India GDP: ಈ ವರ್ಷದ ಭಾರತದ ಆರ್ಥಿಕತೆ ಎಷ್ಟು ಬೆಳೆಯಬಲ್ಲುದು? ಫಿಚ್ ರೇಟಿಂಗ್ಸ್ ಪ್ರಕಾರ ಶೇ. 6.3; ಆರ್​ಬಿಐ ಅಂದಾಜಿಗಿಂತ ಎಷ್ಟು ಭಿನ್ನ?

Fitch Ratings On Indian Economic Growth: ಭಾರತದ ಆರ್ಥಿಕತೆ 2023-24ರ ವರ್ಷದಲ್ಲಿ ಶೇ. 6ರಷ್ಟು ಮಾತ್ರ ಬೆಳೆಯಬಹುದು ಎಂದು ಈ ಹಿಂದೆ ಅಭಿಪ್ರಾಯಪಟ್ಟಿದ್ದ ಫಿಚ್ ರೇಟಿಂಗ್ಸ್ ಇದೀಗ ತನ್ನ ಅಂದಾಜನ್ನು ಶೇ. 6.3ಕ್ಕೆ ಹೆಚ್ಚಿಸಿದೆ.

India GDP: ಈ ವರ್ಷದ ಭಾರತದ ಆರ್ಥಿಕತೆ ಎಷ್ಟು ಬೆಳೆಯಬಲ್ಲುದು? ಫಿಚ್ ರೇಟಿಂಗ್ಸ್ ಪ್ರಕಾರ ಶೇ. 6.3; ಆರ್​ಬಿಐ ಅಂದಾಜಿಗಿಂತ ಎಷ್ಟು ಭಿನ್ನ?
ಫಿಚ್ ರೇಟಿಂಗ್ಸ್
Follow us
|

Updated on: Jun 22, 2023 | 3:02 PM

ನವದೆಹಲಿ: ಅಂತಾರಾಷ್ಟ್ರೀಯ ಕ್ರೆಡಿಟ್ ರೇಟಿಂಗ್ ಸಂಸ್ಥೆ ಫಿಚ್ ರೆಟಿಂಗ್ಸ್ (Fitch Ratings) ಪ್ರಕಾರ ಭಾರತದ ಆರ್ಥಿಕತೆ ಈ ಹಣಕಾಸು ವರ್ಷದಲ್ಲಿ (2023-24) ಶೇ 6.3ರಷ್ಟು ಬೆಳೆಯಬಹುದು ಎಂದು ಅಂದಾಜು ಮಾಡಿದೆ. ಅಚ್ಚರಿ ಎಂದರೆ ಈ ಹಿಂದೆ ಅದು ಮಾಡಿದ ಅಂದಾಜು ಪ್ರಕಾರ ಭಾರತದ ಜಿಡಿಪಿ ಶೇ. 6ರಷ್ಟು ಮಾತ್ರ ಬೆಳೆಯಬಹುದು ಎಂದಿತ್ತು. ಈಗ ತನ್ನ ಅಂದಾಜು ಬದಲಿಸಿದ್ದು, ಶೇ. 6.3ರಷ್ಟು ಜಿಡಿಪಿ ವೃದ್ಧಿ (GDP Rate) ಸಾಧ್ಯತೆ ಇದೆ ಎಂದಿದೆ. ಅದರ ಅಭಿಪ್ರಾಯ ಬದಲಾವಣೆಗೆ ಕಾರಣವಾಗಿದ್ದು 2023ರ ಏಪ್ರಿಲ್​ನಿಂದ ಜೂನ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಆಗುತ್ತಿರುವ ಗಮನಾರ್ಹ ಪ್ರಗತಿ. ಮೊದಲ ಕ್ವಾರ್ಟರ್​ನಲ್ಲಿ ಅಗುತ್ತಿರುವ ಪ್ರಗತಿಯನ್ನು ಗಣನೆಗೆ ತೆಗೆದುಕೊಂಡು ಈ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯ ವಿಚಾರದಲ್ಲಿ ತನ್ನ ಅಂದಾಜನ್ನು ಪರಿಷ್ಕರಿಸಿದ ಫಿಚ್ ರೇಟಿಂಗ್ಸ್.

ಭಾರತೀಯ ರಿಸರ್ವ್ ಬ್ಯಾಂಕ್ ಜೂನ್ 8ರಂದು ಮಾಡಿದ ಅಂದಾಜು ಪ್ರಕಾರ 2023-24ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.5ರಷ್ಟು ಬೆಳೆಯಬಹುದು ಎಂದಿತ್ತು. ಈಗ ಆ ದರಕ್ಕೆ ಸಮೀಪ ಫಿಚ್ ರೇಟಿಂಗ್ಸ್ ಅಂದಾಜು ಹೋಗಿದೆ. ಇದೀಗ ನೇರ ತೆರಿಗೆ ಮತ್ತು ಜಿಎಸ್​ಟಿ ತೆರಿಗೆ ಸಂಗ್ರಹ ಗಮನಾರ್ಹವಾಗಿ ಹೆಚ್ಚುತ್ತಿರುವುದು ಆರ್ಥಿಕತೆಯ ಸ್ಥಿರ ಓಟದ ಕುರುಹು ಎಂದು ಬಹಳ ಮಂದಿ ವಿಶ್ಲೇಷಿಸುತ್ತಿದ್ದಾರೆ. ಜೊತೆಗೆ ಹಣದುಬ್ಬರವೂ ಸತತವಾಗಿ ಇಳಿಕೆ ಕಾಣುತ್ತಿರುವುದು ಶುಭ ಸೂಚನೆಯಾಗಿದೆ. ಆರ್​ಬಿಐ ಈ ಹಣಕಾಸು ವರ್ಷದ ಮೊದಲೆರಡು ಕ್ವಾರ್ಟರ್​ಗಳಲ್ಲಿ ಕ್ರಮವಾಗಿ ಶೇ. 8 ಮತ್ತು ಶೇ. 6.5ರಷ್ಟು ಜಿಡಿಪಿ ವೃದ್ಧಿಸಬಹುದು ಎಂದು ಅಂದಾಜು ಮಾಡಿದ್ದು ಈ ಎಲ್ಲಾ ದತ್ತಾಂಶಗಳನ್ನು ಆಧರಿಸಿಯೇ.

ಇದನ್ನೂ ಓದಿRBI: ಈ ಹಣಕಾಸು ವರ್ಷ ಹಣದುಬ್ಬರ ಶೇ. 5.1, ಜಿಡಿಪಿ ಶೇ. 6.5; ಆರ್​ಬಿಐ ಅಂದಾಜು

ಫಿಚ್ ರೇಟಿಂಗ್ಸ್ ಸಂಸ್ಥೆ ಈ ಮುಂಚೆ 2023-24ರ ಹಣಕಾಸು ವರ್ಷದಲ್ಲಿ ಶೇ. 6.2ರಷ್ಟು ಬೆಳವಣಿಗೆ ಆಗಬಹುದು ಎಂದು ನಿರೀಕ್ಷಿಸಿತ್ತು. ಬಳಿಕ ಈ ಅಂದಾಜನ್ನು ಶೇ. 6ಕ್ಕೆ ಇಳಿಸಿತು. ಇದೀಗ ಶೇ. 6.3ಕ್ಕೆ ಅದನ್ನು ಹೆಚ್ಚಿಸಿರುವುದು ಗಮನಾರ್ಹ. ಹಾಗೆಯೇ, ಮುಂದಿನೆರಡು ಹಣಕಾಸು ವರ್ಷಗಳಾದ 2024-25 ಮತ್ತು 2025-26ಎರಡರಲ್ಲೂ ಶೇ. 6.5ರಷ್ಟು ಆರ್ಥಿಕತೆ ವೃದ್ಧಿಸಬಹುದು ಎಂದೂ ಫಿಚ್ ರೇಟಿಂಗ್ಸ್ ಅಭಿಪ್ರಾಯಪಟ್ಟಿದೆ.

ಕೋವಿಡ್ ಬಳಿಕ ತೀವ್ರವಾಗಿ ಕುಸಿದಿದ್ದ ಭಾರತದ ಆರ್ಥಿಕತೆ 2021-22ರಿಂದ ಜಿಗಿತ ಕಂಡಿದೆ. ಭಾರತದ ಆರ್ಥಿಕತೆ ಮುಳುಗಿಹೋಗುತ್ತದೆ ಎಂದು ಹಲವರು ನುಡಿದ ಭವಿಷ್ಯಗಳು ಸುಳ್ಳಾಗುತ್ತಿವೆ. ಭಾರತದ ಜಿಡಿಪಿ ದರ 2021-22ರಲ್ಲಿ ಶೇ. 9.1, 2022-23ರಲ್ಲಿ ಶೇ. 7.2ರಷ್ಟು ಇತ್ತು. ಈ ವರ್ಷ ಇದು ಬಹುತೇಕ ಇನ್ನಷ್ಟು ಕಡಿಮೆ ಆಗುವ ಸಾಧ್ಯತೆ ಇದೆ. ಜಿಡಿಪಿ ದರ ಸತತವಾಗಿ ಇಳಿಮುಖವಾಗುತ್ತಿದ್ದರೂ ಜಾಗತಿಕವಾಗಿ ಬೇರೆ ಪ್ರಮುಖ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಉತ್ತಮವಾಗಿ ಬೆಳೆಯುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ