೈಲ್ ಆ್ಯಪ್​ನಲ್ಲಿ ಫೇಸ್ ಅಥೆಂಟಿಕೇಶನ್ ಫೀಚರ್ ಇರುವುದರಿಂದ ಈಗ ಫಿಂಗರ್ ಪ್ರಿಂಟ್ ಕೊಡುವ ಅಗತ್ಯ ಇರುವುದಿಲ್ಲ. ಯಾವುದೇ ಫಲಾನುಭವಿಗಳು ಆ್ಯಪ್​ನಲ್ಲಿರುವ ಈ ಫೀಚರ್ ಅನ್ನು ಬಳಸಬಹುದು. ಆಧಾರ್ ಜೊತೆ ಮೊಬೈಲ್ ನಂಬರ್ ಜೋಡಿಸ ವ್ಯಕ್ತಿಗಳಿಗೆ ಹಾಗೂ ವೃದ್ಧ ಫಲಾನುಭವಿಗಳಿಗೆ ಇದು ಆ್ಯಪ್ ಸಹಕಾರಿ ಆಗುತ್ತದೆ.

ಪ್ರಯೋಗ ಯಶಸ್ವಿಯಾಗಿ ನಡೆದು ಈಗ ಅಧಿಕೃತವಾಗಿ ಬಿಡುಗಡೆ ಆಗಿದೆ….

ಕಳೆದ ಮೇ ತಿಂಗಳ 21ರಂದು ಪಿಎಂ ಕಿಸಾನ್ ಮೊಬೈಲ್ ಆ್ಯಪ್​ನಲ್ಲಿ ಫೇಸ್ ಅಥೆಂಟಿಕೇಶನ್ ಫೀಚರ್​ನ ಪ್ರಯೋಗಾರ್ಥ ಪರೀಕ್ಷೆಗೆ ಚಾಲನೆ ಕೊಡಲಾಗಿತ್ತು. ಈ ಫೀಚರ್ ಮೂಲಕ ಈವರೆಗೆ 3 ಲಕ್ಷ ರೈತರ ಇಕೆವೈಸಿ ಪಡೆದುಕೊಳ್ಳಲಾಗಿದೆ. ಈ ಪ್ರಯೋಗ ಯಶಸ್ವಿಯಾದ್ದರಿಂದ ಪಿಎಂ ಕಿಸಾನ್ ಮೊಬೈಲ್ ಆ್ಯಪ್​ನಲ್ಲಿ ಈ ಫೀಚರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಇನ್ನೂ ಬಹಳಷ್ಟು ಫಲಾನುಭವಿಗಳು ಇಕೆವೈಸಿ ಮಾಡದ ಹಿನ್ನೆಲೆಯಲ್ಲಿ ಅವರಿಗೆಲ್ಲಾ ಈ ಆ್ಯಪ್​ನ ಫೀಚರ್ ಅನುಕೂಲವಾಗುವ ನಿರೀಕ್ಷೆ ಇದೆ.

ಇದನ್ನೂ ಓದಿIndia GDP: ಈ ವರ್ಷದ ಭಾರತದ ಆರ್ಥಿಕತೆ ಎಷ್ಟು ಬೆಳೆಯಬಲ್ಲುದು? ಫಿಚ್ ರೇಟಿಂಗ್ಸ್ ಪ್ರಕಾರ ಶೇ. 6.3; ಆರ್​ಬಿಐ ಅಂದಾಜಿಗಿಂತ ಎಷ್ಟು ಭಿನ್ನ?

ಫೇಸ್ ಅಥೆಂಟಿಕೇಶನ್ ಫೀಚರ್ ಹೇಗೆ ಕೆಲಸ ಮಾಡುತ್ತೆ?

ನಾವು ಆಧಾರ್ ಕಾರ್ಡ್ ಮಾಡಿಸುವಾಗ ಬಯೋಮೆಟ್ರಿಕ್ ಮಾಹಿತಿ ಪಡೆಯಲಾಗುತ್ತದೆ. ಅದರಲ್ಲಿ ಕೈಬೆರಳ ಗುರುತು ಮತ್ತು ಕಣ್ಣಿನ ಪೊರೆ (ಐರಿಸ್) ಗುರುತನ್ನು ಪಡೆಯಲಾಗಿರುತ್ತದೆ. ವಯಸ್ಸಾದ ಮೇಲೆ ಕೈಬೆರಳುಗಳ ಚರ್ಮ ಸವೆದು ಹೋಗುವುದರಿಂದ ಬೆರಳ ಗುರುತು ಸ್ಪಷ್ಟ ಇರುವುದಿಲ್ಲ. ಆಗ ಐರಿಸ್ ಗುರುತು ಕೆಲಸಕ್ಕೆ ಬರುತ್ತದೆ. ಪಿಎಂ ಕಿಸಾನ್ ಸ್ಕೀಮ್​ನಲ್ಲಿ ಈ ಸೌಲಭ್ಯ ಒದಗಿಸಲಾಗಿದೆ. ಸ್ಕೀಮ್​ನಿಂದ ಯಾವುದೇ ಅರ್ಹ ಫಲಾನುಭವಿಗಳು ಹೊರಬೀಳಬಾರದೆಂಬ ಉದ್ದೇಶದಿಂದ ಈ ಫೀಚರ್ ಸೇರಿಸಲಾಗಿದೆ.

ಪಿಎಂ ಕಿಸಾನ್ 14ನೇ ಕಂತು ಯಾವಾಗ?

ಪಿಎಂ ಕಿಸಾನ್ ಯೋಜನೆಯ 13ನೇ ಕಂತು ಫೆಬ್ರುವರಿಯಲ್ಲಿ ಬಿಡುಗಡೆ ಆಗಿತ್ತು. ಇದೀಗ 14ನೇ ಕಂತಿನ ಬಿಡುಗಡೆಗೆ ರೈತರು ಕಾಯುತ್ತಿದ್ದಾರೆ. ಮುಂದಿನ ವಾರದಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ 2,000 ರೂ ಹಾಕಬಹುದು ಎಂಬ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ