Penalty: ತಡವಾಗಿ ಫ್ಲ್ಯಾಟ್ ಕೊಟ್ಟಿದ್ದಕ್ಕೆ 16 ಲಕ್ಷ ರೂ ದಂಡ ಕಟ್ಟಿಕೊಟ್ಟ ರಿಯಲ್ ಎಸ್ಟೇಟ್ ಕಂಪನಿ

Homebuyer Gets Compensation From Builder: ತಡವಾಗಿ ಫ್ಲ್ಯಾಟ್ ಹಸ್ತಾಂತರಿಸಿದ್ದ ರಿಯಲ್ ಎಸ್ಟೇಟ್ ಕಂಪನಿ ವಿರುದ್ಧ ಉತ್ತರಪ್ರದೇಶದ ರೇರಾದಲ್ಲಿ ದೂರು ಕೊಟ್ಟ ಗ್ರಾಹಕರೊಬ್ಬರಿಗೆ 16 ಲಕ್ಷ ರೂ ಪರಿಹಾರ ಸಿಕ್ಕಿದೆ.

Penalty: ತಡವಾಗಿ ಫ್ಲ್ಯಾಟ್ ಕೊಟ್ಟಿದ್ದಕ್ಕೆ 16 ಲಕ್ಷ ರೂ ದಂಡ ಕಟ್ಟಿಕೊಟ್ಟ ರಿಯಲ್ ಎಸ್ಟೇಟ್ ಕಂಪನಿ
ರಿಯಲ್ ಎಸ್ಟೇಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 22, 2023 | 12:44 PM

ನವದೆಹಲಿ: ಮನೆ ಖರೀದಿಗೆ ಆಸಕ್ತರಾಗಿರುವವರೇ ಈ ಸುದ್ದಿ ಒಮ್ಮೆ ಗಮನಿಸಿ. ಬಹಳ ಜನರು ಫ್ಲ್ಯಾಟ್ ಬುಕ್ ಮಾಡಿ ಹಲವು ವರ್ಷಗಳ ಕಾಲ ಹಸ್ತಾಂತರವಾಗದೇ ಕಾಯುತ್ತಾ ಕೂರುವುದುಂಟು. ಬಿಲ್ಡರ್​ಗಳು ಹೇಳಿದ ದಿನಕ್ಕಿಂತ ಹಲವು ವರ್ಷ ವಿಳಂಬವಾಗಿ ಮನೆ ಸಿಕ್ಕುವುದುಂಟು. ಇಂಥ ಸಂದರ್ಭದಲ್ಲಿ ಗ್ರಾಹಕರು ಪರಿಹಾರ ಪಡೆಯಲು ಸಾಧ್ಯವಾಗಿಸುವ ಕಾನೂನು ಇದೆ. ಉತ್ತರಪ್ರದೇಶದ ನೋಯ್ಡಾದಲ್ಲಿ ಇಂಥದ್ದೊಂದು ಘಟನೆ ನಡೆದಿದ್ದು ರಿಯಲ್ ಎಸ್ಟೇಟ್ ಕಂಪನಿಯಿಂದ ಒಬ್ಬ ಗ್ರಾಹಕರಿಗೆ 16 ಲಕ್ಷ ರೂ ಪರಿಹಾರ ಸಿಕ್ಕಿದೆ. ನೋಯ್ಡಾದಲ್ಲಿ ಅಪಾರ್ಟ್ಮೆಂಟ್​ವೊಂದರ ನಿರ್ಮಾಣ ಯೋಜನೆಯ ಪ್ರೊಮೋಟರ್ ಕಂಪನಿ ನೆಕ್ಸ್​ಜೆನ್ ಇನ್ಫ್ರಾಕಾನ್ 3 ವರ್ಷ ತಡವಾಗಿ ಫ್ಲ್ಯಾಟ್ ಅನ್ನು ಗ್ರಾಹಕನಿಗೆ ಹಸ್ತಾಂತರಿಸಿತ್ತು. ಇದನ್ನು ಪ್ರಶ್ನಿಸಿ ಆ ಗ್ರಾಹಕ ಉತ್ತರಪ್ರದೇಶದ ರೇರಾ ಪ್ರಾಧಿಕಾರದ (RERA- Real Estate Regulatory Authority) ಮೊರೆ ಹೋದರು. ಈ ಪ್ರಕರಣ ವಿಚಾರಣೆ ನಡೆಸಿದ ರೇರಾ ನ್ಯಾಯಾಲಯ ಈ ಪ್ರೊಮೋಟರ್ ಕಂಪನಿಯಿಂದ ಗ್ರಾಹಕರಿಗೆ 16 ಲಕ್ಷ ರೂ ಪರಿಹಾರ ಕೊಡುವಂತೆ ಆದೇಶಿಸಿತು.

2017ರಲ್ಲಿ ಈ ವ್ಯಕ್ತಿ 1.35 ಕೋಟಿ ರೂ ಪಾವತಿಸಿ ಫ್ಲ್ಯಾಟ್ ಬುಕ್ ಮಾಡಿದ್ದರು. 2018 ಡಿಸೆಂಬರ್ ತಿಂಗಳಲ್ಲಿ ಫ್ಲ್ಯಾಟ್ ಹಸ್ತಾಂತರಿಸುವುದಾಗಿ ಪ್ರೊಮೋಟರ್ ಕಂಪನಿ ಹೇಳಿತ್ತು. ಆದರೆ, ಎರಡು ವರ್ಷವಾದರೂ ಫ್ಲ್ಯಾಟ್ ಸಿಗದೇ ಹೋದಾಗ ಆ ಗ್ರಾಹಕ 2021ರಲ್ಲಿ ರೇರಾದಲ್ಲಿ ದೂರು ಕೊಟ್ಟರು.

ಇದನ್ನೂ ಓದಿRecord Bonus: ಪಾಲಿಸಿದಾರರಿಗೆ 1,183 ಕೋಟಿ ರೂ ಮೊತ್ತದ ಬೋನಸ್ ಘೋಷಿಸಿದ ಟಾಟಾ ಎಐಎ ಲೈಫ್ ಇನ್ಷೂರೆನ್ಸ್

ಆಗ ರಿಯಲ್ ಎಸ್ಟೇಟ್ ಕಂಪನಿ ಫ್ಲ್ಯಾಟ್ ಹಸ್ತಾಂತರಿಸುವುದಾಗಿ ಹೇಳಿತು. ಆದರೂ ಕೂಡ 2018ರಲ್ಲಿ ಫ್ಲ್ಯಾಟ್ ಹಸ್ತಾಂತರವಾಗಬೇಕಾಗಿದ್ದು ಇಷ್ಟು ವಿಳಂಬಗೊಂಡಿದ್ದರಿಂದ ರೇರಾ ನ್ಯಾಯಾಲಯ ಈ ಪ್ರಕರಣದ ವಿಚಾರಣೆ ನಡೆಸಿ ಗ್ರಾಹಕನ ಪರವಾಗಿ ತೀರ್ಪು ನೀಡಿತ್ತು.

ಗ್ರಾಹಕ ಪಾವತಿಸಿದ ಮೊತ್ತಕ್ಕಕೆ 2018ರಿಂದ ಈಚೆ ಆಗುವ ಬಡ್ಡಿಯನ್ನು ಗಣಿಸಿ 16 ಲಕ್ಷ ರೂ ಹಣವನ್ನು ಗ್ರಾಹಕನಿಗೆ ಪಾವತಿಸುವಂತೆ ನೆಕ್ಸ್​ಜೆನ್ ಇನ್​ಫ್ರಾಕಾನ್ ಸಂಸ್ಥೆಗೆ ಕೋರ್ಟ್ ಸೂಚಿಸಿತು. ರೇರಾ ನಿಯಮದ ಪ್ರಕಾರ ಎಂಸಿಎಲ್​ಆರ್ ದರದ ಆಧಾರದ ಮೇಲೆ ಬಡ್ಡಿ ಲೆಕ್ಕ ಮಾಡಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ