Share Market: ಅಂತಾರಾಷ್ಟ್ರೀಯ ಯೋಗ ದಿನ: ಬಿಎಸ್ಇ, ಎನ್ಎಸ್ಇ ಷೇರುಮಾರುಕಟ್ಟೆಗಳಿಗೆ ರಜೆಯಾ? ಇಲ್ಲಿದೆ ಈ ವರ್ಷದ ಉಳಿದ ದಿನಗಳ ರಜಾ ಪಟ್ಟಿ
International Yoga Day, Share Market- ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21ರಂದು ಬಿಎಸ್ಇ ಅಥವಾ ಎನ್ಎಸ್ಇ ಷೇರು ಮಾರುಕಟ್ಟೆಗಳಲ್ಲಿ ರಜೆ ಇರುವುದಿಲ್ಲ. ಈ ತಿಂಗಳ 28ಕ್ಕೆ ಬಕ್ರೀದ್ ನಿಮಿತ್ತ ರಜೆ ಇದೆ.
ನವದೆಹಲಿ: ಜೂನ್ 21, ಅಂತಾರಾಷ್ಟ್ರೀಯ ಯೋಗ ದಿನ. ಅಮೆರಿಕದಲ್ಲಿ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ. ಜಾಗತಿಕವಾಗಿ ಈ ದಿನಕ್ಕೆ ಮಾನ್ಯತೆ ಮತ್ತು ಜನಪ್ರಿಯತೆ ಹೆಚ್ಚುತ್ತಿದೆ. ಈ ದಿನದಂದು (International Yoga Day) ಭಾರತದಲ್ಲಿ ಷೇರುಪೇಟೆಗಳು ಬಂದ್ ಆಗಿರುತ್ತವಾ? 2023 ಜೂನ್ 21ರಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಹಾಗೂ ಇತರ ಷೇರುಮಾರುಕಟ್ಟೆಗಳಿಗೆ ರಜೆ ಇರುವುದಿಲ್ಲ. ಯಥಾಪ್ರಕಾರ ಕಾರ್ಯನಿರ್ವಹಿಸುತ್ತವೆ. ಈ ಎರಡು ಸ್ಟಾಕ್ ಎಕ್ಸ್ಚೇಂಜ್ಗಳ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿರುವ ರಜಾ ದಿನಗಳ ಪಟ್ಟಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21 ಸೇರಿಲ್ಲ.
2023ರ ಜೂನ್ನಿಂದ ಡಿಸೆಂಬರ್ವರೆಗೆ ಷೇರು ಮಾರುಕಟ್ಟೆ ರಜಾ ದಿನಗಳ ಪಟ್ಟಿ
- ಜೂನ್ 18: ಬಕ್ರೀದ್
- ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ
- ಸೆಪ್ಟಂಬರ್ 19: ಗಣೇಶ ಚತುರ್ಥಿ
- ಅಕ್ಟೋಬರ್ 2: ಗಾಂಧಿ ಜಯಂತಿ
- ಅಕ್ಟೋಬರ್ 24: ದಸರಾ
- ನವೆಂಬರ್ 12: ದೀಪಾವಳಿ
- ನವೆಂಬರ್ 14: ಬಲಿಪಾಡ್ಯಮಿ
- ನವೆಂಬರ್ 27: ಗುರುನಾನಕ್ ಜಯಂತಿ
- ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ
ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ನಲ್ಲಿ ನಾವು ನೀವು ಹೆಚ್ಚು ಗಮನಿಸದ ಶುಲ್ಕಗಳು ಹಲವಿವೆ; ಮುಂದಿನ ಬಾರಿ ಬಿಲ್ ನೋಡುವಾಗ ಜೋಪಾನ
ಇವು ಬಿಎಸ್ಇ ಮತ್ತು ಎನ್ಎಸ್ಇ ಎರಡರಲ್ಲೂ ಇರುವ ರಜಾ ದಿನಗಳು. ಈ ವರ್ಷ ಈ ಮೇಲಿನವೂ ಸೇರಿದಂತೆ ಷೇರುಪೇಟೆಗಳಿಗೆ 15 ರಜಾ ದಿನಗಳಿವೆ. ಕರೆನ್ಸಿ ಡಿರೈವೇಟಿವ್ ಸೆಗ್ಮೆಂಟ್, ಎನ್ಡಿಎಸ್ ಆರ್ಎಸ್ಟಿಗಳಿಗೆ 4 ಹೆಚ್ಚುವರಿ ರಜಾ ದಿನಗಳಿವೆ.
ನವೆಂಬರ್ ತಿಂಗಳಲ್ಲಿ 3 ದಿನಗಳು ಷೇರುಪೇಟೆಗೆ ರಜೆ ಇದೆ. ಜುಲೈ ತಿಂಗಳಲ್ಲಿ ಒಂದು ದಿನವೂ ರಜೆ ಇಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ