AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Record Bonus: ಪಾಲಿಸಿದಾರರಿಗೆ 1,183 ಕೋಟಿ ರೂ ಮೊತ್ತದ ಬೋನಸ್ ಘೋಷಿಸಿದ ಟಾಟಾ ಎಐಎ ಲೈಫ್ ಇನ್ಷೂರೆನ್ಸ್

Tata AIA Life Insurance Participating Policy Holders: ಟಾಟಾ ಎಐಎ ಲೈಫ್ ಇನ್ಷೂರೆನ್ಸ್ ಕಂಪನಿಯ ಪಾರ್ಟಿಸಿಪೇಟಿಂಗ್ ಪಾಲಿಸಿದಾರರಿಗೆ 2022-23ರ ಹಣಕಾಸು ವರ್ಷದಲ್ಲಿ ದಾಖಲೆಯ 1,183 ಕೋಟಿ ರೂ ಮೊತ್ತದ ಬೋನಸ್ ಹಂಚಿಕೆಯಾಗಿದೆ.

Record Bonus: ಪಾಲಿಸಿದಾರರಿಗೆ 1,183 ಕೋಟಿ ರೂ ಮೊತ್ತದ ಬೋನಸ್ ಘೋಷಿಸಿದ ಟಾಟಾ ಎಐಎ ಲೈಫ್ ಇನ್ಷೂರೆನ್ಸ್
ಟಾಟಾ ಎಐಎ ಲೈಫ್ ಇನ್ಷೂರೆನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 21, 2023 | 7:02 PM

ನವದೆಹಲಿ: ಪ್ರಮುಖ ಖಾಸಗಿ ಇನ್ಷೂರೆನ್ಸ್ ಕಂಪನಿ ಟಾಟಾ ಎಐಎ ಲೈಫ್ ಇನ್ಷೂರೆನ್ಸ್ (Tata AIA Life Insurance) ಜೂನ್ 21ರಂದು ತನ್ನ ಪಾಲಿಸಿದಾರರಿಗೆ ಭರ್ಜರಿ ಗಿಫ್ಟ್ ಕೊಡುತ್ತಿದೆ. 2022-23ರ ಹಣಕಾಸು ವರ್ಷಕ್ಕೆ 1,183 ಕೋಟಿ ರೂ ಮೊತ್ತದ ಬೋನಸ್ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಟಾಟಾ ಎಐಎಯಿಂದ ಬಿಡುಗಡೆ ಆದ ಅತಿಹೆಚ್ಚು ಬೋನಸ್ ಇದಾಗಿರಲಿದೆ. ಕಳೆದ ಬಾರಿಯ ಹಣಕಾಸು ವರ್ಷಕ್ಕೆ (2021-22) ಹೋಲಿಸಿದರೆ ಈ ಬಾರಿ ಶೇ. 37ರಷ್ಟು ಹೆಚ್ಚು ಬೋನಸ್ ಕೊಡುತ್ತಿದೆ ಟಾಟಾ ಎಐಎ. ಹೆಚ್ಚೂಕಡಿಮೆ ಏಳೂವರೆ ಲಕ್ಷ ಪಾಲಿಸಿದಾರರಿಗೆ ಈ ಬೋನಸ್ ಹಂಚಿಕೆ ಆಗಲಿದೆ. ಟಾಟಾ ಎಐಎ ಲೈಫ್ ಇನ್ಷೂರೆನ್ಸ್ ಸಂಸ್ಥೆ ನೀಡಿದ ಹೇಳಿಕೆ ಪ್ರಕಾರ 7,49,229 ಪಾರ್ಟಿಸಿಪೇಟಿಂಗ್ ಪಾಲಿಸಿಗಳು ಈ ಬೋನಸ್​ಗೆ ಅರ್ಹವಾಗಿವೆ.

ಟಾಟಾ ಎಐಎ ಸಂಸ್ಥೆಯ ಪಾರ್ಟಿಸಿಪೇಟಿಂಗ್ ಲೈಫ್ ಇನ್ಷೂರೆನ್ಸ್ ಪಾಲಿಸಿಗಳ ಜನಪ್ರಿಯತೆ ಹೆಚ್ಚುತ್ತಿದೆ. ಇವು ಜೀವ ವಿಮೆ ಒದಗಿಸುವುದಲ್ಲದೇ, ನಿಶ್ಚಿತ ಆದಾಯ ತರುತ್ತದೆ. ಜೊತೆಗೆ ಬೋನ್ ರೂಪದಲ್ಲಿ ಹೆಚ್ಚುವರಿ ಲಾಭವನ್ನೂ ಕೊಡುತ್ತದೆ. ಎಲ್​ಐಸಿ ಸೇರಿದಂತೆ ಎಲ್ಲಾ ಇನ್ಷೂರೆನ್ಸ್ ಸಂಸ್ಥೆಗಳೂ ಕೂಡ ವಿವಿಧ ಪಾರ್ಟಿಸಿಪೇಟಿಂಗ್ ಇನ್ಷೂರೆನ್ಸ್ ಸ್ಕೀಮ್​ಗಳನ್ನು ಗ್ರಾಹಕರಿಗೆ ಆಫರ್ ಮಾಡುತ್ತವೆ.

ಇದನ್ನೂ ಓದಿValuable Companies: ರಿಲಾಯನ್ಸ್ ಇಂಡಸ್ಟ್ರೀಸ್ ಭಾರತದ ಅತಿಹೆಚ್ಚು ಮೌಲ್ಯದ ಖಾಸಗಿ ಕಂಪನಿ; ಬುರ್ಗುಂಡಿ ಪ್ರೈವೇಟ್ ಹುರುನ್ ಇಂಡಿಯಾ 500 ಪಟ್ಟಿ ಬಿಡುಗಡೆ

ಏನಿದು ಪಾರ್ಟಿಸಿಪೇಟಿಂಗ್ ಇನ್ಷೂರೆನ್ಸ್ ಪ್ಲಾನ್?

ಪಾರ್ಟಿಸಿಪೇಟಿಂಗ್ ಅಥವಾ ಪಾರ್ ಸ್ಕೀಮ್​​ಗಳು ಇನ್ಷೂರೆನ್ಸ್ ಸಂಸ್ಥೆಯ ಲಾಭದಲ್ಲಿ ಒಂದಷ್ಟು ಪಾಲನ್ನು ಪಾಲಿಸಿದಾರರಿಗೆ ಹಂಚುತ್ತವೆ. ಕಂಪನಿ ನಷ್ಟವಾದರೆ ಮಾತ್ರ ಬೋನಸ್ ಸಿಕ್ಕೋದಿಲ್ಲ. ಈ ಬೋನಸ್ ಜೊತೆಗೆ ಪಾಲಿಸಿಯಲ್ಲಿ ಭರವಸೆ ಕೊಡಲಾದ ಬೇರೆಲ್ಲಾ ರಿಟರ್ನ್​ಗಳು ಗ್ರಾಹಕರಿಗೆ ಸಿಗುತ್ತದೆ. ಬೋನಸ್ ಎಂಬುದು ಹೆಚ್ಚುವರಿಯಾಗಿ ಸಿಗುವ ಒಂದು ಅಂಶ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಪಾರ್ಟಿಸಿಪೇಟಿಂಗ್ ಪಾಲಿಸಿಯು ಷೇರುಪೇಟೆಗೆ ಜೋಡಿತವಾದ ಮಾರ್ಕೆಟ್ ಲಿಂಕ್ಡ್ ಪಾಲಿಸಿಗಿಂತ ಭಿನ್ನ. ಮಾರ್ಕೆಟ್ ಲಿಂಕ್ಡ್ ಪಾಲಿಸಿಯಾದರೆ ಸಂಸ್ಥೆಯು ವಿವಿಧ ಷೇರುಗಳ ಮೇಲೆ ಮಾಡಿದ ಹೂಡಿಕೆಯಿಂದ ಸಿಗುವ ಲಾಭ ಅಥವಾ ನಷ್ಟದ ಮೇಲೆ ಅವಲಂಬಿತವಾಗಿರುತ್ತದೆ. ಷೇರು ಹೂಡಿಕೆಗಳಿಂದ ಎಷ್ಟು ಲಾಭ ಬರುತ್ತದೆಯೋ ಅಷ್ಟೂ ಪಾಲಿಸಿದಾರರಿಗೆ ವರ್ಗವಾಗುತ್ತದೆ. ನಷ್ಟವಾದರೆ ಅದೂ ಕೂಡ ಗ್ರಾಹಕರಿಗೆ ವರ್ಗಾವಣೆ ಆಗುತ್ತದೆ.

ಇದನ್ನೂ ಓದಿSuccess Story: ಅಂತಿಂಥ ಹೆಣ್ಣು ಇವರಲ್ಲ..! ಬೆಂಗಳೂರಲ್ಲಿ ಗ್ಯಾರೇಜ್​ನಲ್ಲಿ ಕಂಪನಿ ಆರಂಭಿಸಿ, ಇವತ್ತು 30,000 ಕೋಟಿ ಉದ್ಯಮದ ಒಡತಿಯಾದ ಕಿರಣ್ ಮಜುಮ್ದಾರ್ ಶಾ

ಟಾಟಾ ಎಐಎ ಇನ್ಷೂರೆನ್ಸ್ ಕಂಪನಿ ಹಲವು ವರ್ಷಗಳಿಂದ ತನ್ನ ಪಾಲಿಸಿದಾರರಿಗೆ ಬೋನಸ್​ಗಳನ್ನು ಒದಗಿಸುತ್ತಿದೆ. 2021-22ರ ಹಣಕಾಸು ವರ್ಷದಲ್ಲಿ 861 ಕೋಟಿ ರೂ ಬೋನಸ್ ಕೊಟ್ಟಿದ್ದು ದಾಖಲೆಯಾಗಿತ್ತು. 2022-23ರ ಹಣಕಾಸು ವರ್ಷದಲ್ಲಿ ಅದನ್ನೂ ಮೀರಿಸಿ ಹೊಸ ದಾಖಲೆ ಬೋನಸ್ ಕೊಟ್ಟಿದೆ. ಈ ಸಂಸ್ಥೆ ಒಟ್ಟು 71 ಸಾವಿರ ಕೋಟಿ ರೂ ಮೊತ್ತದ ಜನರ ಹೂಡಿಕೆಗಳನ್ನು ನಿರ್ವಹಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಕರ್ನಾಟಕದಲ್ಲಿರುವ ಪಾಕಿಸ್ತಾನೀಯರನ್ನು ವಾಪಸ್ಸು ಕಳಿಸ್ತೇವೆ: ಸಿದ್ದರಾಮಯ್ಯ
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ಪಹಲ್ಗಾಮ್ ಉಗ್ರರಿಗೆ ನೆರವಾದ ಇಬ್ಬರು ಸ್ಥಳೀಯ ಕಾಶ್ಮೀರಿಗಳ ಮನೆ ಧ್ವಂಸ!
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್
ನನ್ನ ಹೆಗಲ ಮೇಲೆ ಕೂರಿಸಿಕೊಂಡು ಬೆಟ್ಟ ಇಳಿದವರು ಸ್ಥಳೀಯ ಕಾಶ್ಮೀರಿ: ಅಭಿಜಯ್