ಇಪಿಎಫ್‌ಒಗೆ ಏಪ್ರಿಲ್‌ನಲ್ಲಿ 17.20 ಲಕ್ಷ ಸದಸ್ಯರ ಸೇರ್ಪಡೆ, 18-25 ವರ್ಷ ವಯಸ್ಸಿನ ಸದಸ್ಯರ ಸಂಖ್ಯೆ ಶೇ 54.1
ಹಿಂದಿನ ತಿಂಗಳಿಗೆ ಹೋಲಿಸಿದರೆ ಎಪ್ರಿಲ್ 2023 ರಲ್ಲಿ 3.77 ಲಕ್ಷ ನಿರ್ಗಮನಗಳೊಂದಿಗೆ ನಿರ್ಗಮನಗಳ ಸಂಖ್ಯೆಯು 11.67% ರಷ್ಟು ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ಹೋಲಿಸಿದರ ಏಪ್ರಿಲ್, 2023 ರ ತಿಂಗಳಿಗೆ ನಿರ್ಗಮನದಲ್ಲಿಯೂ ಕುಸಿತ ಕಂಡು ಬಂದಿದೆ.
ಇಪಿಎಫ್ಒ: ಮಂಗಳವಾರ ಬಿಡುಗಡೆಯಾದ ನೌಕರರ ಭವಿಷ್ಯನಿಧಿ ಸಂಘಟನೆ (EPFO) ತಾತ್ಕಾಲಿಕ ವೇತನದಾರರ ದತ್ತಾಂಶವು ಸದಸ್ಯರ ಹೆಚ್ಚಳವನ್ನು ಸೂಚಿಸುತ್ತದೆ. ಮಾರ್ಚ್ ತಿಂಗಳ ಹಿಂದಿನ 13.40 ಲಕ್ಷ ಸೇರ್ಪಡೆಗೆ ಹೋಲಿಸಿದರೆ ಏಪ್ರಿಲ್ ತಿಂಗಳಲ್ಲಿ ಇಪಿಎಫ್ಒ 17.20 ಲಕ್ಷ ಸದಸ್ಯರನ್ನು ಸೇರಿಸಿದೆ ಎಂದು ಡೇಟಾ ತೋರಿಸುತ್ತದೆ. ತಿಂಗಳ ಅವಧಿಯಲ್ಲಿ ಸೇರ್ಪಡೆಯಾದ 17.20 ಲಕ್ಷ ಸದಸ್ಯರಲ್ಲಿ, ಸುಮಾರು 8.47 ಲಕ್ಷ ಹೊಸ ಸದಸ್ಯರು ಮೊದಲ ಬಾರಿಗೆ ಇಪಿಎಫ್‌ಒ ಸಾಮಾಜಿಕ ಭದ್ರತಾ ವ್ಯಾಪ್ತಿಗೆ ಬಂದಿದ್ದಾರೆ. ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಲ್ಲಿ, 18-25 ವರ್ಷಗಳ ವಯೋಮಿತಿ ಸದಸ್ಯರ ಸಂಖ್ಯೆ ಶೇ 54.1 ರಷ್ಟಿದೆ. 18-25 ವರ್ಷ ವಯಸ್ಸಿನ ಗುಂಪು ದೇಶದ ಸಂಘಟಿತ ವಲಯದ ಉದ್ಯೋಗಿಗಳಿಗೆ ಸೇರುವ ಬಹುಪಾಲು ಸದಸ್ಯರು ಹೆಚ್ಚಾಗಿ ಮೊದಲ ಬಾರಿಗೆ ಉದ್ಯೋಗಾಕಾಂಕ್ಷಿಗಳಾಗಿದ್ದಾರೆ ಎಂದು ಸೂಚಿಸುತ್ತದೆ.
2023 ರ ಮಾರ್ಚ್ ತಿಂಗಳಿನ 10.09 ಲಕ್ಷಕ್ಕೆ ಹೋಲಿಸಿದರೆ 12.50 ಲಕ್ಷ ಸದಸ್ಯರು ನಿರ್ಗಮಿಸಿದ್ದಾರೆ. ಆದರೆ ಮರು-ಸೇರ್ಪಡೆಗೊಂಡವರ ಸಂಖ್ಯೆ ಹೆಚ್ಚುತ್ತಿದೆ ಎಂದು ಡೇಟಾ ತೋರಿಸುತ್ತದೆ.
ಹಿಂದಿನ ತಿಂಗಳಿಗೆ ಹೋಲಿಸಿದರೆ ಎಪ್ರಿಲ್ 2023 ರಲ್ಲಿ 3.77 ಲಕ್ಷ ನಿರ್ಗಮನಗಳೊಂದಿಗೆ ನಿರ್ಗಮನಗಳ ಸಂಖ್ಯೆಯು 11.67% ರಷ್ಟು ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ಹೋಲಿಸಿದರ ಏಪ್ರಿಲ್, 2023 ರ ತಿಂಗಳಿಗೆ ನಿರ್ಗಮನದಲ್ಲಿಯೂ ಕುಸಿತ ಕಂಡು ಬಂದಿದೆ.
ವೇತನದಾರರ ದತ್ತಾಂಶದ ಲಿಂಗವಾರು ವಿಶ್ಲೇಷಣೆಯು ಮಹಿಳಾ ಸದಸ್ಯರ ದಾಖಲಾತಿಯು ಏಪ್ರಿಲ್ 2023 ರಲ್ಲಿ 2.57 ಲಕ್ಷಕ್ಕೆ ಹೋಲಿಸಿದರೆ 2023 ರ ಮಾರ್ಚ್‌ನಲ್ಲಿ 3.48 ಲಕ್ಷವಾಗಿದೆ. ತಿಂಗಳಲ್ಲಿ ಸೇರ್ಪಡೆಯಾದ ಒಟ್ಟು 8.47 ಲಕ್ಷ ಹೊಸ ಸದಸ್ಯರಲ್ಲಿ ಸುಮಾರು 2.25 ಲಕ್ಷ ಹೊಸ ಮಹಿಳೆಯರು ಸದಸ್ಯರು, ಮೊದಲ ಬಾರಿಗೆ EPFO ಗೆ ಸೇರುತ್ತಿದ್ದಾರೆ. ಮಹಿಳಾ ಸದಸ್ಯರು ತಿಂಗಳಿನಲ್ಲಿ ಎಲ್ಲಾ ಹೊಸ ದಾಖಲಾತಿಗಳಲ್ಲಿ ಸುಮಾರು ಶೇ 26.61% ರಷ್ಟಿದ್ದಾರೆ, ಇದು ಹೊಸ ಸದಸ್ಯರಲ್ಲಿ ಕಳೆದ ಆರು ತಿಂಗಳಲ್ಲಿ ಅತ್ಯಧಿಕ ಮಹಿಳಾ ಭಾಗವಹಿಸುವಿಕೆಯನ್ನು ಸೂಚಿಸುತ್ತದೆ.
ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಗುಜರಾತ್, ದೆಹಲಿ ರಾಜ್ಯಗಳು ಶೇ 59.20 ಸದಸ್ಯರ ಸೇರ್ಪಡೆಯಲ್ಲಿ ಮೊದಲ ಐದು ರಾಜ್ಯಗಳಾಗಿವೆ. ಟಾಪ್ 10 ಕೈಗಾರಿಕೆಗಳಲ್ಲಿ, ಉತ್ಪಾದನೆ, ಮಾರುಕಟ್ಟೆ-ಸೇವೆ, ಕಂಪ್ಯೂಟರ್‌ಗಳ ಬಳಕೆಯಲ್ಲಿ ತೊಡಗಿರುವ ಸಂಸ್ಥೆಗಳಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಕಂಡಿದೆ.
ಮತ್ತಷ್ಟು ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ