GameStop: ಸಿಎಫ್​ಒ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಲೇ ಆಫ್ ಮಾಡಿದ್ದ ಸಿಇಒಗೇ ಹೋಯ್ತು ಕೆಲಸ

CEO Fired Without Reason: ಅಮೆರಿಕದ ಗೇಮ್​ಸ್ಟಾಪ್ ಕಂಪನಿಯ ಸಿಇಒ ಮ್ಯಾಟ್ ಫರ್ಲಾಂಗ್ ಅವರನ್ನು ವಿನಾಕಾರಣ ಕೆಲಸದಿಂದ ತೆಗೆದುಹಾಕಲಾಗಿದೆ. ಕಳೆದ ವರ್ಷ ಇವರು ಸಿಎಫ್​ಒ ಸೇರಿದಂತೆ 100ಕ್ಕೂ ಹೆಚ್ಚು ಮಂದಿಯ ಲೇ ಆಫ್ ಮಾಡಿದ್ದರು.

GameStop: ಸಿಎಫ್​ಒ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಲೇ ಆಫ್ ಮಾಡಿದ್ದ ಸಿಇಒಗೇ ಹೋಯ್ತು ಕೆಲಸ
ಸಾಂದರ್ಭಿಕ ಚಿತ್ರ
Follow us
|

Updated on: Jun 21, 2023 | 1:03 PM

ವಿಡಿಯೋ ಗೇಮಿಂಗ್ ವಸ್ತುಗಳ ಮಾರಾಟ ಸಂಸ್ಥೆ ಗೇಮ್​ಸ್ಟಾಪ್​ನಲ್ಲಿ ಲೇ ಆಫ್ ಗೇಮ್ (GameStop Layoffs) ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಸಿಎಫ್​ಒ ಸೇರಿದಂತೆ ಹಲವಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದ ಸಿಇಒಗೆ ಈಗ ಕಂಪನಿ ಗೇಟ್​ಪಾಸ್ ಕೊಟ್ಟಿದೆ. ಗೇಮ್​ಸ್ಟಾಪ್ ಸಂಸ್ಥೆಗೆ ಎರಡು ವರ್ಷಗಳಿಂದ ಸಿಇಒ ಆಗಿದ್ದ ಮ್ಯಾಟ್ ಫರ್ಲಾಂಗ್ ಅವರನ್ನು ಯಾವುದೇ ಕಾರಣ ನೀಡದೇ ಏಕಾಏಕಿ ಕೆಲಸದಿಂದ ವಜಾಗೊಳಿಸಲಾಗಿದೆ. ಕರ್ಮಫಲ ಅಂದರೆ ಇದೆಯೇ ಇರಬಹುದು

ಮ್ಯಾಟ್ ಫರ್ಲಾಂಗ್ 2021 ಜೂನ್ ತಿಂಗಳಲ್ಲಿ ಸಿಇಒ ಆಗಿ ಗೇಮ್​ಸ್ಟಾಪ್​ನಲ್ಲಿ ಕೆಲಸಕ್ಕೆ ಸೇರಿದ್ದರು. ಒಂದು ವರ್ಷದ ಬಳಿಕ 2022ರಲ್ಲಿ ಅವರು ಸಿಎಫ್​ಒ ಆಗಿದ್ದ ಮೈಕ್ ರೆಕೂಪೆರೋ ಅವರನ್ನು ಫೈರ್ ಮಾಡಿದರು. ನಂತರ ನೂರಕ್ಕೂ ಹೆಚ್ಚು ಮಂದಿ ಗೇಮ್​ಸ್ಟಾಪ್ ಉದ್ಯೋಗಿಗಳ ಲೇ ಆಫ್ ಆಗಿತ್ತು.

ಇದನ್ನೂ ಓದಿMost Expensive Cities: ವಿಶ್ವದ ಅತ್ಯಂತ ದುಬಾರಿ 20 ನಗರಗಳಲ್ಲಿ ಮುಂಬೈ; ಏಷ್ಯನ್ ನಗರಗಳದ್ದೇ ಪಾರಮ್ಯ

ಸಂಸ್ಥೆಗೆ ಆದಾಯದ ದಾರಿ ಸಿಗಬೇಕಾದರೆ ಉದ್ಯೋಗಿಗಳ ಸಂಖ್ಯೆ ಕಡಿಮೆ ಆಗಬೇಕು. ಪ್ರತಿಯೊಬ್ಬರೂ ಕೂಡ ಇದನ್ನು ಗಮನದಲ್ಲಿಟ್ಟುಕೊಂಡು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು ಎಂದು ಲೇ ಆಫ್ ಬಳಿಕ ಉಳಿದ ಎಲ್ಲಾ ಉದ್ಯೋಗಿಗಳಿಗೂ ಮ್ಯಾಟ್ ಫರ್ಲಾಂಗ್ ಇಮೇಲ್ ಮೂಲಕ ಕಠಿಣ ಸಂದೇಶ ರವಾನಿಸಿದ್ದರು.

ಇದೀಗ ಸಿಇಒ ಮ್ಯಾಟ್ ಫರ್ಲಾಂಗ್ ಅವರೇ ಕೆಲಸ ಕಳೆದುಕೊಂಡಿದ್ದಾರೆ. ರಯಾನ್ ಕೋಹೆನ್ ಎಂಬುವವರು ನೂತನ ಸಿಇಒ ಆಗಿ ನೇಮಕವಾಗಿದ್ದಾರೆ. ಮಾರ್ಕ್ ರಾಬಿನ್ಸನ್ ಅವರು ಜನರಲ್ ಮ್ಯಾನೇಜರ್ ಆಗಿ ಮುಖ್ಯಸ್ಥ ಸ್ಥಾನದಲ್ಲಿದ್ದಾರೆ. ಡಯಾನ ಸಾಡೆಹ್ ಜಾಜೆಹ್ ಅವರು ಸಿಎಫ್​ಒ ಆಗಿದ್ದಾರೆ.

ಇದನ್ನೂ ಓದಿAir India, Indigo: ಏರ್ ಇಂಡಿಯಾ 470, ಇಂಡಿಗೋ 500 ವಿಮಾನ ಖರೀದಿ- ಪ್ಯಾರಿಸ್ ಏರ್​ಶೋನಲ್ಲಿ ಮಿರಮಿರ ಮಿಂಚಿದ ಭಾರತ

ಅಮೆರಿಕದ ಟೆಕ್ಸಾಸ್​ನಲ್ಲಿ ಮುಖ್ಯಕಚೇರಿ ಹೊಂದಿರುವ ಗೇಮ್​ಸ್ಟಾಪ್ ಕಂಪನಿಯ ಷೇರುಗಳಿಗೆ ಸಂಬಂಧಿಸಿದಂತೆ ನೆಟ್​ಫ್ಲಿಕ್ಸ್​ನಲ್ಲಿ ವೆಬ್ ಸೀರೀಸ್ ಪ್ರಸಾರವಾಗಿದೆ. ಈ ಮೂಲಕ ಗೇಮ್​ಸ್ಟಾಪ್ ಹೆಸರು ಜನರಿಗೆ ಹೆಚ್ಚು ಪರಿಚಿತವಾಗಿದೆ. ವೆಬ್​ಸೀರೀಸ್ ಡ್ರಾಮಾಗಿಂತಲೂ ಕಂಪನಿಯ ಲೇ ಆಫ್ ಡ್ರಾಮ ಹೆಚ್ಚು ಗಮನ ಸೆಳೆದಿರುವುದು ಹೌದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ