Valuable Companies: ರಿಲಾಯನ್ಸ್ ಇಂಡಸ್ಟ್ರೀಸ್ ಭಾರತದ ಅತಿಹೆಚ್ಚು ಮೌಲ್ಯದ ಖಾಸಗಿ ಕಂಪನಿ; ಬುರ್ಗುಂಡಿ ಪ್ರೈವೇಟ್ ಹುರುನ್ ಇಂಡಿಯಾ 500 ಪಟ್ಟಿ ಬಿಡುಗಡೆ

Burgundy Private-Hurun India List: ಆ್ಯಕ್ಸಿಸ್ ಬ್ಯಾಂಕ್​ನ ಬುರ್ಗುಂಡಿ ಪ್ರೈವೇಟ್ ಅಂಡ್ ಹುರುನ್ ಇಂಡಿಯಾದಿಂದ ಭಾರತದ ಖಾಸಗಿ ವಲಯದ ಅತಿಹೆಚ್ಚು ಮೌಲ್ಯದ 500 ಕಂಪನಿಗಳ ಪಟ್ಟಿ ಬಿಡುಗಡೆ ಆಗಿದೆ. ರಿಲಾಯನ್ಸ್, ಟಿಸಿಎಸ್ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಟಾಪ್ 3ಯಲ್ಲಿವೆ.

Valuable Companies: ರಿಲಾಯನ್ಸ್ ಇಂಡಸ್ಟ್ರೀಸ್ ಭಾರತದ ಅತಿಹೆಚ್ಚು ಮೌಲ್ಯದ ಖಾಸಗಿ ಕಂಪನಿ; ಬುರ್ಗುಂಡಿ ಪ್ರೈವೇಟ್ ಹುರುನ್ ಇಂಡಿಯಾ 500 ಪಟ್ಟಿ ಬಿಡುಗಡೆ
ಮುಕೇಶ್ ಅಂಬಾನಿ
Follow us
|

Updated on: Jun 21, 2023 | 5:06 PM

ಭಾರತದ ಖಾಸಗಿ ವಲಯದ 500 ಅತಿ ಮೌಲ್ಯಯುತ ಕಂಪನಿಗಳ (Most Valuable Companies) ಪಟ್ಟಿಯೊಂದು ಬಿಡುಗಡೆ ಆಗಿದ್ದು ಮುಕೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ನಂಬರ್ ಒನ್ ಸ್ಥಾನ ಪಡೆದಿದೆ. ಆ್ಯಕ್ಸಿಸ್ ಬ್ಯಾಂಕ್​ನ ಬುರ್ಗುಂಡಿ ಪ್ರೈವೇಟ್ ಅಂಡ್ ಹುರುನ್ ಇಂಡಿಯಾ (Axis Bank’s Burgundy Private and Hurun India) ಈ ಪಟ್ಟಿ ಪ್ರಕಟಿಸಿದೆ. ಒಟ್ಟು 16.3 ಲಕ್ಷ ಕೋಟಿ ರೂ ಮೌಲ್ಯ ಹೊಂದಿರುವ ರಿಲಾಯನ್ಸ್ ಇಂಡಸ್ಟ್ರೀಸ್ (Reliance Industries) ಅಗ್ರಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಇದೆ. 2022ರ ಡಿಸೆಂಬರ್​ನಲ್ಲಿ ಶುರುವಾದ ಬುರ್ಗುಂಡಿ ಪ್ರೈವೇಟ್ ಅಂಡ್ ಹುರುನ್ ಇಂಡಿಯಾ ತನ್ನ ಪಟ್ಟಿಯಲ್ಲಿ ಸರ್ಕಾರಿ ಸಂಸ್ಥೆಗಳನ್ನು ಒಳಗೊಂಡಿಲ್ಲ. ಕೇವಲ ಖಾಸಗಿ ವಲಯದ ಸಂಸ್ಥೆಗಳನ್ನು ಮಾತ್ರ ಪರಿಗಣಿಸಿದೆ. ಇದರಲ್ಲಿ ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಮತ್ತು ಲಿಸ್ಟ್ ಆಗದೇ ಇರುವ ಕಂಪನಿಗಳೂ ಸೇರಿವೆ.

2022ರ ಅಕ್ಟೋಬರ್​ನಿಂದ 2023ರ ಏಪ್ರಿಲ್ 30ರವರೆಗೆ 6 ತಿಂಗಳ ಅವಧಿಯ ಅಂಕಿ ಅಂಶಗಳನ್ನು ಈ ಪಟ್ಟಿಯಲ್ಲಿ ಅಪ್​ಡೇಟ್ ಮಾಡಲಾಗಿದೆ. ಈ ಅವಧಿಯಲ್ಲಿ ಅತಿಹೆಚ್ಚು ಮೌಲ್ಯ ವೃದ್ಧಿಸಿಕೊಂಡಿದ್ದು ಎಚ್​ಡಿಎಫ್​ಸಿ ಬ್ಯಾಂಕ್, ಐಟಿಸಿ ಮತ್ತು ಹೌಸಿಂಗ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಶನ್ (ಎಚ್​ಡಿಎಫ್​ಸಿ ಲಿ.) ಸಂಸ್ಥೆಗಳಂತೆ. ಇನ್ನು ಷೇರುಪೇಟೆಯಲ್ಲಿ ಲಿಸ್ಟ್ ಆಗದ ಕಂಪನಿಗಳ ಪೈಕಿ ಅತಿಹೆಚ್ಚು ಮೌಲ್ಯ ಹೊಂದಿರುವುದು ಸೀರಂ ಇನ್ಸ್​ಟಿಟ್ಯೂಟ್. ಕೋವಿಶೀಲ್ಡ್ ಎಂಬ ಕೊರೋನಾ ಲಸಿಕೆ ತಯಾರಿಸಿದ್ದ ಸೀರಂ ಸಂಸ್ಥೆಯ ಮೌಲ್ಯ 1.92 ಲಕ್ಷ ಕೋಟಿ ರೂ ಆಗಿದೆ. ಆದರೆ, ಇದರ ಮೌಲ್ಯ ಆರು ತಿಂಗಳಲ್ಲಿ ಶೇ. 13ರಷ್ಟು ಕಡಿಮೆ ಆಗಿರುವುದು ತಿಳಿದುಬಂದಿದೆ.

ಇದನ್ನೂ ಓದಿSuccess Story: ಅಂತಿಂಥ ಹೆಣ್ಣು ಇವರಲ್ಲ..! ಬೆಂಗಳೂರಲ್ಲಿ ಗ್ಯಾರೇಜ್​ನಲ್ಲಿ ಕಂಪನಿ ಆರಂಭಿಸಿ, ಇವತ್ತು 30,000 ಕೋಟಿ ಉದ್ಯಮದ ಒಡತಿಯಾದ ಕಿರಣ್ ಮಜುಮ್ದಾರ್ ಶಾ

500 ಕಂಪನಿಗಳ ಒಟ್ಟಾರೆ ಮೌಲ್ಯವು ಆರು ತಿಂಗಳಲ್ಲಿ ಶೇ. 6.4ರಷ್ಟು ಕಡಿಮೆ ಆಗಿರುವುದನ್ನು ಈ ಪಟ್ಟಿ ಸೂಚಿಸುತ್ತಿದೆ. 2022ರ ಅಕ್ಟೋಬರ್ 30ರಂದು ಈ 500 ಕಂಪನಿಗಳ ಒಟ್ಟು ಮೌಲ್ಯ 227 ಲಕ್ಷ ಕೋಟಿ ರೂ ಇತ್ತು. 2023ರ ಏಪ್ರಿಲ್ 30ಕ್ಕೆ ಇದು 212 ಲಕ್ಷ ಕೋಟಿ ರೂಗೆ ಇಳಿದಿದೆ.

ಷೇರುಪೇಟೆಯಲ್ಲಿ ಲಿಸ್ಟ್ ಆಗಿರುವ ಪ್ರಮುಖ ಯೂನಿಕಾರ್ನ್ ಕಂಪನಿಗಳ ಪೈಕಿ ನೈಕಾ, ಜೊಮಾಟೊ, ಪೇಟಿಂ ಮತ್ತು ಪಾಲಿಸಿಬಜಾರ್ ಸಂಸ್ಥೆಗಳ ಮೌಲ್ಯ ಈ 6 ತಿಂಗಳ ಅವಧಿಯಲ್ಲಿ 7,872 ಕೋಟಿ ರೂನಷ್ಟು ಕಡಿಮೆ ಆಗಿದೆ. ಸೀರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ 20,000 ಕೋಟಿ ರೂಗೂ ಹೆಚ್ಚು ಮೌಲ್ಯ ಕಳೆದುಕೊಂಡಿದೆ.

ಇದನ್ನೂ ಓದಿService Charge: ಹೋಟೆಲ್ ಬಿಲ್​ನಲ್ಲಿ ಸರ್ವಿಸ್ ಚಾರ್ಜ್ ಯಾಕೆ? ನೀವು ಕಟ್ಟಲೇಬೇಕಾ? ಇಲ್ಲಿದೆ ನಿಯಮ

ಬುರ್ಗುಂಡಿ ಪ್ರೈವೇಟ್ ಹುರುನ್ ಇಂಡಿಯಾದ ಅತಿಮೌಲ್ಯಯುತ 500 ಖಾಸಗಿ ಕಂಪನಿಗಳ ಪಟ್ಟಿಯಲ್ಲಿ ಹಣಕಾಸು ಸೇವೆ ಮತ್ತು ಆರೋಗ್ಯಸೇವೆ ವಲಯದ ಕಂಪನಿಗಳೇ ಹೆಚ್ಚಿವೆ. ಇವೆರೆಡು ಕ್ಷೇತ್ರಗಳಿಂದ ಕ್ರಮಮವಾಗಿ 72 ಮತ್ತು 60 ಕಂಪನಿಗಳು ಈ ಪಟ್ಟಿಯಲ್ಲಿವೆ.

ಕೆಮಿಕಲ್ಸ್, ಕನ್ಸೂಮರ್ ಗೂಡ್, ಸಾಫ್ಟ್​ವೇರ್ ಮತ್ತು ಸರ್ವಿಸಸ್ ಕ್ಷೇತ್ರಗಳಿಂದಲೂ ಸಾಕಷ್ಟು ಕಂಪನಿಗಳು ಈ ಪಟ್ಟಿಯಲ್ಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್