Service Charge: ಹೋಟೆಲ್ ಬಿಲ್​ನಲ್ಲಿ ಸರ್ವಿಸ್ ಚಾರ್ಜ್ ಯಾಕೆ? ನೀವು ಕಟ್ಟಲೇಬೇಕಾ? ಇಲ್ಲಿದೆ ನಿಯಮ

Restaurant Bill: ಹೋಟೆಲ್​ನಲ್ಲಿ ಕೊಡಲಾಗುವ ಬಿಲ್​ನಲ್ಲಿ ಸೇರಿಸಲಾಗುವ ಸರ್ವಿಸ್ ಚಾರ್ಜ್ ಅನ್ನು ಕಟ್ಟುವುದು ಕಡ್ಡಾಯವಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸ್ಪಷ್ಟಪಡಿಸಿದೆ.

Service Charge: ಹೋಟೆಲ್ ಬಿಲ್​ನಲ್ಲಿ ಸರ್ವಿಸ್ ಚಾರ್ಜ್ ಯಾಕೆ? ನೀವು ಕಟ್ಟಲೇಬೇಕಾ? ಇಲ್ಲಿದೆ ನಿಯಮ
ರೆಸ್ಟೋರೆಂಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 21, 2023 | 2:34 PM

ರೆಸ್ಟೋರೆಂಟ್, ಬಾರ್ ಇತ್ಯಾದಿ ಕಡೆ ಹೋದರೆ ನೀವು ಪಡೆಯುವ ಬಿಲ್​ನಲ್ಲಿ ಆಹಾರ, ಜಿಎಸ್​ಟಿ ಜೊತೆಗೆ ಸರ್ವಿಸ್ ಚಾರ್ಜ್ (Service Charge) ಕೂಡ ಸೇರಿರುವುದನ್ನು ಗಮನಿಸಿರಬಹುದು. ಸಾಮಾನ್ಯವಾಗಿ ಯಾರೂ ಕೂಡ ಈ ಸೇವಾ ಶುಲ್ಕಕ್ಕೆ ಆಕ್ಷೇಪಿಸದೇ ಪೂರ್ಣವಾಗಿ ಬಿಲ್ ಪಾವತಿಸುವುದುಂಟು. ಕೆಲವೊಮ್ಮೆ ಜನರು ಸರ್ವಿಸ್ ಚಾರ್ಜ್ ಪಾವತಿಸಲು ನಿರಾಕರಿಸುವುದುಂಟು. ಇತ್ತೀಚೆಗೆ ಉತ್ತರಪ್ರದೇಶದ ನೋಯ್ಡಾದ ಪಾಪುಲರ್ ಸ್ಪೆಕ್ಟ್ರಂ ಮಾಲ್​ನ ರೆಸ್ಟೋರೆಂಟ್​ವೊಂದರಲ್ಲಿ ಇದೇ ವಿಚಾರಕ್ಕೆ ಹೋಟೆಲ್ ಸಿಬ್ಬಂದಿ ಹಾಗೂ ಗ್ರಾಹಕರ ಮಧ್ಯೆ ದೊಡ್ಡ ಗಲಾಟೆಯೇ ನಡೆದುಹೋದ ಘಟನೆ ಬೆಳಕಿಗೆ ಬಂದಿತ್ತು.

ಆ ಘಟನೆಯಲ್ಲಿ, ರೆಸ್ಟೋರೆಂಟ್​ಗೆ ಹೋಗಿದ್ದ ಕುಟುಂಬವೊಂದು ತಮ್ಮ ಬಿಲ್​ನಲ್ಲಿ ಸೇರಿಸಲಾಗಿದ್ದ ಸರ್ವಿಸ್ ಚಾರ್ಜ್ ಅನ್ನು ಕಟ್ಟಲು ನಿರಾಕರಿಸಿದ್ದರು. ಆಗ ಹೋಟೆಲ್​ನ ವೈಟರ್, ಸಪ್ಲೈಯರ್, ಮ್ಯಾನೇಜರ್ ಅದಿಯಾಗಿ ಸಿಬ್ಬಂದಿ ಎಲ್ಲರೂ ಸೇರಿ ಈ ಕುಟುಂಬದ ಜೊತೆ ಜಗಳಕ್ಕೆ ನಿಂತರು. ಈ ಘಟನೆ ಹಿಂಸಾಚಾರಕ್ಕೂ ತಿರುಗಿತು. ಈ ಘಟನೆ ಬಳಿಕ ಸರ್ವಿಸ್ ಚಾರ್ಜ್ ವಿಚಾರವು ಎಲ್ಲೆಡೆ ಚರ್ಚೆಗೆ ಸರಕಾಗಿದ್ದು ಹೌದು. ಕೇಂದ್ರದ ಗ್ರಾಹಕ ವ್ಯವಹಾರಗಳ ಇಲಾಖೆ ಕೂಡ ಸರ್ವಿಸ್ ಚಾರ್ಜ್ ವಿಚಾರದಲ್ಲಿ ಕಾನೂನು ಅಂಶಗಳೇನು ಎಂಬುದನ್ನು ಸ್ಪಷ್ಟಪಡಿಸಿ ಅಧಿಸೂಚನೆ ಹೊರಡಿಸಿದೆ.

ಇದನ್ನೂ ಓದಿMost Expensive Cities: ವಿಶ್ವದ ಅತ್ಯಂತ ದುಬಾರಿ 20 ನಗರಗಳಲ್ಲಿ ಮುಂಬೈ; ಏಷ್ಯನ್ ನಗರಗಳದ್ದೇ ಪಾರಮ್ಯ

ಸರ್ವಿಸ್ ಚಾರ್ಜ್ ಬಗ್ಗೆ ಕಾನೂನು ಹೇಗಿದೆ?

ಗ್ರಾಹಕ ವ್ಯವಹಾರಗಳ ಇಲಾಖೆ ಹೊರಡಿಸಿದ ನಿಯಮದ ಪ್ರಕಾರ ರೆಸ್ಟೋರೆಂಟ್​ಗಳು ಸರ್ವಿಸ್ ಚಾರ್ಜ್ ಕಟ್ಟುವಂತೆ ಗ್ರಾಹಕರನ್ನು ಕಡ್ಡಾಯಪಡಿಸುವಂತಿಲ್ಲ. ಸರ್ವಿಸ್ ಚಾರ್ಜ್ ಎಂಬುದು ಗ್ರಾಹಕರ ಇಚ್ಛೆಗೆ ಬಿಟ್ಟಿದ್ದು. ಹೋಟೆಲ್​ನಲ್ಲಿ ಸರ್ವಿಸ್ ಇಷ್ಟವಾಗದೇ ಹೋದರೆ ಗ್ರಾಹಕರು ಸರ್ವಿಸ್ ಚಾರ್ಜ್ ಕಟ್ಟಲು ನಿರಾಕರಿಸುವ ಹಕ್ಕು ಹೊಂದಿರುತ್ತಾರೆ ಎಂದು ನಿಯಮ ಹೇಳುತ್ತದೆ.

ಇದು ಹೋಟೆಲ್​ನಲ್ಲಿ ನೀವು ಕೊಡುವ ಟಿಪ್ಸ್ ಇದ್ದಂತೆ. ವಾಸ್ತವವಾಗಿ ಇದೇ ಟಿಪ್ ಅನ್ನು ಸರ್ವಿಸ್ ಚಾರ್ಜ್ ಎಂದು ಪರಿಗಣಿಸಲಾಗುತ್ತದೆ. ನಾವು ಬಹಳ ಬಾರಿ ಸರ್ವಿಸ್ ಚಾರ್ಜ್ ಮತ್ತು ಟಿಪ್ ಎರಡನ್ನೂ ಕಟ್ಟುತ್ತೇವೆ. ನಿಮಗೆ ಹೋಟೆಲ್​ನ ಸರ್ವಿಸ್ ಇಷ್ಟವಾಗದೇ ಹೋದರೆ ಎರಡನ್ನೂ ಪಾವತಿಸಬೇಕೆಂದಿಲ್ಲ. ನಿಮಗೆ ಕೊಡುವ ಬಿಲ್​ನಲ್ಲಿ ಸರ್ವಿಸ್ ಚಾರ್ಜ್ ಒಳಗೊಂಡಿದ್ದರೆ, ಆ ಶುಲ್ಕ ಇಲ್ಲದ ಬೇರೆ ಹೊಸ ಬಿಲ್ ಅನ್ನು ಗ್ರಾಹಕರು ಪಡೆಯಬಹುದು.

ಇದನ್ನೂ ಓದಿGameStop: ಸಿಎಫ್​ಒ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಲೇ ಆಫ್ ಮಾಡಿದ್ದ ಸಿಇಒಗೇ ಹೋಯ್ತು ಕೆಲಸ

ಒಂದು ವೇಳೆ, ನೀವು ಸರ್ವಿಸ್ ಚಾರ್ಜ್ ಕಟ್ಟಲು ನಿರಾಕರಿಸಿದಲ್ಲಿ ಹೋಟೆಲ್ ಸಿಬ್ಬಂದಿ ನಿಮ್ಮ ಮೇಲೆ ಯಾವ ಕ್ರಮ ಜರುಗಿಸಲು ಆಗುವುದಿಲ್ಲ. ನಿಮ್ಮ ನಿಲುವು ಕಾನೂನುಸಮ್ಮತವಾಗಿರುತ್ತದೆ. ಹಾಗೊಂದು ವೇಳೆ ಹೋಟೆಲ್​ನವರು ಸರ್ವಿಸ್ ಚಾರ್ಜ್ ಕಟ್ಟುವಂತೆ ಬಲವಂತಪಡಿಸಿದಲ್ಲಿ ಗ್ರಾಹಕ ನ್ಯಾಯಾಲಯಕ್ಕೆ ದೂರು ಕೊಡುವ ಅವಕಾಶ ನಿಮಗೆ ಇದ್ದೇ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:17 pm, Wed, 21 June 23

ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ