AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Most Expensive Cities: ವಿಶ್ವದ ಅತ್ಯಂತ ದುಬಾರಿ 20 ನಗರಗಳಲ್ಲಿ ಮುಂಬೈ; ಏಷ್ಯನ್ ನಗರಗಳದ್ದೇ ಪಾರಮ್ಯ

Mumbai Most Expensive City of India: ಜೂಲಿಯಸ್ ಬೇಯರ್ಸ್ ಲೈಫ್​ಸ್ಟೈಲ್ ಇಂಡೆಕ್ಸ್​ನ 25 ಅತ್ಯಂತ ದುಬಾರಿ ನಗರಗಳ ಪಟ್ಟಿಯಲ್ಲಿ ಏಷ್ಯನ್ ನಗರಗಳದ್ದೇ ಪ್ರಾಬಲ್ಯ ಇದೆ. ಮುಂಬೈ ಭಾರತದ ಅತ್ಯಂತ ದುಬಾರಿ ನಗರವಾದರೆ ಸಿಂಗಾಪುರ ವಿಶ್ವದ ನಂ. 1 ಎನಿಸಿದೆ.

Most Expensive Cities: ವಿಶ್ವದ ಅತ್ಯಂತ ದುಬಾರಿ 20 ನಗರಗಳಲ್ಲಿ ಮುಂಬೈ; ಏಷ್ಯನ್ ನಗರಗಳದ್ದೇ ಪಾರಮ್ಯ
ಮುಂಬೈ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 21, 2023 | 12:23 PM

ಮುಂಬೈ: ಐಷಾರಾಮಿ ಜೀವನ ಬಯಸುವವರಿಗೆ (Luxury Facilities) ಮೊದಲು ಕೇಳಿಬರುವ ಹೆಸರುಗಳೆಂದರೆ ಅಮೆರಿಕ, ಲಂಡನ್, ಪ್ಯಾರಿಸ್, ಸ್ವಿಟ್ಜರ್ಲೆಂಡ್ ಇತ್ಯಾದಿ. ಹಣ ಇದ್ದರೆ ಇಲ್ಲೆಲ್ಲಾ ಝುಂ ಅಂತ ಇರಬಹುದು. ಶ್ರೀಮಂತ ಜನರು ಇಲ್ಲಿ ನೆಲಸಲು ಮುಗಿಬಿದ್ದು ಹೋಗುತ್ತಾರೆ ಎಂದು ಅನೇಕರು ಭಾವಿಸುವುಂಟು. ಆದರೆ, ಅತ್ಯಂತ ದುಬಾರಿ ಐಷಾರಾಮಿ ಸವಲತ್ತುಗಳಲ್ಲಿ ಏಷ್ಯಾವೇ ನಂಬರ್ ಒನ್ ಅಂತೆ. ಸಿಂಗಾಪುರ, ಶಾಂಘೈ ನಗರಗಳಲ್ಲಿ ಐಷಾರಾಮಿ ಸವಲತ್ತುಗಳು ಅತಿಹೆಚ್ಚು ದುಬಾರಿ ಅಂತೆ. ಇದು ಜೂಲಿಯಸ್ ಬೇಯರ್​ನ ಲೈಫ್​ಸ್ಟೈಲ್ ಇಂಡೆಕ್ಸ್ ಪ್ರಕಟಿಸಿದ 25 ಅತ್ಯಂತ ದುಬಾರಿ ನಗರಗಳ ಪಟ್ಟಿಯಿಂದ ತಿಳಿದುಬಂದಿರುವ ಸಂಗತಿ. ಈ ಪಟ್ಟಿ ಪ್ರಕಾರ ಮುಂಬೈ ಭಾರತದ ಅತ್ಯಂತ ದುಬಾರಿ ನಗರ.

ದುಬಾರಿ ನಗರಕ್ಕೆ ಏನು ಮಾನದಂಡಗಳು?

ಐಷಾರಾಮಿ ಪ್ರದೇಶದಲ್ಲಿ ವಾಸಸ್ಥಳದ ಬೆಲೆ, ಕಾರು, ಬ್ಯುಸಿನೆಸ್ ಕ್ಲಾಸ್ ವಿಮಾನ, ಬ್ಯುಸಿನೆಸ್ ಸ್ಕೂಲ್, ಮಲ್ಟಿ ಕ್ಯುಸೈನ್ ರೆಸ್ಟೋರೆಂಟ್ ಮತ್ತಿತರ ಲಕ್ಷುರಿ ಸೇವೆಗಳಿಗೆ ಬೆಲೆ ಎಷ್ಟು ದುಬಾರಿ ಎಂಬುದರ ಮೇಲೆ ಈ ಪಟ್ಟಿ ಮಾಡಲಾಗಿದೆ.

ಇದನ್ನೂ ಓದಿAir India, Indigo: ಏರ್ ಇಂಡಿಯಾ 470, ಇಂಡಿಗೋ 500 ವಿಮಾನ ಖರೀದಿ- ಪ್ಯಾರಿಸ್ ಏರ್​ಶೋನಲ್ಲಿ ಮಿರಮಿರ ಮಿಂಚಿದ ಭಾರತ

ಜೂಲಿಯಸ್ ಬೇಯರ್ಸ್​ನ ಲೈಫ್​ಸ್ಟೈಲ್ ಇಂಡೆಕ್ಸ್ ಅತಿ ದುಬಾರಿ ನಗರಗಳ ಪಟ್ಟಿ ಈ ಹಿಂದೆ ಹಲವು ವರ್ಷಗಳಿಂದ ಪ್ರಕಟವಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಏಷ್ಯನ್ ನಗರಗಳೇ ಅತಿಹೆಚ್ಚು ದುಬಾರಿ ಎನಿಸಿವೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಏಷ್ಯನ್ ನಗರಗಳಲ್ಲಿ ಐಷಾರಾಮಿ ವಸ್ತು ಮತ್ತು ಸೇವೆಗಳ ಬೆಲೆ ಶೇ. 13ರಷ್ಟು ಹೆಚ್ಚಾಗಿದೆ. ಹೋಟೆಲ್ ದರಗಳಂತೂ ಶೇ. 39.1ರಷ್ಟು ಹೆಚ್ಚಳ ಕಂಡಿದೆ. ಬ್ಯುಸಿನೆಸ್ ಕ್ಲಾಸ್ ಫ್ಲೈಟ್ ಟಿಕೆಟ್ ದರಗಳು ಶೇ. 32.9ರಷ್ಟು ಹೆಚ್ಚಿವೆ. ಐಷಾರಾಮಿ ಕಾರುಗಳ ಬೆಲೆ ಶೇ. 25.2ರಷ್ಟು ಹೆಚ್ಚಾಗಿದೆ.

ನಗರಗಳ ಪೈಕಿ ಹಿಂದಿನ ವರ್ಷ ನಂಬರ್ ಒನ್ ದುಬಾರಿ ನಗರ ಎನಿಸಿದ್ದ ಚೀನಾದ ಶಾಂಘೈ ಎರಡನೇ ಸ್ಥಾನಕ್ಕೆ ಬಂದಿದೆ. ಸಿಂಗಾಪುರ ಅಗ್ರಸ್ಥಾನಕ್ಕೇರಿದೆ. ಹಾಂಕಾಂಗ್ ಮತ್ತು ಥೈಪೈ (ತೈವಾನ್) ಕೂಡ ದುಬಾರಿ ಸ್ಥಳಗಳ ಪಟ್ಟಿಯಲ್ಲಿ ಅಗ್ರ ಸಾಲಿನಲ್ಲಿವೆ.

ಇದನ್ನೂ ಓದಿಇಪಿಎಫ್‌ಒಗೆ ಏಪ್ರಿಲ್‌ನಲ್ಲಿ 17.20 ಲಕ್ಷ ಸದಸ್ಯರ ಸೇರ್ಪಡೆ, 18-25 ವರ್ಷ ವಯಸ್ಸಿನ ಸದಸ್ಯರ ಸಂಖ್ಯೆ ಶೇ 54.1

ಮುಂಬೈ 18ನೇ ಸ್ಥಾನಕ್ಕೆ ಜಿಗಿತ

ಕಳೆದ ಬಾರಿ 24ನೇ ಸ್ಥಾನದಲ್ಲಿದ್ದ ಮುಂಬೈ ನಗರ ಈ ಬಾರಿ 18ನೇ ಸ್ಥಾನಕ್ಕೆ ಜಿಗಿದಿದೆ. ಐಷಾರಾಮಿ ಸವಲುತ್ತುಗಳು ಮುಂಬೈನಲ್ಲಿ ಈ ವರ್ಷ ಬಹಳ ಬೆಲೆ ಹೆಚ್ಚಳ ಕಂಡಿವೆ. ಬ್ಯಾಂಕಾಕ್ ಮತ್ತು ಜಕಾರ್ತ ನಗರಗಳೂ ದುಬಾರಿ ಐಷಾರಾಮಿ ಜೀವನಕ್ಕೆ ಹೆಸರುವಾಸಿಯಾಗುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
ಕಟ್ಟಡದ ಒಂದು ಭಾಗ ಕುಸಿತ, ಒಳಗಿಂದ ಸಹಾಯಕ್ಕಾಗಿ ಅಂಗಲಾಚುತ್ತಿರುವ ಜನ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
VIDEO: ಧೋನಿಯ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ಯುವ ಆಟಗಾರ
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
ಪುರುಷರು ಸಾಷ್ಟಾಂಗ, ಸ್ತ್ರೀಯರು ಪಂಚಾಂಗ ನಮಸ್ಕಾರ ಏಕೆ ಮಾಡಬೇಕು?
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
Daily horoscope: ಈ ರಾಶಿಯವರು ಧಾರ್ಮಿಕ ಕಾರ್ಯಕ್ರಮಗಳಿಗೆ ಭೇಟಿಕೊಡುವರು
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಪ್ರವೀಣ್ ಶೆಟ್ಟಿ ಪುತ್ರ ಪ್ರವೀರ್ ಶೆಟ್ಟಿಗೆ ಚಿತ್ರರಂಗದಲ್ಲಿ ಸ್ಫೂರ್ತಿ ಯಾರು
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್